ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಟೊಯೊಟಾ ಸಂಸ್ಥೆಯ ಬಹುತೇಕ ಕಾರುಗಳು ಈಗಾಗಲೇ ಭಾರೀ ಬೇಡಿಕೆಯೊಂದಿಗೆ ಮುನ್ನಡೆ ಸಾಧಿಸುತ್ತಿದ್ದು, ಸದ್ಯದಲ್ಲೇ ಮತ್ತೆರಡು ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದೆ. ಇದರಲ್ಲಿ ಕ್ರಾಸ್ ಓವರ್ ಮಾದರಿಯಾದ ಸಿ-ಹೆಚ್ಆರ್ ಮತ್ತು ಮಿನಿ ಫಾರ್ಚೂನರ್ ಖ್ಯಾತಿಯ ರಷ್ ಕಾರು ಭಾರೀ ಸಂಚಲನಕ್ಕೆ ಕಾರಣವಾಗಿವೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಟೊಯೊಟಾ ಸಂಸ್ಥೆಯು ಭಾರತೀಯ ಮಾರುಕಟ್ಟೆಗಾಗಿ ವಿನೂತನ ವಿನ್ಯಾಸದ ಸಿ-ಹೆಚ್‌ಆರ್ ಕ್ರಾಸ್ ಓವರ್ ಮತ್ತು ಮಧ್ಯಮ ಕ್ರಮಾಂಕದ ಎಸ್‌ಯುವಿ ರಷ್ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಹ್ಯುಂಡೈ ಕ್ರೆಟಾ, ರೆನಾಲ್ಟ್ ಕ್ಯಾಪ್ಚರ್, ನಿಸ್ಸಾನ್ ಕಿಕ್ಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ500 ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ರಷ್ ಮತ್ತು ಸಿ-ಹೆಚ್‌ಆರ್ ಕಾರುಗಳನ್ನು ದೇಶಿಯ ಮಾರುಕಟ್ಟೆಗೆ ಪರಿಚಯಿಸುತ್ತಿದೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಸದ್ಯ ಟೊಯೊಟಾ ನಿರ್ಮಾಣದ ಇಟಿಯಾಸ್ ಲಿವಾ, ಪ್ಲ್ಯಾಟಿನಂ ಇಟಿಯಾಸ್ ಮತ್ತು ಇಟಿಯಾಸ್ ಕ್ರಾಸ್ ಕಾರುಗಳನ್ನು ಹೊರತುಪಡಿಸಿ ಇನ್ನುಳಿದ ಕಾರುಗಳು ತುಸು ದುಬಾರಿ ಎನ್ನಿಸಲಿದ್ದು, ರೂ.10 ಲಕ್ಷದಿಂದ ರೂ.15 ಲಕ್ಷ ಬೆಲೆ ಅಂತರದಲ್ಲಿ ಯಾರಿಸ್ ಸೆಡಾನ್ ಹೊರತಾಗಿ ಮತ್ಯಾವುದೇ ಮಧ್ಯಮ ಗಾತ್ರದ ಎಸ್‌ಯುವಿ ಕಾರುಗಳಿಲ್ಲ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಪ್ರಸ್ತುತ ಮಾರುಕಟ್ಟೆಯಲ್ಲಿ ಇನೋವಾ ಕ್ರಿಸ್ಟಾ ಆವೃತ್ತಿಯು ರೂ.19 ಲಕ್ಷದಿಂದ ರೂ.29 ಲಕ್ಷ ಬೆಲೆ ಪಡೆದುಕೊಂಡಿದ್ದು, ಇದೀಗ ಬಿಡುಗಡೆಗಾಗಿ ಸಿದ್ದವಾಗುತ್ತಿರುವ ಹೊಸ ನಮೂನೆಯ ರಷ್ ಮತ್ತು ಸಿ-ಹೆಚ್ಆರ್ ಕಾರುಗಳು ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾಗಲಿವೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಇದಕ್ಕೆ ಪೂರಕ ಎನ್ನುವಂತೆ ಸಿ-ಹೆಚ್ಆರ್ ಕಾರಿನ ಎಂಜಿನ್ ಕಾರ್ಯಕ್ಷಮತೆ ಕುರಿತಂತೆ ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟಿಂಗ್ ಪ್ರಕ್ರಿಯೆಯನ್ನು ನಡೆಸಿರುವ ಟೊಯೊಟಾ ಸಂಸ್ಥೆಯು ಹೊಸ ಕಾರಿನಲ್ಲಿ ಹಲವು ಪ್ರೀಮಿಯಂ ಸೌಲಭ್ಯಗಳೊಂದಿಗೆ ಶಾರ್ಪ್, ಎಡ್ಜ್ ಡಿಸೈನ್‌ ಮತ್ತು ಸ್ಲಿಕ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೋಡಣೆ ಮಾಡಿರುವುದು ಬಹಿರಂಗವಾಗಿದೆ. ಜೊತೆಗೆ ಹೊಸ ಕಾರಿನಲ್ಲಿ ಸ್ಪೋರ್ಟಿ ವಿನ್ಯಾಸದ ಅಲಾಯ್ ವೀಲ್ಹ್‌ಗಳು, ಸಿ ಸೇಫ್ ಎಲ್ಇಡಿ ಟೈಲ್ ಲೈಟ್ಸ್, ರೂಫ್ ಮೌಂಟೆಡ್ ಸ್ಪಾಯ್ಲರ್ ಮತ್ತು ಮಸ್ಕ್ಯೂಲರ್ ಬಂಪರ್ ಜೊತೆ ಪ್ಲಾಸಿಕ್ಟ್ ಕ್ಯಾಡಿಂಗ್ ಅಳವಡಿಸಲಾಗಿದೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಹೀಗಾಗಿ ಹೊಸ ಸಿ-ಹೆಚ್ಆರ್ ಕ್ರಾಸ್ ಓವರ್ ಕಾರಿನ ವಿನ್ಯಾಸಗಳು ಐಷಾರಾಮಿ ಕಾರಿನ ಮಾದರಿಯಲ್ಲೇ ಹೋಲಿಕೆ ಪಡೆಯಲಿದ್ದು, ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳ ವಿಭಾಗದಲ್ಲಿನ ಬೇಡಿಕೆಗೆ ಇದು ಪೂರಕವಾಗಲಿದೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಹೊಸ ಕಾರು 4,360-ಎಂಎಂ ಉದ್ದ, 1,795-ಎಂಎಂ ಅಗಲ, 1,566-ಎಂಎಂ ಎತ್ತರ ಮತ್ತು 18-ಇಂಚಿನ ಡ್ಯುಯಲ್ ಅಲಾಯ್ ವೀಲ್ಹ್‌ಗಳನ್ನು ಹೊಂದಿದ್ದು, ಸದ್ಯ ಮಾರುಕಟ್ಟೆಯಲ್ಲಿರುವ ಕ್ರಾಸ್ ಓವರ್ ಮಾದರಿ ರೆನಾಲ್ಟ್ ಕ್ಯಾಚ್ಚರ್ ಕಾರಿಗಿಂತಲೂ 31-ಎಂಎಂ ಹೆಚ್ಚುವರಿ ಉದ್ದಳತೆ ಪಡೆದಿದೆ.

MOST READ: ಕಾರು ಖರೀದಿಗೆ ಇದು ಸುವರ್ಣಾವಕಾಶ- ರೂ.4 ಲಕ್ಷದ ತನಕ ಡಿಸ್ಕೌಂಟ್ ಘೋಷಿಸಿದ ಹೋಂಡಾ

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಮಾಹಿತಿಗಳ ಪ್ರಕಾರ ಹೊಸ ಸಿ-ಹೆಚ್‌ಆರ್ ಕಾರು ಹೈಬ್ರಿಡ್ ಎಂಜಿನ್ ಪಡೆದುಕೊಳ್ಳುವ ಸಾಧ್ಯತೆಯಿದ್ದು, ಕ್ಯಾಮ್ರಿ ಮತ್ತು ಪ್ರಿಯಸ್ ನಂತರ ಸಿ-ಹೆಚ್ಆರ್ ಕೂಡಾ 1.8-ಪೆಟ್ರೋಲ್ ಎಂಜಿನ್ ಜೊತೆ ಹೈಬ್ರಿಡ್ ಮಾದರಿಯಲ್ಲಿ ಮಾರಾಟಕ್ಕೆ ಲಭ್ಯವಾಗಲಿದೆ.

MOST READ: ಧೋನಿ ಗ್ಯಾರೇಜ್‌ಗೆ ಎಂಟ್ರಿ ಕೊಟ್ಟ ಹೊಸ ಐಷಾರಾಮಿ ಕಾರಿನ ಸ್ಪೆಷಲ್ ಏನು?

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಹಾಗೆಯೇ ಮತ್ತೊಂದು ಸಿ-ಹೆಚ್ಆರ್ ಮಾದರಿಯು ಹೈ ಪರ್ಫಾಮೆನ್ಸ್ ವರ್ಷನ್‌ನಲ್ಲಿ 2.0-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಳ್ಳಲಿದೆ ಎನ್ನಲಾಗಿದ್ದು, ಪೆಟ್ರೋಲ್ ಹೈಬ್ರಿಡ್ ಮಾದರಿಯು 122-ಬಿಹೆಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 145-ಬಿಎಚ್‌ಪಿ ಉತ್ಪಾದನಾ ಗುಣಹೊಂದಿದೆ.

MOST READ: ರೋಲ್ಸ್ ರಾಯ್ಸ್ ಕಾರು ಖರೀದಿಗಾಗಿ ಹತ್ತಾರು ಕಠಿಣ ಪರೀಕ್ಷೆಗಳನ್ನು ಎದುರಿಸಿದ್ರು ಎಂಟಿಬಿ..!

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಈ ಮೂಲಕ ಪ್ರೀಮಿಯಂ ಸೌಲಭ್ಯಗಳಲ್ಲೂ ಸದ್ದು ಮಾಡಲಿರುವ ಸಿ-ಹೆಚ್ಆರ್ ಮಾದರಿಯು ಸುರಕ್ಷತೆಯಲ್ಲೂ ಗಮನಸೆಳೆಯಲಿದ್ದು, 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಂಡ ನಂತರವಷ್ಟೇ ಬಿಡುಗಡೆಯಾಗುವ ಸಾಧ್ಯತೆಗಳಿವೆ.

ನಮ್ಮ ಬೆಂಗಳೂರಿನಲ್ಲಿ ರೋಡ್ ಟೆಸ್ಟ್ ನಡೆಸಿದ ಟೊಯೊಟಾ ಸಿ-ಹೆಚ್ಆರ್

ಇದರೊಂದಿಗೆ ಹೊಸ ಸಿ-ಹೆಚ್ಆರ್ ಕಾರು ಬಿಎಸ್-6 ಎಂಜಿನ್ ಹೊಂದಿದ್ದು, ತಾಂತ್ರಿಕವಾಗಿ ಬಲಿಷ್ಠವಾಗಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.13 ಲಕ್ಷದಿಂದ ರೂ.18 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

Source: Rushlane

Most Read Articles

Kannada
Read more on ಟೊಯೊಟಾ toyota
English summary
Toyota CHR hybrid SUV spied in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X