ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಇಂಡಿಯಾ ಸಂಸ್ಥೆಯು ತಮ್ಮ ಜನಪ್ರಿಯ ಇನೊವಾ ಕ್ರಿಸ್ಟಾ ಎಂಪಿವಿ ಕಾರಿನ ಹೊಸ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಟೊಯೊಟಾ ಇನೊವಾ ಕಾರಿನ ಹೊಸ ಜಿ+ ವೇರಿಯಂಟ್ ಕಾರಿನ 7 ಆಸನವುಳ್ಳ ಮಾದರಿಯು ದೆಹಲಿಯ ಎಕ್ಸ್ ಶೋರುಂ ಪ್ರಕಾರ ರೂ.15.57 ಲಕ್ಷ ಹಾಗು ಎಂಟು ಆಸನಗವುಳ್ಳ ಮಾದರಿಯು ರೂ. 15.62 ಲಕ್ಷಕ್ಕೆ ಲಭ್ಯವಾಗಿದೆ. ಜಿ+ ವೇರಿಯಂಟ್ ಕಾರು ಕೇವಲ ಕ್ಯಾಬ್ ಚಾಲಕರು ಮಾತ್ರವಲ್ಲದೇ ಇದನ್ನು ಸ್ವಂತ ಬಳಕೆಗೆ ಕೂಡಾ ಬಳಸಬಹುದಾಗಿದೆ. ಆದರೆ ಇನೊವಾ ಕ್ರಿಸ್ಟಾ ಕಾರಿನ ಗಿ ವೇರಿಯಂಟ್ ಅನ್ನು ಪ್ರತ್ಯೇಕವಾಗಿ ಟ್ಯಾಕ್ಸಿ ಚಾಲರಿಗಾಗಿಯೆ ತಯಾರು ಮಾಡಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಜಿ ಪ್ಲಸ್ ವೇರಿಯಂಟ್‍ನ ಟೊಯೊಟ ಇನೊವಾ ಕ್ರಿಸ್ಟಾ ಕಾರು, ಎಂಟ್ರಿ ಲೆವೆಲ್ ವೇರಿಯಂಟ್ ಆದ 'ಜಿಎಕ್ಸ್' ವೇರಿಯಂಟ್‍ನ ಕೇಳಭಾಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದು, ಇದಕ್ಕಿಂತಲೂ ಸುಮಾರು ರೂ. 38,000 ಕಡಿಮೆ ಬೆಲೆಯಲಿಲ್ ಲಭ್ಯವಾಗಿದೆ. ಇಷ್ಟೆ ಅಲ್ಲದೇ ಹಲವಾರು ಫೀಚರ್‍‍ಗಳನ್ನು ಸಹ ಪಡೆದುಕೊಂಡಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಟೊಯೊಟಾ ಇನೊವಾ ಕ್ರಿಸ್ಟಾ ಜಿ+ ವೇರಿಯಂಟ್ ಕಾರಿನಲ್ಲಿ ಮ್ಯೂಸಿಕಲ್ ಸಿಸ್ಟಂ, 8 ಸೀಟರ್ ಕಾರಿನ ಮಾದರಿಯಲ್ಲಿರುವ ಹಿಂಬದಿಯ ಸೀಟ್‍ಗಳಿಗೆ ಸೆಂಟ್ರಲ್ ಆರ್ಮ್‍ರೆಸ್ಟ್ ಮತ್ತು ರಿಯರ್ ಡೀಫಾಗರ್ ಹಾಗು ಇನ್ನು ಹೆಚ್ಚು ಫೀಚರ್‍‍ಗಳನ್ನು ನೀಡಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಪ್ರಯಾಣಿಕರ ಸುರಕ್ಷತೆಯ ಪರವಾಗಿ ಈ ಕಾರಿನಲ್ಲಿ ರಿಯರ್ ವ್ಯೂ ಸೆನ್ಸಾರ್/ಕ್ಯಾಮೆರಾ, ಎಬಿಎಸ್, ಇಬಿಡಿ, ಡ್ಯುಯಲ್ ಫ್ರಂಟ್ ಏರ್‍‍‍ಬ್ಯಾಗ್ಸ್, ಐಎಸ್ಒಫಿಕ್ ಚೈಲ್ಡ್ ಸೀಟ್ ಮೌಂಟ್ಸ್ ಮತ್ತು ಸೀಟ್ ಬೆಲ್ಟ್ ರಿಮೈಂಡರ್ ಎಂಬ ವೈಶಿಷ್ಟ್ಯತೆಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಇದಲ್ಲದೇ ಇನೊವಾ ಕ್ರಿಸ್ಟಾ ಕಾರಿನ ಜಿ+ ವೇರಿಯಂಟ್ ಕಾರಿನಲ್ಲಿ 16 ಇಂಚಿನ ಅಲಾಯ್ ವ್ಹೀಲ್ಸ್, ಹಾಲೊಜೆನ್ ಹೆಡ್‍ಲ್ಯಾಂಪ್ಸ್, ರಿಯರ್ ಸ್ಪಾಯ್ಲರ್, ಮ್ಯಾನುವಲ್ ಎಸಿ ವೆಂಟ್ಸ್ ಮತ್ತು ಫ್ಯಾಬ್ರಿಕ್‍‍ನಿಂದ ಸಜ್ಜುಗೊಳಿಸಲಾದ ಸೀಟ್‍‍ಗಳನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಎಂಜಿನ್ ಸಾಮರ್ಥ್ಯ

ಟೊಯೊಟಾ ಇನೊವಾ ಕ್ರಿಸ್ಟಾ ಜಿ ಪ್ಲಸ್ ವೇರಿಯಂಟ್ ಕಾರು 2.4 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 150 ಬಿಹೆಚ್‍ಪಿ ಮತ್ತು 343ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಕಳೆದ ವರ್ಷ ದೇಶಿಯ ಮಾರುಕಟ್ಟೆಯಲ್ಲಿ ಮಹೀಂದ್ರಾ ಸಂಸ್ಥೆಯ ಮರಾಜೊ ಕಾರು ಮತ್ತು ಮಾರುತಿ ಸುಜುಕಿ ಸಂಸ್ಥೆಯ ಹೊಸ ತಲೆಮಾರಿನ ಎರ್ಟಿಗಾ ಎಂಪಿವಿ ಕಾರುಗಳು ಬಿಡುಗಡೆಗೊಂಡರೂ ಸಹ ಗ್ರಾಹಕರು ಇನ್ನು ಇನೋವಾ ಕ್ರಿಸ್ಟಾ ಕಾರುಗಳಿಗೆ ಹೆಚ್ಚಿನ ಒಲವನ್ನು ತೋರುತ್ತಿದ್ದಾರೆ ಎಂದರೆ ತಪ್ಪಾಗಲಾರದು.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

2018ರ ಡಿಸೆಂಬರ್ ತಿಂಗಳಿನಲ್ಲಿ ಮಹೀಂದ್ರಾ ಮರಾಜೊ ಮತ್ತು ಎರ್ಟಿಗಾ ಕಾರುಗಳನ್ನು ಹಿಂದಿಕ್ಕಿ ಒಂದೇ ತಿಂಗಳಿನಲ್ಲಿ ಬರೊಬ್ಬರಿ 11,200 ಯೂನಿಟ್ ಕಾರುಗಳ ಬುಕ್ಕಿಂಗ್ ಪಡೆದುಕೊಂಡಿದ್ದು, ಟೊಯೊಟಾ ಸಂಸ್ಥೆಗೆ ಈ ಮೂಲಕವಾಗಿ ಬರೊಬ್ಬರಿ ರೂ. 2,200 ಕೋಟಿಯ ಆದಾಯವನ್ನು ತಂದುಕೊಟ್ಟಿದೆ.

ಬಿಡುಗಡೆಗೊಂಡ ಟೊಯೊಟಾ ಇನೊವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್...

ಡ್ರೈವ್‍ಸ್ಪಾರ್ಕ್ ಕನ್ನಡ ಭಿಪ್ರಾಯ

ಮೇಲೆ ಹೇಳಿರುವ ಹಾಗೆ ಎಂಪಿವಿ ಕಾರುಗಳಲ್ಲಿ ಅಗ್ರ ಸ್ಥಾನವನ್ನು ಮತ್ತು ಹೆಚ್ಚು ಜನಪ್ರಿಯತೆಯನ್ನು ಪಡೆಯುವ ಸಲುವಾಗಿ ಟೊಯೊಟಾ ಸಂಸ್ಥೆಯು ತಮ್ಮ ಇನೋವಾ ಕ್ರಿಸ್ಟಾ ಕಾರಿನ ಹೊಸ ವೇರಿಯಂಟ್ ಅನ್ನು ಬಿಡಗಡೆಗೊಳಿಸಿದ್ದು, ಮಾರುಕಟ್ಟೆಯಲ್ಲಿರುವ ಮಹೀಂದ್ರಾ ಮರಾಜೊ ಮತ್ತು ಮಾರುತಿ ಸುಜುಕಿ ಎರ್ಟಿಗಾ ಎಂಪಿವಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತಿದೆ.

Most Read Articles

Kannada
English summary
Toyota Innova Crysta G+ Variant launched In India — Prices Start At Rs 15.57 Lakh. Read In Kannada
Story first published: Saturday, March 2, 2019, 17:37 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X