ಅಕ್ಟೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಟೊಯೊಟಾ ಸಂಸ್ಥೆಯು ಕೆಲ ದಿನಗಳ ಹಿಂದಷ್ಟೆ ದೇಶಿಯ ಮಾರುಕಟ್ಟೆಗೆ ಕಲ್ಲಿಟ್ಟು 20 ವರ್ಷ ಪೂರೈಸಿತು. ಹಾಗೆಯೆ ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯೊಂದಿಗೆ ಜಂಟಿಯಾಗಿ ಹಲವಾರು ವಾಹನಗಳನ್ನು ಉತ್ಪಾದನೆ ಮಾಡುವುದಾಗಿ ಕೂಡಾ ಒಪ್ಪಿಕೊಂಡಿದೆ. ಹೀಗಿರುವಾಗ ಸಂಸ್ಥೆಯು ಮಾರುತಿ ಸುಜುಕಿ ಜೊತೆಗೂ ಗ್ಲಾಂಝಾ ಕಾರನ್ನು ಬಿಡುಗಡೆ ಕೂಡಾ ಮಾಡಿದ್ದು, ಇದೀಗ ಹೊಸ ಐಷಾರಾಮಿ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡೀಸ್-ಬೆಂಝ್ ವಿ-ಕ್ಲಾಸ್ ಮಾತ್ರ ಐಷಾರಾಮಿ ಎಂಪಿವಿ ವಾಹನವಾಗಿ ಲಭ್ಯವಿದ್ದು, ಈ ವಾಹನವನ್ನು ಮರ್ಸಿಡೀಸ್ ಸಂಸ್ಥೆಯು ಕೆಲ ತಿಂಗಳುಗಳ ಹಿಂದಷ್ಟೆ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ವಾಹನಕ್ಕೆ ಪೈಪೋಟಿಯಾಗಿ ಟೊಯೊಟಾ ಸಂಸ್ಥೆಯು ವೆಲ್‍ಫೈರ್ ಎಂಬ ಲಕ್ಷುರಿ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಮಾಹಿತಿಗಳ ಪ್ರಕಾರ ಈ ಕಾರು ಇದೇ ವರ್ಷದ ಅಕ್ಟೋಬರ್‍‍‍ನಲ್ಲಿ ಮಾರುಕಟ್ಟೆಗೆ ಲಗ್ಗೆಯಿಡಲಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಟೊಯೊಟಾ ಸಂಸ್ಥೆಯು ತಮ್ಮ ಕೆಲ ಡೀಲರ್‍‍ಗಳ ಬಳಿ ವೆಲ್‍ಫೈರ್ ವಾಹನವನ್ನು ತೋರಿಸಲಾಗಿದ್ದು, ಈ ಕಾರನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಕೂಡಾ ಆಲ್ಫಾರ್ಡ್ ಎಂಬ ಮತ್ತೊಂದು ಐಷಾರಾಮಿ ವಾಹನದ ಜೊತೆಗೆ ಕಾಣಿಸಿಕೊಂಡಿತ್ತು. ಈ ಕಾರು ದೇಶಿಯ ಮಾರುಕಟ್ಟೆಗೆ ಸಿಬಿಯು (ಕಂಪ್ಲೀಟ್ಲಿ ಬಿಲ್ಟ್ ಯೂನಿಟ್) ಮಾರ್ಗವಾಗಿ ಆಮದು ಮಾಡಿಕೊಳ್ಳುವ ಸಾಧ್ಯತೆಗಳಿವೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಟೊಯೊಟಾ ವೆಲ್‍ಫೈರ್ ಲಕ್ಷುರಿ ಎಂಪಿವಿ ಕಾರು ಆಲ್ಫಾರ್ಡ್ ಕಾರನ್ನು ಅವಲಂಭಿಸಿದ್ದು, ಆಲ್ಫಾರ್ಡ್ ಕಾರಿಗೆ ಹೋಲಿಸಿದರೆ ಇದು ವಿಭಿನ್ನವಾದ ಪವರ್‍‍ಟ್ರೈನ್ ಹಾಗು ಆಲ್ಫಾರ್ಡ್ ಕಾರಿನ ಲೋವರ್ ವೇರಿಯೆಂಟ್‍ನ ಕೆಳಭಾಗದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ. ಅಲ್ಫಾರ್ಡ್ ಕಾರು ಕೂಡಾ ದಶಕದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಕಾಲಿಡುತ್ತಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಇನ್ನು ಈ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಸೆಂಟ್ರಲ್ ಕಂಸೋಲ್‍ನಲ್ಲಿ 7 ಇಂಚಿನ ಟಚ್‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಇನೋವಾ ಕ್ರಿಸ್ಟಾ ಕಾರಿನಲ್ಲಿ ನೀಡಿದ ಹಾಗೆಯೆ ಮರದಿಂದ ಸಜ್ಜುಗೊಂಡ ಡ್ಯಾಶ್‍‍ಬೋರ್ಡ್, ಲೆದರ್‍‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಮತ್ತು ಡ್ಯುಯಲ್ ಪಾಡ್ ಇಸ್ಟ್ರೂಮೆಂಟೇಷನ್ ಅನ್ನು ನೀಡಲಾಗಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ವೆಲ್‍‍ಫೈರ್ ಐಷಾರಾಮಿ ಎಂಪಿವಿ ಕಾರು ಎಲ್ಇಡಿ ಹೆಡ್‍ಲೈಟ್ಸ್, ಬ್ಲೈಂಡ್ ಸ್ಪಾಟ್ ಮಾನಿಟರ್, 7 ಏರ್‍‍ಬ್ಯಾಗ್‍ಗಳು, ಫುಲ್ಲಿ ಫ್ಲೆಡ್ಜ್ಡ್ ರಿಯರ್ ಸೀಟ್ ಎಂರ್ಟೈನ್ಮೆಂಟ್ ಪ್ಯಾಕೇಜ್, ವೈರ್‍‍ಲೆಸ್ ಚಾರ್ಜರ್ ಮತ್ತು ಎಲ್ಇಡಿ ಸೀಲಿಂಗ್ ಒಳಗೊಂಡಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಇವುಗಳ ಜೊತೆಗೆ ಟೊಯೊಟಾ ವೆಲ್‍ಫೈರ್ ಕಾರಿನಲ್ಲಿ ಮಲ್ಟಿಪಲ್ ಯುಎಸ್‍ಬಿ ಪೋರ್ಟ್ಸ್, ಡಿಜಿಟಲ್ ಫುಲ್ ಡಿಸ್ಪ್ಲೇ ಮಿರರ್, ಬ್ಲೈಂಡ್ ಡಿಟೆಕ್ಷನ್ ಸಿಸ್ಟಂ, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಪ್ಯಾನರಾಮಿಕ್ ವ್ಯೂ ಮಾನಿಟರ್ ಅನ್ನು ಪ್ರಯಾಣಿಕರ ಸುರಕ್ಷತೆಗಾಗಿ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಟೊಯೊಟಾ ವೆಲ್‍‍ಫೈರ್ ಕಾರಿನ ಎರಡನೆಯ ಸಾಲಿನ ಸೀಟ್‍‍ಗಳಲ್ಲಿ ಪವರ್ ರಿಕ್ಲೈನ್ ಮತ್ತು ಒಟೊಮನ್ ಅನ್ನು ಒಳಗೊಂಡ ಕ್ಯಾಪ್ಟೈನ್ ಸೀಟ್ ಅನ್ನು ಹೊಂದಿರಲಿದ್ದು, ಮೊದಲನೆಯ ಸಾಲಿನ ಮತ್ತು ಎರಡನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರು ಸನ್‍ರೂಫ್ ಅನ್ನು ಕಂಟ್ರೋಲ್ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದ್ದು, ಈ ಕಾರಿನಲ್ಲಿ ಎರಡು ಸನ್‍ರೂಫ್ ಅನ್ನು ಒದಗಿಸಲಾಗಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಎಂಜಿನ್ ಸಾಮರ್ಥ್ಯ

ಟೊಯೊಟಾ ವೆಲ್‍ಫೈರ್ ಎಂಪಿವಿ ಕಾರಿನಲ್ಲಿ 2.5 ಲೀಟರ್ 2ಎಆರ್-ಎಫ್ಇ 4 ಸಿಲೆಂಡರ್ ಡ್ಯುಯಲ್ ವಿವಿಟಿಐ ಎಂಜಿನ್ ಅನ್ನು ನೀಡಲಾಗಿದ್ದು, ಇದು 180 ಬಿಹೆಚ್‍ಪಿ ಮತ್ತು 235ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿರಲಿದೆ. ಈ ಎಂಜಿನ್ ಅನ್ನು ಕಂಟೀನ್ಯುಸ್ಲಿ ವೇರಿಯೆಬಲ್ ಟ್ರಾನ್ಸ್ಮಿಷನ್ ಅಂದರೆ ಸಿವಿಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಅಕೋಬರ್‍‍ನಲ್ಲಿ ಟೊಯೊಟಾ ವೆಲ್‍ಫೈರ್ ಐಷಾರಾಮಿ ಎಂಪಿವಿ ಬಿಡುಗಡೆ ಪಕ್ಕಾ

ಬೆಲೆ ಮತ್ತು ಬಿಡುಗಡೆಯ ಅವಧಿ

ಮಾಹಿತಿಗಳ ಪ್ರಕಾರ ಟೊಯೊಟಾ ಸಂಸ್ಥೆಯು ಇದೇ ವರ್ಷದ ಅಕೋಬರ್‍‍‍ನಲ್ಲಿ ವೆಲ್‍ಫೈರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಕಾರಿನ ಬೆಲೆಯು ಸುಮಾರು ರೂ.75 ಲಕ್ಷದಿಂದ 78 ಲಕ್ಷದ ಬೆಲೆಯನ್ನು ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ. ಏಕೆಂದರೆ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ಎಂಪಿವಿ ಕಾರು ಮಾರುಕಟ್ಟೆಯಲ್ಲಿ ಸುಮಾರು 68 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿದೆ.

Most Read Articles

Kannada
English summary
Toyota Vellfire India Launch Confirmed October 2019 - Details. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X