2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಭಾರತೀಯ ಆಟೋ ಉದ್ಯಮವು ತೀವ್ರಗತಿಯಲ್ಲಿ ಬೆಳವಣಿಗೆ ಕಾಣುತ್ತಿದ್ದು, ಇದರ ಪರಿಣಾಮವಾಗಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ಗ್ರಾಹಕರ ಅಭಿರುಚಿಗೆ ತಕ್ಕಂತೆ ವಿವಿಧ ನಮೂನೆಯ ವಾಹನಗಳನ್ನು ಬಿಡುಗಡೆ ಮಾಡುತ್ತಿವೆ. ಮುಂಬರುವ ಜೂನ್‌ನಲ್ಲೂ ಕೂಡಾ 4 ಬಹನೀರಿಕ್ಷಿತ ಕಾರುಗಳು ಸಹ ಮಾರುಕಟ್ಟೆ ಪ್ರವೇಶ ಪಡೆಯುತ್ತಿದ್ದು, ಬಿಡುಗಡೆಯಾಗಲಿರುವ ಹೊಸ ಕಾರುಗಳ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಸದ್ಯ ಕಾರು ಮಾರಾಟವನ್ನು ಅಷ್ಟಾಗಿ ಆಶಾದಾಯಕವಾಗಿಲ್ಲವಾದರೂ ಹೊಸ ಕಾರು ಉತ್ಪಾದನಾ ಸಂಸ್ಥೆಗಳು ತಮ್ಮ ಜನಪ್ರಿಯ ಉತ್ಪನ್ನಗಳೊಂದಿಗೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದು, ಎಂಜಿ ಮೋಟಾರ್, ಕಿಯಾ ಮೋಟಾರ್ಸ್ ಸೇರಿದಂತೆ ಕೆಲವು ಹಳೆಯ ಕಾರು ಸಂಸ್ಥೆಗಳು ಸಹ ಜೂನ್ ಅವಧಿಯಲ್ಲಿ ಕೆಲವು ವಿಶೇಷ ಕಾರು ಮಾದರಿಗಳನ್ನು ಬಿಡುಗಡೆ ಮಾಡುತ್ತಿವೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಎಂಜಿ ಹೆಕ್ಟರ್

ಕಳೆದ ವಾರವಷ್ಟೇ ಬಿಡುಗಡೆಯಾಗಲಿರುವ ತನ್ನ ಹೊಸ ಹೆಕ್ಟರ್ ಕಾರನ್ನು ಅನಾವರಣಗೊಳಿಸಿರುವ ಎಂಜಿ ಮೋಟಾರ್ ಸಂಸ್ಥೆಯು ಇದೀಗ ಅಧಿಕೃತವಾಗಿ ರೂ. 51 ಸಾವಿರದೊಂದಿಗ ಬುಕ್ಕಿಂಗ್ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಜೂನ್ ಎರಡನೇ ವಾರದಲ್ಲಿ ಹೊಸ ಕಾರನ್ನು ಬಿಡುಗಡೆ ಮಾಡುವುದಾಗಿ ಸುಳಿವು ಕೊಟ್ಟಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಮಧ್ಯಮ ಗಾತ್ರದ ಎಸ್‌ಯುವಿ ಮಾದರಿಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳ ಪ್ರೇರಿತ ಕಾರು ಮಾದರಿಯಾಗಿರುವ ಎಂಜಿ ಹೆಕ್ಟರ್ ಕಾರು ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯಗೊಂಡಿರುವ ಟಾಟಾ ಹ್ಯಾರಿಯರ್, ಮಹೀಂದ್ರಾ ಎಕ್ಸ್‌ಯುವಿ500 ಮತ್ತು ಜೀಪ್ ಕಂಪಾಸ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ನೀರಿಕ್ಷೆಯಲ್ಲಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ಅತ್ಯಾಧುನಿಕ ತಾಂತ್ರಿಕ ಸೌಲಭ್ಯಗಳು ಎಸ್‌ಯುವಿ ಪ್ರಿಯರ ಪ್ರಮುಖ ಆಕರ್ಷಣೆಯಾಗಿರಲಿವೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಹೆಕ್ಟರ್ ಕಾರು ಗ್ರಾಹಕರ ಬೇಡಿಕೆಯೆಂತೆ 1.5-ಲೀಟರ್ ಪೆಟ್ರೋಲ್ ಮತ್ತು 2.0-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯನ್ನು ಹೊಂದಿರಲಿದ್ದು, ಹೊಸ ಕಾರಿನ ಬೆಲೆಗಳು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 15 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ. 19 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ. ಜೊತೆಗೆ ಹೆಕ್ಟರ್ ಕಾರಿನ ಪೆಟ್ರೋಲ್ ಹೈ ಎಂಡ್ ಆವೃತ್ತಿಯು 48-ವೋಲ್ಟ್ ಬ್ಯಾಟರಿಯೊಂದಿಗೆ ಸ್ಮಾರ್ಟ್ ಹೈಬ್ರಿಡ್ ಎಂಜಿನ್ ಹೊಂದಿರಲಿದ್ದು, ಉತ್ತಮ ಪರ್ಫಾಮೆನ್ಸ್ ನೀಡಬಲ್ಲದು.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಕಿಯಾ ಎಸ್‌ಪಿ2ಐ

ಭಾರತದಲ್ಲಿ ವಿವಿಧ ಮಾದರಿಯ ಒಟ್ಟು 8 ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿರುವ ಕಿಯಾ ಮೋಟಾರ್ಸ್ ಸಂಸ್ಥೆಯು ಭಾರೀ ಪ್ರಮಾಣದ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ಎಸ್‌ಪಿ2ಐ ಕಾನ್ಸೆಪ್ಟ್ ಎನ್ನುವ ಕಂಪ್ಯಾಕ್ಟ್ ಎಸ್‌ಯುವಿ ಕಾರನ್ನು ಬಿಡುಗಡೆಗೊಳಿಸುವ ಇರಾದೆಯಲ್ಲಿದ್ದು, ಜೂನ್ 20ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಹೊಸ ಕಾರಿನ ಅಧಿಕೃತ ಹೆಸರು ಬಹಿರಂಗಪಡಿಸಿ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಲಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಸದ್ಯ ಮಾರುಕಟ್ಟೆಯಲ್ಲಿ ಜನಪ್ರಿಯವಾಗಿರುವ ಮಾರುತಿ ಸುಜುಕಿ ವಿಟಾರಾ ಬ್ರೆಝಾ, ಹ್ಯುಂಡೈ ಕ್ರೆಟಾ, ನಿಸ್ಸಾನ್ ಕಿಕ್ಸ್ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ತೀವ್ರ ಪೈಪೋಟಿ ನೀಡಲಿರುವ ಎಸ್‌ಪಿ2ಐ ಕಾರು ಭಾರತದಲ್ಲಿ ಸಾಕಷ್ಟು ಜನಪ್ರಿಯತೆ ಗಳಿಸುವ ತವಕದಲ್ಲಿದ್ದು, ಸ್ಪಾಟ್ ಟೆಸ್ಟಿಂಗ್ ಪ್ರಕ್ರಿಯೆ ವೇಳೆ ಅತ್ಯುತ್ತಮ ಎಂಜಿನ್ ಪರ್ಫಾಮೆನ್ಸ್ ಪ್ರದರ್ಶಿಸುತ್ತಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಇನ್ನು ಹೊಸ ಕಾರಿನ ಡೀಸೆಲ್ ಆವೃತ್ತಿಯು 1.5-ಲೀಟರ್ ಎಂಜಿನ್ ಮತ್ತು 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದ್ದರೆ, ಪರ್ಫಾಮೆನ್ಸ್ ಪ್ರಿಯರಿಗಾಗಿ 7-ಸ್ಪೀಡ್ ಡಿಟಿಸಿ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪ್ರೇರಿತ 1.4-ಲೀಟರ್ ಟರ್ಬೋಚಾಜ್ಡ್ ಪೆಟ್ರೋಲ್ ಎಂಜಿನ್ ಮಾದರಿಯನ್ನು ಪಡೆದುಕೊಳ್ಳಲಿದ್ದು, ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ರೂ.9.90 ಲಕ್ಷದಿಂದ ಆರಂಭವಾಗಿ ಟಾಪ್ ಎಂಡ್ ಮಾದರಿಯು ರೂ. 14.50 ಲಕ್ಷ ಬೆಲೆ ಹೊಂದುವ ಸಾಧ್ಯತೆಗಳಿವೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಟೊಯೊಟಾ ಗ್ಲಾಂಝಾ

ಟೊಯೊಟಾ ಸಂಸ್ಥೆಯು ಮಾರುತಿ ಸುಜುಕಿ ನಿರ್ಮಾಣದ ಬಲೆನೊ ಕಾರನ್ನು ರೀ ಬ್ಯಾಡ್ಜ್‌ನೊಂದಿಗೆ ಗ್ಲಾಂಝಾ ಹೆಸರಿನಲ್ಲಿ ಬಿಡುಗಡೆ ಮಾಡುತ್ತಿದ್ದು, ಜೂನ್ 6ಕ್ಕೆ ಹೊಸ ಕಾರು ಮಾರುಕಟ್ಟೆಗೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಮಾರುತಿ ಸುಜುಕಿ ಮತ್ತು ಟೊಯೊಟಾ ಸಂಸ್ಥೆಗಳು ಭಾರತದಲ್ಲಿ ಮೊದಲ ಬಾರಿಗೆ ಸಹಭಾಗಿತ್ವದ ಆಧಾರದ ಮೇಲೆ ಹೊಸ ಕಾರುಗಳನ್ನು ಉತ್ಪಾದನೆ ಮಾಡುವ ಬೃಹತ್ ಯೋಜನೆಗೆ ಚಾಲನೆ ನೀಡಿದ್ದು, ಹೊಸ ಯೋಜನೆಯ ಭಾಗವಾಗಿ ಮಾರುತಿ ಸುಜುಕಿ ಜನಪ್ರಿಯ ಕಾರು ಬಲೆನೊ ಮತ್ತು ಬ್ರೆಝಾ ಕಾರುಗಳನ್ನು ಟೊಯೊಟಾ ಸಂಸ್ಥೆಯು ರೀ ಬ್ಯಾಡ್ಜ್‌ನೊಂದಿಗೆ ಮರುಬಿಡುಗಡೆ ಮಾಡುತ್ತಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಬಲೆನೊ ಕಾರಿನ ಮೂಲ ಆವೃತ್ತಿಯಂತೆಯೇ ಇರುವ ಗ್ಲಾಂಝಾ ಕಾರು ಟೊಯೊಟಾ ಸಂಸ್ಥೆಯ ಲೊಗೊ ಮತ್ತು ಮುಂಭಾಗದಲ್ಲಿ ಗ್ರಿಲ್ ಹೊರತುಪಡಿಸಿ ಬಹುತೇಕ ತಾಂತ್ರಿಕ ಅಂಶಗಳು ಪ್ರಸ್ತುತ ಬಲೆನೊ ಮಾದರಿಯಲ್ಲೇ ಪಡೆದುಕೊಂಡಿದ್ದು, ಹೊಸ ಕಾರಿನ ಬೆಲೆಯು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

MOST READ: ಒಂದೇ ನಂಬರಿನಲ್ಲಿ ಎರಡು ಕಾರು, ಕೊನೆಗೂ ಸಿಕ್ಕಿ ಬಿದ್ದ ನಕಲಿ ಕಾರು ಮಾಲೀಕ..!

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ರೆನಾಲ್ಟ್ ಟ್ರೈಬರ್

ರೆನಾಲ್ಟ್ ಇಂಡಿಯಾ ಸಂಸ್ಥೆಯು ಜೂನ್‌ 19ರಂದು ತನ್ನ ಹೊಚ್ಚ ಹೊಸ ಮಿನಿ ಎಂಪಿವಿ(ಮಲ್ಟಿ ಪರ್ಪಸ್ ವೆಹಿಕಲ್) ಕಾರು ಮಾದರಿಯನ್ನು ಅನಾವರಣಗೊಳಿಸುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ್ದು, ಹೊಸ ಕಾರಿನ ಮೂಲಕ ಮಾರುತಿ ಸುಜುಕಿ ಎರ್ಟಿಗಾ ಮತ್ತು ಮಹೀಂದ್ರಾ ಮರಾಜೋ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ಸುಳಿವು ನೀಡಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ರೆನಾಲ್ಟ್ ಹೊಸ ಮಿನಿ ಎಂಪಿವಿ ಟ್ರೈಬರ್ ಕಾರು ಕ್ವಿಡ್‌ ಕಾರಿನ ಉತ್ಪಾದನಾ ಪ್ಲ್ಯಾಟ್‌ಫಾರ್ಮ್ ಆಧರಿಸಿ ಸಿದ್ದಗೊಂಡಿದ್ದು, ಕ್ವಿಡ್ ಕಾರಿಗಿಂತಲೂ ತುಸು ದೊಡ್ಡದಾಗಿರಲಿದೆ. ಹಾಗೆಯೇ ಲೊಡ್ಜಿ ಕಾರಿಗಿಂತಲೂ ಗಾತ್ರದಲ್ಲಿ ಚಿಕ್ಕದಾಗಿದ್ದರೂ ಉತ್ತಮ ತಾಂತ್ರಿಕ ಅಂಶಗಳೊಂದಿಗೆ ಮಾರುಕಟ್ಟೆ ಪ್ರವೇಶ ಪಡೆಯುವ ನೀರಿಕ್ಷೆಯಲ್ಲಿದೆ.

2019ರ ಜೂನ್‌ನಲ್ಲಿ ಬಿಡುಗಡೆಯಾಗಲಿವೆ ನಾಲ್ಕು ಬಹುನೀರಿಕ್ಷಿತ ಕಾರುಗಳು..!

ಹೊಸ ಟೈಬ್ರರ್ ಕಾರಿನಲ್ಲಿ 1.2-ಲೀಟರ್ ಪೆಟ್ರೋಲ್ ಅಥವಾ 1.5-ಲೀಟರ್ ಡೀಸೆಲ್ ಎಂಜಿನ್ ಒದಗಿಸುವ ಸಾಧ್ಯತೆಗಳಿದ್ದು, ಲೊಡ್ಜಿ ಕಾರಿಗಿಂತಲೂ ಉತ್ತಮ ತಾಂತ್ರಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಟ್ರೈಬರ್ ಕಾರು ಆರಂಭಿಕವಾಗಿ ರೂ. 7.50 ಲಕ್ಷದಿಂದ ಟಾಪ್ ಎಂಡ್ ಮಾದರಿಗೆ ರೂ.10 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Upcoming cars and SUVs in India in June 2019. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X