ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಎಂಜಿ ಹೆಕ್ಟರ್ ಎಸ್‍‍ಯುವಿಯನ್ನು ಕೆಲ ತಿಂಗಳ ಹಿಂದಷ್ಟೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಬಿಡುಗಡೆಯಾದಾಗಿನಿಂದ ಈ ಎಸ್‍‍ಯುವಿ ಸಾಕಷ್ಟು ಜನಪ್ರಿಯತೆಯನ್ನು ಪಡೆದಿದೆ. ಈ ಎಸ್‍‍ಯುವಿಯನ್ನು ಬುಕ್ಕಿಂಗ್ ಮಾಡಿದ ನಂತರ ಡೆಲಿವರಿ ಪಡೆಯಲು ದೀರ್ಘ ಅವಧಿಯವರೆಗೂ ಕಾಯಬೇಕಾಗುತ್ತದೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಎಂಜಿ ಹೆಕ್ಟರ್ ಕಾರ್ ಅನ್ನು ಬುಕ್ ಮಾಡಿ ಕಾಯುವ ಗ್ರಾಹಕರಿಗೆ ಕಂಪನಿಯು ಹಲವು ಗಿಫ್ಟ್ ಗಳನ್ನು ನೀಡುತ್ತದೆ. ಹಲವು ಗ್ರಾಹಕರು ಈಗಾಗಲೇ ಈ ಎಸ್‍‍ಯುವಿಯ ವಿತರಣೆಯನ್ನು ಪಡೆದಿದ್ದಾರೆ. ಈ ಎಸ್‍‍ಯುವಿಯನ್ನು ಹೊಂದಿರುವ ಗ್ರಾಹಕರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಲಾಭಕ್ಕಾಗಿ ಮಾರಾಟ ಮಾಡುತ್ತಿದ್ದಾರೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಪಂಜಾಬಿನ ಲೂಧಿಯಾನಾದಲ್ಲಿರುವ ಎಂಜಿ ಹೆಕ್ಟರ್ ಗ್ರಾಹಕರೊಬ್ಬರು ತಮ್ಮ ಬಳಿಯಿರುವ ಎಂ‍ಜಿ ಹೆಕ್ಟರ್ ಎಸ್‍‍ಯುವಿಯನ್ನು 5 ಲಕ್ಷದ ಲಾಭಕ್ಕಾಗಿ ಮಾರಾಟಕ್ಕಿಟ್ಟಿದ್ದಾರೆ. ಡ್ರೂಮ್ ವೆಬ್‍‍ಸೈಟಿನಲ್ಲಿ ಈ ಬಗ್ಗೆ ಜಾಹೀರಾತನ್ನು ನೀಡಲಾಗಿದೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಸೂಪರ್ ವೇರಿಯಂಟ್ ಮಾದರಿಯ, 2.0 ಲೀಟರಿನ ಡೀಸೆಲ್ ಎಂಜಿನ್ ಹೊಂದಿರುವ ಎಂಜಿ ಹೆಕ್ಟರ್ ಮಾರಾಟಕ್ಕಿದೆ ಎಂದು ಜಾಹೀರಾತಿನಲ್ಲಿ ಹೇಳಲಾಗಿದೆ. ಅಂದ ಹಾಗೆ ಈ ಎಸ್‍‍ಯುವಿ ಮ್ಯಾನುವಲ್ ಆವೃತ್ತಿಯಾಗಿದೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಪಂಜಾಬ್‍‍ನ ಲೂಧಿಯಾನಾದಲ್ಲಿರುವ ಎಂಜಿ ಹೆಕ್ಟರ್ ಶೋರೂಂಗಳಲ್ಲಿ ಹೊಸ ಎಸ್‍‍ಯುವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.14.18 ಲಕ್ಷಗಳಾಗುತ್ತದೆ. ರಸ್ತೆ ಹಾಗೂ ಸಂಬಂಧಪಟ್ಟ ತೆರಿಗೆಗಳೆಲ್ಲವೂ ಸೇರಿ ಆನ್ ರೋಡ್ ದರವು ರೂ.16.5 ಲಕ್ಷಗಳಾಗುತ್ತದೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಆದರೆ ಈ ಜಾಹೀರಾತನ್ನು ನೀಡಿರುವ ಭೂಪ ಬಳಕೆ ಮಾಡಿರುವ ಈ ಸೆಕೆಂಡ್ ಹ್ಯಾಂಡ್ ಎಸ್‍‍ಯುವಿಗೆ ರೂ.21 ಲಕ್ಷ ಎಂದು ಹೇಳಿದ್ದಾನೆ. ಆನ್‍ ರೋಡ್ ದರಕ್ಕಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಈ ಎಸ್‍‍ಯುವಿಯಲ್ಲಿ ಹೆಚ್ಚುವರಿಯಾಗಿ ಯಾವುದಾದರೂ ಆಕ್ಸೆಸರೀಸ್ ಅಥವಾ ಫೀಚರ್‍‍ಗಳನ್ನು ಅಳವಡಿಸಲಾಗಿದೆಯೇ ಇಲ್ಲವೇ ಎಂಬುದನ್ನು ತಿಳಿಸಿಲ್ಲ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಈತನು ಮಾತ್ರವಲ್ಲದೇ, ಈಗಾಗಲೇ ಈ ಎಸ್‍‍ಯುವಿಯ ಡೆಲಿವರಿಯನ್ನು ಪಡೆದಿರುವ ಅನೇಕ ಗ್ರಾಹಕರು ಸೆಕೆಂಡ್ ಹ್ಯಾಂಡ್ ಮಾರುಕಟ್ಟೆಯಲ್ಲಿ ಎಂಜಿ ಹೆಕ್ಟರ್ ಎಸ್‍‍ಯುವಿಯನ್ನು ಮಾರಾಟಕ್ಕಿಟ್ಟಿದ್ದಾರೆ. ಅದೂ ಸಹ ಹೊಸ ಕಾರಿಗಿಂತ ಹೆಚ್ಚಿನ ಬೆಲೆಗೆ. ಇದರಿಂದಾಗಿ ಗ್ರಾಹಕರು ಹೊಸ ಎಸ್‍‍ಯುವಿಗಾಗಿ ಹೆಚ್ಚು ದಿನ ಕಾಯುವಂತಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ತಕ್ಷಣವೇ ಹೊಸ ಎಸ್‍ಯುವಿಯನ್ನು ಪಡೆಯಬಹುದು. ಆದರೆ ಈ ಎಸ್‍‍ಯುವಿಯು ಸೆಕೆಂಡ್ ಹ್ಯಾಂಡ್ ಆಗಿರಲಿದೆಯೇ ಹೊರತು, ಹೊಸದಾಗುವುದಿಲ್ಲ. ಇದರಿಂದಾಗಿ ವರ್ಷಗಳು ಕಳೆದಂತೆ ಈ ಎಸ್‍‍ಯುವಿಯ ಬೆಲೆಯು ಮತ್ತಷ್ಟು ಇಳಿಕೆಯಾಗಲಿದೆ.

MOST READ: ಪೆಟ್ರೋಲ್, ಡೀಸೆಲ್ ಮಾರಾಟಕ್ಕೂ ಹೊಡೆತ ಕೊಟ್ಟ ಹೊಸ ಟ್ರಾಫಿಕ್ ರೂಲ್ಸ್

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಈ ಜಾಹೀರಾತಿನಲ್ಲಿ ತೋರಿಸಲಾಗಿರುವ ಎಂಜಿ ಹೆಕ್ಟರ್ ಬಹುತೇಕ ಹೊಸತಾಗಿದ್ದು, 1,300 ಕಿ.ಮೀನಷ್ಟು ಚಲಿಸಿದೆ. ಈ ಎಸ್‍‍ಯುವಿಯ ಮಾಲೀಕನು ಪಂಜಾಬ್‍‍ನಲ್ಲಿರುವ ಲೂಧಿಯಾನಾದ ನಿವಾಸಿಯಾಗಿದ್ದಾನೆ. ಈ ಎಸ್‍‍ಯುವಿಯು ಅರೋರಾ ಸಿಲ್ವರ್ ಬಣ್ಣದಲ್ಲಿದೆ.

MOST READ: ಚಪ್ಪಲಿ, ಲುಂಗಿ, ಬನಿಯನ್ ಧರಿಸಿದರೂ ಬೀಳಲಿದೆ ದಂಡ..!

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಈ ಎಸ್‍‍ಯುವಿಯ ಮೇಲೆ ಯಾವುದೇ ರೀತಿಯ ಡೆಂಟ್ ಆಗಲಿ ಅಥವಾ ಸ್ಕ್ರಾಚ್ ಆಗಲಿ ಇಲ್ಲದಿರುವುದನ್ನು ಚಿತ್ರದಲ್ಲಿ ಕಾಣಬಹುದು. ಯಾವ ಕಾರಣಕ್ಕಾಗಿ ಈ ಎಸ್‍‍ಯುವಿಯನ್ನು ಮಾರಾಟ ಮಾಡಲಾಗುತ್ತಿದೆ ಎಂಬುದನ್ನು ತಿಳಿಸಿಲ್ಲವಾದರೂ, ಹೆಚ್ಚಿನ ಲಾಭಕ್ಕಾಗಿ ಮಾರಾಟ ಮಾಡುತ್ತಿರುವ ಸಾಧ್ಯತೆಗಳಿವೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಈ ಎಸ್‍‍ಯುವಿಯಲ್ಲಿ ಫಿಯೆಟ್ ಕಂಪನಿಯ 2.0 ಲೀಟರಿನ ಡೀಸೆಲ್ ಎಂಜಿನ್ ಅಳವಡಿಸಲಾಗಿದೆ. ಇದೇ ರೀತಿಯ ಎಂಜಿನ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿರುವ ಜೀಪ್ ಕಂಪಾಸ್ ಹಾಗೂ ಟಾಟಾ ಹ್ಯಾರಿಯರ್ ವಾಹನಗಳಲ್ಲೂ ಅಳವಡಿಸಲಾಗಿದೆ. ಈ ಎಂಜಿನ್ 171 ಬಿ‍‍ಹೆಚ್‍‍ಪಿ ಪವರ್ ಹಾಗೂ 350 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಈ ಎಂಜಿನ್‍‍ನಲ್ಲಿ ಸ್ಟಾಂಡರ್ಡ್ ಆಗಿ ಮ್ಯಾನುವಲ್ ಟ್ರಾನ್ಸ್ ಮಿಷನ್ ಅಳವಡಿಸಲಾಗಿದೆ. ಈ ಸೂಪರ್ ವೇರಿಯಂಟ್ ಮಾದರಿಯ ಎಸ್‍‍ಯುವಿಯಲ್ಲಿ ಡ್ಯೂಯಲ್ ಫ್ರಂಟ್ ಏರ್‍‍ಬ್ಯಾಗ್, ಇ‍ಎಸ್‍‍ಪಿ (ಎಲೆಕ್ಟ್ರಾನಿಕ್ ಸ್ಟಾಬಿಲಿಟಿ ಪ್ರೋಗ್ರಾಂ), ಟ್ರಾಕ್ಷನ್ ಕಂಟ್ರೋಲ್ ಸಿಸ್ಟಂ, ಹಿಲ್ ಹೋಲ್ಡ್, ಇ‍‍ಬಿಡಿ ಹೊಂದಿರುವ ಎ‍‍ಬಿ‍ಎಸ್, ಎಲ್ಲಾ ನಾಲ್ಕು ವ್ಹೀಲ್‍‍ಗಳಲ್ಲಿ ಡಿಸ್ಕ್ ಬ್ರೇಕ್, ರೇರ್ ಪಾರ್ಕಿಂಗ್ ಸೆನ್ಸಾರ್, ರೇರ್ ಡಿಫಾಗರ್, ಸೀಟುಗಳಿಗಾಗಿ ಐಸೊಫಿಕ್ಸ್ ಹುಕ್‍‍ಗಳಿವೆ.

ಶೋರೂಂ ದರಕ್ಕಿಂತಲೂ ದುಬಾರಿ ಈ ಕಾರಿನ ಬೆಲೆ..!

ಜೊತೆಗೆ ಸ್ಪೀಡ್ ಸೆನ್ಸಿಂಗ್ ಆಟೋಮ್ಯಾಟಿಕ್ ಡೋರ್ ಲಾಕ್, ರೇರ್ ಪಾರ್ಕಿಂಗ್ ಕ್ಯಾಮೆರಾ, ಫ್ರಂಟ್ ಪಾರ್ಕಿಂಗ್ ಸೆನ್ಸಾರ್, ಕಾರ್ನರಿಂಗ್ ಫಾಗ್ ಲ್ಯಾಂಪ್ಸ್, ಎಲ್‍ಇ‍‍ಡಿ ಟೇಲ್ ಲ್ಯಾಂಪ್, ಎಲ್‍ಇ‍‍ಡಿ ರೇರ್ ಫಾಗ್ ಲ್ಯಾಂಪ್ ಹಾಗೂ ಸಿಲ್ವರ್ ಅಲಾಯ್ ವ್ಹೀಲ್‍‍ಗಳಿವೆ. ಇದರ ಜೊತೆಗೆ ಆಂಡ್ರಾಯಿಡ್ ಆಟೋ ಹಾಗೂ ಆಪಲ್ ಕಾರ್‍‍ಪ್ಲೇ ಹೊಂದಿರುವ 10.4 ಇಂಚಿನ ಇನ್ಫೋಟೇನ್‍‍ಮೆಂಟ್ ಸಿಸ್ಟಂಗಳಿವೆ.

Source: Droom

Most Read Articles

Kannada
English summary
Used MG Hector selling for a massive 5 lakh profit - Read in kannada
Story first published: Thursday, September 12, 2019, 18:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X