ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಟೊಯೊಟಾ ಸಂಸ್ಥೆಯು ಇದೇ ತಿಂಗಳು 6ರಂದು ತನ್ನ ಬಹುನೀರಿಕ್ಷಿತ ಗ್ಲಾಂಝಾ ರೀಬ್ಯಾಡ್ಜ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಎಂಜಿನ್ ಆಯ್ಕೆಯ ಕುರಿತಾಗಿ ಕೆಲವು ಮಹತ್ವದ ಮಾಹಿತಿಗಳು ಡ್ರೈವ್‌ಸ್ಪಾರ್ಕ್ ತಂಡಕ್ಕೆ ಲಭ್ಯವಾಗಿವೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಭಾರತದಲ್ಲಿ ಮೊದಲ ಬಾರಿಗೆ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳನ್ನು ಉತ್ಪಾದನೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಕಾರು ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆ ಮಾಡುತ್ತಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಬಲೆನೊ ಕಾರಿನ ಮೂಲ ಆವೃತ್ತಿಯಂತೆಯೇ ಇರುವ ಗ್ಲಾಂಝಾ ಕಾರು ಟೊಯೊಟಾ ಸಂಸ್ಥೆಯ ಲೊಗೊ ಮತ್ತು ಮುಂಭಾಗದಲ್ಲಿ ಗ್ರಿಲ್ ಹೊರತುಪಡಿಸಿ ಬಹುತೇಕ ತಾಂತ್ರಿಕ ಅಂಶಗಳನ್ನು ಪ್ರಸ್ತುತ ಬಲೆನೊ ಮಾದರಿಯಿಂದಲೇ ಎರವು ಪಡೆದುಕೊಂಡಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಉತ್ತಮ ಎನ್ನಿಸಿಲಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಜೊತೆಗೆ ಹೊಸ ಗ್ಲಾಂಝಾ ಕಾರು ಪೆಟ್ರೋಲ್ ಆವೃತ್ತಿಯು ಸ್ಮಾರ್ಟ್ ಹೈಬ್ರಿಡ್ ಎಂಜಿನ್‌ನೊಂದಿಗೆ ಬಿಡುಗಡೆಯಾಗಲಿದ್ದು, 2020ರ ಎಪ್ರಿಲ್ 1ರಿಂದ ಜಾರಿಗೆ ಬರುತ್ತಿರುವ ಬಿಎಸ್- 6 ನಿಯಮಗಳಿಗೆ ಅನುಗುಣವಾಗಿ ಹೊಸ ಕಾರಿನ ಎಂಜಿನ್ ಮಾದರಿಯನ್ನು ಈಗಾಗಲೇ ಉನ್ನತಿಕರಿಸಲಾಗಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಎಂಜಿನ್ ಸಾಮರ್ಥ್ಯ

ಸದ್ಯ ಮಾರುಕಟ್ಟೆಯಲ್ಲಿ ಬಲೆನೊ ಕಾರುಗಳು ಸ್ಮಾರ್ಟ್ ಹೈಬ್ರಿಡ್ 1.2-ಲೀಟರ್ ಪೆಟ್ರೋಲ್ ಎಂಜಿನ್ ಜೊತೆಗೆ ಸಾಮಾನ್ಯ ಮಾದರಿಯ 1.2-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದ್ದು, ಗ್ಲಾಂಝಾ ಕಾರು ಕೂಡಾ ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್‌ನೊಂದಿಗೆ ಸಾಮಾನ್ಯ ಪೆಟ್ರೋಲ್ ಎಂಜಿನ್ ಆಯ್ಕೆಯೊಂದಿಗೆ ಬಿಡುಗಡೆಯಾಗುತ್ತಿದ್ದು, ಡೀಸೆಲ್ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿಲ್ಲ ಎನ್ನಲಾಗಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಇನ್ನು ಗ್ಲಾಂಝಾ ಕಾರು ಜಿ ಮತ್ತು ವಿ ಎನ್ನುವ ಎರಡು ಆವೃತ್ತಿಯಲ್ಲಿ ಮಾರಾಟಕ್ಕೆ ಲಭ್ಯವಿರಲಿದ್ದು, ಗ್ಲಾಂಝಾ ಖರೀದಿಸುವ ಗ್ರಾಹಕರಿಗೆ ಟೊಯೊಟಾ ಸಂಸ್ಥೆಯು 3 ವರ್ಷ ಅಥವಾ 1 ಲಕ್ಷ ಕಿ.ಮಿ ಮೇಲೆ ಗರಿಷ್ಠ ವಾರಂಟಿ ನೀಡಲು ಮುಂದಾಗಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಗ್ಲಾಂಝಾ ಜಿ ಆವೃತ್ತಿ

ಟೊಯೊಟಾ ಗ್ಲಾಂಝಾ ಆವೃತ್ತಿಯಲ್ಲೇ ಹೈ ಎಂಡ್ ಆವೃತ್ತಿಯಾಗಿ ಮಾರಾಟವಾಗಲಿರುವ ಜಿ ವೆರಿಯೆಂಟ್ ಮಾದರಿಯು ಸ್ಮಾರ್ಟ್ ಹೈಬ್ರಿಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್‌ನೊಂದಿಗೆ 83-ಬಿಎಚ್‌ಪಿ ಉತ್ಪಾದಿಸಬಲ್ಲದು.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಜಿ ವೆರಿಯೆಂಟ್‌ನಲ್ಲಿ ಪ್ರೀಮಿಯಂ ಸೌಲಭ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸ್ಟಾಂಡರ್ಡ್ ಆಗಿ ಆಟೋ ಆ್ಯಂಡ್ರಾಯಿಡ್, ಆ್ಯಪಲ್ ಕಾರ್ ಪ್ಲೇ ಹಾಗೂ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಬ್ರೇಕ್ ಅಸಿಸ್ಟ್, ಸೀಟ್ ರಿಮೆಂಡರ್, ಎಲ್ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, 7-ಇಂಚಿನ ಟಚ್‌ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ ಮತ್ತು ಫ್ರಂಟ್ ಫಾಗ್ ಲೈಟ್ ಇದರಲ್ಲಿದೆ.

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಗ್ಲಾಂಝಾ ವಿ ಆವೃತ್ತಿ

ವಿ ಆವೃತ್ತಿಯು ಕೂಡಾ 1.2-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದರಲ್ಲಿ ಸ್ಮಾರ್ಟ್ ಹೈಬ್ರಿಡ್ ತಂತ್ರಜ್ಞಾನ ಬಳಕೆ ಮಾಡಿಲ್ಲ. ಆದರೆ ಜಿ ವೆರಿಯೆಂಟ್‌ನಲ್ಲಿರುವ ಬಹುತೇಕ ತಾಂತ್ರಿಕ ಅಂಶಗಳು ವಿ ವೆರಿಯೆಂಟ್‌ನಲ್ಲಿದ್ದು, ವಿ ವೆರಿಯೆಂಟ್‌ನಲ್ಲಿ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೊತೆಗೆ 7-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಆಯ್ಕೆ ಸೌಲಭ್ಯವಿದೆ.

MOST READ:ಜುಲೈ 9ರಂದು ಬಿಡುಗಡೆಯಾಗಲಿರುವ ಹ್ಯುಂಡೈ ಕೊನಾ ಎಲೆಕ್ಟ್ರಿಕ್ ಕಾರಿನ ಸ್ಪೆಷಲ್ ಏನು?

ಪೆಟ್ರೋಲ್ ವೆರಿಯೆಂಟ್‌ನಲ್ಲಿ ಮಾತ್ರವೇ ಖರೀದಿಗೆ ಲಭ್ಯವಿರಲಿದೆ ಟೊಯೊಟಾ ಗ್ಲಾಂಝಾ..!

ಈ ಮೂಲಕ ಹ್ಯುಂಡೈ ಸಂಸ್ಥೆಗೆ ಮತ್ತಷ್ಟು ಪೈಪೋಟಿ ನೀಡಲು ಸಜ್ಜಾಗಿರುವ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಹೊಸ ಯೋಜನೆಯ ಮೂಲಕ ಭಾರೀ ಪ್ರಮಾಣದ ಆದಾಯ ಗಳಿಕೆಯ ನೀರಿಕ್ಷೆಯಲ್ಲಿದ್ದು, ಹೊಸ ಯೋಜನೆಯು ಎರಡು ಸಂಸ್ಥೆಗಳಿಗೂ ಸಾಕಷ್ಟು ಸಹಕಾರಿಯಾಗಲಿದೆ.

Most Read Articles

Kannada
Read more on ಟೊಯೊಟಾ toyota
English summary
Toyota Glanza Variant Details Revealed. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X