ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಭಾರತದಲ್ಲಿ ವಿಟಾರಾ ಬ್ರಿಝಾ ಎಸ್‍‍ಯುವಿಯನ್ನು ಹೊಂದಿರುವವರು ಜೀಪ್ ಕಂಪಾಸ್ ಅನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ, ತಮ್ಮ ಕಾರಿನಲ್ಲಿರುವ ಗ್ರಿಲ್ ಅನ್ನು ಬದಲಿಸಿ ಜೀಪ್ ಕಂಪಾಸ್‍‍ನಲ್ಲಿರುವಂತಹ ಗ್ರಿಲ್ ಅನ್ನು ಅಳವಡಿಸಿಕೊಳ್ಳುವುದೇ ಸಾಕ್ಷಿಯಾಗಿದೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಇಂತಹ ನೂರಾರು ಬ್ರಿಝಾ ವಾಹನಗಳು ರಸ್ತೆಯಲ್ಲಿ ಕಾಣ ಸಿಗುತ್ತವೆ. ಜೀಪ್ ಕಂಪಾಸ್‍‍ನ ಗ್ರಿಲ್ ಮೇಲೆ ಮಾತ್ರವಲ್ಲದೇ ಬೇರೆ ವಾಹನಗಳ ಗ್ರಿಲ್ ಮೇಲೂ ವಿಟಾರಾ ಬ್ರಿಝಾ ಮಾಲೀಕರ ಕಣ್ಣು ಬಿದ್ದಿದೆ. ಮತ್ತೊಂದು ದಿಗ್ಗಜ ಕಂಪನಿಯಾದ ಲ್ಯಾಂಡ್ ರೋವರ್ ಕಾರಿನಲ್ಲಿರುವಂತಹ ಗ್ರಿಲ್ ಅನ್ನು ಹೊಂದಬೇಕೆಂದು ಬ್ರಿಝಾ ಕಾರಿನ ಮಾಲೀಕರು ಬಯಸುವುದುಂಟು. ಇದಕ್ಕೆ ಸಾಕ್ಷಿ ಈ ಚಿತ್ರದಲ್ಲಿದೆ. ಈ ಚಿತ್ರದಲ್ಲಿರುವ ವಿಟಾರಾ ಬ್ರಿಝಾ ಕಾರಿಗೆ ಲ್ಯಾಂಡ್ ರೋವರ್‍‍ನಲ್ಲಿರುವಂತಹ ಹನಿಕೂಂಬ್ ಗ್ರಿಲ್ ಅಳವಡಿಸಲಾಗಿದೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಈ ಹಿಂದೆ ಇದ್ದ ಫ್ರೀಲ್ಯಾಂಡರ್2 ಹಾಗೂ ಡಿಸ್ಕವರಿ ವಾಹನಗಳಲ್ಲಿಯೂ ಇದೇ ರೀತಿಯ ಡಿಸೈನ್ ಹೊಂದಿದ್ದ ಗ್ರಿಲ್ ಅನ್ನು ಕಾಣಬಹುದಾಗಿತ್ತು. ಮಾರುತಿ ಸುಜುಕಿಯ ವಿಟಾರಾ ಬ್ರಿಝಾ ಕಾರು ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಎಸ್‍‍ಯು‍‍ವಿಯಾಗಿದೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಸಬ್ 4 ಮೀಟರ್‍ ಸೆಗ್‍‍ಮೆಂಟಿನ ಹೈ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ ಈ ಎಸ್‍‍ಯು‍‍‍ವಿ ವಾಹನವು, ಡೀಸೆಲ್ ಎಂಜಿನ್‍ ಮಾದರಿಯಲ್ಲಿ ಮಾತ್ರ ಲಭ್ಯವಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಿ, ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಹೊಂದಿರುವ ವಾಹನಗಳಿಗೆ ಪೈಪೋಟಿ ನೀಡುತ್ತಿದೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಬ್ರಿಝಾ ವಾಹನದಲ್ಲಿ 1.3 ಲೀಟರಿನ ಫಿಯೆಟ್ ಮಲ್ಟಿಜೆಟ್ ಟರ್ಬೊಚಾರ್ಜ್‍‍ನ ಡೀಸೆಲ್ ಎಂಜಿನ್‍‍ಯಿದ್ದು 89 ಬಿ‍‍ಹೆಚ್‍‍ಪಿ ಹಾಗೂ 200 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ವಾಹನದಲ್ಲಿ 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುವುದು. ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಸಹ ನೀಡಲಾಗಿದೆ. ಮಾರುತಿ ಸುಜುಕಿ ಕಂಪನಿಯು ಡೀಸೆಲ್ ಆವೃತ್ತಿಯ ಬ್ರಿಝಾ ವಾಹನದ ತಯಾರಿಕೆಯನ್ನು 2020ರಿಂದ ಸ್ಥಗಿತಗೊಳಿಸಲಿದೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಏಪ್ರಿಲ್ 2020ರಿಂದ ಬಿ‍ಎಸ್6 ಮಾಲಿನ್ಯ ನಿಯಮಗಳು ಜಾರಿಗೆ ಬರಲಿವೆ. ಈ ನಿಯಮಗಳು ಈಗಿರುವ ಬಿ‍ಎಸ್4 ನಿಯಮಗಳಿಗಿಂತ ಹೆಚ್ಚು ಕಠಿಣವಾಗಿರಲಿವೆ. ಮಾರುತಿ ಸುಜುಕಿ ಕಂಪನಿಯು ಬ್ರಿಝಾ ವಾಹನಕ್ಕಾಗಿ ಪೆಟ್ರೋಲ್ ಎಂಜಿನ್ ಅನ್ನು ಅಭಿವೃದ್ಧಿಪಡಿಸುತ್ತಿದೆ. ಪೆಟ್ರೋಲ್ ಎಂಜಿನ್ ಮಾದರಿಯ ವಾಹನವನ್ನು ಈ ವರ್ಷದ ಕೊನೆಯ ಭಾಗದಲ್ಲಿ ಬಿಡುಗಡೆಗೊಳಿಸಲಾಗುವುದು.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಪೆಟ್ರೋಲ್ ಆವೃತ್ತಿಯ ಬ್ರಿಝಾದಲ್ಲಿ ಅಳವಡಿಸಲಾಗುವ 1.5 ಲೀಟರಿನ ಕೆ ಸೀರಿಸ್‍‍ನ ಎಂಜಿನ್ ಅನ್ನು, ಅಪ್‍‍ಡೇಟ್ ಮಾಡಲಾದ ಸಿಯಾಜ್ ಕಾರಿನಲ್ಲಿಯೂ ಅಳವಡಿಸಲಾಗಿತ್ತು. ಈ ಎಂಜಿನ್ 104 ಬಿ‍‍ಹೆಚ್‍‍ಪಿ ಹಾಗೂ 138 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍ 5 ಸ್ಪೀಡಿನ ಮ್ಯಾನುಯಲ್ ಗೇರ್‍‍ಬಾಕ್ಸ್ ಹೊಂದಿರಲಿದೆ.

MOST READ: ಭಾರತದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಬುಗಾಟಿ ವೇರಾನ್

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

4 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಎಂಜಿನ್ ಅನ್ನು ಸಿಯಾಜ್ ಹಾಗೂ ಎರ್ಟಿಗಾ ವಾಹನಗಳಲ್ಲಿ ಅಳವಡಿಸಲಾಗಿತ್ತು. ಬ್ರಿಝಾದ ಪೆಟ್ರೋಲ್ ಆವೃತ್ತಿಯಲ್ಲಿ ಈ ಎಂಜಿನ್ ಅನ್ನು ಸಹ ಅಳವಡಿಸುವ ಸಾಧ್ಯತೆಗಳಿವೆ.

MOST READ: ಬಿ‍ಎಸ್6 ಡೀಸೆಲ್ ಎಂಜಿನ್‍‍ನೊಂದಿಗೆ ರಸ್ತೆಗಿಳಿಯಲಿವೆ ಮಹೀಂದ್ರಾ ವಾಹನಗಳು

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಈ ಎಂಜಿನ್ ಅನ್ನು ಲಘು ಹೈಬ್ರಿಡ್ ವಾಹನಗಳಲ್ಲಿ ಅಳವಡಿಸಲಾಗುವುದು. ಈ ಎಂಜಿನ್ ಅನ್ನು ವಿಟಾರಾ ಬ್ರಿಝಾ ಪೆಟ್ರೋಲ್ ವಾಹನದಲ್ಲಿ ಅಳವಡಿಸಿದರೆ, ಈ ಎಂಜಿನ್ ಹೊಂದಿದ ಮೊದಲ ಪೆಟ್ರೋಲ್ ಲಘು ಹೈಬ್ರಿಡ್ ಎಸ್‍‍ಯು‍‍ವಿಯಾಗಲಿದೆ.

MOST READ: ಅನಾವರಣಗೊಂಡ ಡುಕಾಟಿ ಹೈಪರ್‍ ಮೋಟಾರ್ಡ್ 950 ಬೈಕ್ ಪರಿಕಲ್ಪನೆ

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಇತ್ತೀಚಿಗೆ ಬಿಡುಗಡೆಯಾದ ಹ್ಯುಂಡೈನ ವೆನ್ಯೂ ಹಾಗೂ ಮಹೀಂದ್ರಾ ಎಕ್ಸ್ ಯುವಿ 300 ವಾಹನಗಳು ಸಬ್ 4 ಮೀಟರ್ ಕಾಂಪ್ಯಾಕ್ಟ್ ಸೆಗ್‍‍ಮೆಂಟಿನಲ್ಲಿ ಹೆಚ್ಚಿನ ಪೈಪೋಟಿಯನ್ನು ನೀಡುತ್ತಿರುವ ಕಾರಣ ಮಾರುತಿ ಸುಜುಕಿ ಕಂಪನಿಯು, ವಿಟಾರಾ ಬ್ರಿಝಾದಲ್ಲಿ ಇನ್ನೂ ಹೆಚ್ಚಿನ ಹೊಸ ಫೀಚರ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ.

ಲ್ಯಾಂಡ್ ರೋವರ್‍‍ನಂತೆ ಬದಲಾಯ್ತು ಮಾರುತಿ ಬ್ರಿಝಾ

ಮಾರುತಿ ಸುಜುಕಿ ಕಂಪನಿಯು ಲಘು ಹೈಬ್ರಿಡ್ ಅಳವಡಿಸುವುದರ ಜೊತೆಗೆ ಹೊಸ ಆವೃತ್ತಿಯ ಬ್ರಿಝಾವನ್ನು ಹೊಸ ಫೀಚರ್‍‍ಗಳೊಂದಿಗೆ ಬಿಡುಗಡೆ ಮಾಡಲಿದೆಯೇ ಕಾದು ನೋಡಬೇಕಿದೆ.

Image Source: BalajiMG

Most Read Articles

Kannada
English summary
Maruti Brezza wants to be a Land Rover - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X