2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿದೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್

ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಬಿಡುಗಡೆಗಾಗಿ ಅಂತಿಮ ಹಂತದ ಸಿದ್ದತೆ ನಡೆಸಿದ್ದು, ದೆಹಲಿಯಲ್ಲಿ 2020ರ ಫೆಬ್ರುವರಿಯಲ್ಲಿ ನಡೆಯಲಿರುವ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳಿಸಿದ ನಂತರವಷ್ಟೇ ಹೊಸ ಕಾರು ಬಿಡುಗಡೆಯ ಸುಳಿವು ನೀಡಿದೆ.

ಜರ್ಮನ್ ಬ್ರಾಂಡ್ ಫೋಕ್ಸ್‌ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆ ಸೇರಿದಂತೆ ಅಂತಾರಾಷ್ಟ್ರಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿ ಹೊಸ ಕಾರುಗಳನ್ನು ಬಿಡುಗಡೆಗೊಳಿಸುವ ಸಲುವಾಗಿ ಕಳೆದ ಕೆಲ ತಿಂಗಳ ಹಿಂದಷ್ಟೇ ಬರೋಬ್ಬರಿ 8 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದು, ಮೊದಲ ಹಂತವಾಗಿ ತನ್ನ ಬಹುನೀರಿಕ್ಷಿತ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಬಿಡುಗಡೆಗೆ ಸಜ್ಜುಗೊಳ್ಳುತ್ತಿದೆ.

2020ರ ಆಟೋ ಎಕ್ಸ್‌ಪೋದಲ್ಲಿ ಪ್ರದರ್ಶನಗೊಳ್ಳಲಿದೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್

ಭಾರತ ಸೇರಿದಂತೆ ಅಂತಾರಾಷ್ಟ್ರೀಯ ಪ್ರಮುಖ ಮಾರುಕಟ್ಟೆಗಳಿಗಾಗಿ ಟಿ-ಕ್ರಾಸ್ ಕಂಪ್ಯಾಕ್ಟಾ ಎಸ್‌ಯುವಿ ಮಾದರಿಯನ್ನು ಸಿದ್ದಗೊಳಿಸಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಮೊದಲ ಬಾರಿಗೆ ಹೊಸ ಕಾರಿನ ತಾಂತ್ರಿಕ ಅಂಶಗಳನ್ನು ಬಹಿರಂಗಗೊಳಿಸಿದ್ದು, ಹ್ಯುಂಡೈ ಕ್ರೇಟಾ, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.

ಫೋಕ್ಸ್‌ವ್ಯಾಗನ್ ಸಂಸ್ಥೆಯು ಬೃಹತ್ ಬಂಡವಾಳದೊಂದಿಗೆ ವಿವಿಧ ಮಾದರಿಯ 19 ಹೊಸ ಕಾರುಗಳನ್ನು ವಿವಿಧ ರಾಷ್ಟ್ರಗಳಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದ್ದು, ಭಾರತದಲ್ಲೂ ತನ್ನ ಹೊಸ ಶಕೆ ಆರಂಭಿಸುತ್ತಿದೆ. ಇದರಲ್ಲಿ ಟಿ-ಕ್ರಾಸ್ ಕಂಪ್ಯಾಕ್ಟ್ ಮಾದರಿಯು ಹಲವು ವಿಶೇಷತೆಗಳೊಂದಿಗೆ ಬಿಡುಗಡೆಯಾಗುತ್ತಿದ್ದು, ದೇಶಿಯ ಗ್ರಾಹಕರ ಬೇಡಿಕೆ ಅನುಗುಣವಾಗಿ ಸಿದ್ದಗೊಳಿಸಲಾಗಿದೆ.

ಫೋಕ್ಸ್‌ವ್ಯಾಗನ್ ಬಿಡುಗಡೆಗೊಳಿಸಲಿರುವ 19 ಹೊಸ ಎಸ್‌ಯುವಿಗಳಲ್ಲಿ ಟಿ-ಕ್ರಾಸ್ ಕಂಪ್ಯಾಕ್ಟ್ ಎಸ್‌ಯುವಿ ಕಾರು ಕೂಡಾ ಪ್ರಮುಖವಾಗಿದ್ದು, ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಟಿ-ಕ್ರಾಸ್‌ಗಿಂತ ಭಾರತದಲ್ಲಿ ಬಿಡುಗಡೆಯಾಗಲಿರುವ ಟಿ-ಕ್ರಾಸ್ ಸಾಕಷ್ಟು ಭಿನ್ನತೆ ಹೊಂದಿರಲಿಯೆಂತೆ.

ಕೆಲವು ಸುದ್ಧಿ ಮಾಧ್ಯಮಗಳು ಪ್ರಕಟಿಸಿರುವ ಮಾಹಿತಿಗಳ ಪ್ರಕಾರ, 2,651-ಎಂಎಂ ನಷ್ಟು ವೀಲ್ಹ್ ಬೆಸ್ ಹೊಂದಿರುವ ಟಿ-ಕ್ರಾಸ್ ಕಾರು ಯುರೋಪ್ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿರುವ ಟಿ-ಕ್ರಾಸ್ ಕಾರಿಗಿಂತ 10-ಎಂಎಂ ನಷ್ಟು ಕಡಿಮೆ ವೀಲ್ಹ್ ಬೇಸ್ ಹೊಂದಿದೆ. ಹಾಗೆಯೇ ವಿದೇಶಿ ಮಾರುಕಟ್ಟೆ ಬಿಡುಗಡೆಯಾಗಲಿರುವ ಟಿ-ಕ್ರಾಸ್ ಕಾರಿಗಿಂತ ಭಾರತದಲ್ಲಿ ಬಿಡುಗಡೆಯಾಗಲಿರುವ ಹೊಸ ಕಾರು 100-ಎಂಎಂ ನಷ್ಟು ಉದ್ದವಾಗಿದ್ದು, ಇದು ಹಿಂಬದಿ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಜೊತೆಗೆ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಕಾರುಗಳ ಯಾಂತ್ರಿಕ ಘಟಕದ ಬಾಹ್ಯ ಮತ್ತು ಒಳಾಂಗಣ ಅಂಶಗಳನ್ನು ಹೊಸ ಪೊಲೊ ಮತ್ತು ವರ್ಟಸ್ ಕಾರುಗಳೊಂದಿಗೆ ಹಂಚಿಕೊಳ್ಳುವ ನಿರೀಕ್ಷೆಯಿದ್ದು, ಈ ಕಾರು ಸುಮಾರು 4.19 ಮೀಟರ್ ಉದ್ದಳತೆಯೊಂದಿಗೆ ಸುಮಾರು 2.65 ಮೀಟರ್‌ಗಳಷ್ಟು ವೀಲ್ ಬೇಸ್ ಹೊಂದಿರಲಿದೆ.

ಇನ್ನು ಟಿ-ಕ್ರಾಸ್ ಆವೃತ್ತಿಯಲ್ಲಿ ಅಳವಡಿಸಿರುವ ಎಂಜಿನ್ ಮಾದರಿಯು1.0- ಲೀಟರ್ ಪೆಟ್ರೋಲ್ ಎಂಜಿನ್ ಇಲ್ಲವೇ 1.5-ಲೀಟರ್-ಡೀಸೆಲ್ 4 ಸಿಲಿಂಡರ್ ಎಂಜಿನ್ ಆಯ್ಕೆಯೆಯೊಂದಿಗೆ ಬಿಡುಗಡೆಗೊಳ್ಳುವ ಸಾಧ್ಯತೆಗಳಿದ್ದು, ಹೊಸ ಎಂಜಿನ್ ಮಾದರಿಯು 113-ಬಿಎಚ್‌ಪಿ ಮತ್ತು ಟಾಪ್ ಎಂಡ್ ಎಂಜಿನ್ ಮಾದರಿಯು 128-ಬಿಎಚ್‌ಪಿ ಉತ್ಪಾದನೆ ಮಾಡಲಿವೆ ಎನ್ನಲಾಗಿದೆ.

ಮುಂದಿನ ಚಕ್ರಗಳಿಗೂ ಶಕ್ತಿ ಪೂರೈಸುವ 7-ಸ್ಪೀಡ್ ಡುಯಲ್ ಕ್ಲಚ್ ಗೇರ್‌ಬಾಕ್ಸ್ ಸೌಲಭ್ಯ ಪಡೆದುಕೊಂಡಿರುವ ಈ ಫೋಕ್ಸ್‌ವ್ಯಾಗನ್ ಟಿ-ಕ್ರಾಸ್ ಹೊಸ ಕಾರುಗಳು ಟರ್ಬೊಚಾರ್ಜ್ಡ್ ಎಂಜಿನ್ ಆಯ್ಕೆಯನ್ನು ಸಹ ಪಡೆಯುವ ಸಾಧ್ಯತೆ ಇದೆ.

ಫೋಕ್ಸ್‌ವ್ಯಾಗನ್ ಸಂಸ್ಥೆಯು ದಕ್ಷಿಣ ಅಮೆರಿಕದಂತಹ ಉದಯೋನ್ಮುಖ ಮಾರುಕಟ್ಟೆಗಳಿಗಾಗಿ 6-ಸ್ಪೀಡ್ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಜೊತೆಗೆ 5-ಸ್ಪೀಡ್ ಮ್ಯಾನ್ಯುವಲ್ ಗೇರ್‌ಬಾಕ್ಸ್ ನೀಡಲು ಸಾಧ್ಯತೆ ಇದ್ದು, ಭಾರತದಲ್ಲಿ ಈ ಕಾರಿನ ವೆಚ್ಚ ತಗ್ಗಿಸಲು ಕೆಲವು ವಿಶೇಷತೆಗಳನ್ನು ಕಡಿತಗೊಳಿಸುವ ಸಂಭವ ಕೂಡಾ ಇದೆ.

ಇನ್ನು ಹೊಸ ಕಾರು 2020ರ ಆರಂಭದಲ್ಲಿ ಯುರೋಪ್ ಮತ್ತು ದಕ್ಷಿಣ ಅಮೆರಿಕಾ ರಾಷ್ಟ್ರಗಳಲ್ಲಿ ಬಿಡುಗಡೆಯಾಗಲಿದ್ದು, ತದನಂತರವಷ್ಟೇ ಭಾರತದಲ್ಲೂ ಬಿಡುಗಡೆಯಾಗಲಿರುವ ಹೊಸ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 9.50 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13 ಲಕ್ಷ ಬೆಲೆಯೊಂದಿಗೆ ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಎಂಜಿ ಹೆಕ್ಟರ್, ಮಾರುತಿ ಸುಜುಕಿ ಬ್ರೆಝಾ ಮತ್ತು ಮಹೀಂದ್ರಾ ಎಕ್ಸ್‌ಯುವಿ300 ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.

Most Read Articles

Kannada
English summary
Volkswagen India will showcase the made-for-India T-Cross SUV in New Delhi at the 2020 Auto Expo.
Story first published: Tuesday, September 10, 2019, 19:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X