ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಟೊಯೊಟಾ ಮತ್ತು ಮಾರುತಿ ಸುಜುಕಿ ಸಾಂಸ್ಥೆಯು ಜೊತೆಗೂಡಿ ಇದೇ ಜೂನ್ 6ರಂದು ತಮ್ಮ ಹೊಸ ಪ್ರೀಮಿಯಂ ಹ್ಯಾಚ್‍ಬ್ಯಾಕ್ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಯಿತು. ಟೊಯೊಟಾ ಗ್ಲಾಂಝಾ ಬಿಡುಗಡೆಗೂ ಮುನ್ನವೇ ಮಾರುಕಟ್ಟೆಯಲ್ಲಿ ಹೆಚ್ಚು ನಿರೀಕ್ಷೆಯನ್ನು ಹುಟ್ಟುಹಾಕಿದ ಸಂಗತಿ ನಮಗೆಲ್ಲರಿಗು ತಿಳಿದಿದ್ದೆ.

ಮೇ ತಿಂಗಳಿನಲ್ಲಿ ಟೊಯೊಟಾ ಗ್ಲಾಂಝಾ ಕಾರು ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯು ಪಾರಂಭಿಸಲಾಗಿದ್ದು, ಬಿಡುಗಡೆದೂ ಮುನ್ನವೇ ಅಂದರೇ ಕೇವಲ ಮೇ ತಿಂಗಳಿನಲ್ಲಿಯೆ ಸುಮಾರು 2,142 ಯೂನಿಟ್ ಮಾರಾಟವಾಗಿದೆ ಎಂದರೆ ನೀವು ನಂಬಲೇಬೇಕು. ಹೌದು, ಜೂನ್ 6 ರಂದು ಈ ಕಾರು ಬಿಡುಗಡೆಗೊಂಡರೂ ಸಹ ಅದಕ್ಕೂ ಮುನ್ನವೇ ಡೀಲರ್‍‍ಗಳು ಈ ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಾರಂಭಿಸಲಾಗಿದ್ದು, 2000ಕ್ಕು ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಈ ಕಾರನ್ನು ಬುಕ್ಕಿಂಗ್ ಮಾಡಿಕೊಂಡಿದ್ದಾರೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಮಾರುತಿ ಸುಜುಕಿ ಸಂಸ್ಥೆಯ ಬಲೆನೊ ಆವೃತ್ತಿಯನ್ನೇ ಕೆಲವು ತಾಂತ್ರಿಕ ಸೌಲಭ್ಯಗಳ ಬದಲಾವಣೆಗಳೊಂದಿಗೆ ಮರುನಾಮಕರಣಗೊಳಿಸಿ ಬಿಡುಗಡೆ ಮಾಡಲಾಗಿರುವ ಟೊಯೊಟಾ ಗ್ಲಾಂಝಾ ಕಾರು ಸಾಕಷ್ಟು ಆಕರ್ಷಣೆಯಾಗಿದ್ದು, ಹೊಸ ಕಾರಿನ ಬೆಲೆಯನ್ನು ಆರಂಭಿಕವಾಗಿ ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 7,21,900ಕ್ಕೆ ನಿಗದಿಪಡಿಸಲಾಗಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಎಂಜಿನ್ ಸಾಮಾರ್ಥ್ಯ

ಗ್ಲಾಂಝಾ ಕಾರು ಸದ್ಯಕ್ಕೆ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರವೇ ಖರೀದಿಗೆ ಲಭ್ಯವಿದ್ದು, ಬಿಎಸ್-6 ವೈಶಿಷ್ಟ್ಯತೆ 1.2-ಲೀಟರ್ ಕೆ ಸೀರಿಸ್ ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಮೂಲಕ ಮ್ಯಾನುವಲ್ ಆವೃತ್ತಿಯು 89.7 ಬಿಎಚ್‌ಪಿ ಉತ್ಪಾದನೆ ಮಾಡಿದ್ದಲ್ಲಿ ಎಎಂಟಿ ಮಾದರಿಯು 82-ಬಿಎಚ್‌ಪಿ ಉತ್ಪಾದನೆ ಮಾಡಲಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಎರಡು ಆವೃತ್ತಿಗಳಲ್ಲೂ 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 7-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ನೀಡಲಾಗಿದ್ದು, ಇದರಲ್ಲಿ ಆರಂಭಿಕ ಆವೃತ್ತಿಯಾದ ಜಿ ಮ್ಯಾನುವಲ್‌ನಲ್ಲಿ ಸುಧಾರಿತ ತಂತ್ರಜ್ಞಾನ ಪ್ರೇರಿತ ಲೀ-ಅಯಾನ್ (66 ಕಿಲೋ ವ್ಯಾಟ್) ಬ್ಯಾಟರಿ ಅಳವಡಿಸುವ ಮೂಲಕ ಹೆಚ್ಚಿನ ಮಟ್ಟದ ಮೈಲೇಜ್ ನೀರಿಕ್ಷಿಸುವ ಗ್ರಾಹಕರಿಗಾಗಿಯೇ ವಿಶೇಷವಾಗಿ ಅಭಿವೃದ್ಧಿಪಡಿಸಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಟೊಯೊಟಾ ಸಂಸ್ಥೆಯು ಹಂಚಿಕೊಂಡಿರುವ ಮಾಹಿತಿಗಳ ಪ್ರಕಾರ, ಹೊಸ ಕಾರಿನಲ್ಲಿ ಜಿ ಆವೃತ್ತಿಯು ಪ್ರತಿ ಲೀಟರ್ ಪೆಟ್ರೋಲ್‌ಗೆ 23.87 ಕಿ.ಮಿ ಮೈಲೇಜ್ ನೀಡಿದ್ದಲ್ಲಿ ವಿ ಆವೃತ್ತಿಯ ಮ್ಯಾನುವಲ್ ಮಾದರಿಯು ಪ್ರತಿ ಲೀಟರ್‌ ಪೆಟ್ರೋಲ್‌ಗೆ 19.59 ಮತ್ತು ಸಿವಿಟಿ ಮಾದರಿಯು 21.01 ಮೈಲೇಜ್ ನೀಡುತ್ತದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಹೊಸ ಕಾರಿನ ವೈಶಿಷ್ಟ್ಯತೆಗಳು

ಗ್ಲಾಂಝಾ ಕಾರು ಎಲ್ಇಡಿ ಪ್ರೋಜೆಕ್ಟರ್ ಜೊತೆ ಡಿಎಲ್ಆರ್, ಆಟೋ ಹೆಡ್‌ಲ್ಯಾಂಪ್, ಫಾಲೋ ಮೀ ಕಾರ್ ಫಂಕ್ಷನ್, 3ಡಿ ಮಾದರಿಯಲ್ಲಿ ಮುಂಭಾಗದ ಕ್ರೋಮ್ ಗ್ರೀಲ್, ಸ್ಟೈಲಿಷ್ ಬಂಪರ್, ಡೈಮೆಂಡ್ ಕಟ್ ಅಲಾಯ್ ವೀಲ್‌ಗಳು ಮತ್ತು ಎಲ್ಇಡಿ ರಿಯರ್ ಕಾಂಬಿನೇಷನ್ ಟೈಲ್‌ಗೇಟ್ ಲ್ಯಾಂಪ್‌ಗಳನ್ನು ಪಡೆದುಕೊಂಡಿದೆ.

MOST READ: ಟಾಟಾ ನೆಕ್ಸಾನ್ ಕಾರು ಚಾಲಕನಿಗೆ ಹೆಲ್ಮೆಟ್ ಹಾಕಿಲ್ಲವೆಂದು ದಂಡ ಹಾಕಿದ ಟ್ರಾಫಿಕ್ ಪೊಲೀಸರು

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಕಾರಿನ ಒಳಾಂಗಣ ವಿನ್ಯಾಸ

ಹಲವಾರು ಪ್ರೀಮಿಯಂ ಫೀಚರ್ಸ್‌ಗಳನ್ನು ಹೊತ್ತುಬಂದಿರುವ ಗ್ಲಾಂಝಾ ಕಾರಿನಲ್ಲಿ ಸ್ಮಾರ್ಟ್ ಪ್ಲೇ ಕಾಸ್ಟ್, ಟಚ್ ಸ್ಕ್ರೀನ್ ಆಡಿಯೋ, 4-ಸ್ಪೀಕರ್ಸ್‌ಗಳು, ಸ್ಮಾರ್ಟ್ ಫೋನ್ ಕನೆಕ್ಟ್(ಆ್ಯಪಲ್ ಕಾರ್ ಪ್ಲೇ/ಅಂಡ್ರಾಯಿಡ್ ಆಟೋ), ನ್ಯಾವಿಗೇಷನ್, ಸ್ಟೀರಿಂಗ್ ಮೌಂಟೆಡ್ ಆಡಿಯೋ ಮತ್ತು ಕಾಲಿಂಗ್ ಕಂಟ್ರೋಲರ್, ವೈಸ್ ಕಮಾಂಡ್, ಮುಂಭಾಗದ ಸೀಟುಗಳಲ್ಲಿ ಆರ್ಮ್ ರೆಸ್ಟ್ ಮತ್ತು ಲಗೇಜ್ ರೂಂ ಬಳಿ ಲೈಟಿಂಗ್ ಸೌಲಭ್ಯ ಹೊಂದಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಹಾಗೆಯೇ ಹೊಸ ಕಾರಿನಲ್ಲಿ ಚಾಲಕ ಸೇರಿ ಐದು ಜನ ಅರಾಮಾದಾಯಕವಾಗಿ ಪ್ರಯಾಣಿಸುವ ಹಾಗೆ ಆಸನ ಸೌಲಭ್ಯವಿದ್ದು, ಪುಶ್ ಸ್ಮಾರ್ಟ್/ಸ್ಟಾಪ್ ಬಟನ್‌ನೊಂದಿಗೆ ಸ್ಮಾರ್ಟ್ ಎಂಟ್ರಿ, 60:40 ಅನುಪಾತದಲ್ಲಿ ವಿಭಜಿಸಬಹುದಾದ ಹಿಂಬದಿ ಆಸನಗಳು, ಕೀ ಲೇಸ್ ಎಂಟ್ರಿ, ಎಲೆಕ್ಟ್ರಿಕ್ ಫೋಲ್ಡಿಂಗ್ ORVM, ಟೆಲಿಸ್ಕೋಪಿಕ್ ಸ್ಟೀರಿಂಗ್ ಮತ್ತು ಎಲೆಕ್ಟ್ರಿಕ್ ಪವರ್ ಸ್ಟೀರಿಂಗ್ ಜೋಡಿಸಲಾಗಿದೆ.

MOST READ: ತನ್ನ ಸ್ವಂತ ಐಷಾರಾಮಿ ಕಾರನ್ನು ಕದ್ದು ಇದೀಗ ಪೊಲೀಸರ ಅತಿಥಿಯಾದ ವ್ಯಾಪಾರಿ..

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಸುರಕ್ಷಾ ವೈಶಿಷ್ಟ್ಯತೆಗಳು

ಗ್ಲಾಂಝಾ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷಾ ವಿಚಾರಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಹೊಸ ಕಾರಿನಲ್ಲಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್, ಇಬಿಡಿ, ಬಿಎ, ಟೆಕ್ ಬಾಡಿ, ISOFIX ಚೈಲ್ಡ್ ಸೀಟ್ ಮೌಂಟ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ನಾಲ್ಕು ಬದಿಯಲ್ಲೂ ರಿವರ್ಸ್ ಪಾರ್ಕಿಂಗ್ ಸೆನ್ಸಾರ್, ಸೀಟ್ ಬೆಲ್ಟ್ ರಿಮೆಂಡರ್ ಮತ್ತು ಹೈ ಸ್ಪೀಡ್ ವಾರ್ನಿಂಗ್ ಅಲರ್ಟ್ ಸಿಸ್ಟಂ ನೀಡಲಾಗಿದೆ.

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಗ್ಲಾಂಝಾ ಖರೀದಿ ಮೇಲೆ ಭರ್ಜರಿ ವಾರಂಟಿ

ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್ ಗ್ಲಾಂಝಾ ಖರೀದಿ ಮೇಲೆ ಅತ್ಯುತ್ತಮ ವಾರಂಟಿ ಸೌಲಭ್ಯವನ್ನು ಘೋಷಣೆ ಮಾಡಿದ್ದು, 3 ವರ್ಷದ ಅವಧಿಗೆ ಇಲ್ಲವೇ 1 ಲಕ್ಷ ಕಿ.ಮಿ ರನ್ನಿಂಗ್ ಮೇಲೆ ವಾರಂಟಿಯನ್ನು ಆಯ್ಕೆಮಾಡಬಹುದಾಗಿದೆ.

MOST READ: ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಕಾರುಗಳಿಗೆ ಸಗಣಿ ಮೆತ್ತುವುದು ಇದೀಗ ಟ್ರೆಂಡ್

ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಪಡೆಯುತ್ತಿರುವ ಟೊಯೊಟಾ ಗ್ಲಾಂಝಾ

ಖರೀದಿಗೆ ಲಭ್ಯವಿರುವ ಬಣ್ಣಗಳು

ಗ್ಲಾಂಝಾ ಕಾರು ಮಾದರಿಯು ಒಟ್ಟು ಐದು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ಕೆಫೆ ವೈಟ್, ಸ್ಪೋರ್ಟಿನ್ ರೆಡ್, ಇನ್ಸ್ಟಾ ಬ್ಲ್ಯೂ, ಗೇಮಿಂಗ್ ಗ್ರೇ ಮತ್ತು ಸಿಲ್ಪರ್ ಬಣ್ಣಗಳಲ್ಲಿ ಖರೀದಿಸಬಹುದಾಗಿದೆ.

Most Read Articles

Kannada
English summary
Toyota Glanza Gets Off To A Good Start — 2,142 Units Sold In May 2019. Read In Kannada
Story first published: Thursday, June 13, 2019, 12:25 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X