ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಫೋಕ್ಸ್ ವ್ಯಾಗನ್ ಸಂಸ್ಥೆಯು ತನ್ನ ಆಯ್ದ ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಿಸಿದೆ. ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಪೋಕ್ಸ್ ವ್ಯಾಗನ್ ಸಂಸ್ಥೆಯು ಬಾರಿ ರಿಯಾಯಿತಿಯನ್ನು ಘೋಷಿಸಿದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಕಳೆದ ಕೆಲವು ತಿಂಗಳಿನಿಂದ ಹೊಸ ಕಾರು ಮಾರಾಟದಲ್ಲಿ ಬಹುತೇಕ ಕಾರು ಉತ್ಪಾದನಾ ಸಂಸ್ಥೆಗಳು ತೀವ್ರ ನಷ್ಟ ಅನುಭವಿಸಿದ್ದು, ಪೋಕ್ಸ್ ವ್ಯಾಗನ್ ಸಂಸ್ಥೆಯು ಸಹ ಭಾರೀ ಹಿನ್ನಡೆ ಅನುಭವಿಸಿದೆ. ಆದರೆ ಕಳೆದ ಎರಡು ತಿಂಗಳು ಹಬ್ಬದ ಪ್ರಯುಕ್ತ ಮಾರಾಟದಲ್ಲಿ ಸುಧಾರಣೆಯನ್ನು ಕಂಡಿತ್ತು. ಇದೀಗ ಮತ್ತೆ ಮಾರಾಟದಲ್ಲಿ ಹಿನ್ನಡೆಯಾಗಿರುವುದರಿಂದ ಆಯ್ದ ಕಾರು ಮಾದರಿಗಳ ಮೇಲೆ ಭರ್ಜರಿ ರಿಯಾಯಿತಿಯನ್ನು ಘೋಷಣೆ ಮಾಡಿದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಪೋಕ್ಸ್ ವ್ಯಾಗನ್ ಕಂಪನಿಯು ತನ್ನ ಸರಣಿಯ ಪೊಲೊ ಹ್ಯಾಚ್‌ಬ್ಯಾಕ್, ಆ್ಯಮಿಯೋ ಕಾಂಪ್ಯಾಕ್ಟ್ ಸೆಡಾನ್, ವೆಂಟೊ ಮಿಡ್ ಸೆಡಾನ್ ಮತ್ತು ಟಿಗುವಾನ್ ಎಸ್‌ಯುವಿ ಮೇಲೆ ರಿಯಾಯಿತಿಯನ್ನು ಘೋಷಿಸಿದೆ. ಈ ಆಯ್ದ ಮಾದರಿಗಳಿಗೆ ಎಷ್ಟು ರಿಯಾಯಿತಿ ಘೋಷಿಸಿದೆ ಎಂಬ ಮಾಹಿತಿ ಇಲ್ಲಿದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಫೋಕ್ಸ್ ವ್ಯಾಗನ್ ವೆಂಟೊ

ಮಿಡ್ ಸೆಡಾನ್ ವೆಂಟೊಗೆ ಬರೊಬ್ಬರಿ ರೂ.2.60 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ. ಡೀಸೆಲ್ ಕಂಫರ್ಟ್‌ಲೈನ್ ಮತ್ತು ಪೆಟ್ರೋಲ್ ಹೈಲೈನ್ ರೂಪಾಂತರಗಳಗೆ ಪ್ರಸ್ತುತ ವಿಶೇಷ ಬೆಲೆ ರೂ.9.99 ಲಕ್ಷ ಬೆಲೆಯನ್ನು ಹೊಂದಿದೆ. ವೆಂಟೊ ಕಾರು ದೇಶಿಯ ಮಾರುಕಟ್ಟೆಯಲ್ಲಿ ಸ್ಕೋಡಾ ರಾಪಿಡ್, ಹ್ಯುಂಡೈ ವೆರ್ನಾ, ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಫೋಕ್ಸ್ ವ್ಯಾಗನ್ ವೆಂಟೊ ಇತ್ತೀಚಿಗೆ ಫೇಸ್‍‍ಲಿಫ್ಟ್ ಅನ್ನು ಬಿಡುಗಡೆಗೊಳಿಸಿತ್ತು. ಇದರೊಂದಿಗೆ ಫೋಕ್ಸ್ ವ್ಯಾಗನ್ ಸ್ಪೋರ್ಟಿ ಕಾಸ್ಮೆಟಿಕ್ ಜಿಟಿ ಲೈನ್ ಮಾದರಿಯನ್ನು ಬಿಡುಗಡೆಗೊಳಿಸಿದೆ. ವೆಂಟೊ ಮಿಡ್ ಸೆಡಾನ್‍‍ನಲ್ಲಿ ಮೂರು ಎಂಜಿನ್‍ ಆಯ್ಕೆಗಳನ್ನು ಹೊಂದಿದೆ. ಇದರಲ್ಲಿ 1.6 ಲೀಟರ್ ಪೆಟ್ರೋಲ್ ಎಂಜಿನ್ 105 ಬಿಹೆಚ್‍ಪಿ ಪವರ್ ಉತ್ಪಾದಿಸುತ್ತದೆ, 1.2 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ 105 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ ಮತ್ತು 1.5 ಲೀಟರ್ ಟರ್ಬೊ ಡೀಸೆಲ್ ಎಂಜಿನ್ 110 ಬಿ‍ಹೆಚ್‍‍ಪಿ ಪವರ್ ಉತ್ಪಾದಿಸುತ್ತದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಫೋಕ್ಸ್ ವ್ಯಾಗನ್ ಟಿಗುವಾನ್

ಜರ್ಮನ್ ಕಾರು ತಯಾರಕರಾದ ಫೋಕ್ಸ್ ವ್ಯಾಗನ್ ತಯಾರಿಸಿದ ಏಕೈಕ ಪ್ರೀಮಿಯಂ ಎಸ್‍‍ಯು‍ವಿ ಟಿಗುವಾನ್ ಆಗಿದೆ. ಇದು ದೂರದ ಪ್ರಯಾಣಕ್ಕೆ ಹೆಚ್ಚು ಉತ್ತಮವಾಗಿದೆ. ಈ ಎಸ್‍ಯುವಿಯು ಆಕರ್ಷಕ ಲುಕ್ ಅನ್ನು ಹೊಂದಿದೆ. ಆದರೆ ಇದರ ಬೆಲೆಯು ತುಸು ಹೆಚ್ಚಿದೆ.

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಟಿಗುವಾನ್ ಎಸ್‍‍‍ಯು‍‍ವಿಯಲ್ಲಿ 2.0 ಲೀಟರಿನ ಟಿ‍ಡಿ‍ಐ ಡೀಸೆಲ್ ಎಂಜಿನ್‍ 143 ಬಿ‍‍ಹೆಚ್‍‍ಪಿ ಪವರ್ ಹಾಗೂ 340 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನೊಂದಿಗೆ 7 ಸ್ಪೀಡಿನ ಡಿ‍ಎಸ್‍‍ಜಿ ಗೇರ್ ಬಾಕ್ಸ್ ಅಳವಡಿಸಲಾಗಿದೆ. ಈ ಕಾರು ಹ್ಯುಂಡೈ ಟಕ್ಸನ್, ಸ್ಕೋಡಾ ಕೊಡಿಯಾಕ್ ಮತ್ತು ಹೋಂಡಾ ಸಿಆರ್-ವಿ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ. ಈ ಕಾರಿಗೆ ಬರೊಬ್ಬರಿ ರೂ.2.50 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದ್ದಾರೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಫೋಕ್ಸ್ ವ್ಯಾಗನ್ ಆ್ಯಮಿಯೋ

ಫೋಕ್ಸ್ ವ್ಯಾಗನ್ ಆ್ಯಮಿಯೋ ದೇಶಿಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಡಿಜೈರ್, ಹ್ಯುಂಡೈ ಎಕ್ಸೆಂಟ್ ಫೋರ್ಡ್ ಆಸ್ಪೈರ್ ಮತ್ತು ಹೋಂಡಾ ಅಮೇಜ್ ಕಾರಿಗೆ ಪೈಪೋಟಿಯನ್ನು ನೀಡುತ್ತಿದೆ. ಈ ಕಾಂಪ್ಯಾಕ್ಟ್ ಸೆಡಾನ್ ಫೋಕ್ಸ್ ವ್ಯಾಗನ್ ಆ್ಯಮಿಯೋ 1.5 ಲೀಟರ್ ಟಿಡಿಐ ಡೀಸೆಲ್ ಎಂಜಿನ್ ಹೊಂದಿದ್ದು, ಇದು 109‍ ಬಿಎಚ್‍ಪಿ ಪವರ್ ಮತ್ತು 250 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಗುಣ ಹೊಂದಿದೆ. ಎಂಜಿನ್‍‍ಗೆ 7-ಸ್ಪೀಡ್ ಆಟೊಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಫೋಕ್ಸ್ ವ್ಯಾಗನ್ ಆ್ಯಮಿಯೋ ಕಾಂಪ್ಯಾಕ್ಟ್ ಸೆಡಾನ್‍‍ಗೆ ರೂ.2.20 ಲಕ್ಷಗಳವರೆಗೆ ರಿಯಾಯಿತಿಯನ್ನು ಘೋಷಿಸಿದೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಪೋಕ್ಸ್ ವ್ಯಾಗನ್ ಪೊಲೊ

ಪೋಕ್ಸ್ ವ್ಯಾಗನ್ ಪೊಲೊ ಎರಡು ಬಗೆಯ ಎಂಜಿನ್ ಆಯ್ಕೆಗಳನ್ನು ಹೊಂದಿದೆ. 1.0 ಲೀಟರಿನ 3 ಸಿಲಿಂಡರ್‍‍ನ ಪೆಟ್ರೋಲ್ ಎಂಜಿನ್, 76 ಬಿ‍‍ಹೆಚ್‍‍ಪಿ ಪವರ್ ಮತ್ತು 153 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಇನ್ನೂ 1.5 ಲೀಟರಿನ 4 ಸಿಲಿಂಡರ್‍‍ನ ಡೀಸೆಲ್ ಎಂಜಿನ್, 90 ಬಿಹೆಚ್‍‍ಪಿ ಪವರ್ ಮತ್ತು 230 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಎರಡು ಎಂಜಿನ್‍‍ನೊಂದಿಗೆ 5 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಪ್ರೀಮಿಯಂ ಹ್ಯಾಚ್‍‍ಬ್ಯಾಕ್‍ಗೆ ರೂ.2.15 ಲಕ್ಷಗಳವರೆಗೆ ಭರ್ಜರಿ ರಿಯಾಯಿತಿಯನ್ನು ಘೋಷಿಸಲಾಗಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಫೋಕ್ಸ್ ವ್ಯಾಗನ್ ಕಾರುಗಳ ಮೇಲೆ ಭರ್ಜರಿ ರಿಯಾಯಿತಿ

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್ ವ್ಯಾಗನ್ ಸಂಸ್ಥೆಯು ತನ್ನ ಮಾರಾಟದಲ್ಲಿ ಕುಸಿತ ಕಂಡಿರುವುದರಿಂದ ಮಾರಾಟವನ್ನು ಹೆಚ್ಚಿಸಲು ಪೋಕ್ಸ್ ವ್ಯಾಗನ್ ಸಂಸ್ಥೆಯು ಆಯ್ದ ಕಾರು ಮಾದರಿಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸಿದೆ. ಈ ರಿಯಾಯಿತಿಗಳು ನಗರಗಳಿಗೆ ಅನುಗುಣವಾಗಿ ಬದಲಾಗುತ್ತವೆ.

Most Read Articles

Kannada
English summary
Discounts of up to Rs 2.60 lakh on Volkswagen Vento, Tiguan, Ameo, Polo - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X