ಸಂಚಾರಿ ನಿಯಮದ ಬಗ್ಗೆ ನಮ್ಮ ಸೆಲಬ್ರಿಟಿಗಳು ಏನು ಹೇಳ್ತಾರೆ ಕೇಳಿ..

ಹೆಲ್ಮೆಟ್ ರಹಿತ ವಾಹನ ಚಾಲನೆ, ಡ್ರಂಕ್ ಅಂಡ್ ಡ್ರೈವ್, ಒನ್ ವೇ ಡ್ರೈವಿಂಗ್ ಮತ್ತು ಓವರ್ ಸ್ಪೀಡಿಂಗ್ ಎಂಬ ಸಂಚಾರಿ ನಿಯಮಗಳ ಉಲ್ಲಂಘನೆಯಿಂದಾಗಿ ದಿನಕ್ಕೆ ಸಾವಿರಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಸಂಚಾರಿ ನಿಯಮಗಳ ಪ್ರಾಮುಖ್ಯತೆಯನ್ನು ಜನರಿಗೆ ತಿಳಿಹೇಳಲು ಟ್ರಾಫಿಕ್ ಪೊಲೀಸರು ಎಷ್ಟೇ ಅರಿವು ಮೂಡಿಸಿದರೂ ಸಹ ನಮ್ಮ ಜನಕ್ಕೆ ಅದನ್ನು ಕೇಳುವ ಮತ್ತು ಪಾಲನೆ ಮಾಡುತ್ತಿಲ್ಲ.

ಸಂಚಾರಿ ನಿಯಮದ ಬಗ್ಗೆ ನಮ್ಮ ಸೆಲಬ್ರಿಟಿಗಳು ಏನು ಹೇಳ್ತಾರೆ ಕೇಳಿ...

ಅದರಲ್ಲಿಯೂ ವೀಕೆಂಡ್ ಮತ್ತು ಹೊಸ ವರ್ಷ ಪ್ರಾರಂಭವಾಗುವ ಹಿಂದಿನ ದಿನದ ರಾತ್ರಿಯಂದು ಕಂಟ ಪೂರ್ತಿ ಕುಡಿದು ವಾಹನ ಚಾಲನೆ ಮಾಡುವುವರನ್ನು ನಾವು ಕಣ್ಣಾರೆ ನೋಡಿರುತ್ತೇವೆ. ಈ ವರ್ಷವಂತೂ ಟ್ರಾಫಿಕ್ ಪೊಲೀಸರು ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆಯನ್ನು ಕಡಿಮೆ ಮಾಡಲು ಸಾಕಷ್ಟು ಕಠಿಣ ನಿಮಯ ಜಾರಿ ತಂದಿದ್ದರೂ ಸಹ ಕುಡಿದು ಚಾಲನೆ ಮಾಡುವವರ ಸಂಖ್ಯೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಹೀಗಾಗಿ ಸಾರ್ವಜನಿಕರಿಗೆ ಸರಿಯಾದ ಅರಿವು ಮೂಡಿಸುವ ಉದ್ದೇಶದಿಂದ ನಮ್ಮ ಬೆಂಗಳೂರು ಪೊಲೀಸರು ಖ್ಯಾತನಾಮದಿಂದ ಹೊಸ ಅಭಿಯಾನವೊಂದನ್ನು ಆರಂಭಿಸಿದ್ದಾರೆ.

ಸಂಚಾರಿ ನಿಯಮದ ಬಗ್ಗೆ ನಮ್ಮ ಸೆಲಬ್ರಿಟಿಗಳು ಏನು ಹೇಳ್ತಾರೆ ಕೇಳಿ...

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್

ಹಲವಾರು ಚಿತ್ರಗಳಲ್ಲಿ ನಟಿಸಿ ಸೆಂಚುರಿ ಸ್ಟಾರ್ ಬಿರುದು ಪಡೆಯುವುದಲ್ಲದೇ 50 ದಾಟಿದರೂ ನಟನೆಯಲ್ಲಿ ಮತ್ತು ನೃತ್ಯದಲ್ಲಿ ತನ್ನನ್ನು ಮೀರಿಸುವವರು ಯಾರು ಇಲ್ಲವೆಂದು ನಿರೂಪಿಸುತ್ತಿರುವ ಕರುನಾಡ ಚಕ್ರವರ್ತಿ ಶಿವರಾಜ್‍ಕುಮಾರ್‍‍‍ರವರು ಕೂಡಾ ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಮಾತನಾಡಿದ್ದಾರೆ.

'ಹೊಸ ವರ್ಷ ಎಲ್ಲರ ಜೀವನದಲ್ಲಿ ಹೊಸ ಹರ್ಷವನ್ನು ತರಲಿ. ಜೀವನ ಸುಖಕರವಾಗಿರಲಿ. ನಿಮ್ಮ ಜೀವನ ನಿಮ್ಮ ಕೈಯಲ್ಲಿ. ಕುಡಿದು ವಾಹನವನ್ನ ಚಾಲನೆ ಮಾಡಬೇಡಿ. ನಿಮಗಾಗಿ ನಿಮ್ಮ ಪ್ರೀತಿಪಾತ್ರರು ಕಾಯುತ್ತಿರುತ್ತಾರೆ. ಅದನ್ನು ಮರೆಯಬೇಡಿ ಮತ್ತು ಸಂಚಾರಿ ನಿಯಮಗಳನ್ನು ಪಾಲಿಸಿ ಎಂದು ಹೇಳಿಕೊಂಡಿದ್ದಾರೆ.

ನಟಿ ತಾರಾ ಅನುರಾಧ

ಹಲವಾರು ಚಿತ್ರಗಳಲ್ಲಿ ತನ್ನ ನಟನೆಯ ಮೂಲಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿರುವುದು ನಟಿ ತಾರಾ. 'ಪ್ರತೀ ವರ್ಷ ನಾವು ಮಾಧ್ಯಮಗಳಲ್ಲಿ, ಹೊಸ ವರ್ಷದ ಪ್ರಾರಂಭದಲ್ಲಿ ಆಗುತ್ತಿರುವ ಅನಾಹುತಗಳ ಬಗ್ಗೆ ಓದುತ್ತಲೇ ಇರುತ್ತೇವೆ. ಸಂಚಾರಿ ನಿಯಮಗಳು ಮತ್ತು ಸಂಚಾರಿ ಪೊಲೀಸರು ಇರುವುದೇ ನಮ್ಮೆಲ್ಲರ ಒಳಿತಿಗಾಗಿ ಅಲ್ಲವೇ.? ಸಂಚಾರಿ ನಿಯಮಗಳನ್ನ ಪಾಲಿಸಬೇಕಾಗಿದ್ದು, ನಮ್ಮ ಧರ್ಮ ಮತ್ತು ನಮ್ಮ ಕರ್ತವ್ಯ ಎಂದು ಹೇಳಿಕೊಂಡಿದ್ದಾರೆ.

ಯೋಗರಾಜ್ ಭಟ್

ಹೊಸ ವರ್ಷಾಚಾರಣೆ ವೇಳೆ ಉಳಿದ ದಿನಗಳಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಡ್ರಂಕ್ ಅಂಡ್ ಡ್ರೈವ್ ಪ್ರಕರಣಗಳು ದಾಖಲಾಗುವುದು ಹೊಸತಲ್ಲ. ಆದ್ರೆ ಇದೇ ಕಾರಣಕ್ಕೆ ಅದೆಷ್ಟೋ ಅಮಾನಕ ಜೀವಗಳು ಕೂಡಾ ಬಲಿಯಾಗುತ್ತವೆ. ಇದರಿಂದ ಹೊಸ ವರ್ಷದ ಸಂಭ್ರಮದಲ್ಲಿ ಕುಡಿದು ಜೀವ ಕಳೆದುಕೊಳ್ಳುವುದಕ್ಕಿಂತ ಗಾಡಿನೂ ಮತ್ತೂ ಬಾಡಿನೂ ಸೇಫ್ ಆಗಿ ಮನೆಗೆ ತಗೊಂಡು ಹೋಗಿ ಅಂತಾ ಹೇಳಿರುವ ಮಾರ್ಮಿಕ ಸಂದೇಶವು ಇಂದಿನ ಯುವಜನತೆಯು ತಪ್ಪದೇ ಪಾಲನೆ ಮಾಡಬೇಕಾದ ಅವಶ್ಯಕತೆಯಿದೆ ಅಂದ್ರೆ ತಪ್ಪಾಗುದಿಲ್ಲ.

MOST READ: ರಾಣಿಯಂತೆ ವಿಮಾನದಲ್ಲಿ ಒಬ್ಬಳೆ ಪ್ರಯಾಣಿಸಿದ ಮಹಿಳೆ..!

ಸಂಚಾರಿ ನಿಯಮದ ಬಗ್ಗೆ ನಮ್ಮ ಸೆಲಬ್ರಿಟಿಗಳು ಏನು ಹೇಳ್ತಾರೆ ಕೇಳಿ...

ಬರಗೂರು ರಾಮಚಂದ್ರಪ್ಪ

ಕನ್ನಡ ಸಾಹಿತ್ಯದಲ್ಲಿ ಮಾತ್ರವಲ್ಲದೆ ತಮ್ಮ ಬರವಣಿಗೆಯಿಂದ ಸಿನಿರಂಗದಲ್ಲಿಯೂ ಜನಪ್ರಿಯತೆಯನ್ನು ಪಡೆದಿರುವ ಬರಗೂರು ರಾಮಚಂದ್ರಪ್ಪರವರು ಸಂಚಾರಿ ನಿಯಮದ ಬಗ್ಗೆ 'ಹೊಸ ವರ್ಷದ ಸಂಭ್ರಮದಲಿ ಯಾವುದೇ ಅಹಿತಕರ ಘಟನೆಗಳು ನಡೆಯದೆ ಇರುವ ಹಾಗೆ ಪಾಲಿಸುವುದು ನಮ್ಮೆಲ್ಲರ ಜವಾಬ್ದಾರಿ. ಕುಡಿದು ವಾಹನ ಚಾಲನೆ ಮಾಡುವುದರಿಂದ ಕೇವಲ ಪೊಲೀಸರಿಗೆ ಮಾತ್ರವಲ್ಲದೇ ತಮಗೆ ತಾವೇ ತೊಂದರೆ ಮಾಡಿಕೊಳ್ಳುವ ಪರಿಸ್ಥಿತಿಯನ್ನು ತಂದುಕೊಳ್ಳಬೇಡಿ. ಮತ್ತು ಟ್ರಾಫಿಕ್ ಪೊಲೀಸರ ಜೆತೆಗೆ ಸಹಕರಿಸಿ ಎಂದು ಹೇಳಿದ್ದಾರೆ.

ಪೊಲೀಸರು ಇರುವುದು ನಮ್ಮ ಒಳಿತಿಗಾಗಿ ಮತ್ತು ನಮ್ಮ ರಕ್ಷಣೆಗಾಗಿ ಹಾಗು ಇವರಿಂದ ಒಂದು ಸಮಾಧಾನವಾದ ಮತ್ತು ನೆಮ್ಮದಿಯ ಸಮಾಜವನ್ನ ನಾವು ಕಾಣುತ್ತಿದ್ದೇವೆ. ಆದುದರಿಂದ ಅವರೊಂದಿಗಿನ ಸಹಕಾರದೊಂದಿಗೆ ಯಾವುದೇ ತೊಂದರೆಯಾಗದೇ ಸಂಭ್ರಮಿಸುವುದೇ ನಿಜವಾದ ಹೊಸ ವರ್ಷ ಮತ್ತು ಅದೇ ನಿಜವಾದ ಹರ್ಷ ಎಂದು ಬರಗೂರು ರಾಮಚಂದ್ರಪ್ಪರವರು ಹೇಳಿಕೊಂಡಿದ್ದಾರೆ.

ಸಂಚಾರಿ ನಿಯಮದ ಬಗ್ಗೆ ನಮ್ಮ ಸೆಲಬ್ರಿಟಿಗಳು ಏನು ಹೇಳ್ತಾರೆ ಕೇಳಿ...

ಪಿ. ಹರಿಶೇಖರನ್ (ಐಪಿಎಸ್)

ಟ್ರಾಫಿಕ್ ಇಲಾಖೆಯ ಎಸಿಪಿಯಾಗಿರುವ ಪಿ. ಹರಿಶೇಖರನ್‍ರವರು ' ಈ ವರ್ಷ ಟ್ರಾಫಿಕ್ ಪೊಲೀಸ್‍‍ರವರ ವತಿಯಿಂದ ಎರಡು ಘೋಷಣೆಗಳನ್ನು ಪ್ರಕಟಿಸಿರುವುದಾಗಿ ಹೇಳಿಕೊಂಡಿದ್ದು, ಆದರಲ್ಲಿ ಮೊದಲನೆಯದಾಗಿ ಟ್ರಾಫಿಕ್ ಅಪರಾಧ ರಹಿತ ಹೊಸ ವರ್ಷ ಮತ್ತು ಅಪಘಾತ ರಹಿತ ಹೊಸ ವರ್ಷ 2019 ಎಂಬ ಎರಡು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆಯೆಂತೆ.

ಈ 2019ರ ಹೊಸ ವರ್ಷದಲ್ಲಿ ಟ್ರಾಫಿಕ್ ವಿಷಯವಾಗಿ ಯಾವುದೇ ಅನಾಹುತಗಳು ನಡೆಯದೆ ಇರುವ ಹಾಗೆ ಸಾಕಷ್ಟು ಏರ್ಪಾಟುಗಳನ್ನು ಪೊಲೀಸರು ಮಾಡಿರುವುದಾಗಿ ಮತ್ತು ಕುಡಿದು ವಾಹನ ಚಾಲನೆ ಮಾಡಬೇಡಿ. ಸಂತೋಷದಿಂದ ಜನರು ಇರಬೇಕು, ಮತ್ತು ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಆಸ್ಪತ್ರೆಯ ಪಾಲಾಗದಿರಿ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ.

MOST READ: 8.50 ಕೋಟಿ ಮೌಲ್ಯದ ರೋಲ್ಸ್ ರಾಯ್ಸ್ ಕಲಿನಿಯನ್ ಒಡತಿಯಾದ ಭಾರತದ ಮೊದಲ ಮಹಿಳೆ..!

ಏನೇ ಆಗಲಿ ಪ್ರತೀ ವರ್ಷದಂತೆ ಈ ವರ್ಷದಲ್ಲಿ ಮತ್ತು ಇನ್ಮೆಂದೆ ಮಧ್ಯ ಸೇವಿಸಿ ವಾಹನ ಚಾಲನೆ ಮಾಡುವವರ ಸಂಖ್ಯೆ ಕಡಿಮೆಯಾಗಲಿ ಎಂದು ಭಾವಿಸುತ್ತಾ ನಮ್ಮ ಸೆಲಬ್ರಿಟಿಗಳು ಹೇಳಿರುವ ಮಾತುಗಳು ಕೇವಲ ತಮ್ಮ ಅಭಿಮಾನಿಗಳಿಗೆ ಮಾತ್ರವಲ್ಲದೇ ಜನತೆಗೂ ತಲುಪಲಿ ಮತ್ತು ಎಲ್ಲರೂ ಸಂಚಾರಿ ನಿಯಮಗಳನ್ನು ತಪ್ಪದೇ ಪಾಲಿಸಲಿ ಎಂದು ನಮ್ಮ ಆಶಯ ಕೂಡಾ.

Source: Bangalore Traffic Police

Most Read Articles

Kannada
English summary
Traffic Awareness By Our Sandalwood Stars. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X