Just In
- 8 hrs ago ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- 9 hrs ago ಟೊಯೊಟಾದ ಫಾರ್ಚ್ಯೂನರ್ನಲ್ಲೂ ಸಿಗಲಿದೆ ಹೈಬ್ರಿಡ್: ಇದರ ಮೈಲೇಜ್ ಕೇಳಿ ಸುಸ್ತಾದ ಗ್ರಾಹಕರು!
- 10 hrs ago ನಿಜವಾದ ಮಾನವತಾವಾದಿ: ನಟ ರಾಘವ ಲಾರೆನ್ಸ್ರಿಂದ ವಿಶೇಷ ಚೇತನ ಸಾಧಕರಿಗೆ 13 ಟಿವಿಎಸ್ ಸ್ಕೂಟರ್ ಗಿಫ್ಟ್
- 11 hrs ago ಜನ ಕ್ಯೂ ನಿಂತು ಖರೀದಿಸುತ್ತಿದ್ದ ಮಾರುತಿ ಸ್ವಿಫ್ಟ್ ಕಾರು ಮಾರಾಟದಲ್ಲಿ ಕುಸಿತ: ಕಾರಣವೇನು?
Don't Miss!
- Movies 'ಮಾರ್ಟಿನ್' ಚಿತ್ರದ ನಿರ್ಮಾಪಕ- ನಿರ್ದೇಶಕರ ಮಧ್ಯೆ ಕಿರಿಕ್: ಕೊನೆಗೂ ಸಿಕ್ತು ಸ್ಪಷ್ಟನೆ
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2020ರ ಜನವರಿ ಅಂತ್ಯಕ್ಕೆ ಟೊಯೊಟಾ ವೆಲ್ಫೈರ್ ಬಿಡುಗಡೆ ಪಕ್ಕಾ
ಟೊಯೊಟಾ ಬಹುನೀರಿಕ್ಷಿತ ವೆಲ್ಫೈರ್ ಐಷಾರಾಮಿ ಕಾರು ಮಾದರಿಯು 2020ರ ಫೆಬ್ರುವರಿಯಲ್ಲಿ ನಡೆಯಲಿರುವ ದೆಹಲಿ ಆಟೋ ಮೇಳ ಆರಂಭಕ್ಕೂ ಮುನ್ನವೇ ಬಿಡುಗಡೆಯ ಸುಳಿವು ನೀಡಿದೆ. ಹೀಗಾಗಿ ಹೊಸ ಕಾರು ಬಿಡುಗಡೆಗೂ ಮುನ್ನ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಟೊಯೊಟಾ ಡೀಲರ್ಸ್ ಯಾರ್ಡ್ಗಳಲ್ಲಿ ಹೊಸ ಕಾರು ಸ್ಟಾಕ್ ಮಾಡಲಾಗುತ್ತಿದ್ದು, ಆಸಕ್ತ ಗ್ರಾಹಕರಿಂದ ಬುಕ್ಕಿಂಗ್ ಕೂಡಾ ಸ್ವಿಕರಿಸಲಾಗುತ್ತಿದೆ.
ಐಷಾರಾಮಿ ಮಲ್ಟಿ ಪ್ಯಾಸೆಂಜರ್ ವೆಹಿಕಲ್ ಮಾದರಿಯಾಗಿರುವ ವೆಲ್ಫೈರ್ ಕಾರು ಟೊಯೊಟಾ ನಿರ್ಮಾಣದ ಐಷಾರಾಮಿ ಆವೃತ್ತಿಯಾಗಿದ್ದು, ಅಲ್ಫಾರ್ಡ್ ಲಗ್ಷುರಿ ಮಿನಿ ವ್ಯಾನ್ ಡಿಸೈನ್ ಆಧಾರದ ಮೇಲೆ ಈ ಕಾರನ್ನು ಅಭಿವೃದ್ದಿಗೊಳಿಸಲಾಗಿದೆ. ಈ ಲಗ್ಷುರಿ ವ್ಯಾನ್ ಅನ್ನು ಅಂತರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಇದೀಗ ಮೊದಲ ಬಾರಿಗೆ ದೇಶಿಯ ಮಾರುಕಟ್ಟೆಯಲ್ಲೂ ಮಾರಾಟ ಮಾಡಲು ನಿರ್ಧರಿಸಲಾಗಿದೆ.
ಹಲವು ಹೊಸ ತಂತ್ರಜ್ಞಾನ ಪ್ರೇರಣೆ ಹೊಂದಿರುವ ವೆಲ್ಫೈರ್ ಕಾರು ಟೊಯೊಟಾ ಸಂಸ್ಥೆಗೆ ಮತ್ತಷ್ಟು ಜನಪ್ರಿಯತೆ ತಂದುಕೊಡಲಿದ್ದು, ಕೇಂದ್ರ ಸರ್ಕಾರವು ಬದಲಾವಣೆ ಮಾಡಿರುವ ಆಮದು ನೀತಿಯ ಪರಿಣಾಮ ಟೊಯೊಟಾ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಐಷಾರಾಮಿ ವಾಹನಗಳನ್ನು ಭಾರತದಲ್ಲಿ ಬಿಡುಗಡೆಗೆ ಸಿದ್ದವಾಗುತ್ತಿವೆ.
ಕೇಂದ್ರ ಸರ್ಕಾರವು ವಿದೇಶಿ ಆಟೋ ಉತ್ಪಾದನಾ ಸಂಸ್ಥೆಗಳಿಗೆ ಕೆಲವು ವಿನಾಯ್ತಿಗಳನ್ನು ನೀಡಿದ್ದು, ಯಾವುದೇ ಹೆಚ್ಚುವರಿ ಷರತ್ತುಗಳಿಲ್ಲದೇ ವಾರ್ಷಿಕವಾಗಿ 2,500 ವಾಹನಗಳನ್ನು ವಿದೇಶಿ ಮಾರುಕಟ್ಟೆಯಿಂದ ಆಮದು ಮಾಡಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶ ನೀಡಿದೆ.
ಈ ಹಿನ್ನಲೆಯಲ್ಲಿ ಜಪಾನ್ ಆಟೋ ದಿಗ್ಗಜ ಟೊಯೊಟಾ ಸೇರಿದಂತೆ ಹಲವು ಆಟೋ ಉತ್ಪಾದನಾ ಸಂಸ್ಥೆಗಳು ವಿದೇಶಿ ಮಾರುಕಟ್ಟೆಯಲ್ಲಿರುವ ತಮ್ಮ ಜನಪ್ರಿಯ ವಾಹನಗಳನ್ನು ಭಾರತದಲ್ಲೂ ಮಾರಾಟ ಮಾಡಲು ಸಿದ್ದವಾಗುತ್ತಿದ್ದು, ವೆಲ್ಫೈರ್ ಹಲವು ವಿಶೇಷತೆಗಳೊಂದಿಗೆ ಭಾರತದಲ್ಲಿ ಸದ್ದು ಮಾಡಲು ಸಿದ್ದವಾಗುತ್ತಿದೆ. ಟೊಯೊಟಾ ವೆಲ್ಫೈರ್ ಕಾರು ಈಗಾಗಲೇ ಆಯ್ದ ಡೀಲರ್ಸ್ಗಳಲ್ಲಿ ಸ್ಟಾಕ್ ಮಾಡಲಾಗುತ್ತಿದ್ದು, 4,935 ಎಂಎಂ ಉದ್ದ, 1,850 ಎಂಎಂ ಅಗಲ ಮತ್ತು 1,935 ಎಂಎಂ ಎತ್ತರವಿದೆ.
ಆರು ಆಸನ ಸೌಲಭ್ಯವಿರುವ ವೆಲ್ಫೈರ್ ಕಾರಿನಲ್ಲಿ ಪ್ರತಿ ಆಸನವು ಪ್ರತ್ಯೇಕ ಕಂಟ್ರೋಲ್ ಹೊಂದಿದ್ದು, ಆರಾಮದಾಯಕವಾಗಿ ಪ್ರಯಾಣಿಸುವಂತೆ ವಿನ್ಯಾಸಗೊಳಿಸಲಾಗಿದೆ. ಹೀಗಾಗಿ ಇದು ಐಷಾರಾಮಿ ಪ್ರಯಾಣವನ್ನು ಬಯಸುವ ಗ್ರಾಹಕರಿಗೆ ವಿಶೇಷವಾಗಿ ನಿರ್ಮಾಣ ಮಾಡಲಾಗಿದ್ದು, ಬೆರಳತುದಿಯಲ್ಲೇ ಹಲವು ತಾಂತ್ರಿಕ ಸೌಲಭ್ಯಗಳು ಲಭ್ಯವಿರಲಿವೆ.
ಎಂಜಿನ್ ಸಾಮರ್ಥ್ಯ
ವಿದೇಶಿ ಮಾರುಕಟ್ಟೆಗಳಲ್ಲಿ ವೆಲ್ಫೈರ್ ಕಾರು 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮತ್ತು 3.5-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರಿನಲ್ಲಿ ಕೇವಲ 2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ವರ್ಷನ್ ಮಾತ್ರವೇ ಬಿಡುಗಡೆ ಮಾಡಲಾಗುತ್ತಿದೆ.
MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ
2.5-ಲೀಟರ್ ಪೆಟ್ರೋಲ್ ಹೈಬ್ರಿಡ್ ಮಾದರಿಯು 150-ಬಿಹೆಚ್ಪಿ ಮತ್ತು 197-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ನಾಲ್ಕು ಚಕ್ರಗಳಿಗೂ ಪ್ರತ್ಯೇಕವಾಗಿ ಪವರ್ ಒದಗಿಸುವ ಎಲೆಕ್ಟ್ರಿಕ್ ಸಿವಿಟಿ ಗೇರ್ಬಾಕ್ಸ್ ತಂತ್ರಜ್ಞಾನವನ್ನು ಈ ಕಾರಿನಲ್ಲಿ ಅಳವಡಿಸಲಾಗಿದೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!
ಹೊಸ ಕಾರಿನಲ್ಲಿ ಪ್ರೀಮಿಯಂ ಫೀಚರ್ಸ್ಗಳಾದ ಎಲ್ಇಡಿ ಹೆಡ್ಲೈಟ್, ಕಾರ್ನರಿಂಗ್ ಲೈಟ್, ಇನ್ಕ್ಯಾಂಡಿಸೆಂಟ್ ಲೈಟ್, ಇಂಡಿಕೇಟರ್ ಲೈಟ್, ವೆಂಟಿಲೇಟೆಡ್ ಸೀಟಿಂಗ್, ಇನ್ಫೋಟೈನ್ಮೆಂಟ್ ಸಿಸ್ಟಂ, 360 ಡಿಗ್ರಿ ಕ್ಯಾಮರಾ, ಡ್ಯುಯಲ್ ಎಲೆಕ್ಟ್ರಿಕ್ ಸನ್ರೂಫ್ ಸೇರಿದಂತೆ ಹಲವಾರು ಸೌಲಭ್ಯಗಳಿವೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!
ಹಾಗೆಯೇ ಈ ಕಾರಿನಲ್ಲಿ ಪ್ರಯಾಣಿಕ ಸುರಕ್ಷತೆಗಾಗಿ 7 ಏರ್ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ಹಿಲ್ ಅಸಿಸ್ಟ್, ತ್ರಿ ಜೋನ್ ಆಟೋ ಕ್ಲೈಮೆಟ್ ಕಂಟ್ರೊಲ್, ಸ್ಟ್ಯಾಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಫ್ರಂಟ್ ಅಂಡ್ ರಿಯರ್ ಪಾರ್ಕಿಂಗ್ ಕ್ಯಾಮೆರಾ, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿ ಹಲವು ಸೆಫ್ಟಿ ಫೀಚರ್ಸ್ಗಳಿದ್ದು, ಭಾರತದಲ್ಲಿ ಬೆಲೆ ಕಡಿತಗೊಳಿಸುವುದಕ್ಕಾಗಿ ಕೆಲವು ಹೈ ಎಂಡ್ ಫೀಚರ್ಸ್ಗಳನ್ನು ಕೈಬಿಡಲಾಗಿದೆ.
ಒಟ್ಟಿನಲ್ಲಿ ಹೊಸ ಟೊಯೊಟಾ ವೆಲ್ಫೈರ್ ಲಗ್ಷುರಿಯ ಎಂಪಿವಿಯ ಭಾರತದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಸದ್ಯ ಮಾರುಕಟ್ಟೆರುವ ಮರ್ಸಿಡಿಸ್ ಬೆಂಝ್ ವಿ-ಕ್ಲಾಸ್ಗೆ ಪೈಪೋಟಿ ನೀಡಲಿರುವ ಹೊಸ ಕಾರು ದೆಹಲಿ ಎಕ್ಸ್ಶೋರೂಂ ಪ್ರಕಾರವೇ ರೂ.75 ಲಕ್ಷದಿಂದ ರೂ.80 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.