ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ನೆಕ್ಸಾನ್ ಮತ್ತು ಹ್ಯಾರಿಯರ್ ಬಿಡುಗಡೆಯ ಯಶಸ್ವಿ ನಂತರ ಮತ್ತಷ್ಟು ಉತ್ಸುಕವಾಗಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ 3 ವರ್ಷಗಳ ವರ್ಷಗಳ ಅವಧಿಯಲ್ಲಿ 10 ಹೆಚ್ಚು ಕಾರುಗಳನ್ನು ಬಿಡುಗಡೆಗೊಳಿಸುವ ಯೋಜನೆಯಲ್ಲಿದ್ದು, ಇದೀಗ ಬಿಡುಗಡೆಗಾಗಿ ಸಜ್ಜಾಗಿರುವ ನಾಲ್ಕು ಹೊಸ ಮಾದರಿಯ ಕಾರುಗಳು ಸಾಕಷ್ಟು ನೀರಿಕ್ಷೆ ಹುಟ್ಟುಹಾಕಿವೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಹೊಸ ಕಾರುಗಳ ಉತ್ಪಾದನೆಯಲ್ಲಿ ಮಹತ್ವದ ಹೆಜ್ಜೆಯಿಸುತ್ತಿರುವ ಟಾಟಾ ಸಂಸ್ಥೆಯು ಭಾರತೀಯ ಆಟೋ ಉದ್ಯಮದಲ್ಲಿ ಭಾರೀ ಬದಲಾವಣೆಗೆ ಮುಂದಾಗಿದ್ದು, ಮುಂದಿನ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರುಗಳ ಮೂಲಕ ಭಾರೀ ಪ್ರಮಾಣದ ಮಾರಾಟ ಗುರಿಹೊಂದಿದೆ. ಹೀಗಾಗಿ ಕೈಗೆಟುಕುವ ಬೆಲೆಗಳಲ್ಲಿ ಅತ್ಯುತ್ತಮ ಕಾರು ಮಾದರಿಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದ್ದು, ವರ್ಷಾಂತ್ಯದಲ್ಲಿ ಒಟ್ಟು ನಾಲ್ಕು ಹೊಸ ಕಾರುಗಳು ಮಾರುಕಟ್ಟೆ ಪ್ರವೇಶಿಸಲಿವೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

01. ಕ್ಯಾಸಿನಿ(7 ಸೀಟರ್ ಎಸ್‌ಯುವಿ)

ಟಾಟಾ ಸಂಸ್ಥೆಯು 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ 7 ಸೀಟರ್ ಕಾರು ಆವೃತ್ತಿಯಾದ ಕ್ಯಾಸಿನಿ ಕಾರನ್ನು ಅಭಿವೃದ್ಧಿಗೊಳಿಸಿದ್ದು, ಸ್ಪಾಟ್ ಟೆಸ್ಟಿಂಗ್ ವೇಳೆ ಹೊಸ ಕಾರು 7 ಸೀಟರ್ ಕಾರುಗಳಿಗೆ ತೀವ್ರ ಪೈಪೋಟಿ ನೀಡುವ ಸುಳಿವು ನೀಡಿದೆ. ವಿನೂತನ ವಿನ್ಯಾಸ ಮತ್ತು ಹೊಸ ಎಂಜಿನ್ ಆಯ್ಕೆಯಿಂದಾಗಿ ಗ್ರಾಹಕರನ್ನು ಸೆಳೆಯುವ ತವಕದಲ್ಲಿರುವ ಟಾಟಾ ಕ್ಯಾಸಿನಿ ಕಾರು ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ಮಹೀಂದ್ರಾ ಅಲ್ಟುರಾಸ್ ಜಿ4 ಮತ್ತು ಫೋರ್ಡ್ ಎಂಡೀವರ್ ಆವೃತ್ತಿಗೂ ಪ್ರತಿಸ್ಪರ್ಧಿಯಾಗುವ ಗುಣಲಕ್ಷಣಗಳನ್ನು ಹೊಂದಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಹೊಸ ಕ್ಯಾಸಿನಿ ಕಾರು ಮಾದರಿಯು 6 ಪ್ಲಸ್ 1 ಆಸನ ಮಾದರಿಯ ಎಸ್‌ಯುವಿ ಕಾರು ಆವೃತ್ತಿಯಾಗಿದ್ದು, 5 ಸೀಟರ್ ಹ್ಯಾರಿಯರ್ ಮಾದರಿಯಲ್ಲೇ ಹೊಸ ಕಾರು ಕೂಡಾ ಒಳ ಮತ್ತು ಹೊರ ವಿನ್ಯಾಸಗಳನ್ನು ಪಡೆದುಕೊಂಡಿರುವುದು ಸ್ಪಾಟ್ ಟೆಸ್ಟಿಂಗ್‌ನಲ್ಲಿ ಬಹಿರಂಗವಾಗಿದೆ. ಹೀಗಾಗಿ ಸದ್ಯ ಮಾರುಕಟ್ಟೆಯಲ್ಲಿರುವ ಹೆಕ್ಸಾ ಕಾರಿಗಿಂತಲೂ ಹೆಚ್ಚಿನ ಮಟ್ಟದ ತಾಂತ್ರಿಕ ಸೌಲಭ್ಯವನ್ನು ಹೊಂದಿರುವ ಕ್ಯಾಸಿನಿ ಕಾರು 2,741-ಎಂಎಂ ನಷ್ಟು ವೀಲ್ಹ್ ಬೆಸ್ ಸೌಲಭ್ಯದೊಂದಿಗೆ ಹ್ಯಾರಿಯರ್ ಕಾರಿಗಿಂತ 62-ಎಂಎಂ ಉದ್ದವಾಗಿದೆ ಎನ್ನಲಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಇದು ಮೂರನೇ ಸಾಲಿನಲ್ಲಿ ಕೂರುವ ಪ್ರಯಾಣಿಕರಿಗೆ ಸಹಕಾರಿಯಾಗಲಿದ್ದು, ಎಸ್‌ಯುವಿ ಕಾರುಗಳ ಪ್ರಮುಖ ಆಕರ್ಷಣೆಯಾದ ಫುಟ್ ಬೋರ್ಡ್, ರೂಫ್ ರೈಲ್ಸ್ ಮತ್ತು 18-ಇಂಚಿನ ಅಲಾಯ್ ಚಕ್ರಗಳು ಗ್ರಾಹಕರನ್ನು ಸೆಳೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಮತ್ತೊಂದು ವಿಚಾರ ಅಂದ್ರೆ, ಹೊಸ ಕಾರು ಇಂಪ್ಯಾಕ್ಟ್ 2.0 ಡಿಸೈನ್ ಅಡಿ ನಿರ್ಮಾಣವಾಗಿದ್ದು, ಫ್ಲೇರ್ಡ್ ಆರ್ಚೆಸ್, ಮುಂಭಾಗದ ಬಂಪರ್‍‍ಗಳಿಗೆ ಟ್ರೈ ಆರೋ ಡಿಸೈನ್, ಡ್ಯುಯಲ್ ಟೋನ್ ಬಂಪರ್, ಎಲ್ಇಡಿ ಹೆಡ್‍ಲೈಟ್, ವ್ರಾಪ್ಡ್ ಅರೌಂಡ್ ಟೈಲ್ ಲೈಟ್ ಮತ್ತು ಸ್ಕಿಡ್ ಪ್ಲೇಟ್‍‍ಗಳಿಂದ ಸಜ್ಜುಗೊಂಡಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಎಂಜಿನ್ ಸಾಮರ್ಥ್ಯ

ಕ್ಯಾಸಿನಿ ಕಾರುಗಳಲ್ಲಿ 2.0-ಲೀಟರ್ ಕ್ರೆಯೊಟೆಕ್ ಡೀಸೆಲ್ ಎಂಜಿನ್ ಸಹಾಯದಿಂದ 170-ಬಿಹೆಚ್‍ಪಿ ಹಾಗೂ 350-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಹ್ಯುಂಡೈನಿಂದ ಎರವಲು ಪಡೆಯಲಾಗಿರುವ ಸಿಕ್ಸ್ ಸ್ಪೀಡ್ ಮ್ಯಾನುವಲ್ ಮತ್ತು ಸಿಕ್ಸ್ ಸ್ಪಿಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಸೌಲಭ್ಯವನ್ನ ಪಡೆದುಕೊಳ್ಳಲಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

02. ಆಲ್‌ಟ್ರೊಜ್ ಹ್ಯಾಚ್‌ಬ್ಯಾಕ್

ಆಲ್ಬಾಟ್ರೊಸ್ ಎನ್ನುವ ಸಮುದ್ರ ಹಕ್ಕಿಯ ಬಲಿಷ್ಠತೆ ಮತ್ತು ಚತುರತೆಯ ಪ್ರೇರಣೆಯೊಂದಿಗೆ ಆಲ್‌ಟ್ರೊಜ್ ಕಾರನ್ನು ನಿರ್ಮಾಣ ಮಾಡಿರುವ ಟಾಟಾ ಸಂಸ್ಥೆಯು ಸದ್ಯ ಮಾರುಕಟ್ಟೆಯಲ್ಲಿರುವ ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಐ20 ಕಾರುಗಳಿಗೆ ಪ್ರಬಲ ಪೈಪೋಟಿಯಾಗಿ ಮಾರುಕಟ್ಟೆಗೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಆಲ್‌ಟ್ರೊಜ್ ಕಾರು ಪೆಟ್ರೋಲ್ ಆವೃತ್ತಿಯಲ್ಲಿ ಎರಡು ಎಂಜಿನ್ ಆಯ್ಕೆಗಳು ಇರಲಿದ್ದು, ಡೀಸೆಲ್‌ ಆವೃತ್ತಿಯಲ್ಲಿ ಒಂದು ಆಯ್ಕೆ ಮಾತ್ರ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಪೆಟ್ರೋಲ್ ಆವೃತ್ತಿಯಲ್ಲಿ 1.2-ಲೀಟರ್ ಮತ್ತು 1.5-ಲೀಟರ್ ಎಂಜಿನ್ ಮಾದರಿಗಳು ಅಭಿವೃದ್ಧಿಯಾಗುತ್ತಿದ್ದು, ಡೀಸೆಲ್ ಮಾದರಿಯಲ್ಲಿ 1.5-ಲೀಟರ್ ಎಂಜಿನ್ ಲಭ್ಯವಾಗಲಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಪೆಟ್ರೋಲ್ ಆವೃತ್ತಿಗಾಗಿ ಆಯ್ಕೆ ಮಾಡಲಾಗಿರುವ 1.2-ಲೀಟರ್ ಎಂಜಿನ್ ಮಾದರಿಯನ್ನು ಟಿಯಾಗೋದಿಂದ ಎರವಲು ಪಡೆದಿದ್ದಲ್ಲಿ 1.5-ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳನ್ನು ನೆಕ್ಸಾನ್ ಎಸ್‌ಯುವಿಯಿಂದ ಎರವಲು ಪಡೆದಿರುವ ಟಾಟಾ ಸಂಸ್ಥೆಯು ಎಂಜಿನ್ ಪರ್ಫಾಮೆನ್ಸ್‌ನಲ್ಲಿ ಕೆಲವು ಗಮನಸೆಳೆಯಬಹುದಾದ ಬದಲಾವಣೆಗಳನ್ನು ಮಾಡಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಆದ್ರೆ ಕಾರಿನ ಒಳವಿನ್ಯಾಸಗಳ ಬಗ್ಗೆ ಯಾವುದೇ ತಾಂತ್ರಿಕ ಮಾಹಿತಿಗಳನ್ನು ಬಿಟ್ಟುಕೊಡದ ಟಾಟಾ ಮೋಟಾರ್ಸ್ ಸಂಸ್ಥೆಯು ಇದೇ ವರ್ಷ ಸೆಪ್ಟೆಂಬರ್ ಅಂತ್ಯಕ್ಕೆ ಬಿಡುಗಡೆಗೊಳಿಸುವ ಸುಳಿವು ನೀಡಿದ್ದು, ಹೊಸ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರೂಂ ಪ್ರಕಾರ ರೂ. 5 ಲಕ್ಷದಿಂದ ರೂ.7 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

03. ಆಲ್‌ಟ್ರೊಜ್ (ಎಲೆಕ್ಟ್ರಿಕ್ ಹ್ಯಾಚ್‌ಬ್ಯಾಕ್)

ಸಾಮಾನ್ಯ ಆಲ್‌ಟ್ರೊಜ್ ಮಾದರಿಯಲ್ಲೇ ಹೊರ ವಿನ್ಯಾಸ ಹೊಂದಿರುವ ಎಲೆಕ್ಟ್ರಿಕ್ ಆಲ್‌ಟ್ರೊಜ್ ಕಾರು ಪ್ರತಿ ಚಾರ್ಜ್‌ಗೆ 250-300 ಕಿ.ಮಿ ಮೈಲೇಜ್ ರೇಂಜ್ ಬ್ಯಾಟರಿ ಸೌಲಭ್ಯ ಹೊಂದಿರಲಿದ್ದು, ಫಾಸ್ಟ್ ಚಾರ್ಜಿಂಗ್ ಸೌಲಭ್ಯದ ಮೂಲಕ ಕೇವಲ 60 ನಿಮಿಷಗಳಲ್ಲಿ ಶೇ.80 ಚಾರ್ಜ್ ಮಾಡಬಹುದಾದ ಗುಣಮಟ್ಟದ ಬ್ಯಾಟರಿ ಜೋಡಣೆ ಮಾಡಲಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಜೊತೆಗೆ ಆಲ್‌ಟ್ರೊಜ್ ಎಲೆಕ್ಟ್ರಿಕ್ ಕಾರಿನ ಬೆಲೆಯು ರೂ.10 ಲಕ್ಷದೊಳಗೆ ಇರಲಿದೆ ಎನ್ನುವ ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಅತಿ ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ಪ್ರೀಮಿಯಂ ಸೌಲಭ್ಯಗಳೊಂದಿಗೆ ಹೊಂದಿರುವ ಕಾರು ಮಾದರಿ ಇದಾಗಿರಲಿದೆ ಎಂದಿದ್ದಾರೆ. ಹೀಗಾಗಿ ಇದು ಬಲೆನೊ ಮತ್ತು ಐ20 ಕಾರುಗಳಿಗೆ ತೀವ್ರ ಪೈಪೋಟಿ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

04. ಹಾರ್ನ್‌ಬಿಲ್ (ಮೈಕ್ರೊ ಎಸ್‌ಯುವಿ)

ಟಾಟಾ ಮೋಟಾರ್ಸ್ ಸಂಸ್ಥೆಯು ಜೆನೆವಾ ಮೋಟಾರ್ ಶೋನಲ್ಲಿ ಮಾರುತಿ ಇಗ್ನಿಸ್ ಮತ್ತು ಮಹೀಂದ್ರಾ ಕೆಯುವಿ100 ಕಾರುಗಳುಗೆ ಪೈಪೋಟಿ ನೀಡಲು ಹಾರ್ನ್‍ಬಿಲ್ ಎಂಬ ಹೊಸ ಕಾರನ್ನು ಪ್ರದರ್ಶಿಸಲಾಗಿದ್ದು, ಈ ಕಾರು ಟಾಟಾ ಟಿಯಾಗೊ ಕಾರಿನಲ್ಲಿ ಅಳವಡಿಸಲಾದ 1.2 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಎಂಜಿನ್ ಆಯ್ಕೆಯನ್ನು ಹೊತ್ತು ಬರಲಿದೆ.

ಬಿಡುಗಡೆಯಾಗಲಿರುವ ಟಾಟಾ ಮೋಟಾರ್ಸ್ ಬಹುನೀರಿಕ್ಷಿತ ಕಾರುಗಳಿವು..!

ಹಾರ್ನ್‌ಬಿಲ್ ಕಾರು ಮಾದರಿಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿನ ಗ್ರಾಹಕರ ಬೇಡಿಕೆಯ ಅನುಸಾರವಾಗಿ ನಿರ್ಮಾಣ ಮಾಡಲಾಗಿದ್ದು, ನೆಕ್ಸಾನ್ ಕಾರು ಮಾದರಿಯಿಂದ ಕೆಲವು ತಾಂತ್ರಿಕ ಸೌಲಭ್ಯಗಳನ್ನು ಎರವಲು ಪಡೆಯಲಾಗಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಸಣ್ಣ ಗಾತ್ರದ ಎಸ್‌ಯುವಿ ಹೆಗ್ಗಳಿಕೆ ಪಾತ್ರವಾಗಿರುವ ಹಾರ್ನ್‌ಬಿಲ್ ಕಾರು ಪೆಟ್ರೋಲ್ ಮತ್ತು ಎಲೆಕ್ಟ್ರಿಕ್ ಆವೃತ್ತಿಯು 2020ರ ಮಾರ್ಚ್ ನಂತರ ಬಿಡುಗಡೆಯಾಗಲಿದ್ದು, ಕಾರಿನ ಬೆಲೆಯು ಪೆಟ್ರೋಲ್ ವರ್ಷನ್‌ಗೆ ರೂ.4 ಲಕ್ಷ ಮತ್ತು ಎಲೆಕ್ಟ್ರಿಕ್ ಆವೃತ್ತಿಗೆ ರೂ.7 ಲಕ್ಷದಿಂದ ರೂ.8 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
English summary
Upcoming Tata Cars Launches in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X