ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಮಾರುತಿ ಸುಜುಕಿಯ ಸಿಯಾಜ್, ಮಿಡ್ ಸರಣಿಯಲ್ಲಿರುವ ಸೆಡಾನ್ ಕಾರ್ ಆಗಿದ್ದು, ಕಾರ್ಪೊರೇಟ್‌ ಶೈಲಿಯ ಕಾರು ಪ್ರಿಯರು ಇಷ್ಟ ಪಡುವ ಕಾರ್ ಆಗಿದೆ. ಸಿಯಾಜ್ ಕಾರ್ ಅನ್ನು ಹಲವಾರು ಬಾರಿ ಹಲವಾರು ರೀತಿಯಲ್ಲಿ ಮಾರ್ಪಾಡು ಮಾಡಲಾಗಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಆದರೆ ನಾವು ಈಗ ಹೇಳುತ್ತಿರುವ ರೀತಿಯಲ್ಲಿ ಸಿಯಾಜ್‌ ಕಾರನ್ನು ಈ ಹಿಂದೆ ಮಾಡಿಫೈಗೊಳಿಸಿಲ್ಲ. ಸಿಯಾಜ್ ಕಾರ್ ಅನ್ನು ಈ ರೀತಿ ವಿಶಿಷ್ಟವಾಗಿ ಸ್ಮೋಕ್ ದೆಮ್ ಕಸ್ಟಮ್ಸ್ ಮಾಡಿಫೈಗೊಳಿಸಿದೆ. ಈ ಸಿಯಾಜ್ ಕಾರ್ ಅನ್ನು ಡ್ಯುಯಲ್ ಟೋನ್ ಹಳದಿ ಬಣ್ಣವನ್ನು ಹೊರತುಪಡಿಸಿ ಸಾಕಷ್ಟು ಪ್ರಮಾಣದಲ್ಲಿ ಮಾಡಿಫೈಮಾಡಲಾಗಿದೆ.

ಈ ಕಾರು ಕಸ್ಟಮೈಸ್ ಮಾಡಿದ ರಿಯಾನ್ ವೈಡ್ ಬಾಡಿ ಕಿಟ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಹೊಸ ಬಂಪರ್, ಹಿಂಭಾಗದಲ್ಲಿ ಅಗಲವಾಗಿರುವ ಬಂಪರ್, ಸೈಡ್ ಸ್ಕರ್ಟ್ಸ್ ಹಾಗೂ ರಾಕೆಟ್ ಬನ್ನಿ ಸ್ಪಾಯ್ಲರ್‍‍ಗಳಿವೆ . ಈ ಬಾಡಿ ಕಿಟ್‌‍‍ಗಳಿಂದಾಗಿ ಕಾರು ಹೊಸ ಲುಕ್ ಪಡೆದಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಕಾರಿನಲ್ಲಿ ಮಾಡಲಾಗಿರುವ ಇತರ ಮಾರ್ಪಾಡುಗಳೆಂದರೆ, ಫ್ರಂಟ್ ಸ್ಪ್ಲಿಟರ್. ಇದು ಕಾರಿಗೆ ಅಗ್ರೆಸಿವ್ ಲುಕ್ ನೀಡುತ್ತದೆ. ಇದರ ಜೊತೆಗೆ ಸಿಯಾಜ್‌‍‍ನಲ್ಲಿ ಅಳವಡಿಸಲಾಗಿರುವ ಸ್ಪ್ರಿಂಗ್‍‍ಗಳು ಕಾರಿಗೆ ಸ್ಪೋರ್ಟಿ ಲುಕ್ ನೀಡುತ್ತವೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಲೋಯರಿಂಗ್ ಸ್ಪ್ರಿಂಗ್‍‍ಗಳ ಜೊತೆಗಿರುವ 16 ಇಂಚಿನ 8.5 ಲೋ ಪ್ರೊಫೈಲ್ ಟಯರ್‌ಗಳು ಉತ್ತಮವಾದ ಹೊಂದಾಣಿಕೆಯನ್ನು ನೀಡುತ್ತವೆ. ಮುಂಭಾಗದಲ್ಲಿರುವ ಹೆಡ್‌ಲ್ಯಾಂಪ್‌ಗಳಿಗೆ ಕಸ್ಟಮೈಸ್ ಮಾಡಿದ ಬಣ್ಣ ಬಳಿಯಲಾಗಿದೆ. ಹಿಂಭಾಗದಲ್ಲಿರುವ ಟೇಲ್‍‍ಲ್ಯಾಂಪ್‌ಗಳಲ್ಲೂ ಕಸ್ಟಮೈಸ್ ಬಣ್ಣವನ್ನು ಕಾಣಬಹುದು.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಇವುಗಳಿಂದಾಗಿ ಸಿಯಾಜ್ ಹೊಸ ಲುಕ್ ಪಡೆದು, ವಿಶಿಷ್ಟವಾಗಿ ಕಾಣುತ್ತದೆ. ಕಾರಿನಲ್ಲಿರುವ ಹಲವಾರು ಮೆಕಾನಿಕಲ್ ಅಂಶಗಳನ್ನು ನವೀಕರಿಸಲಾಗಿದೆ. ಇವುಗಳಲ್ಲಿ ಎಂಜಿನ್‌ಗೆ ತಡೆರಹಿತ ಗಾಳಿ ಪೂರೈಸುವ ಬಿಎಂಸಿ ಡೈರೆಕ್ಟ್ ಇಂಟೆಕ್ ಏರ್ ಸಿಸ್ಟಂ ಸಹ ಸೇರಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಎಂಜಿನ್‍‍ನಲ್ಲಿ ಅಳವಡಿಸಲಾಗಿರುವ ಎನ್‌ಜಿಕೆ ಸ್ಪಾರ್ಕ್ ಪ್ಲಗ್‌ಗಳು ಇಂಧನವು ಸಮರ್ಥವಾಗಿ ಬಳಕೆಯಾಗುವಂತೆ ನೋಡಿಕೊಳ್ಳುತ್ತವೆ. ಸ್ಮೋಕ್ ದೆಮ್ ಕಸ್ಟಮ್ಸ್ ತಯಾರಿಸಿರುವ ಪರ್ಫಾಮೆನ್ಸ್ ಎಕ್ಸಾಸ್ಟ್ ಸಿಸ್ಟಂ ಸಿಯಾಜ್ ಕಾರು ಹೊಸ ವಿನ್ಯಾಸ ಹೊಂದಿರುವುದನ್ನು ಖಚಿತಪಡಿಸುತ್ತದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಇಂಟಿರಿಯರ್ ಬಗ್ಗೆ ಹೇಳುವುದಾದರೆ, ಸಿಯಾಜ್ ಕಾರು ಪೂರ್ಣ ಪ್ರಮಾಣದ ಮ್ಯಾಟಿಂಗ್‌ನೊಂದಿಗೆ ಕಸ್ಟಮ್ ಬೀಜ್ ಥೀಮ್ ಪಡೆದಿದೆ. ಮ್ಯೂಸಿಕ್ ಸಿಸ್ಟಂ ಅನ್ನು ಸಹ ಅಪ್‌ಗ್ರೇಡ್ ಮಾಡಲಾಗಿದೆ. ಮ್ಯೂಸಿಕ್ ಸಿಸ್ಟಂಗೆ ಈಗ ಜೆಬಿಎಲ್ ಘಟಕಗಳನ್ನು, ಸೆರ್ವಿನ್ ವೆಗಾ ಕೊ ಅಕ್ಸಿಯಲ್‍‍ನೊಂದಿಗೆ ಜೆಬಿಎಲ್ ಬಾಸ್ ಟ್ಯೂಬ್‌ಗಳನ್ನು ಹಾಕಲಾಗಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಪಯೋನೀರ್‌‍‍ನ ಇನ್ಫೋಟೇನ್‌ಮೆಂಟ್ ಸಿಸ್ಟಂ ಅಳವಡಿಸಲಾಗಿದ್ದು, ಇದರಲ್ಲಿ ಆಪಲ್ ಕಾರ್‌ಪ್ಲೇ ಬಳಸಬಹುದು. ಈ ಕಾರು ಸ್ಪಾರ್ಕೊ ಗೇರ್ ಲಿವರ್‌ನೊಂದಿಗೆ ಸ್ಪಾರ್ಕೊ ಡ್ರಿಲ್ಡ್ ಮೆಟಲ್ ಪೆಡಲ್‌ಗಳನ್ನು ಹೊಂದಿದೆ. ಇದರಿಂದಾಗಿ ಕಾರು ಪ್ರಿಯರನ್ನು ತನ್ನತ್ತ ಸೆಳೆಯಲಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ಹಲವಾರು ಬಾರಿ ಪ್ರಯತ್ನಿಸಿದ ನಂತರ, ಅಂತಿಮವಾಗಿ ಈ ರೀತಿಯಲ್ಲಿ ಮಾಡಿಫೈಗೊಳಿಸಲಾಗಿದೆ. ಇಡೀ ಕಾರ್ ಅನ್ನು ಮಾಡಿಫೈಗೊಳಿಸಲು ಸುಮಾರು 2 ತಿಂಗಳು ಸಮಯ ತೆಗೆದುಕೊಳ್ಳಲಾಗಿದೆ. ಮಾಮೂಲಿಗಿಂತ ಹೆಚ್ಚಿನ ಸಮಯ ತೆಗೆದು ಕೊಳ್ಳಲಾಗಿದೆ.

ವಿಶಿಷ್ಟವಾಗಿ ಮಾಡಿಫೈಗೊಂಡ ಮಾರುತಿ ಸಿಯಾಜ್ ಕಾರು

ವೆಚ್ಚದ ಬಗ್ಗೆ ಹೇಳುವುದಾದರೆ, ನೀವು ನಿಮ್ಮ ಕಾರನ್ನು ಯಾವ ರೀತಿಯಲ್ಲಿ ಮಾಡಿಫೈಗೊಳಿಸುತ್ತಿರಿ ಎಂಬುದರ ಮೇಲೆ ಬೆಲೆಯು ಅವಲಂಬಿತವಾಗಿದೆ. ಈ ವಾಹನವನ್ನು ಸಂಪೂರ್ಣವಾಗಿ ಮಾಡಿಫೈಗೊಳಿಸಲು ರೂ.2.8 ಲಕ್ಷ ಖರ್ಚಾಗಿದೆ. ನೀವು ನಿಮ್ಮ ಕಾರ್ ಅನ್ನು ಮಾಡಿಫೈಗೊಳಿಸಲು ಬಯಸುವುದಾದರೆ ಸಾಹಿಲ್ ಅವರನ್ನು + 91-9999322903 ನಂಬರ್‍‍ನಲ್ಲಿ ಸಂಪರ್ಕಿಸಬಹುದು.

Most Read Articles

Kannada
English summary
India’s WILDEST modified Maruti Suzuki Ciaz. Read in kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X