ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಹೊಸ ವಾಹನ ಖರೀದಿಸಿದ ನಂತರ ಆ ವಾಹನದ ಲುಕ್ ಅನ್ನು ಹೆಚ್ಚಿಸಲು ಅಥವಾ ಶೋಕಿಗಾಗಿ ಮಾಡಿಫೈ ಮಾಡಿಸಿಕೊಂಡು ಮೆರೆದಾಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದಕ್ಕೆ ಉದಾಹರಣೆ ಎಂದರೆ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳಲ್ಲಿ ಮಾಡಿಫೈಡ್ ಸೈಲೆನ್ಸರ್‍‍ಗಳನ್ನು ಅಳವಡಿಸುವುದು ಮತ್ತು ಕಾರಿಗೆ ಹೆಚ್ಚಿನ ಗಾತ್ರದ ಟೈರ್‍‍ಗಳನ್ನು ಅಳವಡಿಸಿಕೊಳ್ಳುವುದು. ಆದರೆ ಇನ್ಮುಂದೆ ಹಾಗೆ ಮಾಡುವ ಮುನ್ನ ಈ ಲೇಖನವನ್ನು ಓದಿರಿ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ದೇಶಾದ್ಯಂತ ಮಾಡಿಫೈಡ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು, ವಾಹನ ಮಾಲೀಕರು ಹೆಚ್ಚು ಹಣ ನೀಡಿ ತಮಗಿಷ್ಟವಾಗುವ ಹಾಗೆ ಮಾಡಿಫೈ ಮಾಡಿಸಿಕೊಳ್ಳುತ್ತಿದ್ದಾರೆ. ಈಗಾಗಲೆ ಬೈಕ್‍ಗಳಲ್ಲಿ ಕರ್ಕಶ ಶಬ್ದ ಉಂಟು ಮಾಡುವ ಸೈಲೆನ್ಸರ್‍‍ಗಳನ್ನು ಅಳವಡಿಸಿ ಮಾಲಿನ್ಯ ಮತ್ತು ಜನರಿಗೆ ಕಿರಿಕಿರಿ ಉಂಟು ಮಾಡುತ್ತಿರುವ ಚಾಲಕರನ್ನು ಹಿಡಿಯಲು ಪ್ರಮುಖ ನಗರಗಳಲ್ಲಿನ ಪೊಲೀಸರು ಮುಂದಾಗಿದ್ದಾರೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಇದೀಗ ಸುಪ್ರೀಂಕೋರ್ಟ್ ವಾಹನಗಳ ಮಾಡಿಫಿಕೇಷನ್ ಬಗ್ಗೆ ಒಂದು ಹೊಸ ಆದೇಶವನ್ನು ಬಹಿರಂಗಪಡಿಸಿದೆ. ಅದೇನೆಂದರೆ ವಾಹನ ಉತ್ಪಾದಕರು ತಮ್ಮ ವಾಹನಗಳಿಗೆ ನೋಂದಣಿಯ ಅನುಸಾರ ಯಾವ ಉಪಕರಣಗಳನ್ನು ಅಳವಡಿಸಿರುತ್ತಾರೊ, ಅವುಗಳನ್ನು ಬದಲಾಯಿಸುವಂತಿಲ್ಲ ಎಂಬ ಆದೇಶವನ್ನು ನೀಡಲಾಗಿದೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಸುಪ್ರೀಂಕೋರ್ಟ್ ಮೋಟಾರು ವಾಹನಗಳ ಕಾಯಿದೆಯನ್ನು ತಿದ್ದುಪಡಿ ಮಾಡಲಾಗಿದ್ದು, ರಿಜಿಸ್ಟ್ರೇಷನ್ ಪ್ರಮಾಣಪತ್ರದಲ್ಲಿ ಯಾವ ಯಾವ ಉಪಕರಣಗಳನ್ನು ಉಲ್ಲೇಖಿಸಲಾಗಿದೆಯೊ ಅವುಗಳನ್ನು ಬದಲಾಯಿಸುವಂತಿಲ್ಲ ಎಂಬುದು ಇದರ ಮೂಲದ ಉದ್ದೇಶವಾಗಿರುತ್ತದೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ವಾಹನ ತಯಾರಕರು ತಮ್ಮ ವಾಹನಗಳಲ್ಲಿ ಮಾಡಿದ ಮೂಲ ವಿವರಣೆಯನ್ನು ಬದಲಿಸುವಂತಿಲ್ಲ. ಉದಾಹರಣೆಗೆ ನೋಂದಣಿ ಪ್ರಮಾಣಪತ್ರದ ಪ್ರವೇಶಕ್ಕಾಗಿ ತಯಾರಕರು ನಿರ್ದಿಷ್ಟಪಡಿಸಿದ ಇಂತಹ ವಿವರಗಳನ್ನು ಬದಲಾಯಿಸಬಾರದು" ಎಂದು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ ಮತ್ತು ವಿನೀತ್ ಸರನ್ ಅವರ ಪೀಠ ತಿಳಿಸಿದೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಆಕ್ಟ್ ನಿಬಂಧನೆಗಳ ಪ್ರಕಾರ, 'ಮಾರ್ಪಾಡು' ಎನ್ನುವುದು ವಾಹನದ ರಚನೆಯಲ್ಲಿನ ಬದಲಾವಣೆಯನ್ನು ಅರ್ಥೈಸುತ್ತದೆ ಮತ್ತು ಅದು ಮೂಲಭೂತ ವೈಶಿಷ್ಟ್ಯದಲ್ಲಿ ಬದಲಾವಣೆಯನ್ನು ಉಂಟುಮಾಡುತ್ತದೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಕೇರಳದ ಮೋಟಾರು ವಾಹನ ನಿಯಮಗಳ ನಿಬಂಧನೆಗಳ ಪ್ರಕಾರ ರಚನಾತ್ಮಕ ಬದಲಾವಣೆಯನ್ನು ಅನುಮತಿಸಲಾಗಿದೆಯೆಂದು ಕೇರಳ ಹೈಕೋರ್ಟ್ ಡಿವಿಷನ್ ಪೀಠದ ತೀರ್ಪನ್ನು ಉನ್ನತ ನ್ಯಾಯಾಲಯವು ಮೀಸಲಿಟ್ಟಿದೆ ಎನ್ನಲಾಗಿದ್ದು, ಆದುದರಿಂದ ಕೇರಳ ರಾಜ್ಯದಲ್ಲಿ ನೀವು ಹಲವಾರು ಮಾಡಿಫೈಡ್ ವಾಹನಗಳನ್ನು ಕಾಣಬಹುದಾಗಿದೆ.

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಮೋಟಾರ್ ವಾಹನ ಕಾಯಿದೆಗೆ ಸಂಬಂಧಿಸಿದಂತೆ ತಿದ್ದುಪಡಿಯನ್ನು ಉಲ್ಲೇಖಿಸಿರುವ ಸುಪ್ರೀಂಕೋರ್ಟ್, "ವಾಹನಗಳ ಬದಲಾವಣೆಯನ್ನು ಹೆಚ್ಚಿನ ಸಾಮರ್ಥ್ಯದ ಟೈರ್ಗಳ ಬದಲಾವಣೆ, ರಸ್ತೆ ಸುರಕ್ಷತೆ ಮತ್ತು ಪರಿಸರದ ರಕ್ಷಣೆ ಸೇರಿದಂತೆ ಯಾವುದೇ ರೀತಿಯ ಬದಲಾವಣೆಗಳನ್ನು ನಿಷೇಧಿಸುವ ಉದ್ದೇಶದಿಂದ ತಿದ್ದುಪಡಿ ಮಾಡಲಾಗಿದೆ".

ವಾಹನ ಮಾಲೀಕರೇ ಗಮನಿಸಿ - ನಿಮ್ಮ ವಾಹನವನ್ನ ಮಾಡಿಫೈ ಮಾಡಿಸುವ ಮುನ್ನ ಎಚ್ಚರ..!

ಬೇರೆ ರಾಜ್ಯಗಳಲ್ಲಿ ನೀವು ಕಡಿಮೆ ಪ್ರಮಾಣದ ಮಾಡಿಫೈಡ್ ವಾಹಗಳನ್ನು ಕಾಣಬಹುದಾಗಿದ್ದು, ಕೇರಳಾದಲ್ಲಿ ಮಾತ್ರ ಅಧಿಕ ಸಂಖ್ಯೆಯಲ್ಲಿ ಮಾಡಿಫೈಡ್ ವಾಹನಗಳನ್ನು ಕಾಣಬಹುದಾಗಿದೆ.

Most Read Articles

Kannada
English summary
Vehicle can't be altered to change original specification: Supreme Court. Read In Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X