2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಈ ವರ್ಷದ ಆರಂಭದಲ್ಲಿ ಮಾರುತಿ ಸುಜುಕಿ ಕಂಪನಿಯ ಸಹಭಾಗಿತ್ವದಲ್ಲಿ ಮೊದಲ ರೀಬ್ಯಾಡ್ಜ್ ಕಾರ್ ಆಗಿ ಗ್ಲಾಂಝಾವನ್ನು ಬಿಡುಗಡೆಗೊಳಿಸಿತು. ಗ್ಲಾಂಝಾ ಕಾರು ಮಾರುತಿ ಸುಜುಕಿ ಕಂಪನಿಯ ಬಲೆನೊ ಕಾರಿನ ರೀಬ್ಯಾಡ್ಜ್ ಕಾರ್ ಆಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ದೇಶಿಯ ಮಾರುಕಟ್ಟೆಯಲ್ಲಿ ಟೊಯೊಟಾ ಮತ್ತು ಮಾರುತಿ ಸುಜುಕಿ ಸಂಸ್ಥೆಗಳು, ಸಹಭಾಗಿತ್ವದಲ್ಲಿ ಮತ್ತೊಂದು ರೀಬ್ಯಾಡ್ಜ್ ಕಾರ್ ಅನ್ನು ಬಿಡುಗಡೆಗೊಳಿಸಲು ಮುಂದಾಗಿವೆ. ಈಗಾಗಲೇ ಬಲೆನೊ ಕಾರು ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿದೆ. ಹೀಗಾಗಿ ಶೀಘ್ರದಲ್ಲೇ ಮಾರುತಿ ಸುಜುಕಿ ಸಂಸ್ಥೆಯ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ವಿಟಾರಾ ಬ್ರಿಝಾ ಕಾರ್ ಅನ್ನು ಸಹ ಟೊಯೊಟಾ ಹೆಸರಿನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಟೊಯೊಟಾ ಗ್ಲಾಂಝಾ ಕಾರ್ ಅನ್ನು ಸದ್ಯಕ್ಕೆ ಜಿ, ವಿ, ಸಿವಿ‍ಟಿ ಮತ್ತು ವಿ ಸಿ‍ವಿಟಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍‍ನ ಎಲ್ಲಾ ಮಾದರಿಗಳನ್ನು ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು. ಈ ಕಾರಿನಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಇದೇ ಎಂಜಿನ್ ಅನ್ನು ಬಲೆನೊ ಹ್ಯಾಚ್‍‍ಬ್ಯಾಕ್‍‍ನಲ್ಲಿಯೂ ಅಳವಡಿಸಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಈ ಎಂಜಿನ್ 83 ಬಿ‍ಎಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿ‍ವಿ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗಿದೆ. ಟೊಯೊಟಾ ಗ್ಲಾಂಝಾ ಜಿಎಂಟಿ ಮಾದರಿಯನ್ನು ಮಿಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಮಾರಾಟ ಮಾಡಲಾಗುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಈ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 7 ಬಿಎ‍ಚ್‍ಪಿ ಪವರ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ. ಟೊಯೊಟಾ ಗ್ಲಾಂಝಾದಲ್ಲಿ ಬಿಎಸ್-6 ಎಂಜಿನ್‍ ಅಳವಡಿಸಲಾಗಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಭಾರತದಲ್ಲಿ ಸ್ಥಳೀಯವಾಗಿ ವಾಹನಗಳನ್ನು ಅಭಿವೃದ್ದಿಪಡಿಸುವಲ್ಲಿ ಮಾರುತಿ ಸುಜುಕಿ ಹೆಚ್ಚು ಪರಿಣತಿಯನ್ನು ಹೊಂದಿದೆ. ಟಿ‍‍ಕೆಎಂ ಘಟಕದಲ್ಲಿ ಮುಂದಿನ ಜನರೇಷನ್ ವಿಟಾರಾ ಬ್ರಿಝಾ ಸಬ್ ಕಾಂಪ್ಯಾಕ್ಟ್ ಎಸ್‍‍ಯುವಿಯನ್ನು ಅಭಿವೃದ್ದಿಪಡಿಸಲಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ವಿಟಾರಾ ಬ್ರಿಝಾ ಎಸ್‍‍ಯುವಿಯು ಈ ಎರಡು ಕಂಪನಿಗಳ ಎರಡನೇ ರೀಬ್ಯಾಡ್ಜ್ ಮಾದರಿಯಾಗಿದೆ. ಕೆಲವು ಮೂಲದ ಪ್ರಕಾರ 5 ಸೀಟ್ ಎಸ್‍‍ಯುವಿಯ ಪೆಟ್ರೋಲ್ ಆವೃತ್ತಿಯನ್ನು 2020ರ ಆಟೋ ಎಕ್ಸ್ ಪೋದಲ್ಲಿ ಬಿಡುಗಡೆಗೊಳಿಸಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಪ್ರೀಮಿಯರ್ ಇಂಡಿಯನ್ ಮೋಟಾರಿಂಗ್ ಪ್ರದರ್ಶನವನ್ನು ಫೆಬ್ರವರಿ 7 ಮತ್ತು 12ರ ನಡುವೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದ ಇಂಡಿಯಾ ಎಕ್ಸ್ ಫೋ ಮಾರ್ಟ್‍‍ನಲ್ಲಿ ಆಯೋಜಿಸಲಾಗಿದೆ. 2020ರ ಮಾರ್ಚ್ ಆರಂಭದಲ್ಲಿ ಈ ಕಾರು ಮಾರಾಟವಾಗಲಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಈ ಕಾರಿನಲ್ಲಿ 1.5 ಲೀಟರ್ ನಾಲ್ಕು ಸಿಲಿಂಡರ್ ಕೆ15 ಮೈಲ್ಡ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸುವ ಸಾಧ್ಯತೆಗಳಿವೆ. ಈ ಎಂಜಿನ್ 104.7 ಬಿ‍ಹೆಚ್‍‍ಪಿ ಪವರ್ ಮತ್ತು 138 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸಲಿದೆ.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಸಿಯಾಜ್ ಮತ್ತು ಎರ್ಟಿಗಾ ಕಾರಿನಲ್ಲಿ 5 ಸ್ಪೀಡ್ ಟಾರ್ಕ್ ಕರ್ನವಾಟರ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಮಾರುಕಟ್ಟೆಯಲ್ಲಿ ಮಾರಾಟವಾಗುತಿರುವ ಬ್ರಿಝಾ ಎಸ್‍‍ಯುವಿನಲ್ಲಿ ಇರುವ 1.3 ಲೀಟರ್ ನಾಲ್ಕು ಸಿಲಿಂಡರ್ ಡಿ‍ಡಿಎಸ್ 200 ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ.

2020ರ ಆಟೋ ಎಕ್ಸ್‌ಪೋದಲ್ಲಿ ಬಿಡುಗಡೆಯಾಗಲಿದೆ ರೀ ಬ್ಯಾಡ್ಜ್ ಟೊಯೊಟಾ ಬ್ರಿಝಾ

ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಬಿಎಸ್-6 ನಿಯಮ ಜಾರಿಯಾಗುವುದರಿಂದ ಡೀಸೆಲ್ ಎಂಜಿನ್ ಅನ್ನು ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ರೀಬ್ಯಾಡ್ಜ್ ಎಸ್‍‍ಯುವಿಯು ಪೆಟ್ರೋಲ್ ಆವೃತ್ತಿಯಾಗಿರಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Badged Vitara Brezza Petrol Debut Expected At 2020 Auto Expo - Read in Kannada
Story first published: Friday, December 13, 2019, 15:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X