ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಇಂಡಿಯಾ, ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ. ಈ ಯೋಜನೆಯ ಭಾಗವಾಗಿ ನಾಲ್ಕು ಹೊಸ ಎಸ್‍‍ಯು‍‍ವಿಗಳನ್ನು ಬಿಡುಗಡೆಗೊಳಿಸುತ್ತಿದೆ. ಫೋಕ್ಸ್‌ವ್ಯಾಗನ್‍‍ನ ಪೊಲೊ ಕಾರು ಹ್ಯಾಚ್‍‍ಬ್ಯಾಕ್ ಸೆಗ್‍‍ಮೆಂಟಿನಲ್ಲಿರುವ ಜನಪ್ರಿಯ ಕಾರುಗಳಲ್ಲಿ ಒಂದಾಗಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್‍, ಸದ್ಯಕ್ಕೆ ದೇಶಿಯ ಮಾರುಕಟ್ಟೆಯಲ್ಲಿ ಟಿಗ್ವಾನ್ ಎಸ್‍‍ಯು‍‍ವಿಗಳನ್ನು ಮಾರಾಟ ಮಾಡುತ್ತಿದೆ. ಫೋಕ್ಸ್‌ವ್ಯಾಗನ್ ಕಂಪನಿಯು, ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಹತ್ತು ಎಸ್‍‍ಯು‍‍ವಿಗಳನ್ನು ಮಾರಾಟ ಮಾಡುತ್ತಿದೆ. ಖರೀದಿದಾರರ ಅಗತ್ಯಕ್ಕೆ ಹಾಗೂ ಆದ್ಯತೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿರುವುದರಿಂದ ಫೋಕ್ಸ್‌ವ್ಯಾಗನ್ ಎಸ್‍‍ಯು‍‍ವಿ ಕಾರುಗಳು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿವೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಎಸ್‍‍ಯು‍‍ವಿಗಳಿಂದಾಗಿ ಹೆಚ್ಚಿನ ಪ್ರಮಾಣದ ಆದಾಯವನ್ನು ಪಡೆಯುತ್ತಿದೆ. ಜರ್ಮನಿ ಮೂಲದ ಈ ಕಾರು ತಯಾರಕ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿಯೂ ಈ ಯೋಜನೆಯು ಯಶಸ್ವಿಯಾಗಲಿದೆ ಎಂದು ನಂಬಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಫೋಕ್ಸ್‌ವ್ಯಾಗನ್ ಕಂಪನಿಯು, ಈಗಾಗಲೇ ಚಾಲ್ತಿಯಲ್ಲಿರುವ ಟಿಗ್ವಾನ್ ಕಾರಿನ ಮಾರಾಟವನ್ನು ಮುಂದುವರೆಸುವುದರ ಜೊತೆಗೆ, ಟಿ - ರಾಕ್, ಟೂರೆಗ್, ಟಿ - ಕ್ರಾಸ್ ಹಾಗೂ ಟಿಗ್ವಾನ್ ಆಲ್‍‍ಸ್ಪೇಸ್ ಎಂಬ ನಾಲ್ಕು ಮಾದರಿಯ ಎಸ್‍‍ಯು‍‍ವಿ ಕಾರುಗಳನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಟಿಗ್ವಾನ್ ಆಲ್‍‍ಸ್ಪೇಸ್

ಫೋಕ್ಸ್‌ವ್ಯಾಗನ್ ಕಂಪನಿಯು, ಆಲ್‍‍ಸ್ಪೇಸ್ ಎಸ್‍‍ಯು‍‍ವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ ಎಂದು ಹಿಂದೆ ವರದಿ ಮಾಡಲಾಗಿತ್ತು. ಟಿಗ್ವಾನ್ ಆಲ್‍‍ಸ್ಪೇಸ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿರುವ ಟಿಗ್ವಾನ್ ಕಾರಿನ ಉದ್ದನೆಯ ಆವೃತ್ತಿಯಾಗಿದೆ. ಬಿಡುಗಡೆಗೊಳಿಸಲು ಉದ್ದೇಶಿಸಿರುವ ನಾಲ್ಕು ಎಸ್‍‍ಯು‍‍ವಿಗಳಲ್ಲಿ ಟಿಗ್ವಾನ್ ಆಲ್‍‍ಸ್ಪೇಸ್ ಮೊದಲಿಗೆ ಬಿಡುಗಡೆಯಾಗಲಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಟಿಗ್ವಾನ್ ಆಲ್‍‍ಸ್ಪೇಸ್ ಕಾರಿನಲ್ಲಿ 2.0 ಲೀಟರಿನ ಡೀಸೆಲ್ ಎಂಜಿನ್ ಇರಲಿದ್ದು, ಈ ಎಂಜಿನ್ ಅನ್ನು ಸ್ಕೋಡಾ ಕೊಡಿಯಾಕ್ ಕಾರಿನಲ್ಲಿ ಅಳವಡಿಸಲಾಗಿತ್ತು. ಈಗ ಈ ಕಾರ್ ಅನ್ನು ಪ್ರಿಮೀಯಂ ರಿಬ್ಯಾಡ್ಜ್ ಆವೃತ್ತಿಯನ್ನಾಗಿಸಿ ಫೋಕ್ಸ್‌ವ್ಯಾಗನ್ ಆಲ್‍‍ಸ್ಪೇಸ್ ಹೆಸರಿನಲ್ಲಿ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಎಂಜಿನ್ 148 ಬಿ‍‍ಹೆಚ್‍‍ಪಿ ಹಾಗೂ 340 ಎನ್‍ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 7 ಸ್ಪೀಡಿನ ಡಿ‍ಎಸ್‍‍ಜಿ ಗೇರ್‍‍ಬಾಕ್ಸ್ ಅಳವಡಿಸಲಾಗಿದೆ.

MOST READ: ಅನಾವರಣಗೊಂಡ ದೇಶದ ಮೊದಲ ಎಲೆಕ್ಟ್ರಿಕ್ ಬೈಕ್

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಟಿ - ರಾಕ್

ಫೋಕ್ಸ್‌ವ್ಯಾಗನ್ ಟಿ - ರಾಕ್ ಕ್ರಾಸ್‍‍ಒವರ್ ಕಾರ್ ಆಗಿದ್ದು, ಫೋಕ್ಸ್‌ವ್ಯಾಗನ್ ಪೊಲೊ ಕಾರಿನಲ್ಲಿರುವಂತಹ ಪ್ಲಾಟ್‍‍ಫಾರಂ ಹೊಂದಿದೆ. ಆದರೆ ಈ ಕಾರು ಪೊಲೊ ಕಾರಿಗಿಂತ ವೇಗವಾಗಿ ಚಲಿಸುತ್ತದೆ. ಟಿ - ರಾಕ್ ಕಾರು ಟಿಗ್ವಾನ್ ಕಾರಿಗಿಂತ 252 ಎಂಎಂನಷ್ಟು ಚಿಕ್ಕದಾಗಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಈ ಕಾರು ಹೊಸ ಬಗೆಯ ವಿನ್ಯಾಸವನ್ನು ಹೊಂದಿದೆ. ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಮೊದಲ ಬಾರಿಗೆ ಈ ಬಗೆಯ ವಿನ್ಯಾಸವನ್ನು ಅಳವಡಿಸಲಾಗಿದೆ. ಮುಂಬರುವ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಈ ರೀತಿಯ ವಿನ್ಯಾಸವನ್ನು ಅಳವಡಿಸಿಕೊಳ್ಳುವ ಸಾಧ್ಯತೆಗಳಿವೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಈ ಕಾರಿನಲ್ಲಿ ಹಲವಾರು ಮಾಡ್ರನ್ ಇಂಟಿರಿಯರ್‍‍ಗಳ ಜೊತೆಗೆ, ಹಲವಾರು ಡಿಜಿಟಲ್ ಅಂಶಗಳನ್ನು ಅಳವಡಿಸಲಾಗಿದೆ. ಇವುಗಳಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೆನ್‍‍ಮೆಂಟ್ ಹಾಗೂ ಹೆಚ್ಚಿನ ಸುರಕ್ಷಾ ಅಂಶಗಳನ್ನು ನೀಡಲಾಗಿದೆ. ಟಿ - ರಾಕ್ ಕಾರು 1.5 ಲೀಟರಿನ ಟಿ‍ಎಸ್‍ಐ ಎಂಜಿನ್ ಹೊಂದಿದ್ದು, 150 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ. ಈ ಕಾರಿನ ಬೆಲೆಯು ಎಕ್ಸ್ ಶೋ ರೂಂ ದರದಂತೆ ರೂ.23 ಲಕ್ಷಗಳಾಗಿದೆ.

MOST READ: ಹೊಸ ಎಂಜಿನ್‍ನೊಂದಿಗೆ ಬರಲಿವೆ ವೆಸ್ಪಾ ಸ್ಕೂಟರ್‍‍ಗಳು

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಟಿ - ಕ್ರಾಸ್

ಟಿ - ಕ್ರಾಸ್ ಎಸ್‍‍ಯು‍‍ವಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವುದನ್ನು ಖಚಿತಪಡಿಸಲಾಗಿದೆ. ಈ ಕಾರಿನಲ್ಲಿ ಅಂತರ್‍‍ರಾಷ್ಟ್ರೀಯ ಮಾರುಕಟ್ಟೆಯಲ್ಲಿರುವ ಎಂ‍‍ಕ್ಯೂ‍‍ಬಿ ಎ‍ಒ ಪ್ಲಾಟ್‍‍ಫಾರಂ ಅಳವಡಿಸಲಾಗಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಆದರೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುತ್ತಿರುವ ಕಾರನ್ನು ಪ್ರಪಂಚದ ಬೇರೆ ಕಡೆಯಲ್ಲಿ ಬಿಡುಗಡೆಗೊಳಿಸಿಲ್ಲ. ಈ ಎಸ್‍‍ಯು‍‍ವಿ ಕಾರು ಹೆಚ್ಚಿನ ಸ್ಪೇಸ್ ಹೊಂದಿದ್ದು, ಬೆಲೆ ಕೈಗೆಟುಕುವಂತಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ನಿರೀಕ್ಷಗಳಿವೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಈ ಕಾರಿನಲ್ಲಿರುವ 1.5 ಲೀಟರಿನ ಟಿ‍ಎಸ್‍ಐ ಎಂಜಿನ್ 130 ಬಿ‍‍ಹೆಚ್‍‍ಪಿ ಉತ್ಪಾದಿಸಿದರೆ, 1.0 ಲೀಟರಿನ ಟಿ‍ಎಸ್‍ಐ ಎಂಜಿನ್ 115 ಬಿ‍‍ಹೆಚ್‍‍ಪಿ ಉತ್ಪಾದಿಸುತ್ತದೆ. ಬಿಡುಗಡೆಯಾದ ನಂತರ ಈ ಕಾರು ಟಾಟಾ ಹ್ಯಾರಿಯರ್, ಹ್ಯುಂಡೈ ಕ್ರೆಟಾ ಹಾಗೂ ಕಿಯಾ ಸೆಲ್ಟೋಸ್ ಕಾರುಗಳಿಗೆ ಪೈಪೋಟಿ ನೀಡಲಿದೆ.

MOST READ: ಡಜನ್ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಟೊಯೊಟಾ

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಟೂರೆಗ್

ಟೂರೆಗ್ ಕಾರು ಭಾರತೀಯ ಮಾರುಕಟ್ಟೆಗೆ ಅಪರಿಚಿತವೇನಲ್ಲ. ಈ ಪ್ರಿಮೀಯಂ ಎಸ್‍‍ಯು‍‍ವಿ ಕಾರ್ ಅನ್ನು ಭಾರತದಲ್ಲಿ 2008 ರಿಂದ 2013ರವರೆಗೆ ಮಾರಾಟ ಮಾಡಲಾಗುತ್ತಿತ್ತು. ಹೆಚ್ಚಿನ ಪೈಪೋಟಿ ಎದುರಾದ ಕಾರಣ ಮಾರಾಟದಲ್ಲಿ ಕುಸಿತ ಕಂಡಿತ್ತು. ಈಗ ಉದ್ಯಮ ಹಾಗೂ ಮಾರುಕಟ್ಟೆ ಬೆಳವಣಿಗೆ ಕಂಡಿರುವ ಹಿನ್ನೆಲೆಯಲ್ಲಿ ಫೋಕ್ಸ್‌ವ್ಯಾಗನ್ ಮತ್ತೊಮ್ಮೆ ಟೂರೆಗ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಈ ಕಾರಿನಲ್ಲಿರುವ ಎಂ‍ಎಲ್‍‍ಬಿ ಪ್ಲಾಟ್‍ಫಾರಂ ಅನ್ನು ಆಡಿ, ಪೋರ್ಷೆ, ಬೆಂಟ್ಲಿ, ಲ್ಯಾಂಬೊರ್ಗಿನಿ ಹಾಗೂ ಫೋಕ್ಸ್‌ವ್ಯಾಗನ್ ಕಾರುಗಳಲ್ಲಿ ಅಳವಡಿಸಲಾಗಿದೆ. ಈ ಕಾರಣಕ್ಕಾಗಿ ಟೂರೆಗ್ ಕಾರಿನ ಮಾರಾಟದಲ್ಲಿ ಕುಸಿತ ಉಂಟಾಗಿತ್ತು. ಗ್ರಾಹಕರು ಈ ಕಾರಿಗೆ ಎಪ್ಪತ್ತು ಲಕ್ಷ ನೀಡುವ ಬದಲು ಬೇರೆ ಕಂಪನಿಯ ಐಷಾರಾಮಿ ಕಾರ್ ಅನ್ನು ಖರೀದಿಸಬಹುದಾಗಿತ್ತು. ಈ ಸಲವೂ ಈ ಕಾರು ಬಿಡುಗಡೆಯಾದ ನಂತರ ಟೂರೆಗ್ ಕಾರು ಕಳೆದ ಬಾರಿಯಂತೆ ಅದೇ ಸಮಸ್ಯೆಯನ್ನು ಎದುರಿಸಬಹುದು.

ನಾಲ್ಕು ಹೊಸ ಕಾರುಗಳನ್ನು ಬಿಡುಗಡೆಗೊಳಿಸಲಿದೆ ಫೋಕ್ಸ್‌ವ್ಯಾಗನ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ಭಾರತದ ಆಟೋ ಮೊಬೈಲ್ ಮಾರುಕಟ್ಟೆಯು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿದೆ. ಈಗ ಮೊದಲಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರಿಮೀಯಂ ಕಾರುಗಳನ್ನು ಖರೀದಿಸುವ ಗ್ರಾಹಕರಿದ್ದಾರೆ. ಗ್ರಾಹಕರು ಟೂರೆಗ್ ಕಾರಿಗೆ ರೂ.70 ಲಕ್ಷ ನೀಡುವ ಬದಲು ಅದೇ ಬೆಲೆಗೆ ಆಡಿ ಕಾರನ್ನು ಖರೀದಿಸಬಹುದು. ಫೋಕ್ಸ್‌ವ್ಯಾಗನ್ ಟೂರೆಗ್ ಕಾರಿನ ಮೇಲೆ ಅಷ್ಟೊಂದು ಹಣವನ್ನು ವ್ಯಯಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಊಳಿದ ಮೂರು ಎಸ್‍‍ಯು‍‍ವಿಗಳು ದೇಶಿಯ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಗುವ ನಿರೀಕ್ಷೆಯಿದೆ.

Most Read Articles

Kannada
English summary
Volkswagen India To Launch Four New SUVs: Touareg, Tiguan Allspace, T-Roc & T-Cross - Read in kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X