ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಕರ್ನಾಟಕ ರಾಜ್ಯ ಸರ್ಕಾರವು ಬೆಂಗಳೂರು ನಗರದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಕಡಿಮೆಗೊಳಿಸಿದೆ. ರಾಜ್ಯ ಸರ್ಕಾರವು ದಂಡದ ಮೊತ್ತವನ್ನು ಹೊಸ ಮೋಟಾರು ವಾಹನ ಕಾಯ್ದೆಯನ್ವಯ 50%ನಿಂದ 80%ವರೆಗೂ ಕಡಿಮೆಗೊಳಿಸಿದೆ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಭಾರೀ ಪ್ರಮಾಣದ ದಂಡದ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ದಂಡದ ಮೊತ್ತವನ್ನು ಕಡಿಮೆಗೊಳಿಸುವಂತೆ ಸಾರ್ವಜನಿಕರು ಸರ್ಕಾರದ ಮೇಲೆ ಒತ್ತಡ ಹೇರಿದ ಹಿನ್ನೆಲೆಯಲ್ಲಿ ದುಬಾರಿ ಮೊತ್ತದ ದಂಡವನ್ನು ಕಡಿಮೆಗೊಳಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಈ ನಿರ್ಧಾರವನ್ನು ಸ್ವಾಗತಿಸಿ, ಸರ್ಕಾರವು ನಗರದಲ್ಲಿ ಹಾಳಾಗಿರುವ ರಸ್ತೆಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಮತ್ತೊಂದು ವರ್ಗದ ಜನರು ದುಬಾರಿ ದಂಡದ ಪ್ರಮಾಣವನ್ನು ಕಡಿಮೆಗೊಳಿಸಿದ್ದು ಸರಿಯಲ್ಲವೆಂದು ಹೇಳಿದ್ದಾರೆ. ದುಬಾರಿ ದಂಡಕ್ಕೆ ಹೆದರಿ, ಜನರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದರು. ಆದ ಕಾರಣ ದುಬಾರಿ ದಂಡವನ್ನು ಹಾಗೆಯೇ ಮುಂದುವರೆಸಬೇಕಿತ್ತೆಂದು ಹೇಳಿದ್ದಾರೆ. ದುಬಾರಿ ದಂಡವನ್ನು ಎಷ್ಟು ಪ್ರಮಾಣದಲ್ಲಿ ಕಡಿಮೆಗೊಳಿಸಲಾಗಿದೆ ಎಂಬುದನ್ನು ನೋಡೋಣ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸವಾರಿ/ಚಾಲನೆ ಮಾಡುವುದಕ್ಕೆ:

ಹೊಸ ಮೋಟಾರು ವಾಹನ ಕಾಯ್ದೆಯನ್ವಯ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಚಲಾಯಿಸಿದರೆ ರೂ.2,000 ದಂಡ ವಿಧಿಸಲಾಗುತ್ತಿತ್ತು. ಈಗ ಈ ಮೊತ್ತವನ್ನು ರೂ.1,000ಕ್ಕೆ ಇಳಿಸಲಾಗಿದೆ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳನ್ನು ಹೊರತು ಪಡಿಸಿದ ಬೇರೆ ವಾಹನಗಳು ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಚಲಿಸಿದರೆ ಇನ್ನು ಮುಂದೆ ರೂ.2,000 ದಂಡ ವಿಧಿಸಲಾಗುವುದು. ಹೊಸ ಕಾಯ್ದೆಯನ್ವಯ ಇದುವರೆಗೂ ರೂ.4,000 ದಂಡ ವಿಧಿಸಲಾಗುತ್ತಿತ್ತು.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಸುರಕ್ಷಾ ನಿಯಮಗಳ ಉಲ್ಲಂಘನೆಗಾಗಿ:

ದ್ವಿಚಕ್ರ ವಾಹನ ಸವಾರ ಹಾಗೂ ಹಿಂಬದಿ ಸವಾರ ಹೆಲ್ಮೆಟ್ ಧರಿಸದಿದ್ದರೆ ರೂ.1,000 ದಂಡ ವಿಧಿಸಲಾಗುತ್ತಿತ್ತು. ಈಗ ಈ ಮೊತ್ತವನ್ನು ರೂ.500ಗಳಿಗೆ ಇಳಿಸಲಾಗಿದೆ. ವಾಹನ ಚಾಲನೆ ವೇಳೆ ಸೀಟ್ ಬೆಲ್ಟ್ ಧರಿಸದಿದ್ದರೆ ಈ ಮೊದಲು ರೂ.1,000 ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ರೂ.500 ದಂಡ ವಿಧಿಸಲಾಗುವುದು.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಇನ್ಶೂರೆನ್ಸ್ ಇಲ್ಲದೆ ಸವಾರಿ/ಚಾಲನೆ:

ಈ ಮೊದಲು ಇನ್ಶೂರೆನ್ಸ್ ಇಲ್ಲದೇ ವಾಹನ ಚಾಲನೆ ಮಾಡುವ ಎಲ್ಲಾ ರೀತಿಯ ವಾಹನಗಳ ಸವಾರರಿಗೂ ಮೊದಲ ಬಾರಿಯ ಉಲ್ಲಂಘನೆಗಾಗಿ ರೂ.2,000, ನಂತರ ಪ್ರತಿ ಬಾರಿ ರೂ.4,000 ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಇನ್ಶೂರೆನ್ಸ್ ಹೊಂದಿಲ್ಲದ ದ್ವಿ ಚಕ್ರ ಹಾಗೂ ತ್ರಿ ಚಕ್ರ ವಾಹನಗಳಿಗೆ ರೂ.1,000 ದಂಡ ವಿಧಿಸಿದರೆ, ಕಾರುಗಳಿಗೆ ರೂ.2,000 ಹಾಗೂ ಭಾರೀ ವಾಹನಗಳಿಗೆ ರೂ.4,000 ದಂಡ

ವಿಧಿಸಲಾಗುವುದು.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ತೂಕವನ್ನು ಕೊಂಡೊಯ್ದರೆ:

ನಿಗದಿಗಿಂತ ಹೆಚ್ಚಿನ ಪ್ರಮಾಣದ ತೂಕವನ್ನು ಸಾಗಿಸುತ್ತಿದ್ದ ವಾಹನಗಳಿಗೆ ಈ ಹಿಂದೆ ರೂ.20,000 ಹಾಗೂ ನಂತರದ ಪ್ರತಿ ಟನ್‍‍ಗೆ ರೂ.2,000 ಹೆಚ್ಚುವರಿಯಾಗಿ ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ತೂಕ ಹೊಂದುವ ವಾಹನಗಳಿಗೆ ರೂ.5,000 ಹಾಗೂ ನಂತರದ ಪ್ರತಿ ಟನ್‍‍ಗೆ ರೂ.2,000 ಹೆಚ್ಚುವರಿ ದಂಡ ವಿಧಿಸಲಾಗುವುದು.

MOST READ: ಹಳೆಯದಾದಷ್ಟು ದುಬಾರಿಯಾಗುತ್ತವೆ ಈ ಜನಪ್ರಿಯ ಬೈಕುಗಳು

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಪರವಾನಗಿ ಷರತ್ತುಗಳ ಉಲ್ಲಂಘನೆಗಾಗಿ:

ಪರವಾನಗಿ ಉಲ್ಲಂಘಿಸುವ ಎಲ್ಲಾ ವಾಹನಗಳಿಗೆ ಇನ್ನು ಮುಂದೆ ಮೊದಲ ಬಾರಿಯ ಉಲ್ಲಂಘನೆಗಾಗಿ ರೂ.5,000 ದಂಡ ವಿಧಿಸಿದರೆ, ನಂತರದ ಪ್ರತಿ ಬಾರಿಯ ಉಲ್ಲಂಘನೆಗಾಗಿ ರೂ.10,000 ದಂಡ ವಿಧಿಸಲಾಗುವುದು. ಈ ಮೊದಲು ಮೊದಲ ಬಾರಿ ನಿಯಮ ಉಲ್ಲಂಘಿಸುವ ವಾಹನಗಳಿಗೆ ರೂ.10,000 ಹಾಗೂ ನಂತರ ಪ್ರತಿ ಬಾರಿಯ ಉಲ್ಲಂಘನೆಗಾಗಿ ರೂ.10,000 ದಂಡ ವಿಧಿಸಲಾಗುತ್ತಿತ್ತು.

MOST READ: ವಾಹನ ಸವಾರರೇ ಎಚ್ಚರ: ನಕಲಿ ಪೊಲೀಸರಿಂದ ಹಗಲು ದರೋಡೆ

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ಈ ಮೊದಲು ರೂ.5,000 ದಂಡ ವಿಧಿಸಲಾಗುತ್ತಿತ್ತು. ಇನ್ನು ಮುಂದೆ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುವವರಿಗೆ ರೂ.2,000 ದಂಡ ವಿಧಿಸಲಾಗುವುದು. ಕುಡಿದು ವಾಹನ ಚಾಲನೆ ಮಾಡಿದರೆ ಈ ಹಿಂದಿನ ದಂಡವೇ ಅನ್ವಯಿಸಲಿದೆ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಹೊಸ ಕಾಯ್ದೆಯನ್ವಯ ಕುಡಿದು ವಾಹನ ಚಾಲನೆ ಮಾಡುವವರಿಗೆ ರೂ.10,000 ದಂಡ ವಿಧಿಸಲಾಗುತ್ತಿದೆ. ಇನ್ನು ಮುಂದೆಯೂ ಸಹ ರೂ.10,000 ದಂಡವನ್ನೇ ವಿಧಿಸಲಾಗುವುದು. ಡ್ರಿಂಕ್ ಅಂಡ್ ಡ್ರೈವ್ ಉಲ್ಲಂಘನೆಗಾಗಿನ ದಂಡ ಪ್ರಮಾಣವನ್ನು ಕಡಿಮೆಗೊಳಿಸಿಲ್ಲ.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಹೊಸ ಮೋಟಾರು ವಾಹನ ಕಾಯ್ದೆ 2019ರ ಅನ್ವಯ ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ಹೆಚ್ಚಿನ ಪ್ರಮಾಣದ ದಂಡವನ್ನು ದೇಶಾದ್ಯಂತ ವಿಧಿಸಲಾಗುತ್ತಿತ್ತು. ಈ ಹೊಸ ಕಾಯ್ದೆಯನ್ನು ಸೆಪ್ಟೆಂಬರ್ 1ರಿಂದ ಜಾರಿಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು.

ಬೆಂಗಳೂರಿನಲ್ಲೂ ಇಳಿಕೆಯಾಯ್ತು ದಂಡದ ಮೊತ್ತ

ಗುಜರಾತ್ ಸೇರಿದಂತೆ ಹಲವು ರಾಜ್ಯಗಳು ದಂಡದ ಮೊತ್ತವನ್ನು ಕಡಿಮೆಗೊಳಿಸಿದ್ದವು. ಸಾರ್ವಜನಿಕರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರವು ದಂಡದ ಮೊತ್ತವನ್ನು ಕಡಿಮೆಗೊಳಿಸಿದೆ. ವಾಹನ ಸವಾರರು, ರಸ್ತೆ ನಿಯಮಗಳನ್ನು ಉಲ್ಲಂಘಿಸದೇ, ಸುರಕ್ಷತೆಯ ಹೆಚ್ಚು ಗಮನ ನೀಡಲಿ ಎಂಬ ಉದ್ದೇಶದಿಂದ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿತ್ತು.

Most Read Articles

Kannada
English summary
Traffic Fines In Bangalore Reduced: State Government Announces Revised Fines Under New MVA - Read in kannada
Story first published: Monday, September 23, 2019, 10:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X