ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಎಂಜಿ ಮೋಟಾರ್ ಕಂಪನಿಯು ಈ ವರ್ಷದ ಆರಂಭದಲ್ಲಿ ಹೆಕ್ಟರ್ ಎಸ್‍ಯುವಿಯನ್ನು ಬಿಡುಗಡೆಗೊಳಿಸುವ ಮೂಲಕ ಅಧಿಕೃತವಾಗಿ ದೇಶಿಯ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ದೇಶಿಯ ಮಾರುಕಟ್ಟೆಯಲ್ಲಿರುವ ಎಂಜಿ ಮೋಟಾರ್ಸ್ ಕಂಪನಿಯ ಏಕೈಕ ಎಸ್‍ಯುವಿಯಾದ ಹೆಕ್ಟರ್ ಉತ್ತಮವಾಗಿ ಮಾರಾಟವಾಗುತ್ತಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಎಂಜಿ ಹೆಕ್ಟರ್ ಎಸ್‍ಯುವಿಯು ಭಾರತದಲ್ಲಿ ಜನರ ಗಮನವನ್ನು ತನ್ನತ್ತ ಸೆಳೆದಿದೆ. ಎಂಜಿ ಹೆಕ್ಟರ್ ಸಾಕಷ್ಟು ಜನಪ್ರಿಯವಾಗಿದೆ. ಭಾರತದ ಎಸ್‍‍ಯುವಿಯ ಜನಪ್ರಿಯತೆ ಹೆಚ್ಚಿದ ನಂತರ ಎಂಜಿ ಮೋಟಾರ್ಸ್ ಇದೀಗ ತನ್ನ ಇತರ ಎಸ್‍‍ಯುವಿಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

2020ರ ಫೆಬ್ರವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್ ಪೋದಲ್ಲಿ ಮೊದಲ ಬಾರಿಗೆ ಎಂಜಿ ಮೋಟಾರ್ಸ್ ಬಾಗವಹಿಸಲಿದೆ. ಈ ಆಟೋ ಎಕ್ಸ್ ಪೋದಲ್ಲಿ ಎಂಜಿ ಮೋಟಾರ್ಸ್‍ನ ಮುಂದಿನ ಎಸ್‍‍ಯುವಿಗಳನ್ನು ಅನಾವರಣಗೊಳಿಸುವ ಸಾಧ್ಯತೆಗಳಿವೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಬ್ರಿಟನ್ ಮೂಲದ ಕಾರು ತಯಾರಕ ಕಂಪನಿಯು ಬಿಡುಗಡೆಮಾಡುವ ಮೊದಲ ವಾಹನ ಎಂಜಿ ಇಝಡ್ಎಸ್ ಆಗಿದೆ. ಇದು ಭಾರತದಲ್ಲಿ ಕಂಪನಿಯು ಬಿಡುಗಡೆಗೊಳಿಸುತ್ತಿರುವ ಮೊಟ್ಟ ಮೊದಲ ಎಲೆಕ್ಟ್ರಿಕ್ ವಾಹನವಾಗಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಮುಂದಿನ ತಿಂಗಳು ಭಾರತದಲ್ಲಿ ಇಝಡ್ಎಸ್ ಅನಾವರಣವಾಗಲಿದೆ. ಎಂಜಿ ಮೋಟಾರ್ಸ್ ಭಾರತದಲ್ಲಿ ಬಿಡುಗಡೆಗೊಳಿಸುವ ಇ‍ಜೆಡ್ಎಸ್ ಎಸ್‍‍ಯುವಿಯ ಎಲ್ಲಾ ವಿಶೇಷತೆಗಳನ್ನು ಬಹಿರಂಗಪಡಿಸುವ ಸಾಧ್ಯತೆಗಳಿವೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಈ ಎಸ್‍‍ಯುವಿಯನ್ನು ಬಾರತದಲ್ಲಿ ಮುಂದಿನ ವರ್ಷ ಬಿಡುಗಡೆಗೊಳಿಸಲಿದೆ. ಮುಂದಿನ ವರ್ಷವಷ್ಠೇ ಅಧಿಕೃತ ಬೆಲೆಯನ್ನು ಘೋಷಿಸಲಾಗುವುದು. ಇದಕ್ಕೂ ಮೊದಲು ಎಂಜಿ ಮೋಟಾರ್ಸ್ ಅಧಿಕೃತವಾಗಿ ಇಝಡ್ ಎಸ್‍ಯುವಿಗಾಗಿ ಬುಕ್ಕಿಂಗ್ ಸ್ವೀಕರಿಸಲು ಪ್ರಾರಂಭಿಸಲಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಹೊಸ ಇಝಡ್ ಎಸ್‍‍ಯುವಿಯು ಹ್ಯುಂಡೈ ಕೋನಾ ಮತ್ತು ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿರುವ ಟಾಟಾ ನೆಕ್ಸಾನ್ ಇವಿ ಕಾರುಗಳಿಗೆ ಪೈಪೋಟಿ ನೀಡುತ್ತದೆ. ಹೊಸ ಎಂಜಿ ಇಝಡ್ ಎಸ್‍ಯುವಿಯನ್ನು ಒಂದು ಬಾರಿ ಪೂರ್ಣ ಪ್ರಮಾಣದಲ್ಲಿ ಚಾರ್ಜ್ ಮಾಡಿದರೆ ಸುಮಾರು 400 ಕಿ.ಮೀ ಚಲಿಸುತ್ತದೆ. ಲೋವರ್ ರೇಂಜ್‍‍ನ ಇಝಡ್ ಎಸ್‍‍ಯುವಿಯನ್ನು ಕೂಡ ಬಿಡುಗಡೆಗೊಳಿಸಲಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಹೊಸ ಈ ಎಸ್‍‍ಯುವಿಯು ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್‍‍ಗಿಂತ ಕೆಳಗಿನ ಸ್ಥಾನದಲ್ಲಿರಲಿದೆ. ಐ‍ಸಿಎನ್ ಪ್ರಕಾರ ಇತ್ತೀಚೆಗೆ ಚೀನಾದಲ್ಲಿ ಬಿಡುಗಡೆಯಾದ ಬೋಜುನ್ ಆರ್‍ಎಸ್-3 ಎಸ್‍ಯುವಿಯ ರೀಬೆಡ್ಜ್ ಎಂಜಿ ಹೆಕ್ಟರ್‍ ಆವೃತ್ತಿಯಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಈ ಎಸ್‍‍ಯುವಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಮಾರಾಟ ಮಾಡಲಾಗುವುದು. ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿರುವ 5 ಸೀಟಿನ ಎಂಜಿ ಹೆಕ್ಟರ್‍ ಎಸ್‍‍ಯುವಿಯನ್ನು ಮಾರಾಟ ಮಾಡಲಾಗುತ್ತಿದ್ದರೆ, ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 7 ಸೀಟುಗಳ ಎಸ್‍‍ಯುವಿಗಳನ್ನು ಮಾರಾಟ ಮಾಡಲಾಗುತ್ತಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಹೊಸ ಕಾರು ಮುಂದಿನ ತಿಂಗಳುಗಳಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಎಂಜಿ ಹೆಕ್ಟರ್‍‍ನ 7 ಸೀಟ್‍‍ಗಳ ಆವೃತ್ತಿಯು 5 ಸೀಟುಗಳ ಆವೃತ್ತಿಯ ಮಾದರಿಯಲ್ಲೇ ವಿನ್ಯಾಸವನ್ನು ಹೊಂದರಲಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಎಂಜಿನ್ ಆಯ್ಕೆಗಳೂ ಕೂಡ ಅದೇ ಮಾದರಿಯ ಎಂಜಿನ್‍‍ಗಳನ್ನು ಹೊಂದಿರುವ ಸಾಧ್ಯತೆಗಳಿದೆ. 7 ಸೀಟಿನ ಎಂಜಿ ಹೆಕ್ಟರ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಟೊಯೊಟಾ ಫಾರ್ಚೂನರ್, ಫೋರ್ಡ್ ಎಂಡೀವರ್ ಮತ್ತು ಮಹೀಂದ್ರಾ ಅಲ್ತುರಾಸ್ ಜಿ 4 ಎಸ್‍‍ಯುವಿಗಳಿಗೆ ಪೈಪೋಟಿ ನೀಡಲಿದೆ.

ಭಾರತಕ್ಕೆ ಲಗ್ಗೆ ಇಡಲಿವೆ ಹೊಸ ಎಂಜಿ ಎಸ್‍‍ಯುವಿಗಳು

ಎಂಜಿ ಮೋಟಾರ್ಸ್ ಇಝಡ್ಎಸ್ ಎಸ್‍ಯುವಿ ಮತ್ತು 7 ಸೀಟಿನ ಎಂಜಿ ಹೆಕ್ಟರ್ ಜೊತೆಯಲ್ಲಿ ಹೊಸ ಮ್ಯಾಕ್ಸಸ್ ಡಿ 90 ಕಾರನ್ನು ಮುಂದಿನ ವರ್ಷದಲ್ಲಿ ಬಿಡುಗಡೆಗೊಳಿಸಲಾಗುತ್ತದೆ. ಇದರೊಂದಿಗೆ ಎಂಜಿ ಮೋಟಾರ್ಸ್ ಎಡಬ್ಲುಡಿ ಎಸ್‍‍ಯುವಿಯನ್ನು ಕೂಡ ಬಿಡುಗಡೆಯಾಗಲಿದೆ. ಈ ಎಸ್‍‍ಯುವಿಯನ್ನು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‍‍ಗಳಲ್ಲಿ ಮಾರಾಟ ಮಾಡಲಾಗುವುದು.

Most Read Articles

Kannada
English summary
MG Motor’s 4 new SUVs for the Indian market detailed - Read in Kannada
Story first published: Thursday, November 28, 2019, 15:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X