ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಫೋರ್ಡ್ ಇಕೊಸ್ಪೋರ್ಟ್ ಕಾರಿಗೆ ಟ್ರಕ್‍‍ವೊಂದು ಗುದ್ದಿದ ದೃಶ್ಯವು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದ ಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಈ ಘಟನೆಯು ಸೆಪ್ಟೆಂಬರ್ 13ರಂದು ಬೆಳಿಗ್ಗೆ 8.30ರ ಸುಮಾರಿಗೆ ನಡೆದಿದೆ.

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಫೋರ್ಡ್ ಇಕೊಸ್ಪೋರ್ಟ್ ಡ್ರೈವ್ ಮಾಡುತ್ತಿರುವ ಚಾಲಕ ವೇಗದ ಮಿತಿಯಲ್ಲಿಯೇ ಚಾಲನೆ ಮಾಡುತ್ತಿದ್ದಾರೆ. ಮಧ್ಯದಲ್ಲಿರುವ ರಸ್ತೆಯಲ್ಲಿಯೇ ವೇಗವಾಗಿ ವಾಹನವನ್ನು ಚಲಾಯಿಸದೇ, ಹೇಗೆಂದರೆ ಹಾಗೆ ವಾಹನವನ್ನು ಚಲಾಯಿಸದೇ ಸರಿಯಾಗಿಯೇ ಚಲಾಯಿಸುತ್ತಿದ್ದಾರೆ. ಸಂಚಾರ ನಿಯಮಗಳನ್ನು ಪಾಲಿಸುವ ನಾಗರಿಕನು ಪಾಲಿಸಬೇಕಾದ ನಿಯಮಗಳನ್ನು ಸರಿಯಾಗಿಯೇ ಪಾಲಿಸಿದ್ದಾರೆ.

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಏಕಾ‍ಏಕಿಯಾಗಿ ಡಿವೈಡರ್‍‍ನಿಂದ ನುಗ್ಗಿಬರುವ ಟ್ರಕ್‍‍ವೊಂದು ಎದುರಿಗಿದ್ದ ಫೋರ್ಡ್ ಇಕೊಸ್ಪೋರ್ಟ್ ಕಾರಿಗೆ ಗುದಿಯುತ್ತದೆ. ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ ಕ್ಯಾಮರಾದ ದಿಕ್ಕು ಬದಲಾಗುತ್ತದೆ. ಇದರಿಂದಾಗಿ ಕಾರಿನ ಒಳಭಾಗವನ್ನು ಕಾಣಬಹುದು.

ಡಿವೈಡರ್ ಅನ್ನು ದಾಟಿ ಟ್ರಕ್ ಕಾರಿನ ಎದುರಿಗೆ ಬಂದ ತಕ್ಷಣ ಕಾರಿನ ಚಾಲಕ ಬ್ರೇಕ್ ಹಾಕುತ್ತಾರೆ. ಆದರೆ ಕಾರು ಚಾಲಕ ಎಷ್ಟೇ ಬ್ರೇಕ್ ಹಾಕಿದರೂ ಕಾರಿಗೆ ಅಪಘಾತವಾಗುವುದನ್ನು ತಪ್ಪಿಸಲು ಸಾಧ್ಯವಾಗಲಿಲ್ಲ.

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಟ್ರಕ್ ಡಿವೈಡರ್‍ ಅನ್ನು ದಾಟಿ ಹೊರಬರುವುದಕ್ಕೂ ಹಾಗೂ ಕಾರಿಗೆ ಗುದಿಯುವುದಕ್ಕೂ ಕೇವಲ 2 ಸೆಕೆಂಡುಗಳ ವ್ಯತ್ಯಾಸವಿದೆ. ಕಾರಿಗೆ ಟ್ರಕ್ ಗುದ್ದಿದ ವೇಗವು 100 ಕಿ.ಮೀ ವೇಗದಲ್ಲಿದೆ. ಟ್ರಕ್‍‍‍ನ ಟಯರ್ ಪಂಕ್ಚರ್ ಆದ ಕಾರಣ, ಟ್ರಕ್ ಚಾಲಕನ ನಿಯಂತ್ರಣಕ್ಕೆ ಸಿಗದೇ ಡಿವೈಡರ್‍‍ನ ಹೊರಗೆ ಬಂದು ಕಾರಿಗೆ ಗುದ್ದಿದೆ.

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಟ್ರಕ್‍‍ನ ಚಾಲಕ ಹಾಗೂ ಕ್ಲೀನರ್ ಸಹ ಪ್ರಾಣಪಾಯದಿಂದ ಪಾರಾಗಿದ್ದಾರೆ. ಸಣ್ಣ ಪುಟ್ಟ ಗಾಯಗಳಾಗಿದ್ದ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಕೊಸ್ಪೋರ್ಟ್ ಕಾರಿನ ಗುಣಮಟ್ಟ ಮಾತ್ರವಲ್ಲದೇ, ಈ ಕಾರಿನಲ್ಲಿ ಅಳವಡಿಸಲಾಗಿದ್ದ ಏರ್‍‍ಬ್ಯಾಗ್ ಹಾಗೂ ಚಾಲಕ ಧರಿಸಿದ್ದ ಸೀಟ್ ಬೆಲ್ಟ್ ಸಹ ಆತನ ಪ್ರಾಣ ಉಳಿಸಿವೆ.

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಫೋರ್ಡ್ ಇಕೊಸ್ಪೋರ್ಟ್ ಟಾಪ್ ಎಂಡ್ ಮಾದರಿಯಾದ ಕಾರಣಕ್ಕೆ ಆತನ ಪ್ರಾಣ ಉಳಿದಿದೆ. ಈ ಟಾಪ್ ಎಂಡ್ ಮಾದರಿಯ ಫೋರ್ಡ್ ಇಕೊಸ್ಪೋರ್ಟ್ ಕಾರು ಡ್ಯುಯಲ್ ಏರ್‍‍ಬ್ಯಾಗ್ ಜೊತೆಗೆ, ಸೈಡ್ ಹಾಗೂ ಕರ್ಟೈನ್ ಏರ್‍‍ಬ್ಯಾಗ್ ಹೊಂದಿವೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಅಪಘಾತದ ಕಾರಣಕ್ಕೆ ಎಲ್ಲಾ ಏರ್‍‍ಬ್ಯಾಗ್‍‍ಗಳು ತೆರೆದುಕೊಂಡಿವೆ. ಅಪಘಾತವಾದ ನಂತರ ಫೋರ್ಡ್ ಇಕೊಸ್ಪೋರ್ಟ್ ಕಾರ್ ಅನ್ನು ಚಾಲನೆ ಮಾಡುತ್ತಿದ್ದವರು, ಯಾವುದೇ ಗಾಯಗಳಾಗದೇ ಕಾರಿನಿಂದ ಹೊರ ಹೋಗುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

MOST READ: ಕ್ಯಾಬ್ ಬಳಸುವವರಿಗೆ ಮತ್ತಷ್ಟು ಹೊರೆಯಾಗಲಿದೆ ಸರ್ಕಾರದ ಈ ನಿರ್ಧಾರ..!

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

ಇದರಿಂದ ಫೋರ್ಡ್ ಇಕೊಸ್ಪೋರ್ಟ್‍‍ನ ಗುಣಮಟ್ಟದ ಬಗ್ಗೆ ತಿಳಿಯಬಹುದು. ಫೋರ್ಡ್ ಇಕೊಸ್ಪೋರ್ಟ್‍‍ನಲ್ಲಿರುವ ಸುರಕ್ಷಾ ಫೀಚರ್ ಬಗ್ಗೆ ಹೇಳುವುದಾದರೆ, ಇಕೊಸ್ಪೋರ್ಟ್ ಕಾರಿನ ಕ್ರಾಶ್ ಟೆಸ್ಟ್ ಅನ್ನು ಎನ್‍‍ಹೆಚ್‍‍ಟಿ‍ಎಸ್‍ಎ ನಡೆಸಿತ್ತು.

MOST READ: ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಿದ್ರಾ ಮುಖೇಶ್ ಅಂಬಾನಿ? ಅಸಲಿ ಕಥೆ ಏನು?

ಟ್ರಕ್ ಗುದ್ದಿದರೂ ಬಚಾವ್ ಆದ ಕಾರು ಚಾಲಕ..!

2ಡಬ್ಲ್ಯುಡಿ ಮಾದರಿಗೆ 3 ಸ್ಟಾರ್‍‍ನ ರೇಟಿಂಗ್ ನೀಡಲಾಗಿದ್ದರೆ. ಎ‍‍ಡಬ್ಲ್ಯುಡಿ ಮಾದರಿಗೆ 4 ಸ್ಟಾರ್‍‍ನ ರೇಟಿಂಗ್ ನೀಡಲಾಗಿದೆ. ಈ ವೀಡಿಯೊದಲ್ಲಿ ಕಂಡುಬಂದ ಇಕೊಸ್ಪೋರ್ಟ್ ಮಾದರಿಗೆ 5 ಸ್ಟಾರ್‍‍ಗಳನ್ನು ನೀಡಿದರೂ ಕಡಿಮೆಯೇ.

Source: Rushlane/YouTube

Most Read Articles

Kannada
Read more on ಅಪಘಾತ accident
English summary
Ford EcoSport safety features help driver escape unhurt - Read in kannada
Story first published: Monday, September 16, 2019, 11:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X