Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಹೊಸ ಅಪ್ಡೇಟ್ ಪಡೆಯಲಿವೆ ಟೊಯೊಟಾ ಪಾರ್ಚುನರ್ ಮತ್ತು ಇನೋವಾ ಕ್ರಿಸ್ಟಾ
ಟೊಯೊಟಾ ಸಂಸ್ಥೆಯ ಜನಪ್ರಿಯ ಕಾರು ಮಾದರಿಗಳಾದ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಸದ್ಯ ಕಾರು ಪ್ರಿಯರ ಹಾಟ್ ಫೆವರಿಟ್ಗಳಾಗಿದ್ದು, 2019ರ ಆವೃತ್ತಿಗಳು ಕೂಡಾ ಮತ್ತಷ್ಟು ಹೊಸ ಪ್ರೀಮಿಯಂ ಫೀಚರ್ಸ್ಗಳನ್ನು ಹೊತ್ತು ಮಾರುಕಟ್ಟೆ ಪ್ರವೇಶಿಸಿತ್ತು. ಇದೀಗ ಈ ಎರದೂ ಕಾರುಗಳಿಗೆ ಸಂಸ್ಥೆಯು ಮತ್ತೊಂದು ಫೀಚರ್ ಅನ್ನು ನೀಡಿ ಬಿಡುಗಡೆ ಮಾಡಲಾಗಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಲಭ್ಯವಿರುವ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ತರದೆ ಕೇವಲ ಇನ್ಪೋಟೈನ್ಮೆಂಟ್ ಮತ್ತು ಕಾರುಗಳ ಒಳಾಂಗಣ ವಿನ್ಯಾಸದಲ್ಲಿ ಮಾತ್ರವೇ ಬದಲಾವಣೆ ತಂದಿರುವ ಟೊಯೊಟಾ ಸಂಸ್ಥೆಯು ಪ್ರೀಮಿಯಂ ಫೀಚರ್ಸ್ಗಳ ಮೂಲಕ ಕಾರಿನ ಒಳಭಾಗಕ್ಕೆ ಮತ್ತಷ್ಟು ಹೊಸತನ ನೀಡಿದೆ. ಮಲೇಷಿಯನ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವ ಈ ಕಾರುಗಳಿಗೆ ಟೊಯೊಟಾ ಸಂಸ್ಥೆಯು ಹೊಸದಾಗಿ 9 ಇಂಚಿನ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ನೀಡಲಾಗಿದ್ದು, ಶೀಘ್ರವೇ ಭಾರತದಲ್ಲಿ ಮಾರಾಟವಾಗುತ್ತಿರುವ ಕಾರುಗಳಲ್ಲಿ ನೀಡಲಿದೆ.

ಈ ಹಿಂದೆ ಫಾರ್ಚೂನರ್ ಕಾರು ಮಾದರಿಯು ಸದ್ಯಕ್ಕೆ 4ಡಬ್ಲ್ಯುಡಿ ಮತ್ತು 2ಡಬ್ಲ್ಯೂಡಿ ವೆರಿಯೆಂಟ್ಗಳಲ್ಲಿ ಮಾರಾಟವಾಗುತ್ತಿದ್ದು, ಎರಡು ಮಾದರಿಯಲ್ಲೂ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಹಾಗೆಯೇ ಇನೋವಾ ಕ್ರಿಸ್ಟಾ ಕೂಡಾ ಸುಧಾರಿತ ವಿನ್ಯಾಸದ ಆಸನಗಳು, ಹೀಟ್ ರಿಜೆಕ್ಷನ್ ಗ್ಲಾಸ್, ಯುಎಸ್ಬಿ ಚಾರ್ಜಿಂಗ್ ಪಾಯಿಂಟ್ ಮತ್ತು ಸುಧಾರಿತ ಮಾದರಿಯ ಸ್ಪಿಕರ್ಸ್ ಸೌಲಭ್ಯಗಳನ್ನು ಪಡೆದುಕೊಂಡಿದ್ದು, ಗ್ರಾಹಕರ ಬೇಡಿಕೆಯೆಂತೆ ಜೆಡ್ಎಕ್ಸ್ ಎಂಟಿ ಮತ್ತು ಜೆಡ್ಎಕ್ಸ್ ಎಟಿ ಮಾದರಿಗಳಲ್ಲಿ ನ್ಯೂ ಐವೆರಿ ಶೆಡಿಂಗ್ ನೀಡಲಾಗಿದೆ.

ಹೀಗಾಗಿ ಹೊಸ ಸೌಲಭ್ಯ ಪ್ರೇರಿತ ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಕಾರುಗಳ ಬೆಲೆಗಳು ತುಸು ದುಬಾರಿ ಎನ್ನಿಸಬಹುದು ಎಂದುಕೊಂಡಿದ್ದ ಗ್ರಾಹಕರಿಗೆ ಟೊಯೊಟಾ ಸಂಸ್ಥೆಯು ಸಿಹಿಸುದ್ದಿ ನೀಡಿದ್ದು, ಯಾವುದೇ ದರ ಏರಿಕೆ ಮಾಡದೆಯೇ ಹೊಸ ಪ್ರೀಮಿಯಂ ಫೀಚರ್ಸ್ಗಳನ್ನು ನೀಡಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಬೆಲೆಗಳಂತೆ ಇನೋವಾ ಕ್ರಿಸ್ಟಾ ಆರಂಭಿಕವಾಗಿ ಎಕ್ಸ್ಶೋರೂಂ ಪ್ರಕಾರ ರೂ.14.93 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 22.43 ಲಕ್ಷ ದರ ಪಡೆದಿದೆ.

ಇದರಲ್ಲಿ ಫಾರ್ಚೂನರ್ ಮಾದರಿಯು ಕೂಡಾ ಈ ಹಿಂದಿನಂತೆಯೇ ಆರಂಭಿಕವಾಗಿ ಎಕ್ಸ್ಶೋರೂಂ ಪ್ರಕಾರ ರೂ.27.83 ಲಕ್ಷ ಮತ್ತು ಟಾಪ್ ಎಂಡ್ ಮಾದರಿಗೆ ರೂ. 33.60 ಲಕ್ಷ ಬೆಲೆ ಹೊಂದಿದ್ದು, ಇನೋವಾ ಕ್ರಿಸ್ಟಾ ಮತ್ತು ಫಾರ್ಚೂನರ್ ಮಾರಾಟವು ಟೊಯೊಟಾ ಸಂಸ್ಥೆಗೆ ಭಾರೀ ಪ್ರಮಾಣದ ಲಾಭ ತಂದುಕೊಟ್ಟಿವೆ.
MOST READ: ವಾಹನ ಚಾಲಕರೇ ಇತ್ತ ಗಮನಿಸಿ - ಅಕ್ಟೋಬರ್ 1 ರಿಂದ ಜಾರಿಯಾಗಲಿದೆ ಹೊಸ ರೂಲ್ಸ್

ಇನ್ನು ಟೊಯೊಟಾ ಸಂಸ್ಥೆಯು ಕ್ಯಾಬ್ ಆಪರೇಟರ್ಸ್ಗಳಿಗಾಗಿ ಕಳೆದ ತಿಂಗಳು ಇನೋವಾ ಕ್ರಿಸ್ಟಾ ಮಾದರಿಯಲ್ಲಿ ಹೊಸದೊಂದು ವೆರಿಯೆಂಟ್ ಬಿಡುಗಡೆ ಮಾಡಿದ್ದು, ಟೂರಿಸ್ಟ್ ವಿಭಾಗದಲ್ಲಿನ ಕಾರ್ಯಾಚರಣೆಯ ಉದ್ದೇಶಕ್ಕಾಗಿ ಜಿ ಪ್ಲಸ್ ಎನ್ನುವ ಹೊಸ ಆವೃತ್ತಿಯನ್ನು ಹೊರತರಲಾಗಿದೆ.
MOST READ: ದಂಡ ವಿಧಿಸಿದ ಪೊಲೀಸರಿಗೆ ಸರಿಯಾಗಿ ಚಮಕ್ ಕೊಟ್ಟ ಎಲೆಕ್ಟ್ರಿಷಿಯನ್

ಜಿ ಪ್ಲಸ್ ಆವೃತ್ತಿಯು 7 ಆಸನವುಳ್ಳ ಮಾದರಿಗೆ ದೆಹಲಿಯ ಎಕ್ಸ್ ಶೋರೂಂ ಪ್ರಕಾರ ರೂ.15.57 ಲಕ್ಷ ಹಾಗು ಎಂಟು ಆಸನವುಳ್ಳ ಮಾದರಿಗೆ ರೂ. 15.62 ಲಕ್ಷ ಬೆಲೆ ಹೊಂದಿದ್ದು, ಇಷ್ಟು ದಿನ ಎಂಟ್ರಿ ಲೆವೆಲ್ ಆಗಿ ಮಾರಾಟಗೊಳ್ಳುತ್ತಿದ್ದ ಜಿಎಕ್ಸ್ಗಿಂತ ಕೆಳ ಮಾದರಿಯಲ್ಲಿ ಸ್ಥಾನ ಪಡೆದುಕೊಂಡಿರಲಿದೆ.
MOST READ: ರೈಲ್ವೆ ಹಳಿಯ ಮೇಲೆ ವೈರಲ್ ವಿಡಿಯೋ ಮಾಡಲು ಹೋಗಿ ಪೊಲೀಸರ ಅತಿಥಿಯಾದ ವಿದ್ಯಾರ್ಥಿ

ಇನ್ನು ಟೊಯೊಟಾ ಸಂಸ್ಥೆಯು ಇನೋವಾ ಮತ್ತು ಪಫಾರ್ಚುನರ್ ಕಾರುಗಳಲ್ಲಿರುವ ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ಗಳನ್ನು ಬಿಎಸ್-6 ನಿಯಮಾವಳಿಗಳಿಗೆ ತಕ್ಕ ಹಾಗೆ ನೀಡಿ ಬಿಡುಗಡೆ ಮಾಡಲಿದ್ದು, ಹೀಗೆ ಮಾಡಿದ್ದೆ ಆದಲ್ಲಿ ಸಾಧಾರಣ ಪಫಾರ್ಚುನರ್ ಮತ್ತು ಟೊಯೊಟಾ ಇನೊವಾ ಕಾರುಗಳು ರೂ. 5 ಲಕ್ಷದವರೆಗು ಬೆಲೆ ಏರಿಕೆಯಾಗಲಿದೆ.