ಭಾರತದಲ್ಲಿ 20 ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಟೊಯೊಟಾ ಮೋಟಾರ್ ಕಾರ್ಪೋರೆಷನ್ ಸಂಸ್ಥೆಯು 1997ರಲ್ಲಿ ಮೊದಲ ಬಾರಿಗೆ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ ಎಂಬ ಹೆಸರಿನಲ್ಲಿ ಭಾರತದಲ್ಲಿ ಕಾಲಿಟ್ಟಿದ್ದು, ಇದೀಗ ದೇಶದ ದಿಗ್ಗಜ ಕಾರು ಮಾರಾಟಗಾರರಲ್ಲಿ ನಾಲ್ಕನೆಯ ಸ್ಥಾನವನ್ನು ಪಡೆದುಕೊಂಡಿದೆ. ಮೊದಲನೆ ಮೂರು ಸ್ಥಾನವನ್ನು ಮಾರುತಿ ಸುಜುಕಿ, ಹ್ಯುಂಡೈ ಮತ್ತು ಮಹೀಂದ್ರಾ ಸಂಸ್ಥೆಗಳು ಪಡೆದುಕೊಂಡಿವೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

1997ರಲ್ಲಿ ಕಾಲಿಟ್ಟರೂ ಸಹ 1999ರಲ್ಲಿ ಸಂಸ್ಥೆಯು ಮೊದಲನೆಯದಾಗಿ ತಮ್ಮ ಕ್ವಾಲಿಸ್ ಎಂಪಿವಿ ಕಾರನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿತ್ತು. ಹಾಗೆಯೇ ಟೊಯೊಟಾ ಸಂಸ್ಥೆಯು 1997ರಲ್ಲಿ ಕಿರ್ಲೋಸ್ಕರ್ ಸಂಸ್ಥೆಯೊಂದಿಗೆ ಕೈ ಜೋಡಿಸಿ ನಮ್ಮ ಬೆಂಗಳೂರಿನ ಬಿಡದಿಯಲ್ಲಿ ಮೊದಲನೆಯ ಉತ್ಪಾದನಾ ಘಟಕಕ್ಕೆ ಚಾಲನೆ ನೀಡಿ ವಾರ್ಷಿಕವಾಗಿ ಸುಮಾರು 1 ಲಕ್ಷ ವಾಹನಗಳನ್ನು ಉತ್ಪಾದನೆ ಮಾಡುತ್ತಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಹಾಗೆಯೇ 2010ರಲ್ಲಿ ಸಂಸ್ಥೆಯು ಬೆಂಗಳೂರಿನ ಬಿಡದಿಯಲ್ಲಿ ತಮ್ಮ ಎರಡನೆಯ ಉತ್ಪಾದನಾ ಘಟಕವನ್ನು ಪ್ರಾರಂಭಿಸಲಾಗಿದ್ದು, ಇಲ್ಲಿ ಸಧ್ಯಕ್ಕೆ ಸಂಸ್ಥೆಯು ತಮ್ಮ ಕೊರೊಲ್ಲಾ ಆಲ್ಟಿಸ್, ಇಟಿಯಾಸ್, ಇಟಿಯಾಸ್ ಲಿವಾ, ಇಟಿಯಾಸ್ ಕ್ರಾಸ್ ಮತ್ತು ಕ್ಯಾಮ್ರಿ ಕಾರುಗಳನ್ನು ಉತ್ಪಾದನೆ ಮಾಡುತ್ತಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಪ್ರಸ್ತುತ ಟೊಯೊಟಾ ಕಿರ್ಲೋಸ್ಕರ್ ಸಂಸ್ಥೆಯು ಈ ಇಪ್ಪತ್ತು ವರ್ಷಗಳಲ್ಲಿ ಸುಮಾರು 15 ಲಕ್ಷಕ್ಕೂ ಅಧಿಕ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದ್ದು, ಪ್ರಸ್ತುತ ಈ ಸಂಸ್ಥೆಯ ಇನೊವಾ ಕ್ರಿಸ್ಟಾ ಹಾಗು ಫಾರ್ಚುನರ್ ಕಾರುಗಳು ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಟೊಯೊಟಾ ಮತ್ತು ಮಾರುತಿ ಸುಜುಕಿ ಜೊತೆಗೂಡಿ ಹೊಸ ಎಂಪಿವಿ ಕಾರು

ಸಹಭಾಗಿತ್ವದ ಆಧಾರದ ಮೇಲೆ ನಿರ್ಮಾಣವಾಗೊಳ್ಳಲಿರುವ ಹೊಸ ಎಂಪಿವಿ ಕಾರನ್ನು ಟೊಯೊಟಾ ಸಂಸ್ಥೆಯು ಉತ್ಪಾದನೆ ಮಾಡಿ ಆನಂತರ ಸುಜುಕಿ ಸಂಸ್ಥೆಗೆ ನೀಡಲಿದೆ. ಈ ಹೊಸ ಎಂಪಿವಿ ಕಾರನ್ನು ಟೊಯೊಟಾ ಮತ್ತು ಸುಜುಕಿ ಶೋರುಂಗಳಲ್ಲಿ ದೊರೆಯಲಿದೆ. ಆದರೆ ಇಲ್ಲಿ ಬರಲಿರುವ ಹೊಸ ಎಂಪಿವಿ ಕಾರು ಟೊಯೊಟಾ ಇನೊವಾ ಕ್ರಿಸ್ಟಾ ಅಥವಾ ಎರ್ಟಿಗಾ ಕಾರುಗಳ ಸ್ಥಳವನ್ನು ಪಡೆದುಕೊಳ್ಳಲಿದೆಯೆ ಎಂಬುದು ಇನ್ನು ಸರಿಯಾದ ಮಾಹಿತಿ ಸಿಕ್ಕಿಲ್ಲ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಪ್ರಸ್ತುತ ಮಾರುಕಟ್ಟೆಯಲ್ಲಿರುವ ಇನೋವಾ ಕ್ರಿಸ್ಟಾ ಮತ್ತು ಎರ್ಟಿಗಾ ಕಾರುಗಳ ಬೆಲೆಯ ಮಧ್ಯದಲ್ಲಿ ಸಮಾರು 7 ರಿಂದ 8 ಲಕ್ಷದ ಅಂತರವಿದೆ. ಏಕೆಂದರೆ ಎರ್ಟಿಗಾ ಕಾರು ಎಕ್ಸ್ ಶೋರು ಪ್ರಕಾರ ರೂ. 7.44 ಲಕ್ಷದ ಪ್ರಾರಂಭಿಕ ಬೆಲೆ ಮತ್ತು ಇನೊವಾ ಕ್ರಿಸ್ಟಾ ಕಾರು ಆರಂಭಿಕವಾಗಿ ರೂ. 14.83 ಲಕ್ಷ ಬೆಲೆಯನ್ನು ಪಡೆದುಕೊಂಡಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಇವುಗಳ ನಡುವೆ ಇರುವ 7 ಲಕ್ಷದ ಬೆಲೆಯ ನಡುವೆ ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆ ಜಂಟಿಯಾಗಿ ನಿರ್ಮಾಣ ಮಾಡುವ ಎಂಪಿವಿ ಕಾರು ಬೆಲೆಯನ್ನು ಪಡೆದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಹೀಗಾದಲ್ಲಿ ಮಹೀಂದ್ರಾ ಮರಾಜೊ ಕಾರುಗಳಿಗಿಂತಲೂ ಹೆಚ್ಚಿನ ವೈಶಿಷ್ಟ್ಯತೆಯನ್ನು ಪಡೆಯಲಿದೆ ಹೊಸ ಎಂಪಿವಿ ಕಾರು. ಹಾಗೆಯೆ ಹೊಸ ಎಂಪಿವಿ ಕಾರು 2021-22ರಲ್ಲಿ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಎರಡೂ ಸಂಸ್ಥೆಗಳಿಂದ ನಿರ್ಮಾಣವಾಗಲಿರುವ ಹೊಸ ಎಂಪಿವಿ ಕಾರು ಡೀಸೆಲ್ ಎಂಜಿನ್ ಅನ್ನು ಹೊಂದಿರುವುದಿಲ್ಲ ಮತ್ತು ಬದಲಿಗೆ ಪೆಟ್ರೋಲ್ ಹೈಬ್ರಿಡ್ ಹಾಗು ಫುಲ್ ಎಲೆಕ್ಟ್ರಿಕ್ ಆಯ್ಕೆಯನ್ನು ಪಡುದುಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಜೊತೆಗೆ ಬರಲಿರುವ ಕಾರುಗಳು ಜಾರಿಯಾಗಲಿರುವ BS6 ಎಮಿಷನ್ ಅನ್ನು ಸಹ ಹೊಂದಿರಲಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಎಂಪಿವಿ ಕಾರನ್ನು ಹೊರತು ಪಡಿಸಿ ಎರಡೂ ಸಂಸ್ಥೆಗಳು ಇನ್ನಿತರೆ ವಾಹನಗಳನ್ನು ನಿರ್ಮಾಣ ಮಾಡಲಿವೆ. ಮೊದಲಿಗೆ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಬಲೆನೊ ಮತ್ತು ವಿಟಾರಾ ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಗೆ ಕಳುಹಿಸಿ ಅವುಗಳ ಮೇಲೆ ಟೊಯೊಟಾ ಸಂಸ್ಥೆಯ ಬ್ಯಾಡ್ಜಿಂಗ್ ಅನ್ನು ಅಳವಡಿಸಿ, ದೇಶಿಯ ಮಾರುಕಟ್ಟೆಯಲ್ಲಿ ಮತ್ತು ಆಫ್ರಿಕನ್ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ.

ಭಾರತದಲ್ಲಿ 20ವರ್ಷ ಪೂರೈಸಿದ ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್

ಅಷ್ಟೆ ಅಲ್ಲದೇ ಬಲೆನೊ ಮತ್ತು ವಿಟಾರಾ ಬ್ರೆಝಾ ಮಾತ್ರವಲ್ಲದೆಯೆ ಮಾರುತಿ ಸಿಯಾಜ್ ಹಾಗು ಎರ್ಟಿಗಾ ಕಾರುಗಳನ್ನು ಸಹ ಟೊಯೊಟಾ ಬ್ಯಾಡ್ಜಿಂಗ್ ಅನ್ನು ಪಡೆದುಕೊಳ್ಳಲಿದೆ. ಎಲ್ಲವೂ ಅಂದುಕೊಂಡತೆ ಆದಲ್ಲಿ ಭವಿಷ್ಯದಲ್ಲಿ ಟೊಯೊಟಾ ಸಂಸ್ಥೆಯು ತಮ್ಮ ಪೆಟ್ರೋಲ್-ಹೈಬ್ರಿಡ್ ಟೆಕ್ನಾಲಜಿಯನ್ನು ಮಾರುತಿ ಸುಜುಕಿಯೊಂದಿಗೆ ಹಂಚಿಕೊಳ್ಳುವ ಸಾಧ್ಯತೆಗಳು ಕೂಡಾ ಇದೆ.

Most Read Articles

Kannada
English summary
Toyota Kirloskar Motor Completes 20 Years In India. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X