ವಿರಾಟ್ ಕೊಹ್ಲಿ ನೆಚ್ಚಿನ ಕಾರ್ ಖರೀದಿಸಲು ಇಲ್ಲಿದೆ ಸುವರ್ಣಾವಕಾಶ..

ಸೆಲೆಬ್ರಿಟಿಗಳು ಬಳಿಸಿದ ವಸ್ತುಗಳಿಗೆ ಸಖತ್ ಡಿಮ್ಯಾಂಡ್ ಇರುತ್ತದೆ. ಸಿನಿಮಾ ಸೆಲೆಬ್ರಿಟಿಗಳು ಅಥವಾ ಕ್ರಿಡಾ ಪಟುಗಳು ಬಳಸಿದ ವಸ್ತುಗಳನ್ನು ಹರಾಜು ಅಥವಾ ಮಾರಾಟ ಮಾಡಲಾಗುತ್ತದೆ ಎಂದಾಗ ಅಭಿಮಾನಿಗಳು ಮುಗಿಬೀಳುತ್ತಾರೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅವರ ಕಾರ್ ಅನ್ನು ಖರೀದಿಸುವ ಸುವರ್ಣ ಅವಕಾಶವನ್ನು ನೀಡಿದ್ದಾರೆ. ವಿರಾಟ್ ಕೊಹ್ಲಿ ಅವರು ಬಳಿಸಿದ ಆಡಿ ಎ8 ಎಲ್ ಕಾರ್ ಅನ್ನು ಮಾರಾಟ ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿ ಅವರು ಭಾರತದ ಆಡಿ ಬ್ರ್ಯಾಂಡ್‍‍ನ ಅಂಬಾಸಿಡರ್ ಆಗಿದ್ದಾರೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ವಿರಾಟ್ ಕೊಹ್ಲಿ ಅವರ ಬಳಿ ಹಲವಾರು ದುಬಾರಿ ಮತ್ತು ಐಷಾರಾಮಿ ಕಾರುಗಳಿವೆ, ಇದರಲ್ಲಿ ಆಡಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಜರ್ಮನ್ ಬ್ರ್ಯಾಂಡ್ ಆಡಿಯನ್ನು ಭಾರತದಲ್ಲಿ ಜನಪ್ರಿಯಗೊಳಿಸುವಲ್ಲಿ ಇವರ ಕೊಡುಗೆ ಅಪಾರ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಇದೇ ಕಾರಣದಿಂದ ಆಡಿ ಕಂಪನಿಯು ವಿರಾಟ್ ಕೊಹ್ಲಿ ಅವರಿಗೆ ಉಡುಗೊರೆಯಾಗಿ ಆಡಿ ಕಾರುಗಳನ್ನು ನೀಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ತಮ್ಮ ಆಡಿ ಎ8 ಎಲ್ ಡಬ್ಲ್ಯು ಕಾರ್ ಅನ್ನು ಮಾರಾಟ ಮಾಡುತ್ತಿದ್ದಾರೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಈ ಕಾರ್ ಅನ್ನು ರೂ.75 ಲಕ್ಷಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದು ಹೆಚ್ಚು ದುಬಾರಿ ಎಂದು ಅನಿಸಿದರೂ, ಈ ಕಾರು ಡಬ್ಲ್ಯು 12 ಎಂಜಿನ್‍ ಅನ್ನು ಹೊಂದಿದೆ. ಈ ಕಾರು ಅತ್ಯಂತ ಹೆಚ್ಚು ಪವರ್‍‍‍ಫುಲ್ ಆವೃತ್ತಿಯಾಗಿದೆ. ಈ ಕಾರ್ ಅನ್ನು 2015ರಲ್ಲಿ ಉತ್ಪಾದಿಸಲಾಗಿದೆ ಮತ್ತು ಹರಿಯಾಣದಲ್ಲಿ ನೋಂದಾಯಿಸಲಾಗಿದೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಆಡಿ ಎ8 ಎಲ್ ಡಬ್ಲ್ಯು12 ಕಾರು ಸದ್ಯ ಹರಿಯಾಣದಲ್ಲಿದೆ. ಮೂರು ವರ್ಷಗಳಲ್ಲಿ ಈ ಕಾರು ಕೇವಲ 8 ಸಾವಿರ ಕಿ.ಮೀ ಚಲಿಸಿದೆ. ಈ ಕಾರಿನ ಮಾಲಿಕತ್ವವನ್ನು ವಿರಾಟ್ ಕೊಹ್ಲಿ ಅವರು ಹೊಂದಿದ್ದಾರೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಈ ಕಾರು ಉತ್ತಮ ಸ್ಥಿತಿಯನ್ನು ಹೊಂದಿರುವಂತೆ ಕಾಣುತ್ತದೆ. ಈ ಕಾರ್ ಅನ್ನು ಹೆಚ್ಚು ಬಳಸದ ಕಾರಣ ಶೋರೂಂನಲ್ಲಿರುವ ಹೊಸ ಕಾರಿನ ರೀತಿ ಕಾಣುತ್ತಿದೆ. ಕಾರಿನ ಬಾಡಿಯಲ್ಲಿ ಯಾವುದೇ ಸ್ಕ್ರಾಚ್ ಅಥವಾ ಲೈನ್‍‍ಗಳು ಇಲ್ಲ.

MOST READ: ಪ್ರತಿ ಲೀಟರ್ ನೀರಿಗೆ 35 ಕಿ.ಮಿ ಮೈಲೇಜ್ ನೀಡುವ ಕಾರ್ ಎಂಜಿನ್ ಸಿದ್ದಪಡಿಸಿದ 21 ವರ್ಷದ ಯುವಕ

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ವಿರಾಟ್ ಕೊಹ್ಲಿ ಅವರೇ ಈ ಕಾರ್ ಅನ್ನು ಹಲವು ಬಾರಿ ಡ್ರೈವ್ ಮಾಡಿದ್ದಾರೆ. ದೆಹಲಿಯಲ್ಲಿ ಹಲವು ಬಾರಿ ಕಿಕ್ರೆಟ್ ಪ್ರಾಕ್ಟಿಸ್‍‍ಗೆ ತೆರಳುವಾಗ ಈ ಕಾರ್ ಅನ್ನು ಬಳಸುತ್ತಿದ್ದರು. ಈ ಕಾರು ಆಡಿ ಎ8 ಕಾರಿನ ಅತ್ಯಂತ ಪವರ್‍‍‍ಫುಲ್ ಆವೃತ್ತಿಯಾಗಿದೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಈ ಕಾರು 6.3 ಲೀಟರ್ ಡಬ್ಲ್ಯು 12 ಲಾಂಗಿಟ್ಯೂಡಿನಲ್ ಎಂಜಿನ್‌ ಅನ್ನು ಹೊಂದಿದೆ. ಇದು 12-ಸಿಲಿಂಡರ್ ಎಂಜಿನ್ ಆಗಿದ್ದು ಅದನ್ನು ಡಬ್ಲ್ಯೂ-ಓರಿಯಂಟೇಶನ್‌ನಲ್ಲಿ ಇರಿಸಲಾಗಿದೆ. ಈ ಎಂಜಿನ್ 6,200 ಆರ್‍‍ಪಿಎಂನಲ್ಲಿ 500 ಬಿ‍‍ಹೆಚ್‍‍ಪಿ ಪವರ್ ಮತ್ತು 4,750 ಆರ್‍‍‍ಪಿಎಂನಲ್ಲಿ 625 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

MOST READ: ನವೆಂಬರ್ ತಿಂಗಳಲ್ಲಿ ಮಾರಾಟವಾದ ರಾಯಲ್ ಎನ್‍‍ಫೀಲ್ಡ್ ಬೈಕ್‍‍ಗಳೆಷ್ಟು ಗೊತ್ತಾ?

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಈ ಕಾರಿನ ಇಂಟಿರಿಯರ್‍ ಬೊಲೊಗ್ನಾ ಬ್ರೌನ್ ಬಣ್ಣವನ್ನು ಹೊಂದಿದೆ. ಕಾರಿನ ಇಂಟಿರಿಯರ್ ಕೂಡ ಹೊಸ ಕಾರಿನ ಇಂಟಿರಿಯರ್ ಮಾದರಿಯಲ್ಲಿದೆ. ಈ ಕಾರಿನ ಬೆಲೆಯು ರೂ.75 ಲಕ್ಷಗಳಾಗಿದೆ. ಜೊತೆಗೆ ಶೇ.1ರಷ್ಟು ವರ್ಗಾವಣೆ ಪ್ರಮಾಣಪತ್ರ ಶುಲ್ಕ, ನೋಂದಣಿ ವರ್ಗಾವಣೆ ಶುಲ್ಕಗಳು ಮತ್ತು ಸಾರಿಗೆ ಶುಲ್ಕವೂ ಕೂಡ ಇದೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ಆಡಿ ಎ8 ಎಲ್ ಡಬ್ಲ್ಯು12 ಕಾರಿನ ಬೆಲೆಯು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.2.4 ಕೋಟಿಗಳಾಗಿದೆ. ವಿರಾಟ್ ಕೊಹ್ಲಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಕ್ರಿಕೆಟ್ ಆಟಗಾರರಲ್ಲಿ ಒಬ್ಬರು. ಅಲ್ಲದೇ ಟೀಂ ಇಂಡಿಯಾ ನಾಯಕನಾದ ವಿರಾಟ್ ಕೊಹ್ಲಿ ಅವರ ಕಾರ್ ಅನ್ನು ಯಾರು ಖರೀದಿಸುತ್ತಾರೆ ಎಂಬುದು ಕೂತುಹಲ ಮೂಡಿಸಿದೆ.

ವಿರಾಟ್ ಕೊಹ್ಲಿ ಕಾರ್ ಅನ್ನು ಖರೀದಿಸಲು ಸುವರ್ಣ ಅವಕಾಶ

ರನ್ ಮಿಷಿನ್ ವಿರಾಟ್ ಕೊಹ್ಲಿ ಅವರು ಕ್ರಿಕೆಟ್ ಇತಿಹಾಸದಲ್ಲಿ ಹಲವಾರು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ ಅಭಿಮಾನಿಗಳಿಗೆ ಅವರು ಬಳಿಸಿದ ಕಾರ್ ಅನ್ನು ಖರೀದಿಸುವ ಒಂದು ಸುವರ್ಣ ಅವಕಾಶವಾಗಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಬೆಲೆಯ ಕೊಹ್ಲಿ ಒಡೆತನದ ಕಾರು

ಹೌದು, ವಿರಾಟ್ ಕೊಹ್ಲಿ ಮೊದಲೇ ಆಡಿ ಇಂಡಿಯಾ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಅವರ ಬಳಿ ಆಡಿ ಉತ್ಪಾದನೆಯ ಬಹುತೇಕ ಕಾರುಗಳ ಸಂಗ್ರಹವೇ ಇದ್ದು, 2015ರಲ್ಲಿ ಬರೋಬ್ಬರಿ ರೂ. 3 ಕೋಟಿ ಮೌಲ್ಯದ ಆರ್8 ವಿ10 ಮಾದರಿಯನ್ನು ತಮ್ಮ ಕಾರ್ ಕಲೆಕ್ಷನ್‌ನಲ್ಲಿ ಸೇರ್ಪಡೆಗೊಳಿಸಿದ್ದರು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಆದ್ರೆ ನಕಲಿ ಕಾರ್ ಸೆಂಟರ್ ಮೂಲಕ ಬಹುಕೋಟಿ ವಂಚನೆ ಮಾಡುತ್ತಿದ್ದ ಸಾಗರ್ ಥಕ್ಕರ್ ಎಂಬಾತ ಕೊಹ್ಲಿ ಯಾಮಾರಿಸಿ ರೂ.3 ಕೋಟಿ ಕಾರನ್ನು ಕೇವಲ ರೂ.60 ಲಕ್ಷಕ್ಕೆ ಖರೀದಿಸಿದ್ದ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಮುಂಬೈ ಮೂಲದ ಉದ್ಯಮಿಯಾಗಿರುವ ಸಾಗರ್ ಥಕ್ಕರ್ ಕೊಹ್ಲಿಗೆ ಯಾಮಾರಿಸಿದ್ದಲ್ಲದೇ ದುಬಾರಿ ಕಾರನ್ನು ತನ್ನ ಪ್ರೇಯಿಸಿಗೆ ಗಿಫ್ಟ್ ಆಗಿ ನೀಡಿದ್ದ. ಆದ್ರೆ ಸಾಗರ್ ನಡೆಸುತ್ತಿದ್ದ ನಕಲಿ ಕಾಲ್ ಸೆಂಟರ್ ಕಳ್ಳಾಟ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾದವನು ಇದುವರೆಗೂ ಪತ್ತೆಯಾಗಿಲ್ಲ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಹೀಗಾಗಿ ಥಾಣೆ ಪೊಲೀಸರು ಸದ್ಯಕ್ಕೆ ಸಾಗರ್ ಥಕ್ಕರ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸಾಗರ್ ಪ್ರೇಯಿಸಿಗೆ ಕೊಹ್ಲಿಯಿಂದ ದುಬಾರಿ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದು ಪತ್ತೆಯಾಗಿತ್ತು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಪ್ರಕರಣದ ವಿಚಾರಣೆ ಸಂಬಂಧ ಆಡಿ ಆರ್8 ವಿ10 ಐಷಾರಾಮಿ ಕಾರನ್ನು ವಶಕ್ಕೆ ಪಡೆದಿರುವ ಥಾಣೆ ಪೊಲೀಸರು ನಕಲಿ ಕಾರ್ ಸೆಂಟರ್ ವಂಚನೆ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕುತ್ತಿದ್ದಾರೆ. ಆದ್ರೆ ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಕೊಹ್ಲಿಯವರು ಕಾರು ಮಾರಾಟ ಮಾಡಿದ್ದರು ಕೂಡಾ ಕಾರಿನ ನೋಂದಣಿಯನ್ನು ಸಾಗರ್ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಇದರಿಂದ ಆಡಿ ಕಾರು ಇದುವರೆಗೂ ಕೊಹ್ಲಿ ಹೆಸರಿನಲ್ಲೇ ಇದ್ದು, ಸಾಗರ್ ಮಾಡಿರುವ ಮೋಸದ ವ್ಯವಹಾರದಲ್ಲಿ ಕೊಹ್ಲಿ ಕೂಡಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ರೂ. 3 ಕೋಟಿ ಮೌಲ್ಯದ ಕಾರು ಅನಾಥವಾಗಿ ಥಾಣೆ ಪೊಲೀಸ್ ಠಾಣೆಯ ಎದರು ತುಕ್ಕುಹಿಡಿಯುತ್ತಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಕಳೆದ 2 ವರ್ಷಗಳ ಹಿಂದಷ್ಟೇ ಇದೇ ಕಾರಿನ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಕೊಹ್ಲಿ ಮುಂಬೈ, ದೆಹಲಿ ಸೇರಿದಂತೆ ಹೋದ ಕಡೆಗೆಲ್ಲಾ ಇದೇ ಕಾರಿನಲ್ಲಿ ಜಾಲಿ ರೈಡ್ ಮಾಡಿ ಕಾರು ಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದರು. ಆದ್ರೆ ಅದೇ ಕಾರು ಇದೀಗ ಗುಜುರಿಗೆ ಸೇರುವ ಪರಿಸ್ಥಿತಿ ಬಂದಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಆಡಿ ಆರ್8 ಭಾರತದಲ್ಲಿ ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿಯಾದ 5.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 602-ಬಿಎಚ್‌ಪಿ ಮತ್ತು 560ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಆಡಿ ಆರ್8 ವಿ10 ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 317 ಕೀ.ಮೀ. ವೇಗದಲ್ಲಿ ಚಲಿಸಬಲ್ಲದು.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಆಡಿ ಆರ್8 ವಿ10 ಆವೃತ್ತಿಯ ಬೆಂಗಳೂರು ಆನ್ ರೋಡ್ ಬೆಲೆಯು ಬರೋಬ್ಬರಿ ರೂ.3.33 ಕೋಟಿ ರುಪಾಯಿಗಳಾಗಿದ್ದು, ಮುಂಭಾಗದಲ್ಲಿ ಪರಿಷ್ಕೃತ ಆಕ್ರಮಣಕಾರಿ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ ಹಾಗೂ ಸಂಸ್ಥೆಯ ವಿಶಿಷ್ಟ ಲೇಸರ್ ಲೈಟ್ ತಂತ್ರಜ್ಞಾನಗಳು ಈ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಇದಲ್ಲದೇ ಕ್ವಾಟ್ರೊ ಆಲ್ ವೀಲ್ ಚಾಲನಾ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನೆಯಾಗುವುದಲ್ಲದೇ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಹಿಂಭಾಗದ ವಿನ್ಯಾಸದಲ್ಲೂ ಕ್ರೀಡಾ ಕಾರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಏರೋಡೈನಾಮಿಕ್ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್ ಪಡೆದುಕೊಂಡಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ಈ ಮೂಲಕ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಎಸ್, ಪೋರ್ಷೆ 911 ಟರ್ಬೊ ಹಾಗೂ ನಿಸ್ಸಾನ್ ಜಿಟಿಆರ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸೂಪರ್ ಕಾರು ಮಾದರಿಯಾಗಿದ್ದು, ರೇಸ್ ಟ್ರ್ಯಾಕ್‌ನಲ್ಲಿ ಈ ಕಾರಿಗೆ ತನ್ನದೇ ಆದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

ವಿರಾಟ್ ಕೊಹ್ಲಿ ಬಳಿ ಆಡಿ ಆರ್8 ಹೊರತಾಗಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ, ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿ, ಆಡಿ ಆರ್8 ವಿ10 ಹಾಗೂ ಆಡಿ ಕ್ಯೂ7 ಕಾರುಗಳ ಒಡೆಯರಾಗಿದ್ದು, ಈ ಪೈಕಿ ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿಯು ಎಲ್ ಇಡಿ ಹಾಗೂ ಲೇಸರ್ ಹೈ ಬೀಮ್ ಲೈಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570-ಬಿಎಚ್‌ಪಿ ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ.

Most Read Articles

Kannada
English summary
Virat Kohli’s Audi A8L for sale - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X