ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಟೊಯೊಟಾ ಫಾರ್ಚೂನರ್ ಈ ಕಾರಿನ ಹೆಸರು ಯಾರು ತಾನೇ ಕೇಳಿರೊದಿಲ್ಲ. ಭಾರತದಲ್ಲಿನ ಬಹುತೇಕ ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳು ಈ ಕಾರನ್ನು ಹೊಂದಿದ್ದಾರೆ. ಕಾರಣ ಇದರಲ್ಲಿರುವ ಐಷಾರಾಮಿ ಸೌಲತ್ತುಗಳಿಗೆ ತಲೆಬಾಗಿ ಇಂದಿಗೂ ಸಹ ಕೆಲ ಸೆಲೆಬ್ರಿಟಿಗಳು ಇದನ್ನು ಖರೀದಿಸುತ್ತಿದ್ದಾರೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಟೊಯೊಟಾ ಫಾರ್ಚೂನರ್ ಐಷಾರಾಮಿ ಎಸ್‍ಯುವಿ ಕಾರು ಮೊದಲ ಬಾರಿಗೆ ಆಗಸ್ಟ್ 25, 2009ರಂದು ಬಿಡುಗಡೆಗೊಂಡಿದ್ದು, ಇನ್ನೇನು ದೇಶಿಯ ಮಾರುಕಟ್ಟೆಯಲ್ಲಿ ತನ್ನ 10 ವರ್ಷದ ವಾರ್ಷಿಕೋತ್ಸವವನ್ನು ಸಂಭ್ರಮಿಸಲಿದೆ. ಬಿಡುಗಡೆಗೊಂಡ ಸುಮಾರು ಹತ್ತು ವರ್ಷಗಳಿಂದಲೂ ಈ ಕಾರಿನ ಕ್ರೇಜ್ ಹೆಚ್ಚುತ್ತಲೇ ಇದೆಯೆ ಹೊರತು ಕಡಿಮೆ ಅಂತೂ ಆಗಲಿಲ್ಲ. ಕಾರ್‍‍ಟಾಕ್ ವರದಿ ಪ್ರಕಾರ ಟೊಯೊಟಾ ಸಂಸ್ಥೆಯು ಫಾರ್ಚೂನರ್ ಬಿಡುಗಡೆಯಾದಾಗಿನಿಂದಲೂ ಇಲ್ಲಿಯ ವರೆಗು ಸುಮಾರು 1 ಲಕ್ಷಕ್ಕು ಹೆಚ್ಚಿನ ಯೂನಿಟ್ ಮಾರಾಟ ಮಾಡಲಾಗಿದೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಅಂದರೆ ಲೆಕ್ಕಕ್ಕೆ ಪ್ರತೀ ತಿಂಗಳೂ ಸುಮಾರು 1,300 ರಿಂದ 1,500 ಯೂನಿಟ್ ಟೊಯೊಟಾ ಫಾರ್ಚೂನರ್ ಕಾರುಗಳು ಮಾರಾಟವಾಗ್ತಿದೆ ಅಂತಾನೇ ಹೇಳ್ಬೋದು. ಇದು ಮಾರುಕಟ್ಟೆಯಲ್ಲಿರುವ ತನ್ನ ಎದುರಾಳಿ ಫೋರ್ಡ್ ಎಂಡೀವರ್ ಎಸ್‍ಯುವಿ ಕಾರನ್ನು ಪ್ರತೀ ತಿಂಗಳು ಮಾರಾಟದಲ್ಲಿ ಬೀಟ್ ಮಾಡುತ್ತಲೇ ಇದೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಇದರಲ್ಲಿ ಟೊಯೊಟಾ ಫಾರ್ಚೂನರ್ ಡೀಸೆಲ್ ಎಂಜಿನ್ ಪ್ರೇರಿತ ಕಾರಿನಲ್ಲಿ ಮಾತ್ರ ಆಲ್ ವೀಲ್ಹ್ ಡ್ರೈವ್(4ಡಬ್ಯುಡಿ) ಟೆಕ್ನಾಲಜಿ ಸೌಲಭ್ಯವಿದ್ದು, ಇದು ಕಠಿಣ ಭೂಪ್ರದೇಶಗಳಲ್ಲೂ ಸರಾಗವಾಗಿ ಕಾರು ಚಾಲನೆಗೆ ಸಹಕರಿಸುತ್ತೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

MOST READ: ರಾಜ್ಯದೆಲ್ಲೆಡೆ 650 ಎಲೆಕ್ಟ್ರಿಕ್ ಚಾರ್ಜಿಂಗ್ ಸ್ಟೇಷನ್‍ಗಳನ್ನು ಇನ್ಸ್ಟಾಲ್ ಮಾಡಲಿದೆ ಬೆಸ್ಕಾಂ

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಫಾರ್ಚೂನರ್ ಪ್ರೀಮಿಯಂ ಮತ್ತು ಲಗ್ಷುರಿ ವೈಶಿಷ್ಟ್ಯತೆಯುಳ್ಳ ಗರಿಷ್ಠ ಮಟ್ಟದ ಇಂಟೀರಿಯರ್ ಸೌಲಭ್ಯಗಳೊಂದಿಗೆ ಎಸ್‌ಯುವಿ ಪ್ರಿಯರ ಆಕರ್ಷಣೆಗೆ ಕಾರಣವಾಗಿದ್ದು, ಕಪ್ಪು ಮತ್ತು ಕಂದು ಬಣ್ಣದ ಡ್ಯುಯಲ್ ಟೋನ್ ಕ್ಯಾಬಿನ್‌ಗಳು ಕಾರಿನ ಅಂದವನ್ನು ಹೆಚ್ಚಿಸಿವೆ. ಜೊತೆಗೆ ಕಾರಿನ ಡ್ಯಾಶ್‌ಬೋರ್ಡ್ ಸಿಲ್ವರ್ ಮಾದರಿಯೊಂದಿಗೆ ಮರದ ಟ್ರಿಮ್ ಹೊಂದಿರುವುದು ಕಾರಿನ ಐಷಾರಾಮಿ ಸೌಲಭ್ಯದ ಪ್ರಮುಖ ಆಕರ್ಷಣೆಯಾಗಿದೆ.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಫಾರ್ಚೂನರ್ ಕಾರಿನಲ್ಲಿ 7.0-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಜೊತೆ ನೇವಿಗೆಷನ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್, ಆಟೋ ರಿಯರ್ ಕೂಲರ್, ಕ್ರೂಸ್ ಕಂಟ್ರೋಲ್, ದೊಡ್ಡದಾದ ಎಂಐಡಿ, ಕೂಲ್ಡ್ ಅಪರ್ ಗ್ರೋವ್ ಬಾಕ್ಸ್ ಮತ್ತು ಆಯ್ಕೆ ರೂಪದಲ್ಲಿರುವ ಕ್ರೋಮ್ ಲೇಪಿತ ಕೂಲ್-ಬ್ಲೂ ಕಾಂಬಿಮೀಟರ್ ಸೌಲಭ್ಯವಿದೆ. ಇವುಗಳಲ್ಲಿ ಎರಡು ಪ್ರಮುಖ ಡ್ರೈವಿಂಗ್ ಮೋಡ್‌ಗಳಿದ್ದು, ಇಕೋ ಮತ್ತು ಪವರ್ ಮೂಲಕ ಎಲ್ಲಾ ಅವಧಿಯಲ್ಲೂ ಗರಿಷ್ಠ ಇಂಧನ ದಕ್ಷತೆ ಕಾಯ್ದುಕೊಳ್ಳಬಹುದಾಗಿದೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಫಾರ್ಚೂನರ್‌ನಲ್ಲಿ ಪ್ರಯಾಣಿಕರಿಗೆ ಅನೂಕರವಾಗುವ ಹಲವು ವಿಶೇಷ ಸೌಲಭ್ಯವಿದ್ದು, ಮೃದವಾದ ದಿಂಬುಗಳು, ಮೆಟಾಲಿಕ್ ಅಸೆಂಟ್ಸ್ ಜೊತೆ ವುಡ್ ಗ್ರೈನ್ ಪ್ಯಾಟರ್ನ್ ಸೌಲಭ್ಯಗಳು ಕಾರಿನ ಪ್ರಯಾಣಕ್ಕೆ ಮತ್ತಷ್ಟು ಮೆರಗು ತರಲಿವೆ. ಕಾರಿನಲ್ಲಿ 7 ಜನ ಅರಾಮದಾಯಕವಾಗಿ ಪ್ರಯಾಣಿಸಬಹುದಾಗಿದ್ದು, ಎರಡನೇ ಮತ್ತು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೂ ಗರಿಷ್ಠ ಸುರಕ್ಷಾ ಸೌಲಭ್ಯಗಳಿದ್ದು, ದೂರದ ಪ್ರಯಾಣದಲ್ಲೂ ನಿಮಗೆ ಯಾವುದೇ ಬೇಸರ ತರಿಸದು.

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಟೊಯೊಟಾ ಫಾರ್ಚೂನರ್ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಏಳು ಏರ್‌ಬ್ಯಾಗ್, ವೆಹಿಕಲ್ ಸ್ಟೆಬಿಲಿಟಿ ಕಂಟ್ರೋಲ್ ಜೊತೆ ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ISOFIX ಚೈಲ್ಡ್ ಸೀಟ್ ಮೌಂಟ್ ಸೌಲಭ್ಯವಲ್ಲದೆ ಎಬಿಎಸ್ ಜೊತೆ ಇಬಿಡಿ ಮತ್ತು ಡೌನ್‌ಹಿಲ್ ಅಸಿಸ್ಟ್ ಕಂಟ್ರೋಲ್(4ಡಬ್ಲ್ಯೂಡಿ ವೇರಿಯೆಂಟ್‌ಗಳಲ್ಲಿ ಮಾತ್ರ) ಸೌಲಭ್ಯವಿದೆ.

MOST READ: ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಕಳೆದ 10 ವರ್ಷಗಳಿಂದಲೂ ಲಕ್ಷುರಿ ಎಸ್‍ಯುವಿ ಕಾರು ಮಾರಾಟದಲ್ಲಿ ಟೊಯೊಟಾ ಫಾರ್ಚೂನರ್ ನಂ.1

ಹೀಗಾಗಿ ಎಸ್‌ಯುವಿ ಖರೀದಿಸುವ ಗ್ರಾಹಕರ ಆಯ್ಕೆಯಲ್ಲಿ ಮುಂಚೂಣಿಯಲ್ಲಿರುವ ಫಾರ್ಚೂನರ್ ಆಫ್-ರೋಡ್ ಜೊತೆ ದಿನ ನಿತ್ಯದ ಪ್ರಯಾಣಕ್ಕೂ ಅನುಕೂಲಕರವಾಗಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ವಿವಿಧ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದು. ಒಂದು ವೇಳೆ ನೀವು ಕೂಡಾ ಐಷಾರಾಮಿ ಸೌಲಭ್ಯವುಳ್ಳ ಅತ್ಯುತ್ತಮ ಎಸ್‌ಯುವಿ ಖರೀದಿ ಯೋಜನೆಯಲ್ಲಿದ್ದರೆ ಫಾರ್ಚೂನರ್ ಆಯ್ಕೆ ಉತ್ತಮ ಎನ್ನಿಸಲಿದ್ದು, ಕಾರಿನಲ್ಲಿ ಒದಗಿಸಲಾಗಿರುವ ಪ್ರೀಮಿಯಂ ಸೌಲಭ್ಯಗಳು ಕಾರಿನ ಖದರ್ ಹೆಚ್ಚಿಸಿವೆ.

Most Read Articles

Kannada
English summary
Toyota Fortuner Is Best Selling Luxury SUV From Past Ten Years. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X