ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಮೋಟಾರು ಕಾಯ್ದೆ ಜಾರಿಗೆ ಬಂದ ನಂತರ ಟ್ರಾಫಿಕ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಗೆಗಾಗಿ ಪ್ರತಿ ದಿನ ಲಕ್ಷಾಂತರ ಪ್ರಕರಣಗಳನ್ನು ದಾಖಲಾಸುತ್ತಿದ್ದಾರೆ. ಅಲ್ಲದೇ ಟ್ರಾಫಿಕ್ ಪೊಲೀಸರು ವಿಧಿಸುವ ದಂಡದಲ್ಲಿ ಒಂದು ಹೊಸ ವಾಹನವನ್ನೇ ಖರಿದೀಸುವಷ್ಟು ದೊಡ್ದ ಮೊತ್ತವಾಗಿದೆ. ದೇಶದೆಲ್ಲೆಡೆ ಸಂಚಾರಿ ನಿಯಮ ಉಲ್ಲಂಘನೆಗೆ ವಿಧಿಸುವ ದಂಡದ ಮೊತ್ತವನ್ನೇ ಕೇಳಿ ಜನ ವಾಹನ ಚಲಾಯಿಸುವುದಕ್ಕೆ ಭಯ ಪಡುವಂತಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಸಂಚಾರಿ ನಿಯಮ ಉಲ್ಲಂಘನೆಗಾಗಿ ದುಬಾರಿ ಮೊತ್ತವನ್ನು ವಿಧಿಸಿ ಟ್ರಾಫಿಕ್ ಪೊಲೀಸರು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ. ಸಂಚಾರಿ ನಿಯಮದ ಇತಿಹಾಸದಲ್ಲಿ ಎಂದು ಕಂಡು ಕೇಳಿಯರಿದಂತಹ ದುಬಾರಿ ಮೊತ್ತದ ದಂಡವನ್ನು ವಿಧಿಸುತ್ತಿದ್ದಾರೆ. ಇದೀಗ ನಾಗಲ್ಯಾಂಡ್ ಟ್ರಕ್ ಚಾಲಕನಿಗೆ ಸಂಚಾರಿ ನಿಯಮ ಉಲ್ಲಂಘನೆಗಾಗಿ ಟ್ರಾಫಿಕ್ ಪೊಲೀಸರು ವಿಧಿಸಿರುವ ದಂಡ ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ಆ ದುಬಾರಿ ಮೊತ್ತ ಅಷ್ಟು ಇಷ್ಟು ಅಲ್ಲ ಬರೋಬ್ಬರಿ ರೂ. 6.53 ಲಕ್ಷವಾಗಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಆದರೆ ಇಲ್ಲಿ ನಾಗಲ್ಯಾಂಡ್ ಟ್ರಕ್ ಚಾಲಕನಿಗೆ ಹೊಸ ಮೋಟಾರು ವಾಹನಗಳ ಕಾಯ್ದೆ ಬರುವ ಮೊದಲೇ 6.53 ಲಕ್ಷ ದಂಡ ವಿಧಿಸಿರುವ ಘಟನೆ ಒಡಿಶಾದ ಸಂಬಲ್ಪುರದಲ್ಲಿ ನಡೆದಿದೆ. ಆದರೆ ಆ ಘಟನೆ ನಡೆದು ತಿಂಗಳು ಕಳೆದಿದೆ, ದೇಶದೆಲ್ಲೆಡೆ ಟ್ರಾಫಿಕ್ ಪೊಲೀಸರು ವಿಧಿಸುವ ದಂಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸುವ ವೇಳೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ನಾಗಾಲ್ಯಾಂಡ್ ನೋಂದಾವಣೆ ಹೊಂದಿದ್ದ ಟ್ರಕ್ಕೊಂದು 7 ಸಂಚಾರಿ ನಿಯಮ ಉಲ್ಲಂಘನೆಗೆ ಮಾಡಿರುವುದಕ್ಕಾಗಿ 6.53 ಲಕ್ಷ ದಂಡವನ್ನು ಸಂಬಲ್ಪುರದ ಪೊಲೀಸರು ವಿಧಿಸಿದ್ದರು. ಆದರೆ ಹೊಸ ಸಂಚಾರಿ ನಿಯಮ ಸೆಪ್ಟಂಬರ್ 1 ರಿಂದ ಜಾರಿಗೆ ಬಂದಿದ್ದರೆ ಈ ಟ್ರಕ್ ಮಾಲೀಕನಿಗೆ ಆಗಸ್ಟ್ 10 ರಂದೇ ಹಳೆಯ ಕಾಯ್ದೆಯ ಅಡಿ ಬರೋಬ್ಬರಿ ರೂ. 6.53 ಲಕ್ಷ ದಂಡ ವಿಧಿಸಲಾಗಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಸಂಬಲ್ಪುರದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಟ್ರಕ್ ಚಾಲಕ ದಿಲೀಪ್ ಕಾರ್ತಾ ಮತ್ತು ಲಾರಿ ಮಾಲೀಕ ಶೈಲೇಶ್ ಶಂಕರ್ ಲಾಲ್ ಗುಪ್ತ ಅವರ ಟ್ರಕ್‍‍ಗೆ ಒಡಿಶಾ ಮೋಟಾರು ವಾಹನಗಳ ತೆರಿಗೆ ಕಾಯ್ದೆಯಡಿ ರಸ್ತೆ ತೆರೆಗೆ ಪಾವತಿಸದ್ದಕ್ಕೆ 6,40,500 ರೂ ದಂಡ ಹಾಕಲಾಗಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಶೈಲೇಶ್ ಶಂಕರ್ ಲಾಲ್ ಗುಪ್ತ ಲಾರಿಯನ್ನು 2014ರ ಜುಲೈ 21 ರಂದು ಖರೀದಿಸಿದ ಬಳಿ ರಸ್ತೆ ತೆರಿಗೆ(ರೋಡ್ ಟಾಕ್ಸ್)ಯನ್ನು ಪಾವತಿಸಿರಲಿಲ್ಲ. ಆದರೆ ಸೆ.30 ರಂದು ದಂಡವನ್ನು ಪಾವತಿ ಮಾಡಲು ತೆರಳಿದ್ದಾರೆ. ಹೀಗಾಗಿ 5 ವರ್ಷ ತೆರಿಗೆ ಪಾವತಿ ಮಾಡದೇ ಲಾರಿ ಚಾಲನೆ ಮಾಡಿದಕ್ಕೆ ಅವರಿಗೆ 6,40,500 ದಂಡ ಹಾಕಿದ್ದರೆ ಇತರೇ ಸಂಚಾರಿ ನಿಯಮ ಉಲ್ಲಂಘನೆ ಮಾಡಿದಕ್ಕೆ ಉಳಿದ 12,500 ರೂ. ದಂಡವನ್ನು ವಿಧಿಸಲಾಗಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಮಾಲೀಕನಿಗೆ ನೀಡಿರುವ ಚಲನ್ ಕಾಪಿ ಪ್ರಕಾರ, ರಸ್ತೆ ತೆರಿಗೆ ದಂಡದ ಜೊತೆಗೆ, ಸಾಮಾನ್ಯ ಅಪರಾಧಕ್ಕೆ 100 ರೂ. ಹಾಗೂ ಆದೇಶಗಳ ಅವಿಧೇಯತೆ ಮತ್ತು ಅಡಚಣೆಗೆ 500 ರೂ, ವಾಯು ಮತ್ತು ಶಬ್ದ ಮಾಲಿನ್ಯ ಮಾಡಿದ್ದಕ್ಕೆ 1,000 ರೂ. ಮತ್ತು ಸರಕು ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದ್ದಕ್ಕೆ 5,000 ರೂ., ಇದಲ್ಲದೆ ಪರವಾನಗಿ ಇಲ್ಲದೆ ವಾಹನವನ್ನು ಬಳಸಿದ್ದಕ್ಕಾಗಿ ಅಥವಾ ಪರವಾನಗಿ ಷರತ್ತುಗಳನ್ನು ಉಲ್ಲಂಘಿಸಿದ್ದಕ್ಕಾಗಿ 5,000 ರೂ. ವಿಮೆಯಿಲ್ಲದೆ ಲಾರಿ ಚಲಿಸಿದಕ್ಕೆ 1,000 ರೂ. ಸೇರಿ ಒಟ್ಟು 6.53 ಲಕ್ಷ ರೂ. ದಂಡವನ್ನು ವಿಧಿಸಲಾಗಿದೆ.

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ಈ ಹಿಂದೆ ಹರಿಯಾಣ ಮೂಲದ ರಾಮ್ ಕಿಶನ್ ಎಂಬಾತನು 25 ಟನ್‍ ಭಾರವನ್ನು ಸಾಗಿಸಲು ಪರವಾನಗಿ ಅನ್ನು ಹೊಂದಿದ್ದರು. ಆದರೆ ಆತನ ಟ್ರಕ್ ಪೊಲೀಸರ ಕೈಗೆ ಸಿಕ್ಕಿ‍‍ಬಿದ್ದಾಗ 43 ಟನ್ ಭಾರದ ಲೋಡ್ ಅನ್ನು ಮಾಡಿದ್ದ, ಅಂದರೆ ಪರವಾನಗಿ ಪಡೆದಿರುವುದಕ್ಕಿಂತ 18 ಟನ್ ಹೆಚ್ಚಿನ ಲೋಡ್ ಅನ್ನು ಮಾಡಿದ್ದನು. ಜೊತೆಗೆ ಚಾಲಕ ಡ್ರೈವಿಂಗ್ ಲೈಸೆನ್ಸ್ ಹೊಂದಿರಲಿಲ್ಲ ಹೀಗೆ 10 ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ದುಬಾರಿ ರೂ. 2,00,500 ಲಕ್ಷ ದಂಡ ವಿಧಿಸಲಾಗಿತ್ತು.

MOST READ: ಸೀಟ್ ಬೆಲ್ಟ್ ಧರಿಸದ ಪೊಲೀಸರನ್ನೇ ಅಡ್ಡಗಟ್ಟಿದ ಭೂಪ..!

ಸಂಚಾರಿ ನಿಯಮಕ್ಕೂ ಮೊದಲೇ ಟ್ರಕ್ ಚಾಲಕನಿಗೆ ಬಿದ್ದಿತ್ತು ರೂ.6.53 ಲಕ್ಷ ದಂಡ

ದೇಶದ ಹಲವು ರಾಜ್ಯಗಳಲ್ಲಿ ಜನರ ಆಕ್ರೋಶದಿಂದ ಹೊಸ ಸಂಚಾರಿ ನಿಯಮದಡಿ ದಂಡವನ್ನು ಕಡಿತಗೊಳಿಸಿದೆ, ಕೆಳವು ಕಡೆಗಳಲ್ಲಿ ಹಳೇ ಸಂಚಾರಿ ನಿಯಮಗಳನ್ನೇ ಪಾಲಿಸುತ್ತಿದೆ. ಆದರೆ ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಹೊಸ ಸಂಚಾರಿ ನಿಯಮದ ಕುರಿತು ಯಾವ ನಿರ್ಧಾರ ಕೈಗೋಳ್ಳುತ್ತಾರೆ ಎಂಬುವುದನ್ನು ಕಾದು ನೋಡಬೇಕು.

Source:Hindustantimes

Most Read Articles

Kannada
English summary
Truck driver fined Rs 6 lakh in Odisha, but under old traffic rules - Read in Kannada
Story first published: Saturday, September 14, 2019, 19:18 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X