Just In
- 1 hr ago ಸ್ವಂತ ದುಡಿಮೆಯಲ್ಲಿ ಹೊಸ ಕಾರು ಖರೀದಿಸಿ ಯುವ ನಟಿಯ ಭಾವನಾತ್ಮಕ ಪೋಸ್ಟ್
- 2 hrs ago Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- 3 hrs ago Royal Enfield Himalayan ಸುಲಭವಾಗಿ ಖರೀದಿಸುವುದು ಹೇಗೆ?: ಇಲ್ಲಿದೆ ಡೌನ್ಪೇಮೆಂಟ್, EMI ಮಾಹಿತಿಗಳು!
- 3 hrs ago ಮಿಂಚಿನ ವೇಗಕ್ಕೆ ಸರಿಸಾಟಿಯಾಗಿ ಬೆಂಗಳೂರಿನ ಹೊಸ ಅಲ್ಟ್ರಾವೈಲೆಟ್ ಬೈಕ್ ಬಿಡುಗಡೆ: 323KM ರೇಂಜ್
Don't Miss!
- Technology ಒಪ್ಪೋ ಫೈಂಡ್ X7 ಅಲ್ಟ್ರಾ ಕ್ಯಾಮೆರಾ: ಮೊಬೈಲ್ ಫೋಟೋಗ್ರಫಿಗೆ ಅತ್ಯುತ್ತಮ ಫೋನ್!
- Lifestyle 613 ದಿನ ಕೊರೊನಾ ವಿರುದ್ಧ ಹೋರಾಡಿ ವೃತಪಟ್ಟ ವ್ಯಕ್ತಿ..!
- News Kotak Mahindra Bank: ಕೋಟಕ್ ಮಹಿಂದ್ರಾ ಬ್ಯಾಂಕ್ ಮೇಲೆ ಆರ್ಬಿಐ ನಿರ್ಬಂಧ: ಗ್ರಾಹಕರ ಮೇಲೆ ಪರಿಣಾಮಗಳೇನು?
- Movies Swathi Royal; ಒಂಬತ್ತನೇ ಕ್ಲಾಸ್ ನಲ್ಲೇ ಲವ್ವಲ್ಲಿ ಬಿದ್ದ ಅಮೃತಧಾರೆ ಅಪರ್ಣಾ..!
- Sports DC vs GT IPL 2024: ಡೆಲ್ಲಿ ಕೋಟೆಯಲ್ಲಿ ವಿಜಯದ ಪತಾಕೆ ಹಾರಿಸುತ್ತಾ ಗುಜರಾತ್?; ಟಾಸ್ ವರದಿ, ಆಡುವ ಬಳಗ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಾರುಕಟ್ಟೆಗೆ ಲಗ್ಗೆಯಿಡಲಿದೆ ಟೊಯೊಟಾ ಸಂಸ್ಥೆಯ ಮತ್ತೊಂದು ಐಷಾರಾಮಿ ಎಂಪಿವಿ ಕಾರು
ಟೊಯೊಟಾ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ತಕ್ಕ ಹಾಗೆ ಮಾರುಕಟ್ಟೆಯಲ್ಲಿ ವಾಹನಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಟೊಯೊಟಾ ಸಂಸ್ಥೆಯು ಕೊನೆಯದಾಗಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾದ ಗ್ಲಾಂಝಾ ಕಾರು ಉತ್ತಮ ಬೇಡಿಕೆಯನ್ನು ಪಡೆಯುತ್ತಿದ್ದು, ಇದೀಗ ಐಷಾರಾಮಿ ಎಂಪಿವಿ ಕಾರನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ.
ಸದ್ಯ ದೇಶಿಯ ಮಾರುಕಟ್ಟೆಯಲ್ಲಿ ಮರ್ಸಿಡೀಸ್-ಬೆಂಝ್ ವಿ-ಕ್ಲಾಸ್ ಮಾತ್ರ ಐಷಾರಾಮಿ ಎಂಪಿವಿ ವಾಹನವಾಗಿ ಲಭ್ಯವಿದ್ದು, ಈ ವಾಹನವನ್ನು ಮರ್ಸಿಡೀಸ್ ಸಂಸ್ಥೆಯು ಕೆಲ ತಿಂಗಳುಗಳ ಹಿಂದಷ್ಟೆ ಬಿಡುಗಡೆ ಮಾಡಲಾಗಿತ್ತು. ಇದೀಗ ಈ ವಾಹನಕ್ಕೆ ಪೈಪೋಟಿಯಾಗಿ ಟೊಯೊಟಾ ಸಂಸ್ಥೆಯು ವೆಲ್ಫೈರ್ ಎಂಬ ಲಕ್ಷುರಿ ಎಂಪಿವಿಯನ್ನು ಬಿಡುಗಡೆಗೊಳಿಸಲು ಸಜ್ಜುಗೊಳ್ಳುತ್ತಿದ್ದು, ಎಂಜಿನ್ ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಸ್ಪಾಟ್ ಟೆಸ್ಟಿಂಗ್ ಕೂಡಾ ನಡೆಸಲಾಗುತ್ತಿದೆ.
ಟೊಯೊಟಾ ಸಂಸ್ಥೆಯು ತಮ್ಮ ಕೆಲ ಡೀಲರ್ಗಳ ಬಳಿ ವೆಲ್ಫೈರ್ ವಾಹನವನ್ನು ತೋರಿಸಲಾಗಿದ್ದು, ಈ ಕಾರನ್ನು 2018ರ ಆಟೋ ಎಕ್ಸ್ ಪೋ ಮೇಳದಲ್ಲಿ ಕೂಡಾ ಆಲ್ಫಾರ್ಡ್ ಎಂಬ ಮತ್ತೊಂದು ಐಷಾರಾಮಿ ವಾಹನದ ಜೊತೆಗೆ ಕಾಣಿಸಿಕೊಂಡಿತ್ತು. ಈ ಕಾರು ದೇಶಿಯ ಮಾರುಕಟ್ಟೆಗೆ ಸಿಬಿಯು (ಕಂಪ್ಲೀಟ್ಲಿ ಬಿಲ್ಟ್ ಯೂನಿಟ್) ಮಾರ್ಗವಾಗಿ ಆಮದು ಮಾಡಿಕೊಳ್ಳುವ ಸಾಧ್ಯತೆಗಳಿವೆ.
ಟೊಯೊಟಾ ವೆಲ್ಫೈರ್ ಲಕ್ಷುರಿ ಎಂಪಿವಿ ಕಾರು ಆಲ್ಫಾರ್ಡ್ ಕಾರನ್ನು ಅವಲಂಭಿಸಿದ್ದು, ಆಲ್ಫಾರ್ಡ್ ಕಾರಿಗೆ ಹೋಲಿಸಿದರೆ ಇದು ವಿಭಿನ್ನವಾದ ಪವರ್ಟ್ರೈನ್ ಹಾಗು ಆಲ್ಫಾರ್ಡ್ ಕಾರಿನ ಲೋವರ್ ವೇರಿಯೆಂಟ್ನ ಕೆಳಭಾಗದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದೆ. ಅಲ್ಫಾರ್ಡ್ ಕಾರು ಕೂಡಾ ದಶಕದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಕಾಲಿಡುತ್ತಿದೆ.
ಇನ್ನು ಈ ಕಾರಿನ ಒಳಭಾಗವನ್ನು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಸೆಂಟ್ರಲ್ ಕಂಸೋಲ್ನಲ್ಲಿ ಟಚ್ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಇನೋವಾ ಕ್ರಿಸ್ಟಾ ಕಾರಿನಲ್ಲಿ ನೀಡಿದ ಹಾಗೆಯೆ ಮರದಿಂದ ಸಜ್ಜುಗೊಂಡ ಡ್ಯಾಶ್ಬೋರ್ಡ್, ಲೆದರ್ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್ ಮತ್ತು ಡ್ಯುಯಲ್ ಪಾಡ್ ಇಸ್ಟ್ರೂಮೆಂಟೇಷನ್ ಅನ್ನು ನೀಡಲಾಗಿದೆ.
ಮಾರುಕಟ್ಟೆಗೆ ಲಗ್ಗೆಯಿಡಲಿರುವ ಟೊಯೊಟಾ ವೆಲ್ಫೈರ್ ಐಷಾರಾಮಿ ಎಂಪಿವಿ ಕಾರು ಎಲ್ಇಡಿ ಹೆಡ್ಲೈಟ್ಸ್, ಬ್ಲೈಂಡ್ ಸ್ಪಾಟ್ ಮಾನಿಟರ್, 7 ಏರ್ಬ್ಯಾಗ್ಗಳು, ಫುಲ್ಲಿ ಫ್ಲೆಡ್ಜ್ಡ್ ರಿಯರ್ ಸೀಟ್ ಎಂರ್ಟೈನ್ಮೆಂಟ್ ಪ್ಯಾಕೇಜ್, ವೈರ್ಲೆಸ್ ಚಾರ್ಜರ್ ಮತ್ತು ಎಲ್ಇಡಿ ಸೀಲಿಂಗ್ ಒಳಗೊಂಡಿದೆ.
ಇವುಗಳ ಜೊತೆಗೆ ಟೊಯೊಟಾ ವೆಲ್ಫೈರ್ ಕಾರಿನಲ್ಲಿ ಮಲ್ಟಿಪಲ್ ಯುಎಸ್ಬಿ ಪೋರ್ಟ್ಸ್, ಡಿಜಿಟಲ್ ಫುಲ್ ಡಿಸ್ಪ್ಲೇ ಮಿರರ್, ಬ್ಲೈಂಡ್ ಡಿಟೆಕ್ಷನ್ ಸಿಸ್ಟಂ, ರಿಯರ್ ಕ್ರಾಸ್ ಟ್ರಾಫಿಕ್ ಅಲರ್ಟ್ ಪ್ಯಾನರಾಮಿಕ್ ವ್ಯೂ ಮಾನಿಟರ್ ಅನ್ನು ಪ್ರಯಾಣಿಕರ ಸುರಕ್ಷತೆಗಾಗಿ ಇನ್ನು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದುಕೊಳ್ಳಲಿದೆ.
ಟೊಯೊಟಾ ವೆಲ್ಫೈರ್ ಕಾರಿನ ಎರಡನೆಯ ಸಾಲಿನ ಸೀಟ್ಗಳಲ್ಲಿ ಪವರ್ ರಿಕ್ಲೈನ್ ಮತ್ತು ಒಟೊಮನ್ ಅನ್ನು ಒಳಗೊಂಡ ಕ್ಯಾಪ್ಟೈನ್ ಸೀಟ್ ಅನ್ನು ಹೊಂದಿರಲಿದ್ದು, ಮೊದಲನೆಯ ಸಾಲಿನ ಮತ್ತು ಎರಡನೆಯ ಸಾಲಿನಲ್ಲಿ ಕೂರುವ ಪ್ರಯಾಣಿಕರು ಸನ್ರೂಫ್ ಅನ್ನು ಕಂಟ್ರೋಲ್ ಮಾಡಿಕೊಳ್ಳುವ ಅವಕಾಶವನ್ನು ಸಹ ನೀಡಲಾಗಿದ್ದು, ಈ ಕಾರಿನಲ್ಲಿ ಎರಡು ಸನ್ರೂಫ್ ಅನ್ನು ಒದಗಿಸಲಾಗಿದೆ.
ಎಂಜಿನ್ ಸಾಮರ್ಥ್ಯ
ಟೊಯೊಟಾ ವೆಲ್ಫೈರ್ ಎಂಪಿವಿ ಕಾರಿನಲ್ಲಿ 2.5 ಲೀಟರ್ 2ಎಆರ್-ಎಫ್ಇ 4 ಸಿಲೆಂಡರ್ ಡ್ಯುಯಲ್ ವಿವಿಟಿಐ ಎಂಜಿನ್ ಅನ್ನು ನೀಡಲಾಗಿದ್ದು, ಇದು 180 ಬಿಹೆಚ್ಪಿ ಮತ್ತು 235ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣವನ್ನು ಪಡೆದುಕೊಂಡಿರಲಿದೆ. ಈ ಎಂಜಿನ್ ಅನ್ನು ಕಂಟೀನ್ಯುಸ್ಲಿ ವೇರಿಯೆಬಲ್ ಟ್ರಾನ್ಸ್ಮಿಷನ್ ಅಂದರೆ ಸಿವಿಟಿ ಗೇರ್ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.
ಬೆಲೆ ಮತ್ತು ಬಿಡುಗಡೆಯ ಅವಧಿ
ಮಾಹಿತಿಗಳ ಪ್ರಕಾರ ಟೊಯೊಟಾ ಸಂಸ್ಥೆಯು ಇದೇ ತ್ರೈಮಾಸಿಕ ಅವಧಿಯಲ್ಲಿ ವೆಲ್ಫೈರ್ ಎಂಪಿವಿ ಕಾರನ್ನು ಬಿಡುಗಡೆ ಮಾಡಲಿದ್ದು, ಈ ಕಾರಿನ ಬೆಲೆಯು ಸುಮಾರು ರೂ.75 ಲಕ್ಷದಿಂದ 78 ಲಕ್ಷದ ಬೆಲೆಯನ್ನು ಪಡೆದುಕೊಳ್ಳಬಹುದೆಂದು ಅಂದಾಜಿಸಲಾಗಿದೆ. ಏಕೆಂದರೆ ಮರ್ಸಿಡೀಸ್ ಬೆಂಝ್ ವಿ-ಕ್ಲಾಸ್ ಎಂಪಿವಿ ಕಾರು ಮಾರುಕಟ್ಟೆಯಲ್ಲಿ ಸುಮಾರು 68 ಲಕ್ಷದ ಬೆಲೆಯಲ್ಲಿ ಮಾರಾಟವಾಗುತ್ತಿದೆ.
Source: Team BHP