ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಫೋಕ್ಸ್‌ವ್ಯಾಗನ್ ಕಂಪನಿಯು ಕಟ್ಟ ಕಡೆಯ ಬೀಟಲ್‍ ಕಾರ್ ಅನ್ನು ಉತ್ಪಾದಿಸಿದೆ. ಮೆಕ್ಸಿಕೊದ ಪ್ಯೂಬ್ಲಾದಲ್ಲಿನ ಫೋಕ್ಸ್‌ವ್ಯಾಗನ್ ಉತ್ಪಾದನಾ ಘಟಕದಿಂದ ಹೊರಬಂದ ಬೀಟಲ್ ಕಾರು ಇತಿಹಾಸದ ಪುಟ ಸೇರಿದೆ. ಇದು ಈ ಜನಪ್ರಿಯ ಹ್ಯಾಚ್‌ಬ್ಯಾಕ್‌ ಸರಣಿಯ ಕೊನೆಯ ಕಾರ್ ಆಗಿದೆ. ಈ ಕೊನೆಯ ಕಾರ್ ಅನ್ನು ಪ್ಯೂಬ್ಲಾ ನಗರದಲ್ಲಿರುವ ಮ್ಯೂಸಿಯಂನಲ್ಲಿ ಪ್ರದರ್ಶಿಸಲಾಗುವುದು. ಫೋಕ್ಸ್‌ವ್ಯಾಗನ್‍‍ನ ಬೀಟಲ್ ಪ್ರಪಂಚದ ಅತ್ಯಂತ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

1934ರ ಏಪ್ರಿಲ್‍‍ನಲ್ಲಿ ಅಡಾಲ್ಫ್ ಹಿಟ್ಲರ್ ಜನರಿಗಾಗಿ ಒಂದು ಕಾರನ್ನು ಅಭಿವೃದ್ಧಿಪಡಿಸಲು ಫರ್ಡಿನ್ಯಾಂಡ್ ಪೋರ್ಷೆಗೆ ಆದೇಶಿಸಿದ ನಂತರ ಈ ಕಾರನ್ನು ತಯಾರಿಸಲಾಯಿತು. ಹಿಟ್ಲರ್ ಹೇಳಿದ್ದು ಫೋಕ್ಸ್‌ವ್ಯಾಗನ್‍ ಎಂದು. ಜರ್ಮನ್ ಭಾಷೆಯಲ್ಲಿ ಫೋಕ್ಸ್‌ವ್ಯಾಗನ್‍ ಪದದ ಅರ್ಥವು ಜನರ ಕಾರು ಎಂಬುದಾಗಿದೆ. ಕಾರಿನ ವಿನ್ಯಾಸವನ್ನು ಅಭಿವೃದ್ಧಿಪಡಿಸಿದ ನಂತರ 1938ರ ವೇಳೆಗೆ ಉತ್ಪಾದನೆಯನ್ನು ಶುರು ಮಾಡಲಾಯಿತು.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಕಾರು ಬಿಡುಗಡೆಯ ನಂತರ ಜರ್ಮನಿಯ ಬಹುತೇಕ ಜನರು ಫೋಕ್ಸ್‌ವ್ಯಾಗನ್‍‍‍ನಲ್ಲಿ ಓಡಾಡಲು ಶುರು ಮಾಡಿದರು. ಎರಡನೇಯ ಮಹಾಯುದ್ಧದಲ್ಲಿ ಜರ್ಮನ್ನರು ಫೋಕ್ಸ್‌ವ್ಯಾಗನ್‍ ಬೀಟಲ್‍ ಕಾರುಗಳನ್ನು ಬಳಸುತ್ತಿದ್ದರು. ಯುದ್ಧ ಮುಗಿದ ನಂತರ ಫೋಕ್ಸ್‌ವ್ಯಾಗನ್‍ ಕಂಪನಿಯು, ಬೀಟಲ್ ಕಾರುಗಳನ್ನು ವಿದೇಶಕ್ಕೆ ರವಾನಿಸಿತು. ಪ್ರಪಂಚದಾದ್ಯಂತ ಜನರು ಈ ಸಣ್ಣ ಹ್ಯಾಚ್‌ಬ್ಯಾಕ್ ಅನ್ನು ಇಷ್ಟಪಟ್ಟರು. ನಂತರದ ದಿನಗಳಲ್ಲಿ ಬೀಟಲ್ ವಿಶ್ವದಲ್ಲೇ ಹೆಚ್ಚು ಉತ್ಪಾದನೆಯಾಗುವ ಕಾರು ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಇವತ್ತಿನವರೆಗೂ ವಿಶ್ವದ ಅತಿ ಹೆಚ್ಚು ಉತ್ಪಾದನೆಯಾದ ಐದು ಕಾರುಗಳಲ್ಲಿ ಬೀಟಲ್ ಕಾರು ಸಹ ಒಂದಾಗಿದೆ. ಇದುವರೆಗೂ 2.3 ಕೋಟಿಗೂ ಹೆಚ್ಚು ಬೀಟಲ್ ಕಾರುಗಳನ್ನು ಉತ್ಪಾದಿಸಲಾಗಿದೆ. ಹಳೆ ಆವೃತ್ತಿಯ ಹ್ಯಾಚ್‌ಬ್ಯಾಕ್‌ ಕಾರುಗಳು ಹೊಸ, ಆಧುನಿಕ ಕಾರುಗಳಿಗೆ ದಾರಿ ಮಾಡಿಕೊಟ್ಟವು. ಕಾರಿನ ಮೂಲ ವಿನ್ಯಾಸವು ದಶಕಗಳಷ್ಟು ಹಳೆಯದಾಗಿದೆ. ಆಧುನಿಕ ಆವೃತ್ತಿಯ ಕಾರುಗಳು ಅಷ್ಟಾಗಿ ಮಾರಾಟವಾಗುತ್ತಿಲ್ಲ.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಆಧುನೀಕರಿಸಿದ ಫೋಕ್ಸ್‌ವ್ಯಾಗನ್‍ ಬೀಟಲ್ ಕಾರುಗಳು ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಏರ್‌ಬ್ಯಾಗ್, ಇಬಿಡಿ ಹೊಂದಿರುವ ಎಬಿಎಸ್, ಟ್ರಾಕ್ಷನ್ ಕಂಟ್ರೋಲ್‍‍ಗಳನ್ನು ಹೊಂದಿದ್ದವು. ಈ ಕಾರುಗಳಲ್ಲಿ ಆಧುನಿಕವಾದ, ಹೆಚ್ಚು ಬಲಶಾಲಿಯಾದ ಲಿಕ್ವಿಡ್ ಕೂಲ್ಡ್ ಎಂಜಿನ್‍‍ಗಳನ್ನು ಅಳವಡಿಸಲಾಗಿತ್ತು. ನಿಧಾನವಾಗಿ ಜನರು ಬೀಟಲ್ ಕಾರುಗಳ ಗುಂಗಿನಿಂದ ಹೊರ ಬಂದಿದ್ದಾರೆ. ಎಲೆಕ್ಟ್ರಿಕ್ ವಾಹನಗಳು ಜನಪ್ರಿಯವಾಗುತ್ತಿರುವ ಈ ಸಂದರ್ಭದಲ್ಲಿ ಫೋಕ್ಸ್‌ವ್ಯಾಗನ್‍ ಕಂಪನಿಯು ಬೀಟಲ್ ಕಾರುಗಳ ಉತ್ಪಾದನೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಫೋಕ್ಸ್‌ವ್ಯಾಗನ್‍ ಕಂಪನಿಯು ಅಂತಿಮ ಹಂತದಲ್ಲಿ ಕೇವಲ 5,961 ಬೀಟಲ್ ಕಾರುಗಳನ್ನು ಉತ್ಪಾದಿಸಲಾಗುವುದೆಂದು ಘೋಷಿಸಿತ್ತು. 5,960 ಯುನಿಟ್‌ಗಳು ಈಗಾಗಲೇ ಉತ್ಪಾದನಾ ಘಟಕದಿಂದ ಹೊರಬಂದಿವೆ. ಈಗ ಕೊನೆಯ ಕಾರು ಸಹ ಹೊರಬಂದಿದೆ. ಈ ಹಿನ್ನೆಲೆಯಲ್ಲಿ ಮೆಕ್ಸಿಕೊದ ಪ್ಯೂಬ್ಲಾದಲ್ಲಿ ಜುಲೈ10ರಂದು ಸಮಾರಂಭವೊಂದು ನಡೆದಿದ್ದು, ಕೊನೆಯ ಬೀಟಲ್ ಕಾರ್ ಅನ್ನು ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗುವುದು.

ಫೋಕ್ಸ್‌ವ್ಯಾಗನ್ ಬೀಟಲ್ ಇನ್ನು ನೆನಪು ಮಾತ್ರ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್‌ವ್ಯಾಗನ್‍ ಬೀಟಲ್ ಯಾವುದೇ ದಂತಕಥೆಗೂ ಕಡಿಮೆಯಿಲ್ಲ. ಈ ಕಾರು ಪ್ರಪಂಚದದ್ಯಾಂತ ಹಲವಾರು ಹೆರಿಟೇಜ್ ಕ್ಲಬ್‌ಗಳನ್ನು ಹೊಂದಿದೆ. ಈ ಕ್ಲಬ್‍‍ಗಳಲ್ಲಿರುವ ಹಳೆಯ ಬೀಟಲ್ ಕಾರುಗಳ ಮಾಲೀಕರು ಸಂಭ್ರಮವನ್ನು ಆಚರಿಸುತ್ತಾರೆ. ಫೋಕ್ಸ್‌ವ್ಯಾಗನ್‍ ಬೀಟಲ್ ಕಾರಿಗೆ ಭಾವನಾತ್ಮಕ ವಿದಾಯವನ್ನು ನೀಡಲಾಗಿದೆ. ಈ ಕಾರು ಹೊಂದಿದ್ದ ಬಗ್‌ನ ವಿನ್ಯಾಸವನ್ನು ಬೇರೆ ಯಾವುದೇ ಕಾರು ಹೊಂದಲಾರದು.

Most Read Articles

Kannada
English summary
Volkswagen Beetle Production Ends — All Good Things Come To An End - Read in kannada
Story first published: Thursday, July 11, 2019, 14:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X