ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿರುವ ಟೊಯೋಟಾ ಗ್ಲಾಂಝಾ ಕಾರಿನ ಬೆಲೆಗಳು ಶೀಘ್ರದಲ್ಲೇ ಏರಿಕೆಯಾಗಲಿವೆ. ಮಾರುತಿ ಸುಜುಕಿ ಬಲೆನೊ ಆಧಾರಿತವಾದ ಈ ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರನ್ನು ಜೂನ್ ತಿಂಗಳಿನಲ್ಲಿ ಟೊಯೋಟಾ ಕಂಪನಿಯು ಬಿಡುಗಡೆಗೊಳಿಸಲಾಗಿತ್ತು. ಭಾರತದ ಎಕ್ಸ್ ಶೋರೂಂ ಪ್ರಕಾರ ಈ ಕಾರಿನ ಬೆಲೆಯು ರೂ.7.22 ಲಕ್ಷವಾಗಿದೆ.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ದೇಶಿಯ ಮಾರುಕಟ್ಟೆಯಲ್ಲಿ ಟೊಯೋಟಾ ಗ್ಲಾಂಝಾ ಕಾರಿನ ಬೆಲೆ ಏರಿಕೆ ಹೊರತಾಗಿ, ಕಂಪನಿಯು ತನ್ನ ಶ್ರೇಣಿಯ ಹೊಸ ರೂಪಾಂತರವನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಹೊಸ ಟೊಯೋಟಾ ಗ್ಲಾಂಝಾ ರೂಪಾಂತರವು ಪ್ರಸ್ತುತ ಜಿ ಶ್ರೇಣಿಯ ಕಾರಿನ ಕೆಳಗಿನ ಸ್ಥಾನದ ರೂಪಾಂತರವಾಗಿರಲಿದೆ. ಹೊಸ ಮಾದರಿಯ ಬೆಲೆಗಳು ಜಿ ಮಾದರಿಗಿಂತ ಕಡಿಮೆಯಾಗಿರಲಿವೆ. ಇದು ಟೊಯೋಟಾ ಕಂಪನಿಯ ಹೊಸ ಮೂಲ ಮಾದರಿಯ ಕಾರ್ ಆಗಿರಲಿದೆ.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಅಗ್ಗದ ಬೆಲೆಯ ಹೊಸ ಟೊಯೋಟಾ ಗ್ಲಾಂಝಾ ಮಾದರಿಯು ಮುಂದಿನ ತಿಂಗಳು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದೆ. ಟೊಯೋಟಾ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಮತ್ತು ಮಾರಾಟವನ್ನು ಹೆಚ್ಚಿಸಲು ಮುಂದಿನ ತಿಂಗಳು ಹಬ್ಬದ ಸಮಯದಲ್ಲಿ ಈ ಹೊಸ ಕಾರ್ ಅನ್ನು ಬಿಡುಗಡೆಗೊಳಿಸಲಿದೆ.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಟೊಯೋಟಾ ಗ್ಲಾಂಝಾ ಕಾರ್ ಅನ್ನು ಸದ್ಯಕ್ಕೆ ಜಿ, ವಿ, ಸಿವಿ‍ಟಿ ಮತ್ತು ವಿ ಸಿ‍ವಿಟಿ ಎಂಬ ನಾಲ್ಕು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍‍ನ ಎಲ್ಲಾ ಮಾದರಿಗಳನ್ನು ಪೆಟ್ರೋಲ್ ಎಂಜಿನ್‍‍ನಲ್ಲಿ ಮಾತ್ರ ಬಿಡುಗಡೆಗೊಳಿಸಲಾಗುವುದು. ಈ ಕಾರುಗಳಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗುವುದು. ಇದೇ ಎಂಜಿನ್ ಅನ್ನು ಬಲೆನೊ ಹ್ಯಾಚ್‍‍ಬ್ಯಾಕ್‍‍ನಲ್ಲಿಯೂ ಅಳವಡಿಸಲಾಗಿದೆ. ಈ ಎಂಜಿನ್ 83 ಬಿ‍ಎಚ್‍ಪಿ ಪವರ್ ಮತ್ತು 113 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 5-ಸ್ಪೀಡ್ ಮ್ಯಾನುವಲ್ ಅಥವಾ ಸಿ‍ವಿ‍ಟಿ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋಡಿಸಲಾಗುವುದು.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಟೊಯೋಟಾ ಗ್ಲಾಂಝಾ ಜಿ ಎಂಟಿ ಮಾದರಿಯನ್ನು ಮಿಡ್ ಹೈಬ್ರಿಡ್ ಸಿಸ್ಟಂನೊಂದಿಗೆ ಮಾರಾಟ ಮಾಡಲಾಗುತ್ತಿದೆ. ಈ ಮಾದರಿಯಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದ್ದು, 7 ಬಿಎ‍ಚ್‍ಪಿ ಪವರ್ ಅನ್ನು ಹೆಚ್ಚುವರಿಯಾಗಿ ಉತ್ಪಾದಿಸುತ್ತದೆ. ಟೊಯೋಟಾ ಗ್ಲಾಂಝಾದಲ್ಲಿ ಬಿಎಸ್-6 ಎಂಜಿನ್‍ ಅಳವಡಿಸಲಾಗಿದೆ.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಟೊಯೋಟಾ ಗ್ಲಾಂಝಾ ಕಾರು, ಮಾರುತಿ ಸುಜುಕಿಯ ಬಲೆನೊದ ರೀ-ಬ್ಯಾಡ್ಜ್ ಆವೃತ್ತಿಯಾಗಿದೆ. ಹೊಸ ಗ್ಲಾಂಝಾದಲ್ಲಿ ಬಲೆನೊ ಕಾರಿನಲ್ಲಿದ್ದ ಯುನಿಟ್‍, ವೈಶಿಷ್ಟ್ಯಗಳು ಮತ್ತು ಸ್ಪೆಕ್‍‍ಗಳನ್ನು ಮುಂದುವರೆಸಲಾಗಿದೆ. ಈ ಎರಡು ಪ್ರೀಮಿಯಂ ಹ್ಯಾಚ್‍‍ಬ್ಯಾಕ್ ಕಾರುಗಳ ನಡುವೆ ವಾರಂಟಿ ಮತ್ತು ಇತರ ಗ್ರಾಹಕ ಸೇವೆಯ ವಿಷಯದಲ್ಲಿ ಮಾತ್ರ ವ್ಯತಾಸವಿದೆ. ಟೊಯೋಟಾ ಗ್ಲಾಂಝಾ 5 ವರ್ಷ /22,000 ವಿಸ್ತರಿತ ವಾರಂಟಿ ಪ್ಯಾಕೇಜ್ ಜೊತೆಗೆ 3 ವರ್ಷಗಳ ರೋಡ್‍‍ಸೈಡ್ ಅಸಿಸ್ಟೆನ್ಸ್ ಮತ್ತು ಕಡಿಮೆ ನಿರ್ವಹಣಾ ವೆಚ್ಚವನ್ನು ಹೊಂದಿದೆ.

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಟೊಯೋಟಾ ಗ್ಲಾಂಝಾ ರೀ-ಬ್ಯಾಡ್ಜ್ ಮಾಡಿದ ಹ್ಯಾಚ್‍‍ಬ್ಯಾಕ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತಿದೆ. ಗ್ಲಾಂಝಾ ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಮಾರಾಟವಾದ ಹ್ಯಾಚ್‍‍ಬ್ಯಾಕ್ ಕಾರುಗಳ ಪೈಕಿ ಬಲೆನೊ ಮತ್ತು ಹ್ಯುಂಡೈ ಎಲೈಟ್ ಐ20ಯ ನಂತರದ ಸ್ಥಾನದಲ್ಲಿದೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಗ್ಲಾಂಝಾದ 2,322 ಯುನಿ‍‍ಟ್‍ಗಳು ಮಾರಾಟವಾಗಿವೆ.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಆಟೋಮೊಬೈಲ್ ಕ್ಷೇತ್ರದಲ್ಲಿ ಕುಸಿತ ಕಂಡಿರುವ ವೇಳೆಯಲ್ಲಿ ಟೊಯೋಟಾ ಕಂಪನಿಯು ಗ್ಲಾಂಝಾದ ಹೊಸ ಮಾದರಿಯ ಬೆಲೆ ಹೆಚ್ಚಿಸಿ ಅದನ್ನು ಸರಿದೂಗಿಸಲು ಹೊಸ ಹ್ಯಾಚ್‍‍ಬ್ಯಾಕ್ ಪರಿಚಯಿಸುವ ಹೊಸ ತಂತ್ರವನ್ನು ಟೊಯೋಟಾ ಕಂಪನಿ ಪರೀಕ್ಷೆ ಮಾಡುತ್ತಿದೆ. ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆ ಎಂಬುವುದನ್ನು ಕಾದು ನೋಡಬೇಕು.

MOST READ: ತಡೆದು ನಿಲ್ಲಿಸಿದ್ದು ಒಂದು ಕಾರಣಕ್ಕೆ, ದಂಡ ವಿಧಿಸಿದ್ದು ಇನ್ನೊಂದಕ್ಕೆ..!

ದುಬಾರಿಯಾಗಲಿವೆ ಟೊಯೋಟಾ ಗ್ಲಾಂಝಾ ಕಾರುಗಳು

ಟೊಯೋಟಾ ಗ್ಲಾಂಝಾ ಶೀಘ್ರದಲ್ಲೇ ಭಾರತದಲ್ಲಿ ತನ್ನ ಎಲ್ಲಾ ನಾಲ್ಕು ರೂಪಾಂತರಗಳ ಬೆಲೆಯನ್ನು ಹೆಚ್ಚಿಸಲಿದೆ ಎಂದು ಹೇಳಲಾಗಿದೆ. ಬೆಲೆ ಏರಿಕೆಯನ್ನು ಸರಿದೂಗಿಸಲು ಕಂಪನಿಯು ಅಗ್ಗದ ಹ್ಯಾಚ್‍‍ಬ್ಯಾಕ್ ರೂಪಾಂತರವನ್ನು ದೇಶಿಯ ಮಾರುಕಟ್ಟೆಯಲ್ಲಿ ಪರಿಚಯಿಸಲಿದೆ. ಹೊಸ ಅಗ್ಗದ ರೂಪಾಂತರವು ಹ್ಯುಂಡೈ ಎಲೈಟ್ ಐ 20, ಫೋಕ್ಸ್ ವ್ಯಾಗನ್ ಪೊಲೊ ಮತ್ತು ಹೋಂಡಾ ಜಾಝ್ ಕಾರುಗಳಿಗೆ ಪೈಪೋಟಿ ನೀಡಲಿದೆ

Most Read Articles

Kannada
Read more on ಟೊಯೋಟಾ toyota
English summary
Toyota Glanza To Receive A Price Hike Soon: New Cheaper Variant Launch In The WorksRead more at: https://www.drivespark.com/four-wheelers/2019/toyota-glanza-price-hike-new-base-variant-launching-soon-details/articlecontent-pf103846-029483.htmlToyota Glanza To Receive A Price Hike Soon: New Cheaper Variant Launch In The Works - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X