Just In
Don't Miss!
- Lifestyle
'ಮಂಗಳವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ '
- News
ಕೋವಿಡ್ ಲಸಿಕೆ ಪಡೆದುಕೊಂಡಿದ್ದ ಆರೋಗ್ಯ ಇಲಾಖೆ ಉದ್ಯೋಗಿ ಹೃದಯಾಘಾತದಿಂದ ಸಾವು
- Sports
ಐಎಸ್ಎಲ್: ಅಂಕ ಹಂಚಿಕೊಂಡ ಈಸ್ಟ್ ಬೆಂಗಾಲ್ ಮತ್ತು ಚೆನ್ನೈಯಿನ್
- Finance
ಪ್ರಮುಖ ಮಾರುಕಟ್ಟೆಯಲ್ಲಿ ಅಡಿಕೆ, ಮೆಣಸು, ಕಾಫೀ ಜ. 18ರ ದರ
- Movies
ಶಿವಲಿಂಗಕ್ಕೆ ಅಪಮಾನ: ನಟಿಯ ವಿರುದ್ಧ ಮಾಜಿ ರಾಜ್ಯಪಾಲ ದೂರು
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸ್ಪೋರ್ಟ್ಸ್ ಕಾರಿನಂತೆ ಮಾಡಿಫೈಗೊಂಡ ಟಿವಿಎಸ್ ರಿಕ್ಷಾ
ಮೂರು ಚಕ್ರದ ಆಟೋರಿಕ್ಷಾ ವಾಹನವನ್ನು ಭಾರತದಲ್ಲಿ ಕಂಡು ಹಿಡಿಯಲಾಗಿದ್ದರೂ ಈ ವಾಹನವು, ಆಗ್ನೇಯ ಏಷ್ಯಾ ಹಾಗೂ ದಕ್ಷಿಣ ಅಮೇರಿಕಾ ಸೇರಿದಂತೆ ವಿವಿಧ ಅಂತರ್‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದೆ. ಈ ವಾಹನವನ್ನು ಟುಕ್ ಟುಕ್ ಎಂದೂ ಸಹ ಕರೆಯಲಾಗುತ್ತದೆ. ಈ ತ್ರಿಚಕ್ರ ವಾಹನಗಳು ಬೇರೆ ಯಾವುದೇ ವಾಣಿಜ್ಯ ಪ್ರಯಾಣಿಕರ ವಾಹನಗಳಿಗಿಂತ ಸಲೀಸಾಗಿ ಜನಸಂಖ್ಯೆ ಹೆಚ್ಚಿರುವ ನಗರಗಳ ಇಕ್ಕಟ್ಟಾದ ಬೀದಿಗಳಲ್ಲಿ ಸಂಚರಿಸುತ್ತವೆ.

ಟುಕ್ ಟುಕ್ ವಾಹನವು ತನ್ನ ಸರಳತೆ ಹಾಗೂ ಚುರುಕುತನದಿಂದ ಅನೇಕ ಪ್ರವಾಸಿಗರ ಗಮನಸೆಳೆದಿದೆ. ಭಾರತದ ಹಾಗೂ ವಿದೇಶದ ಆಟೋ ರಿಕ್ಷಾ ಮಾಲೀಕರು ತಮ್ಮ ವಾಹನಗಳನ್ನು ಜನಸಂದಣಿಯಲ್ಲಿ ಎದ್ದು ಕಾಣುವಂತೆ ಮಾಡಲು ಹಾಗೂ ಗ್ರಾಹಕರನ್ನು ಆಕರ್ಷಿಸಲು ಮಾಡಿಫೈಗೊಳಿಸುತ್ತಲೇ ಇರುತ್ತಾರೆ. ಮೇಡ್ ಇನ್ ಇಂಡಿಯಾ ಆಟೋರಿಕ್ಷಾವನ್ನು ಪೆರು ದೇಶದ ಕಂಪನಿಯೊಂದು ಮಾಡಿಫೈಗೊಳಿಸಿದ್ದು ವಿಶಿಷ್ಟ ಫೀಚರ್‍ಗಳನ್ನು ಹಾಗೂ ಹೊಸ ಕಾನ್ಸೆಪ್ಟ್ ಅನ್ನು ಬಿಡುಗಡೆಗೊಳಿಸಿದೆ.

ಆರ್‍ಎಲ್ ಫೈಬರ್ ಗ್ಲಾಸ್ ಕಂಪನಿಯು, ಟಿವಿಎಸ್ ಕಿಂಗ್ ಆಟೋರಿಕ್ಷಾಗಳನ್ನು ತೆಗೆದುಕೊಂಡು ಅವುಗಳನ್ನು ಸಂಪೂರ್ಣವಾಗಿ ಆಸಕ್ತಿದಾಯಕವಾಗಿ, ಸಂಪೂರ್ಣವಾಗಿ ವಿಶಿಷ್ಟವಾಗಿ ಮಾಡಿಫೈಗೊಳಿಸುತ್ತದೆ. ಹೆಸರೇ ಸೂಚಿಸುವಂತೆ, ಪೆರು ದೇಶದ ಈ ಕಂಪನಿಯು ಟುಕ್ ಟುಕ್ ವಾಹನದ ಎಲ್ಲಾ ಬಾಡಿವರ್ಕ್‍ಗಳನ್ನು ಮಾಡಿಫೈಗೊಳಿಸಲು ವ್ಯಾಪಕವಾಗಿ ಫೈಬರ್ ಗ್ಲಾಸ್ ಬಳಸುತ್ತದೆ. ನಾಲ್ಕು ಡೋರ್‍ಗಳು ಹಾಗೂ ನ್ಯೂಮ್ಯಾಟಿಕ್ ಪಿಸ್ಟನ್ ಹೊಂದಿರುವ ಸನ್‌ರೂಫ್‍ಗಳನ್ನು ಸಹ ಫೈಬರ್‍ನಿಂದ ಮಾಡಿಫೈಗೊಳಿಸಿದೆ.

ಮಾಡಿಫೈಗೊಂಡ ಆಟೋದಲ್ಲಿ ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿದ್ದ ಫ್ಯಾಸಿಯಸ್‌ಗಳನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಟಾರ್ಪಾಲಿನ್ ಬದಲಿಗೆ ಫೈಬರ್‌ಗ್ಲಾಸ್ ಶೆಲ್ ಅಳವಡಿಸಿ ಕಾರಿನಂತಹ ಆಕಾರ ನೀಡಲಾಗಿದೆ. ವಿವಿಧ ಬಣ್ಣಗಳಲ್ಲಿ ಹೊಂದಬಹುದಾದ ಹೊಸ ಬಾಡಿವರ್ಕ್ ಬಟರ್‍ಫ್ಲೈ ಮಾದರಿಯ ಕಿಟಕಿಗಳು, ಪ್ರಾಪರ್ ಡೋರ್ ಟ್ರಿಮ್, ಕಾರಿನಂತಹ ಹ್ಯಾಂಡಲ್‌ಗಳು, ಮುಂಭಾಗ ಹಾಗೂ ಹಿಂಭಾಗದಲ್ಲಿ ರೂಫ್ ಎಕ್ಸ್ ಟೆಂಷನ್‍ಗಳು, ಸ್ಟೈಲಿಶ್ ಸೆಟ್ ಹೊಂದಿರುವ ಹಿಂಭಾಗದ ಲ್ಯಾಂಪ್‍ಗಳು, ಅಸಂಖ್ಯ ಏರ್‍ವೆಂಟ್‍ಗಳು, ಬಂಪರ್ ಹಾಗೂ ಗ್ರೋವ್‍ಗಳನ್ನು ಈ ಟುಕ್ ಟುಕ್ ಹೊಂದಿದೆ.

ಫ್ಯಾನ್ಸಿ ಬಾಡಿವರ್ಕ್‍ನ ಜೊತೆಗೆ, ಪೆರು ಕಂಪನಿಯಿಂದ ಮಾರ್ಪಡಾದ ಟಿವಿಎಸ್ ಕಿಂಗ್ ಆಟೋ ರಿಕ್ಷಾದಲ್ಲಿ ಸ್ಟಾಕ್ ರೇಡಿಯೊಗೆ ಕನೆಕ್ಟ್ ಆದ 6 ಸ್ಪೀಕರ್‌ಗಳು, ಕ್ಯಾಬಿನ್‌ನಾದ್ಯಂತ ಕಸ್ಟಮ್ ದೀಪಗಳಿವೆ. ಒಳಗಿನಿಂದ, ನೋಡಿದರೆ ಈ ವಾಹನವು ಕಾಂಪ್ಯಾಕ್ಟ್ ಕಾರಿನಂತೆ ಕಾಣುತ್ತದೆ. ಇದರಲ್ಲಿ ಮಿನಿ ಫ್ಯಾನ್‌ಗಳನ್ನು ಅಳವಡಿಸಬಹುದು. ಬಿಸಿಲಿರಲಿ, ಮಳೆಯಿರಲಿ ಈ ಪೆರು ಕಂಪನಿಯಿಂದ ಮಾಡಿಫೈಗೊಂಡ ಟುಕ್ ಟುಕ್ ನಿಮಗೆ ರಕ್ಷಣೆ ನೀಡಲಿದೆ.

ಲಭ್ಯವಾಗಿರುವ ಫೋಟೊಗಳಿಂದ ಆರ್‍ಎಲ್ ಫೈಬರ್‍ಗ್ಲಾಸ್ ಕಂಪನಿಯು ಅನೇಕ ಟುಕ್ ಟುಕ್‍ಗಳನ್ನು ಮಾಡಿಫೈ ಮಾಡಿರುವುದನ್ನು ಕಾಣಬಹುದು. ಕೆಲವು ಟುಕ್ ಟುಕ್‍ಗಳು ಮಾಡಿಫೈಗೊಂಡಿದ್ದರೆ, ಇನ್ನೂ ಕೆಲವು ಮಾಡಿಫೈ ಹಂತದಲ್ಲಿವೆ. ಈ ರೀತಿಯಾಗಿ ಮಾಡಿಫೈಗೊಳ್ಳುತ್ತಿರುವ ಟುಕ್ ಟುಕ್‍ಗಳು ದಕ್ಷಿಣ ಅಮೆರಿಕಾದ ರಾಷ್ಟ್ರದಲ್ಲಿ ಜನಪ್ರಿಯವಾಗುತ್ತಿವೆ.

ಆರ್‍ಎಲ್ ಫೈಬರ್‍ಗ್ಲಾಸ್‍ನ ಅಧಿಕೃತ ಫೇಸ್‍ಬುಕ್ ಪೇಜ್‍ನಲ್ಲಿರುವ ಮಾಹಿತಿಯ ಪ್ರಕಾರ, ಈ ರೀತಿಯ ಮಾಡಿಫೈ ಶುಲ್ಕವು 2,100 ಸೋಲ್‍ಗಳು ಅಂದರೆ ಸುಮಾರು ರೂ.43,750ಗಳಿಂದ ಆರಂಭವಾಗುತ್ತದೆ. ಹೊಸ ರಿಕ್ಷಾ ಹಾಗೂ ಮಾಡಿಫೈನ ಬೆಲೆ 14,500 ಸೋಲ್‌ಗಳು ಅಂದರೆ ಸುಮಾರು ರೂ.3.02 ಲಕ್ಷಗಳಾಗುತ್ತದೆ.
Image Courtesy: RL FIBER GLASS S.A.C