ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಅಕ್ಟೋಬರ್ ತಿಂಗಳಾಂತ್ಯದಲ್ಲಿ ಬರುವ ದೀಪಾವಳಿ ಸಂಭ್ರಮಾಚರಣೆಗಾಗಿ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್(ಟಿಕೆಎಂ) ಸಂಸ್ಥೆಯು ವಿವಿಧ ಕಾರು ಮಾದರಿಗಳ ಭರ್ಜರಿ ಆಫರ್ ಘೋಷಿಸಿದ್ದು, ಆಯ್ದ ಕಾರುಗಳ ಮೇಲೆ ಗರಿಷ್ಠ ಪ್ರಮಾಣದ ಡಿಸ್ಕೌಂಟ್ ಪಡೆದುಕೊಳ್ಳಬಹುದಾಗಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ದಸರಾ ನಂತರ ದೀಪಾವಳಿ ಸಂಭ್ರಮಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದ್ದು, ಬಹುತೇಕ ಕಾರು ಮಾರಾಟ ಸಂಸ್ಥೆಗಳು ಸಹ ಇದೇ ಸಂದರ್ಭದಲ್ಲಿ ಗರಿಷ್ಠ ಪ್ರಮಾಣದ ಗ್ರಾಹಕರನ್ನು ಸೆಳೆಯುವ ಉದ್ದೇಶದೊಂದಿಗೆ ವಿವಿಧ ಕಾರು ಮಾದರಿಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಘೋಷಣೆ ಮಾಡುತ್ತಿವೆ. ಟೊಯೊಟಾ ಕೂಡಾ ತನ್ನ ಜನಪ್ರಿಯ ಕಾರು ಮಾದರಿಗಳಾದ ಇಟಿಯಾಸ್, ಗ್ಲಾಂಝಾ, ಯಾರಿಸ್, ಇನೋವಾ ಕ್ರಿಸ್ಟಾ, ಕರೊಲ್ಲಾ ಆಟ್ಲಿಸ್ ಮತ್ತು ಫಾರ್ಚೂನರ್ ಕಾರುಗಳ ಮೇಲೆ ಡಿಸ್ಕೌಂಟ್ ನೀಡುತ್ತಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಟೊಯೊಟಾ ಸಂಸ್ಥೆಯು ಹಮ್ಮಿಕೊಂಡಿರುವ ದೀಪಾವಳಿ ಧಮಾಕಾ ಆಫರ್‌ಗಳು ಇಂದಿನಿಂದಲೇ ಆರಂಭವಾಗಿದ್ದು, ಅಕ್ಟೋಬರ್ 31ರ ತನಕ ಡಿಸ್ಕೌಂಟ್ ಬೆಲೆಗಳಲ್ಲಿ ಕಾರು ಖರೀದಿಗೆ ಲಭ್ಯವಿರುತ್ತದೆ. ಹಾಗಾದ್ರೆ ಯಾವ ಕಾರಿನ ಮೇಲೆ ಎಷ್ಟು ಡಿಸ್ಕೌಂಟ್ ಎನ್ನುವ ಮಾಹಿತಿ ಇಲ್ಲಿ ತಿಳಿಯಿರಿ..

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಪ್ಲಾಟಿನಂ ಇಟಿಯಾಸ್(28 ಸಾವಿರ)

ಟೊಯೊಟಾ ಸಂಸ್ಥೆಯ ಬಹುಬೇಡಿಕೆಯ ಕಾರುಗಳಲ್ಲಿ ಒಂದಾಗಿರುವ ಪ್ಲಾಟಿನಂ ಇಟಿಯಾಸ್ ಸೆಡಾನ್ ಕಾರು ಖರೀದಿ ಮೇಲೆ 28 ಸಾವಿರ ತನಕ ಡಿಸ್ಕೌಂಟ್ ಘೋಷಣೆ ಮಾಡಲಾಗಿದ್ದು, ಆಯ್ದ ಗ್ರಾಹಕರಿಗೆ ಹೆಚ್ಚುವರಿ ಕಾರ್ಪೊರೇಟ್ ಡಿಸ್ಕೌಂಟ್ ಸಹ ಸಿಗಲಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ.7.04 ಲಕ್ಷ ಆರಂಭಿಕ ಬೆಲೆ ಹೊಂದಿರುವ ಪ್ಲಾಟಿನಂ ಇಟಿಯಾಸ್ ಕಾರು ಗ್ರಾಹಕರ ಬೇಡಿಕೆಯೆಂತೆ ಒಟ್ಟು 8 ವೆರಿಯೆಂಟ್‌ಗಳನ್ನು ಹೊಂದಿದ್ದು, 1.5-ಲೀಟರ್ ಪೆಟ್ರೋಲ್ ಮತ್ತು 1.4-ಲೀಟರ್ ಡೀಸೆಲ್ ಟರ್ಬೋ ಎಂಜಿನ್ ಆಯ್ಕೆ ಪಡೆದಿದೆ. ಇದರಲ್ಲಿ ಪೆಟ್ರೋಲ್ ಮಾದರಿಯು 88-ಬಿಎಚ್‌ಪಿ, 132-ಎನ್ಎಂ ಟಾರ್ಕ್ ಹೊಂದಿದ್ದರೆ ಡೀಸೆಲ್ ಎಂಜಿನ್ ಮಾದರಿಯು ಫೈವ್ ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 67-ಬಿಎಚ್‌ಪಿ, 170-ಎನ್ಎಂ ಟಾರ್ಕ್‌ನೊಂದಿಗೆ ಉತ್ತಮ ಮೈಲೇಜ್ ಹಿಂದಿರುಗಿಸುತ್ತದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಗ್ಲಾಂಝಾ(35 ಸಾವಿರ)

ಕ್ರಾಸ್ ಬ್ಯಾಡ್ಜ್ ಹ್ಯಾಚ್‌ಬ್ಲಾಕ್ ಮಾದರಿಯಾಗಿ ಗ್ಲಾಂಝಾ ಕಾರು ಖರೀದಿಯ ಮೇಲೆ ರೂ.35 ಸಾವಿರ ತನಕ ಆಫರ್ ಲಭ್ಯವಿದ್ದು, ಆಯ್ದ ಮಾದರಿಗಳ ಮೇಲೆ ಎಕ್ಸ್‌ಚೆಂಜ್ ಮತ್ತು ಕಾರ್ಪೊರೇಟ್ ಡಿಸ್ಕೌಂಟ್‌ಗಳನ್ನು ಪಡೆದುಕೊಳ್ಳಬಹುದು.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಮಾರುತಿ ನಿರ್ಮಾಣದ ಬಲೆನೊ ಕಾರನ್ನೇ ಹೊಸ ಹೆಸರಿನೊಂದಿಗೆ ಕೆಲವು ತಾಂತ್ರಿಕ ಬದಲಾವಣೆ ಮಾಡಿರುವ ಟೊಯೊಟಾ ಸಂಸ್ಥೆಯು ಗ್ಲಾಂಝಾ ಮಾರಾಟದಲ್ಲಿ ಹೊಸ ಬದಲಾವಣೆ ತಂದಿದ್ದು, ಹೊಸ ಕಾರು ಬಿಎಸ್-6 ವೈಶಿಷ್ಟ್ಯತೆಯ 1.2-ಲೀಟರ್ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಪಡೆದಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಯಾರಿಸ್(1.52 ಲಕ್ಷ)

ಮಧ್ಯಮ ಕ್ರಮಾಂಕರ ಸೆಡಾನ್ ಆವೃತ್ತಿಗಳಲ್ಲಿ ಹಲವು ವಿಶೇಷತೆಗಳೊಂದಿಗೆ ಖರೀದಿಗೆ ಲಭ್ಯವಿರುವ ಯಾರಿಸ್ ಮೇಲೆ ರೂ.1.52 ಲಕ್ಷದ ತನಕ ಡಿಸ್ಕೌಂಟ್ ಲಭ್ಯವಿದ್ದು, ಆಯ್ದ ವೆರಿಯೆಂಟ್‌ಗಳ ಮೇಲೆ ರೂ.1 ಲಕ್ಷದ ತನಕ ಕ್ಯಾಶ್ ಆಫರ್ ಸಹ ಪಡೆಯಬಹುದಾಗಿದೆ. 1.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿರುವ ಯಾರಿಸ್ ಕಾರು ಬಿಡುಗಡೆಯಾದ ನಂತರ ಹಲವಾರು ಬದಲಾವಣೆಗಳನ್ನು ಪಡೆದುಕೊಂಡಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಇನೋವಾ ಕ್ರಿಸ್ಟ್ರಾ(ರೂ. 75 ಸಾವಿರ)

ಎಂಪಿವಿ ಕಾರುಗಳ ಮಾರಾಟದಲ್ಲಿ ಹಲವು ವರ್ಷಗಳಿಂದ ಅಗ್ರಸ್ಥಾನದಲ್ಲಿರುವ ಇನೋವಾ ಕ್ರಿಸ್ಟಾ ಕಾರು ಖರೀದಿ ಮೇಲೆ ರೂ.75 ಸಾವಿರ ತನಕ ಆಫರ್ ನೀಡಲಾಗಿದ್ದು, ರೂ.10 ಸಾವಿರ ಕ್ಯಾಶ್ ಡಿಸ್ಕೌಂಟ್ ಮತ್ತು ರೂ.30 ಸಾವಿರ ಎಕ್ಸ್‌ಚೆಂಜ್ ಬೋನಸ್ ಒಳಗೊಂಡಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಎಂಪಿವಿ ಕಾರುಗಳಲ್ಲಿ ಬಹುಬೇಡಿಕೆ ಕಾರು ಮಾದರಿಯಾಗಿರುವ ಇನೋವಾ ಕ್ರಿಸ್ಟಾ ಕಾರು ಒಟ್ಟು ಮೂರು ಎಂಜಿನ್ ಆಯ್ಕೆಗಳನ್ನು ಹೊಂದಿದ್ದು, 2.7-ಲೀಟರ್ ಪೆಟ್ರೋಲ್, 2.4-ಲೀಟರ್ ಡೀಸೆಲ್ ಮತ್ತು 2.8-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಆಯ್ಕೆಯನ್ನು ಪಡೆದುಕೊಂಡಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಕರೊಲ್ಲಾ ಆಟ್ಲಿಸ್( ರೂ.2.10 ಲಕ್ಷ)

ಹೈಬ್ರಿಡ್ ಕಾರು ಮಾದರಿಯಾಗಿರುವ ಕರೊಲ್ಲಾ ಆಟ್ಲಿಸ್ ಕಾರಿನ ಮೇಲೆ ರೂ.2.10 ಲಕ್ಷದ ತನಕ ಆಫರ್ ನೀಡಲಾಗುತ್ತಿದ್ದು, ಇದರಲ್ಲಿ ಎಕ್ಸ್‌ಚೆಂಜ್ ಬೋನಸ್, ಕಾರ್ಪೊರೆಟ್ ಡಿಸ್ಕೌಂಟ್ ಮತ್ತು ಕ್ಯಾಶ್ ಡಿಸ್ಕೌಂಟ್ ಸಹ ಸೇರಿದೆ. 1.8-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 1.4-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಹೊಂದಿರುವ ಕರೊಲ್ಲಾ ಆಟ್ಲಿಸ್ ಕಾರು 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಸಿವಿಟಿ ಗೇರ್‌ಬಾಕ್ಸ್ ಪಡೆದಿದೆ.

ದೀಪಾವಳಿ ಧಮಾಕಾ- ಹೊಸ ಕಾರುಗಳ ಖರೀದಿ ಮೇಲೆ ಭರ್ಜರಿ ಆಫರ್ ನೀಡಿದ ಟೊಯೊಟಾ

ಫಾರ್ಚೂನರ್(ರೂ.40 ಸಾವಿರ)

ಟೊಯೊಟಾದ ಹೈ ಎಂಡ್ ಎಸ್‌ಯುವಿ ಮಾದರಿಯಾದ ಫಾರ್ಚೂನರ್ ಖರೀದಿ ಮೇಲೆ ರೂ.40 ಸಾವಿರ ಆಫರ್‌ನೊಂದಿಗೆ ಸ್ಪೆಷಲ್ ಸರ್ವೀಸ್ ಪ್ಯಾಕೇಜ್ ಮತ್ತು 5 ವರ್ಷಗಳ ವಿಸ್ತರಿತ ವಾರಂಟಿಯನ್ನು ಸಹ ನೀಡಲಾಗುತ್ತಿದೆ. ಫಾರ್ಚೂನರ್‌ನಲ್ಲಿ ಎರಡು ಎಂಜಿನ್ ಆಯ್ಕೆಯಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಖರೀದಿಸಬಹುದು.

Most Read Articles

Kannada
Read more on ಟೊಯೊಟಾ toyota
English summary
Toyota Diwali Discount Offers On Select Models. Read in Kannada.
Story first published: Saturday, October 12, 2019, 20:21 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X