ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಟೊಯೊಟಾ ಸಂಸ್ಥೆಯು ತಮ್ಮ ಜನಪ್ರೀಯ ಫಾರ್ಚುನರ್ ಪ್ರೀಮಿಯಂ ಎಸ್‍ಯುವಿ ಕಾರಿನ ಟಿಆರ್‍‍ಡಿ ಸ್ಪೋರ್ಟಿವೊ ಮಾದರಿಯನ್ನು ಇದೇ ತಿಂಗಳ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆ ಮಾಡುವ ಯೋಜೆನೆಯಲ್ಲಿದ್ದು, ಬಿಡುಗಡೆಗೂ ಮುನ್ನವೇ ಭಾರತಲ್ಲಿ ಬಿಡುಗಡೆಯಾಗಲಿರುವ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರನ್ನು ಇಂಡೋನೇಶ್ಯಾನಲ್ಲಿ ನಡೆಯುತ್ತಿರುವ ಗಾಯ್‍‍ಕಿಂಡೋ ಇಂಡೋನೇಶ್ಯಾ ಆಟೋ ಶೋನಲ್ಲಿ ಪ್ರದರ್ಶಿಸಲಾಗಿತ್ತು.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಸಧ್ಯ ದೇಶಿಯ ಮಾರುಕಟ್ಟೆಯಲ್ಲಿ ಐಷಾರಾಮಿ ಎಸ್‍ಯುವಿ ಕಾರುಗಳಲ್ಲಿ ಹೆಚ್ಚಿನ ಜನಪ್ರೀಯತೆಯನ್ನು ಪಡೆದಿರುವ ಟೊಯೊಟಾ ಫಾರ್ಚುನಾರ್ ಕಾರು ಇದೀಗ ಮಾರುಕಟ್ಟೆಯಲ್ಲಿ ಶೀಘ್ರವೇ ಸ್ಪೋರ್ಟಿ ಅವತಾರದಲ್ಲಿ ಬರಲಿದ್ದು, ಟೊಯೊಟಾ ಸಂಸ್ಥೆಯು ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಟೊಯೊಟಾ ಫಾರ್ಚುನಾರ್ ಟಿಆರ್‍‍‍ಡಿ ಸ್ಪೋರ್ಟಿವೋ ಕಾರಿನ ಟಿವಿಸಿಯನ್ನು ಬಿಡುಗಡೆ ಮಾಡಲಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಈಗಾಗಲೇ ಥಾಯ್‍‍ಲ್ಯಾಂಡ್‍ನಲ್ಲಿ ಮಾರಾಟಗೊಳ್ಳುತ್ತಿದ್ದು, ಭಾರತಕ್ಕೆ ಲಗ್ಗೆಯಿಡಲಿರುವ ಕಾರು ಮಾದರಿಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ. ಭಾರತಕ್ಕೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಮುಂಭಾಗದ ಗ್ರಿಲ್‍ಗೆ ಕ್ರೋಮ್ ಅನ್ನು ನೀಡಲಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಇದರ ಜೊತೆಗೆ ಈ ಕಾರು ಟಿಆರ್‍‍ಡಿ ಸ್ಪೋರ್ಟಿವೊ ಆದ ಕಾರಣ ಇದರ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಹಾಗು ಕಾರಿನ ವಿವಿಧ ಭಾಗಗಳಲ್ಲಿ ಟಿಆರ್‍‍ಡಿ ಬ್ಯಾಡ್ಜಿಂಗ್ ಅನ್ನು ಒದಗಿಸಲಾಗಿದೆ. ಈ ಕಾರು ಸಂಪುರ್ಣವಾಗಿ ಬಿಳಿ ಬಣ್ಣದಲ್ಲಿ ಲಭ್ಯವಿರಲಿದ್ದು, ಕಪ್ಪು ಬಣ್ಣದ ರೂಫ್ ಅನ್ನು ಹೊಂದಿರಲಿದೆ.

ಇನ್ನು ಕಾರಿನ ಒಳಭಾಗವನ್ನು ಕೆಂಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಬಾಗಿಲುಗಳಲ್ಲಿಯೂ ಸಹ ಟಿಆರ್‍‍ಡಿ ಬ್ಯಾಡ್ಜಿಂಗ್ ಅನ್ನು ಕಾಣಬಹುದಾಗಿದೆ. ಕಾರನ್ನು ಸ್ಟಾರ್ಟ್ ಮಾಡಿದ ನಂತರ ಟಿಆರ್‍‍ಡಿ ಸ್ಪೋರ್ಟಿವೊ ಎಂಬ ಆನಿಮೇಷನ್ ಗೋಚರಿಸುತ್ತದೆ. ಕೀ ಫೋಬ್‍ನ ಮೇಲೆಯು ಕೂಡಾ ನೀವು ಟಿಆರ್‍‍ಡಿ ಟ್ರೀಟ್ಮೆಂಟ್ ಅನ್ನು ಕಾಣಬಹುದಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಟೊಯೊಟಾ ಫಾರ್ಚುನರ್ ಸ್ಪೋರ್ಟಿವೊ ಕಾರಿನಲ್ಲಿ ಜೆಬಿಎಲ್‍ನಿಂದ ಪಡೆದ 11 ಸ್ಪೀಕರ್ ಆಡಿಯೋ ಸಿಸ್ಟಂ, ಟಿಆರ್‍‍ಡಿ ಸಪ್ಸ್ಪೆನ್ಷನ್, ಅಗಲವಾದ ಡಿಸ್ಕ್ ಬ್ರೇಕ್, 20 ಇಂಚಿನ ಅಲಾಯ್ ವ್ಹೀಲ್ಸ್, ಕೆಂಪು ಮತ್ತು ಕಪ್ಪು ಬಣ್ಣದ ಸ್ಟಿಚಿಂಗ್ ಪಡೆದ ಸೀಟ್‍‍ಗಳು, ಕಾರ್ಬನ್ ಕೆವ್ಲರ್ ಟ್ರಿಮ್ ಅನ್ನು ಗೇರ್ ಕ್ನಾಬ್‍‍ನ ಮೇಲೆ ಮತ್ತು ಸ್ಟೀರಿಂಗ್‍ನ ಮೇಲೆ ನೀಡಲಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಎಂಜಿನ್ ಸಾಮರ್ಥ್ಯ

ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡಲಿರುವ ಹೊಸ ಟೊಯೊಟಾ ಫಾರ್ಚ್ಯುನಾರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು 2.8 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 174 ಬಿಹೆಚ್‍ಪಿ ಮತ್ತು 450ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಹೊಂದಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಅಥವಾ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಬೆಲೆ ಮತ್ತು ಬಿಡುಗಡೆಯ ಅವಧಿ

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರು ಇದೇ ವರ್ಷದ ಸೆಪ್ಟೆಂಬರ್‍‍ನಲ್ಲಿ ಬಿಡುಗಡೆಯಾಗಲಿದೆ. ಈ ಕಾರು 2WD ಮತ್ತು 4WD ಎಂಬ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಎಕ್ಸ್ ಶೋರುಂ ಪ್ರಕಾರ ರೂ. 35 ಲಕ್ಷದಿಂದ ರೂ. 37 ಲಕ್ಷದ ಬೆಲೆಯಲ್ಲಿ ದೊರೆಯಲಿದೆ ಎಂದು ಅಂದಾಜಿಸಲಾಗಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಇನ್ನು ಸಾಧಾರಣ ಟೊಯೊಟಾ ಫಾರ್ಚೂನರ್ ಕಾರು ಬಿಡುಗಡೆಗೊಂಡು ಸುಮಾರು 10 ವರ್ಷಗಳಾದರೂ ಇಂದಿಗೂ ಸಹ ತನ್ನ ಸೆಗ್ಮೆಂಟ್‍ನಲ್ಲಿ ಮೊದಲ ಸ್ಥಾವನನ್ನು ಪಡೆದುಕೊಂಡಿದೆ. ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಈ ಹಣಕಾಸಿನ ವರ್ಷದಲ್ಲಿ ಸುಮಾರುಬ್ 21,141 ಯೂನಿಟ್ ಫಾರ್ಚುನರ್ ಕಾರುಗಳನ್ನು ಮಾರಾಟ ಮಾಡಿದೆ. ಮಾರಾಟಗೊಂಡ ಇಷ್ಟು ಕಾರುಗಳಲ್ಲಿ ಗ್ರಾಹಕರು ಡೀಸೆಲ್ ಮಾದರಿಯ ಕಾರುಗಳನ್ನೆ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವರದಿಗಳು ತಿಳಿಸುತ್ತಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಎಸ್‌ಯುವಿಗಳಲ್ಲೇ ವಿಶೇಷ ಎನ್ನಿಸಿರುವ ಫಾರ್ಚೂನರ್ ಕಾರು 7 ಸೀಟರ್ ವಿನ್ಯಾಸದೊಂದಿಗೆ ಈ ಕಾರಿನ ಬೇಸ್ ವೇರೆಯಂಟ್ ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ. 28 ಲಕ್ಷದ ಬೆಲೆಯನ್ನು ಮತ್ತು ಈ ಕಾರಿನ ಟಾಪ್ ವೇರಿಯೆಂಟ್ ರೂ. 33.60 ಲಕ್ಷದ ಬೆಲೆಯನ್ನು ಪಡೆದುಕೊಂಡಿದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಟೊಯೊಟಾ ಫಾರ್ಚುನರ್ ಪ್ರೀಮಿಯಂ ಎಸ್‍ಯುವಿ ಕಾರು 2.8-ಲೀಟರ್ ಡಿಸೇಲ್ ಮತ್ತು 2.7-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿವೆ. ಈ ಮೂಲಕ ಡೀಸೆಲ್ ಎಂಜಿನ್ ಮಾದರಿಯು ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 174.5 ಬಿಎಚ್‌ಪಿ ಮತ್ತು 420 ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಇನ್ನು 6-ಸ್ಪೀಡ್ ಆಟೋಮ್ಯಾಟಿಕ್ ಮಾದರಿಯ ಡಿಸೇಲ್ ಎಂಜಿನ್ ಮಾದರಿಯು 450 ಎನ್ಎಂ ಉತ್ಪಾದಿಸುತ್ತೆ. ಹಾಗೆಯೇ, ಪೆಟ್ರೋಲ್ ಎಂಜಿನ್ ಪ್ರೇರಿತ ಕಾರು 164 ಬಿಎಚ್‌ಪಿ ಮತ್ತು 245 ಎನ್ಎಂ ಟಾರ್ಕ್ ಉತ್ಪಾದನಾ ಗುಣ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಮಾಡಬಹುದು.

ಟೊಯೊಟಾ ಫಾರ್ಚುನರ್ ಟಿಆರ್‍‍ಡಿ ಸ್ಪೋರ್ಟಿವೊ ಕಾರಿನ ಮೊದಲ ಟಿವಿಸಿ ಇಲ್ಲಿದೆ ನೋಡಿ

ಬಲಿಷ್ಠ ಎಂಜಿನ್‌ನೊಂದಿಗೆ ಉತ್ತಮ ಇಂಧನ ದಕ್ಷತೆ ಹೊಂದಿರುವ ಫಾರ್ಚೂನರ್ ಎಸ್‌ಯುವಿಯು, ಪೆಟ್ರೋಲ್ ಎಂಜಿನ್ ಮೂಲಕ ಪ್ರತಿ ಲೀಟರ್‌ಗೆ 10ಕಿ.ಮಿ ಮೈಲೇಜ್ ನೀಡಿದಲ್ಲಿ ಡಿಸೇಲ್ ಎಂಜಿನ್ ಪ್ರೇರಣೆಯೊಂದಿಗೆ ಪ್ರತಿ ಲೀಟರ್‌ಗೆ 12 ರಿಂದ 14 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತವೆ.

Most Read Articles

Kannada
English summary
Toyota Fortuner TRD Sportivo SUV TVC Out. Read In Kannada
Story first published: Monday, July 29, 2019, 9:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X