ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಟೊಯೊಟಾ ಇಂಡಿಯಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ತಮ್ಮ ಹೊಸ ಕ್ಯಾಮ್ರಿ ಹೈಬ್ರಿಡ್ ಕಾರನ್ನು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ಇದೀಗ ಗ್ರಾಹಕರನ್ನು ಇನ್ನು ಹೆಚ್ಚು ತಲುಪಲು ಈ ಕಾರಿನ ಮತ್ತೊಂದು ಟೀಸರ್ ಅನ್ನು ಹೊರಹಾಕಿದೆ. 2019ರ ಟೊಯೊಟಾ ಕ್ಯಾಮ್ರಿ ಹೈಬ್ರೀಡ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 36.95 ಲಕ್ಷದ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ. ಮತ್ತು ಈ ಕಾರಿಗಾಗಿ ಬುಕ್ಕಿಂಗ್ ಪ್ರಕ್ರಿಯೆ ಕೂಡಾ ಪ್ರಾರಂಭಗೊಂಡಿದೆ.

ಟೊಯೊಟಾ ಸಂಸ್ಥೆಯು ಬಿಡುಗಡೆ ಮಾಡಿದ ಹೊಸ ಟೀಸರ್‍‍ನಲ್ಲಿ ವಿಡಿಯೋ ಕಮರ್ಷಿಯಲ್‍ನಲ್ಲಿ, ಕಾರಿನ ಮುಖ್ಯ ಅಂಶಗಳನ್ನು ತೋರಿಸಲಾಗಿದೆ. ಹೊಸ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಟಿಎನ್‍ಜಿಎ (ಟೊಯೊಟಾ ನ್ಯೂ ಗ್ಲೋಬಲ್ ಆರ್ಕಿಟೆಕ್ಚುರ್) ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಾಗಿದ್ದು, ಹಿಂದಿನ ತಲೆಮಾರಿಗ ಕಾರಿಗಿಂತಲೂ ಹೆಚ್ಚಿನ ಅಕಾರವನ್ನು ಪಡೆದುಕೊಂಡಿದೆ. ಅಂದರೆ ಸಧ್ಯಕ್ಕೆ ಟಿಎನ್‍ಜಿಎ ಪ್ಲಾಟ್‍ಫಾರ್ಮ್ ಅನ್ನು ಪಡೆದುಕೊಂಡಿರುವ ಈ ಕಾರು ಶೇಕಡ 30ರಷ್ಟು ಹೆಚ್ಚಿನ ಗಾತ್ರವನ್ನು ಪಡೆದುಕೊಂಡಿದೆ ಎನ್ನಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಹೊಸ ಕಾರಿನ ಡಿಸೈನ್

2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಡಿಸೈನ್ ಬಗ್ಗೆ ಹೇಳೊದಾದ್ರೆ ಈ ಕಾರು ಮುಂಭಾಗದಲ್ಲಿ ಬಿ-ಆಕಾರದ ಗ್ರಿಲ್ ಹಾಗು ಮಧ್ಯಭಾಗದಲ್ಲಿ ಟೊಯೊಟಾ ಬ್ಯಾಡ್ಜಿಂಗ್ ಅನ್ನು ನೀಡಲಾಗಿದೆ. ಅಷ್ಟೆ ಅಲ್ಲದೇ ಈ ಕಾರು ಆಕರ್ಷಕವಾದ ಎಲ್ಇಡಿ ಹೆಡ್‍ಲ್ಯಾಂಪ್, ಎಲ್ಇಡಿ ಡಿಆರ್‍ಎಲ್ ಹಾಗು ಪ್ರಾಮಿನೆಂಟ್ ಗಿರ್ಲ್ ಅನ್ನು ಪಡೆದುಕೊಂಡಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಸೆಡಾನ್ ಕಾರಿನ ಹಿಂಭಾಗದಲ್ಲಿ ಎಲ್ಇಡಿ ಯೂನಿಟ್ ಆಧಾರಿತ ಟೈಲ್ ಲೈಟ್ಸ್ ಅನ್ನು ಸಿಂಗಲ್ ಕಾರಿನ ಮುಂಭಾಗದಿಂದ ಹಿಂಭಾಗವನ್ನು ಜೋಡಿಸುವ ಕ್ರೋಮ್ ಸ್ಟ್ರಿಪ್ ಹಾಗು ಕಾರಿನ ಆಕಾರಕ್ಕೆ ತಕ್ಕಹಾಗೆ 18 ಇಂಚಿನ ಅಲಾಯ್ ವ್ಹೀಲ್‍ಗಳನ್ನು ನೀಡಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಕಾರಿನ ಒಳವಿನ್ಯಾಸ

ಕಾರಿನ ಒಳಭಾಗದಲ್ಲಿಯೂ ಸಹ ಈ ಕಾರು ನವೀಕರಣವನ್ನು ಪಡೆದುಕೊಂಡಿದ್ದು, ಈ ಬಾರಿ ಡ್ಯುಯಲ್ ಟೋನ್ ಕ್ಯಾಬಿನ್, ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಪೋರ್ಟ್ ಮಾದುವ 8.0 ಇಂಚಿನ ಇನ್ಫೋಟೈನ್ಮೆಂಟ್ ಸಿಸ್ಟಂ, ಸೆಂಟ್ರಲ್ ಎಂಐಡಿ (ಮಲ್ಟಿ ಇನ್ಫಾರ್ಮೆಷನ್ ಡಿಸ್ಪ್ಲೇ) ನೊಂದಿಗೆ ಇಸ್ಟ್ರೂಮೆಂಟ್ ಕ್ಲಸ್ಟರ್, 10 ಇಂಚಿನ ಹೆಡ್ಸ್ಪ್ ಡಿಸ್ಪ್ಲೇ, ಕ್ರೂಸ್ ಕಂಟ್ರೋಲ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್, ಕೀಲೆಸ್ ಪುಷ್-ಬಟನ್ ಸ್ಟಾರ್ಟ್/ಸ್ಟಾಪ್ ಬಟನ್ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಇವುಗಳ ಜೊತೆಗೆ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡಲು ಪ್ರೀಮಿಯಂ ಲೆಧರ್‍‍ನಿಂದ ಸಜ್ಜುಗೊಂಡ ಸೀಟ್‍ಗಳನ್ನು ನೀಡಲಾಗಿದ್ದು, ಜೊತೆಗೆ 3 ಜೋನ್ ಕ್ಲೈಮೇಟ್ ಕಂಟ್ರೋಲ್, ಸನ್‍ರೂಫ್ ಮತ್ತು ಕ್ಯಾಪಸಿಟೀವ್ ಟಚ್‍‍ಸ್ಕ್ರೀನ್ ಹಾಗು ರಿಯರ್ ಸೆಂಟ್ರಲ್ ಆರ್ಮ್‍ರೆಸ್ಟ್ ಅನ್ನು ನೀಡಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಸುರಕ್ಷಾ ಸಾಧನಗಳು

2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ 9 ಏರ್‍‍ಬ್ಯಾಗ್ಸ್, ಎಬಿಎಸ್‍ನೊಂದಿಗೆ ಇಬಿಡಿ, ಬ್ರೇಕ್ ಅಸ್ಸಿಸ್ಟ್, ಪಾರ್ಕ್ ಅಸ್ಸಿಸ್ಟ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಮತ್ತು ಟ್ರಾಕ್ಷನ್ ಕಂಟ್ರೋಲ್ ಸೌಕರ್ಯಗಳನ್ನು ಅಳವಡಿಸಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಎಂಜಿನ್ ಸಾಮರ್ಥ್ಯ

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಕೇವಲ ಒಂದು ಎಂಜಿನ್ ಆಯ್ಕೆಯಲ್ಲಿ ಮಾತ್ರ ಲಭ್ಯವಿದಲಿದ್ದು, ಈ ಕಾರು 2.5 ಲೀಟರ್, 4 ಸಿಲೆಂಡರ್ ಎಂಜಿನ್ ಸಹಾಯದಿಂದ 176ಬಿಹೆಚ್‍ಪಿ ಮತ್ತು 221ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 6 ಸ್ಪೀದ್ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಈ ಹೈಬ್ರಿಡ್ ಕಾರಿನ ಮತ್ತೊಂದು ವಿಶೇಶವೇನೆಂದರೆ ಈ ಎಂಜಿನ್ ಅನ್ನು ಎಲೆಕ್ಟ್ರಿಕ್ ಮೋಟಾರ್‍‍ನೊಂದಿಗೆ ಜೋಡಿಸಲಾಗಿದ್ದು, ಎಲೆಕ್ಟ್ರಿಕ್ ಮೋಟಾರ್ 88 ಕಿಲೋವ್ಯಾಟ್ಸ್ ನ ಶಕ್ತಿಯಿಂದ ಸುಮಾರು 208ಬಿಹೆಚ್‍ಪಿಯ ವರೆಗು ಚಲಿಸಬಲ್ಲ ಟಾಪ್ ಸ್ಪೀಡ್ ಅನ್ನು ನೀಡುತ್ತದೆಯಂತೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಲಭ್ಯವಿರುವ ಬಣ್ಣಗಳು

ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ರೆಡ್ ಮೈಕಾ, ಫ್ಯಾಥಂ ಬ್ರೌನ್, ಬರ್ನಿಂಗ್ ಬ್ಲಾಕ್, ಆಟಿಟ್ಯೂಡ್ ಬ್ಲಾಕ್, ಪರ್ಲ್ ವೈಟ್, ಸಿಲ್ವರ್ ಮತ್ತು ಗ್ರಾಫೈಟ್ ಎಂಬ 7 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಬಹಿರಂಗಗೊಂಡ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರಿನ ಟಿವಿಸಿ...

ಡ್ರೈವ್‍ಸ್ಪಾರ್ಕ್ ಕನ್ನಡ ಅಭಿಪ್ರಾಯ

2019ರ ಟೊಯೊಟಾ ಕ್ಯಾಮ್ರಿ ಹೈಬ್ರಿಡ್ ಕಾರು ಕಳೆದ ವರ್ಷ ಪ್ಯಾರಿಸ್‍ನಲ್ಲಿ ನಡೆದ ಪ್ಯಾರಿಸ್ ಮೋಟಾರ್ ಶೋನಲ್ಲಿ ಪ್ರದರ್ಷನಗೊಂಡಿದ್ದು, ಈ ಕಾರು ಸಧ್ಯ ಮಾರುಕಟ್ಟೆಯಲ್ಲಿರುವ ಸ್ಕೋಡಾ ಸೂಪರ್ಬ್, ವೋಲ್ಕ್ಸ್ವ್ಯಾಗನ್ ಪಸ್ಸಾಟ್ ಮತ್ತು ಹೋಂಡಾ ಅಕಾರ್ಡ್ ಹೈಬ್ರೀಡ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Toyota Camry Hybrid’s TVC Out. Read In Kannada
Story first published: Tuesday, February 5, 2019, 16:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X