ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಭಾರತದಲ್ಲಿ ಮಾರಾಟವಾಗುವ ಇ-ರಿಕ್ಷಾಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಅಸಂಘಟಿತ ವಲಯದವರೇ ಖರೀದಿಸುತ್ತಾರೆ. ಭಾರತವು ಸರಿಸುಮಾರು 15 ಲಕ್ಷಕ್ಕೂ ಅಧಿಕ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನಗಳನ್ನು ಹೊಂದಿದೆ. ಅವುಗಳಲ್ಲಿ ಹೆಚ್ಚಿನವು ಸರ್ಕಾರದ ಕಾನೂನುಗಳನ್ನು ಉಲ್ಲಂಘಿಸುತ್ತಿವೆ.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಇ-ರಿಕ್ಷಾ‍‍ಗಳ ಮಾರಾಟವು ಪ್ರತಿವರ್ಷ ಶೇ.20ರಷ್ಟು ಬೆಳವಣಿಗೆಯನ್ನು ಸಾಧಿಸುತ್ತಿದೆ. ಮಹೀಂದ್ರಾ ಎಲೆಕ್ಟ್ರಿಕ್ ಮತ್ತು ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೆಲ್ಯೂಷನ್ಸ್ ಲಿಮಿಟೆಡ್‍‍ನಂತಹ ಉತ್ಪಾದಕರಿಗೆ ಹೋಲಿಸಿದರೆ ಅಸಂಘಟಿತ ವಲಯವು ತಿಂಗಳಿಗೆ ಸುಮಾರು 10,000 ಎಲೆಕ್ಟ್ರಿಕ್ ರಿಕ್ಷಾಗಳನ್ನು ಮಾರಾಟ ಮಾಡುತ್ತಿದೆ. ಮಹೀಂದ್ರಾ ಎಲೆಕ್ಟ್ರಿಕ್ ಮತ್ತು ಕೈನೆಟಿಕ್ ಗ್ರೀನ್ ಎನರ್ಜಿ ಮತ್ತು ಪವರ್ ಸೆಲ್ಯೂಷನ್ಸ್ ಲಿಮಿಟೆಡ್‍ ಪ್ರತಿ ತಿಂಗಳು 1,500 ಯುನಿ‍ಟ್‍‍ಗಳನ್ನು ಮಾರಾಟ ಮಾಡುತ್ತದೆ.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಈ ಅಸಂಘಟಿತ ವಲಯವು ಲೀಡ್-ಅ್ಯಸಿಡ್ ಬ್ಯಾಟಿರಿಗಳನ್ನು ಒಳಗೊಂಡ ಎಲೆಕ್ಟ್ರಿಕ್ ರಿಕ್ಷಾಗಳನ್ನು ಮಾರಾಟ ಮಾಡುತ್ತದೆ. ಪ್ರತಿ ಆರು ಮತ್ತು ಎಂಟು ತಿಂಗಳಿಗೊಮ್ಮೆ ಬ್ಯಾಟರಿಯನ್ನು ಬದಲಾಯಿಸಬೇಕಾಗುತ್ತದೆ. ಇದರ ಜೊತೆಗೆ ಅವರು ಯಾವುದೇ ವಾರಂಟಿ‍‍ಗಳನ್ನು ನೀಡುವುದಿಲ್ಲ. ಕೈನೆಟಿಕ್ ಗ್ರೀನ್ ಎನರ್ಜಿ ಅಂಡ್ ಪವರ್ ಸೊಲ್ಯೂಷನ್ಸ್ ಲಿಮಿಡೆಡ್‍‍ನ ಸಿಇಒ, ಮೋಟ್ವಾನಿ ಅವರ ಪ್ರಕಾರ ಇದೊಂದು ಚಲಿಸುವ ಶವಪೆಟ್ಟಿಗೆಗಳನ್ನು ಮಾರಾಟ ಮಾಡಿದಂತೆ.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಇ-ರಿಕ್ಷಾಗಳನ್ನು ದೆಹಲಿಯಲ್ಲಿ ಹೆಚ್ಚು ಮಾರಾಟ ಮಾಡಲಾಗುತ್ತದೆ. ದೇಶದ ಉತ್ತರ ಮತ್ತು ಪೂರ್ವ ರಾಜ್ಯಗಳಾದ ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಇ-ರಿಕ್ಷಾಗಳನ್ನು ಪರಿಣಾಮಕಾರಿಯಾಗಿ ಬಳಸುತ್ತಿದ್ದಾರೆ. ಇದರಿಂದ ಆ ಭಾಗದಲ್ಲಿರುವ ಇ-ರಿಕ್ಷಾಗಳ ಅಸಂಘಟಿತ ವಲಯಕ್ಕೆ ಇದೊಂದು ದೊಡ್ಡ ವರದಾನವಾಗಿದೆ.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಸಂಘಟಿತ ವಲಯವು ಮಾರಾಟ ಮಾಡುವ ಎಲೆಕ್ಟ್ರಿಕ್ ಇ-ರಿಕ್ಷಾಗಳ ಬೆಲೆಯು ರೂ.1 ಲಕ್ಷಕ್ಕಿಂತ ಹೆಚ್ಚಿರುತ್ತದೆ. ಅಸಂಘಟಿತ ವಲಯದವರು ರೂ.40,000 ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಮಹೀಂದ್ರಾ ಎಲೆಕ್ಟ್ರಿಕ್ ಸಿಇಒ ಮಹೇಶ್ ಬಾಬು ಅವರು ಮಾತನಾಡಿ, ಅಸಂಘಟಿತ ವಲಯವು ತಯಾರಿಸುವ ಇ-ರಿಕ್ಷಾಗಳು ಕೈಗೆಟಕುವ ಬೆಲೆ ಮತ್ತು ಬಳೆಕೆದಾರರಿಗೆ ಅನುಕೂಲತೆಗಳು ಹೆಚ್ಚು ಇರುವುದರಿಂದ ಈ ಸೆಗ್‍ಮೆಂಟ್‍ನಲ್ಲಿ ಅಸಂಘಟಿತ ವಲಯವು ಮುನ್ನಡೆ ಸಾಧಿಸಿದೆ. 2018ರಲ್ಲಿ ಅಸಂಘಟಿತ ವಲಯವು ಲೀಡ್ ಅ್ಯಸಿಡ್ ಆಧಾರಿತ ಇ-ರಿಕ್ಷಾಗಳನ್ನು ತಯಾರಿಸುವುದರಿಂದ ಪ್ರಾಬಲ್ಯ ಹೊಂದಿವೆ ಎಂದು ಹೇಳಿದರು.

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಎಲೆಕ್ಟ್ರಿಕ್ ವಾಹನಗಳ ಯೋಜನೆಯನ್ನು ವೇಗವಾಗಿ ಅಳವಡಿಸಿಕೊಳ್ಳುವುದಕ್ಕೆ ಹಾಗೂ ತಯಾರಿಸುವುದಕ್ಕೆ ಫೇಮ್ 2ನಿಂದ ಯಾವುದೇ ಪ್ರಯೋಜನವಾಗಿಲ್ಲ. ಇ-ಆಟೋಸ್ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ಇ-ರಿಕ್ಷಾಗಳ ನಡುವೆ ಕೇವಲ 15%ನಷ್ಟು ಬೆಲೆ ವ್ಯತ್ಯಾಸವಿದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಇ-ರಿಕ್ಷಾ ಗೈಡ್ ಲೈನ್‍ಗಳು ನಿಗದಿಪಡಿಸುವ ಮೊದಲು ಅಸಂಘಟಿತ ವಲಯವು ಪ್ರಾರಂಭವಾಗಿದೆ. ಅವರನ್ನು ಮಾರುಕಟ್ಟೆಯಿಂದ ಹೊರ ಹಾಕುವುದು ಕಷ್ಟದ ಕೆಲಸ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀರೋ ಎಲೆಕ್ಟ್ರಿಕ್ ಸಿಇಒ ಸೊಹಿಂದರ್ ಗಿಲ್ ಅವರು ಮಾತನಾಡಿ, ಅನೇಕ ಅಸಂಘಟಿತ ವಲಯದ ಸದ್ಯಸರನ್ನು ನೋಂದಣಿ ಮಾಡಿಕೊಳ್ಳುತ್ತಿದ್ದಾರೆ. ಇದರ ಮೂಲಕ ಅವರನ್ನು ಮಾರುಕಟ್ಟೆಯ ಮುಖ್ಯ ವಾಹಿನಿಗೆ ತರಬಹುದು. ಇದರ ಮೂಲಕ ಅವರು ನ್ಯಾಯಯುತವಾಗಿ ವ್ಯಾವಹರ ನಡೆಸಲಿ. ಅವರು ನೋಂದಣಿ. ಮಾಡಿಕೊಳ್ಳದೆ ಅಕ್ರಮವಾಗಿ ವ್ಯವಹಾರ ಮಾಡುತ್ತಿರುವವರು ಒಂದು ದಿನ ಸಿಕ್ಕಿಹಾಕಿಕೊಳ್ಳುತ್ತಾರೆ ಎಂದು ಹೇಳಿದರು.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಹಲವಾರು ಪ್ರಮುಖ ವಾಹನ ತಯಾರಕ ಕಂಪನಿಗಳು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆಗೊಳಿಸಿದ್ದರೆ, ಇನ್ನೂ ಕೆಲವು ಕಂಪನಿಗಳು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ತೊಡಗಿವೆ. ಮಹೀಂದ್ರಾ ಎಲೆಕ್ಟ್ರಿಕ್ ಸಂಸ್ಥೆಯು ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸಲು ರೂ.1,000 ಕೋಟಿ ಹೂಡಿಕೆ ಮಾಡಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎಲೆಕ್ಟ್ರಿಕ್ ರಿಕ್ಷಾ ಮಾರಾಟದಲ್ಲಿ ಅಸಂಘಟಿತ ವಲಯಗಳದ್ದೇ ಮೇಲುಗೈ

ಎಲೆಕ್ಟ್ರಿಕ್ ಉದ್ಯಮದಲ್ಲಿ ಆಸಕ್ತಿ ವಹಿಸುವ ಬಗ್ಗೆ ಸರ್ಕಾರ ಯೋಚಿಸುವ ಮೊದಲು ಈ ಅಸಂಘಟಿತ ಉದ್ಯಮಿಗಳು ಮಾರುಕಟ್ಟೆಯನ್ನು ಪ್ರವೇಶಿಸಿದ್ದರು. ಅಸಂಘಟಿತ ವಲಯವು ಅಗ್ಗದ ಬೆಲೆಯಲ್ಲಿ ಇ-ರಿಕ್ಷಾಗಳನ್ನು ವಿತರಿಸುವ ಮೂಲಕ ಗ್ರಾಹಕರನ್ನು ಸುಲಭವಾಗಿ ಸೆಳೆಯುತ್ತದೆ. ಇದರಿಂದ ಅಸಂಘಟಿತ ವಲಯದ ಜೊತೆ ಪೈಪೋಟಿ ನೀಡಲು ಇ-ರಿಕ್ಷಾ ತಯಾರಕರು ತಮ್ಮ ಮಾರಾಟದ ಬೆಲೆಗಳನ್ನು ಕಡಿಮೆ ಮಾಡಬೇಕಾಗುತ್ತದೆ.

Most Read Articles

Kannada
English summary
Unorganised Sector Dominates E-Rickshaw Segment With Low Priced Products - Read in Kannada
Story first published: Tuesday, October 29, 2019, 16:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X