ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಟೊಯೊಟಾ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿರುವ ತನ್ನ ಕರೊಲಾ ವಾಹನವನ್ನು, ಬಿ‍ಎಸ್6 ನಿಯಮಗಳಿಗೆ ತಕ್ಕಂತೆ ಅಪ್‍‍ಗ್ರೇಡ್ ಮಾಡುತ್ತಿಲ್ಲವೆಂದು ಖಚಿತಪಡಿಸಿದೆ. ಇಟಿ ಆಟೋ ವರದಿಗಳ ಪ್ರಕಾರ, ಕರೊಲಾ ಆಲ್ಟಿಸ್ ವಾಹನದ ಅಪ್‍‍ಡೇಟ್‍ ಮಾಡದೇ ಇರುವುದರಿಂದ, ಮಾರುತಿ ಸುಜುಕಿಯ ರಿ-ಬ್ಯಾಡ್ಜ್ ಆವೃತ್ತಿಯ ಸೆಡಾನ್ ವಾಹನಗಳ ಮಾರಾಟವನ್ನು ನಿಲ್ಲಿಸಲಾಗಿದೆ.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಟೊಯೊಟಾ ಕಂಪನಿಯು ಕರೊಲಾ ಆಲ್ಟಿಸ್ ವಾಹನಕ್ಕೆ ಯಾವುದೇ ಬದಲಾವಣೆಯನ್ನು ಮಾಡದ ಕಾರಣ, ಜಪಾನಿನ ಎರಡು ಕಾರು ತಯಾರಕ ಕಂಪನಿಗಳ ನಡುವಿನ ಸಿ-ಸೆಗ್‍‍ಮೆಂಟ್ ಸೆಡಾನ್ ಹಂಚಿಕೆಯು ಇನ್ನೂ ಮುಂದೆ ಸಾಧ್ಯವಾಗುವುದಿಲ್ಲ. ಸುಜುಕಿ ಹಾಗೂ ಟೊಯೊಟಾ ನಡುವಿನ ಒಪ್ಪಂದದಂತೆ ಎರಡೂ ಕಂಪನಿಗಳು ತಮ್ಮ ಪ್ರಾಡಕ್ಟ್ ಗಳನ್ನು ಹಂಚಿಕೊಳ್ಳಬೇಕಿತ್ತು. ಸುಜುಕಿಯು ಈಗಾಗಲೇ ತನ್ನ ಭಾಗದ ಕಾರ್ಯವನ್ನು ಮಾಡಿದ್ದು, ಇದರ ಪರಿಣಾಮವಾಗಿ ಗ್ಲಾಂಝಾ ವಾಹನವು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಮಾರುತಿ ಸುಜುಕಿ ಕಂಪನಿಯು ತನ್ನ ಕಾಂಪ್ಯಾಕ್ಟ್ ಎಸ್‍‍ಯು‍‍ವಿ ಸೆಗ್‍‍ಮೆಂಟಿನ ಅಗ್ರಮಾನ್ಯ ವಾಹನವನ್ನು ಟೊಯೊಟಾಗೆ ಪೂರೈಸಲಿದೆ. ವಿಟಾರಾ ಬ್ರಿಝಾ ಎಸ್‍‍ಯು‍‍ವಿಯನ್ನು ಇನ್ನು ಮುಂದೆ ಬೆಂಗಳೂರಿನ ಹೊರವಲಯದಲ್ಲಿರುವ ಟೊಯೊಟಾ ಘಟಕದಲ್ಲಿ ಉತ್ಪಾದಿಸಲಾಗುವುದು.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಈ ಹಂಚಿಕೆಯ ಭಾಗವಾಗಿ ಟೊಯೊಟಾದ ಕರೊಲಾ ವಾಹನವೂ ಸಹ ಇತ್ತು. ಟೊಯೊಟಾ, ಕರೊಲಾ ಆಲ್ಟಿಸ್ ಹೈಬ್ರಿಡ್ ವಾಹನವನ್ನು ಸ್ಥಳೀಯವಾಗಿ ಉತ್ಪಾದಿಸುವ ಯೋಜನೆಯಲ್ಲಿತ್ತು. ಇದು ದೇಶದಲ್ಲಿನ ಕಾರ್ಪೊರೇಟ್ ಅವರೇಜ್ ಫ್ಯೂಯಲ್ ಎಕಾನಮಿ (ಸಿ‍ಎ‍ಎಫ್‍ಇ) ನಿಯಮಗಳ ಅನುಸಾರವಾಗಿತ್ತು.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಆದರೆ ಕಾಂಪ್ಯಾಕ್ಟ್ ಕಾರುಗಳಾದ ಬಲೆನೋ, ವಿಟಾರಾ ಬ್ರಿಝಾ ಹಾಗೂ ಸಿಯಾಜ್ ವಾಹನಗಳನ್ನು ಮಾರುತಿ ಕಂಪನಿಯಿಂದ ಹಂಚಿಕೊಂಡ ನಂತರ ಟೊಯೊಟಾ ಸಿ‍ಎ‍ಎಫ್‍ಇ ನಿಯಮಗಳಿಗೆ ಅನುಸಾರವಾಗಿರಲಿದೆ. ಟೊಯೊಟಾದ ಅನಿಸಿಕೆ ಪ್ರಕಾರ, ಭಾರತದಲ್ಲಿ ಸಿ-ಸೆಗ್‍‍ಮೆಂಟಿಯ ಮಾರುಕಟ್ಟೆಯು ನಿರೀಕ್ಷಿತ ಮಟ್ಟದಲ್ಲಿಲ್ಲ. ಆದ ಕಾರಣ ಕರೊಲಾ ಆಲ್ಟಿಸ್ ವಾಹನವನ್ನು ಅಪ್‍‍ಗ್ರೇಡ್ ಮಾಡುವುದು ಟೊಯೊಟಾ ಕಂಪನಿಗೆ ಲಾಭದಾಯಕವಾಗಿಲ್ಲ.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಆಲ್ಟಿಸ್ ವಾಹನವನ್ನು ಅಪ್‍‍ಗ್ರೇಡ್ ಮಾಡದೇ ಇರುವ ಕಾರಣ, ಟೊಯೊಟಾ ಕಂಪನಿಯು ಮಾರುತಿ ಸುಜುಕಿ ಕಂಪನಿಗೆ ಹೈಬ್ರಿಡ್ ಟೆಕ್ನಾಲಜಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲಿದೆ. ಆದರೆ ಕರೊಲಾ ಆಲ್ಟಿಸ್ ನ ಅಪ್‍‍ಗ್ರೇಡ್ ಮಾಡದೇ ಇರುವ ನಿರ್ಧಾರದಿಂದ ರಿ-ಬ್ಯಾಡ್ಜ್ ಮಾಡೆಲ್‍‍ಗಳನ್ನು ಮಾರಾಟ ಮಾಡುವ ಯೋಜನೆಯಲ್ಲಿದ್ದ ಮಾರುತಿ ಸುಜುಕಿಯ ನೆಕ್ಸಾ ಶೋರೂಂ ಗಳ ಮೇಲೆ ಪರಿಣಾಮ ಬೀರಿದೆ.

MOST READ: ಕೊಚ್ಚಿಯಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍‍ಗಳು

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಟೊಯೊಟಾ ಕಂಪನಿಯು ಈಗ ಬಲೆನೋ ಹ್ಯಾಚ್‍‍ಬ್ಯಾಕ್ ಕಾರಿನ ರಿ-ಬ್ಯಾಡ್ಜ್ ಆವೃತ್ತಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಆವೃತ್ತಿಯನ್ನು ಟೊಯೊಟಾ ಗ್ಲಾಂಜಾ ಎಂಬ ಹೆಸರಿನಿಂದ ಕರೆಯಲಾಗುವುದು. ಈ ವಾಹನವನ್ನು ಜೂನ್‍ 6ರಿಂದ ಮಾರಾಟ ಮಾಡಲಾಗುವುದು. ಗ್ಲಾಂಝಾ ವಾಹನಗಳು ಈಗಾಗಲೇ ಡೀಲರ್‍‍ಗಳ ಬಳಿ ತಲುಪಿವೆ.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಬಲೆನೋಗೆ ಹೋಲಿಸಿದರೆ, ಕೆಲವೇ ಬದಲಾವಣೆಗಳಾಗಿದ್ದು, ಬ್ಯಾಡ್ಜ್ ಮತ್ತು ಮುಂಭಾಗದಲ್ಲಿರುವ ಗ್ರಿಲ್‍‍ನಲ್ಲಿ ಮಾತ್ರವೇ ಬದಲಾವಣೆಗಳಾಗಿವೆ. ಈ ವಾಹನದಲ್ಲೂ ಬಲೆನೋದಲ್ಲಿದ್ದ ಪೆಟ್ರೋಲ್ ಎಂಜಿನನ್ನೇ ಅಳವಡಿಸಲಾಗಿದ್ದು, ಎರಡು ಮಾದರಿಗಳಲ್ಲಿ ಲಭ್ಯವಿರಲಿದೆ.

ಕರೊಲಾ ವಾಹನವನ್ನು ಅಪ್‍‍ಗ್ರೇಡ್ ಮಾಡದ ಟೊಯೊಟಾ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದಲ್ಲಿನ ಸಿ-ಸೆಗ್‍‍ಮೆಂಟಿನ ಸೆಡಾನ್ ಮಾರುಕಟ್ಟೆಯಲ್ಲಿ ಕರೊಲಾ ಆಲ್ಟಿಸ್ ಬಹು ಜನಪ್ರಿಯ ವಾಹನವಾಗಿತ್ತು. ಆದರೆ ಮಾರಾಟದಲ್ಲಿನ ಕುಸಿತದಿಂದಾಗಿ, ಟೊಯೊಟಾ ಕಂಪನಿಯು ಬಿ‍ಎಸ್ 6 ನಿಯಮಗಳಿಗೆ ತಕ್ಕಂತೆ ಯಾವುದೇ ಅಪ್‍‍ಗ್ರೇಡ್ ಮಾಡದೇ ಇರಲು ತೀರ್ಮಾನಿಸಿದೆ. ಈಗಿರುವ ಕರೊಲಾ ವಾಹನಗಳ ಭವಿಷ್ಯವೇನು ಎಂಬುದರ ಬಗ್ಗೆ ಟೊಯೊಟಾ ಕಂಪನಿಯು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.

Most Read Articles

Kannada
Read more on ಟೊಯೊಟಾ toyota
English summary
Toyota Will Not Update The Corolla Altis To BS-VI Norms — Suzuki To Miss Out On C-Segment Offering - Read in kannada
Story first published: Friday, May 24, 2019, 18:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X