ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಫೋಕ್ಸ್​ ವ್ಯಾಗನ್ ಸಂಸ್ಥೆಯು ದೇಶಿಯ ಮಾರುಕಟ್ಟೆಯಲ್ಲಿನ ಕಾರು ಮಾರಾಟದಲ್ಲಿ ಹೊಸಮೈಲಿಗಲ್ಲು ಸಾಧಿಸಿದ್ದು, ಭಾರತಕ್ಕೆ ಕಾಲಿಟ್ಟು ಹತ್ತು ವರ್ಷಗಳ ನಂತರ ಒಂದು ಮಿಲಿಯನ್ ಕಾರುಗಳನ್ನು ಮಾರಾಟ ಮಾಡಿ ಹೊಸ ದಾಖಲೆಗೆ ಕಾರಣವಾಗಿದೆ. ಈ ಹಿನ್ನೆಲೆ ಒಂದು ಮಿಲಿಯನ್ ಕಾರು ಉತ್ಪಾದನೆಗೆ ಸಾಕ್ಷಿಯಾದ ಕಾಂಪ್ಯಾಕ್ಟ್ ಸೆಡಾನ್ ಆಮೀಯೋವನ್ನುಕಾರ್ಬನ್ ಸ್ಟೀಲ್ ಪೇಂಟ್ ಸ್ಕೀಮ್ ನಲ್ಲಿ ಬಿಡುಗಡೆ ಮಾಡಲಾಗಿದೆ.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಫೋಕ್ಸ್​ ವ್ಯಾಗನ್ ಆಮೀಯೋವನ್ನು ಫೋಕ್ಸ್​ ವ್ಯಾಗನ್ ಇಂಡಿಯಾದ ಎಂ.ಡಿ ಗುರುಪ್ರತಾಪ್ ಬೊಪರಾಯ್ ಮತ್ತು ಫೋಕ್ಸ್​ ವ್ಯಾಗನ್ ಪ್ಯಾಸೆಂಜರ್ ಕಾರುಗಳ ನಿರ್ದೇಶಕ ಸ್ಟೀಫನ್ ನ್ಯಾಪ್‍ರವರ ಸಾರಥ್ಯದಲ್ಲಿ ಬಿಡುಗಡೆಗೊಳಿಸಲಾಯಿತು. ಫೋಕ್ಸ್​ ವ್ಯಾಗನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಮ್ಯಾನೆಜಿಂಗ್ ಡೈರೆಕ್ಟರ್ ಗುರುಪ್ರತಾಪ್ ಬೊಪರಾಯ್ ರವರು ಮಾತನಾಡಿ ಫೋಕ್ಸ್​ ವ್ಯಾಗನ್ ಇಂಡಿಯಾದ ಉತ್ಪಾದನಾ ವ್ಯವಸ್ಥೆಯು ಅಂತರ್ ರಾಷ್ಟ್ರಿಯ ಮಾರುಕಟ್ಟೆಯಲ್ಲಿ ಗುಣಮಟ್ಟ ಮತ್ತು ಟೆಕ್ನಾಲಜಿಕಲ್ ಉತ್ಪಾದನೆಯ ಮಾನದಂಡವಾಗಿದ್ದು, ದೇಶಿಯ ಮಾರುಕಟ್ಟೆಯಲ್ಲಿ ನಮ್ಮ ಬೆನ್ನೆಲುಬಾಗಿದೆ ಎಂದಿದ್ದಾರೆ.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಜೊತೆಗೆ ನಮ್ಮ ಎಲ್ಲಾ ಮ್ಯಾನೆಜ್‍ಮೆಂಟ್ ಸಿಬ್ಬಂದಿಯ ಪರವಾಗಿ, ಈ ಮೈಲಿಗಲ್ಲನ್ನು ಸಾಧಿಸಲು ಹಗಲಿರುಳು ಶ್ರಮಿಸಿದ ಫೋಕ್ಸ್​ ವ್ಯಾಗನ್ ಇಂಡಿಯಾ ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದೇಶಿಯ ಮಾರುಕಟ್ಟೆಯಲ್ಲಿ ಒಂದು ಮಿಲಿಯನ್ ಕಾರು ಬಿಡುಗಡೆಯಾಗುತ್ತಿರುವುದು ನಮಗೆ ಅತಿ ಮುಖ್ಯ ಮೈಲಿಗಲ್ಲಾಗಿದ್ದು, ನಮ್ಮ ದೀರ್ಘ ಕಾಲದ ಸಂಬಂಧದಲ್ಲಿ ಬಹು ಮುಖ್ಯವಾಗಿದೆ.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ನಾವು ಇನ್ನಷ್ಟು ಮೈಲಿಗಲ್ಲುಗಳನ್ನು ಸಾಧಿಸಲು ಉತ್ಸುಕರಾಗಿದ್ದು, ಇನ್ನಷ್ಟು ಉತೃಷ್ಟ ದರ್ಜೆಯ ಉತ್ಪಾದನೆಗಳನ್ನು ದೇಶಿಯ ಮಾರುಕಟ್ಟೆಗಾಗಿ ಮತ್ತು ಪ್ರಪಂಚದ ಹಲವು ಮಾರುಕಟ್ಟೆಗಳಿಗಾಗಿ ವಿಶ್ವ ದರ್ಜೆಯ ಪ್ರಾಡಕ್ಟ್ ಗಳನ್ನು ಉತ್ಪಾದನೆ ಮಾಡುವುದು ನಮ್ಮ ಯೋಜನೆಯಾಗಿದೆ ಎಂದು ತಿಳಿಸಿದರು.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಫೋಕ್ಸ್​ ವ್ಯಾಗನ್ ಕಾರುಗಳ ನಿರ್ದೇಶಕರಾದ ಸ್ಟೀಫನ್ ನ್ಯಾಪ್ ರವರು ಮಾತನಾಡಿ, ಒಂದು ಮಿಲಿಯನ್ ಕಾರುಗಳ ಬಿಡುಗಡೆಯು ಭಾರತದಂತಹ ಮಾರುಕಟ್ಟೆಯಲ್ಲಿ ಫೋಕ್ಸ್​ ವ್ಯಾಗನ್ ಕಾರುಗಳ ದೃಢ ಬ್ರಾಂಡ್ ಗಳನ್ನು ನಿರ್ಮಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಭಾರತದಲ್ಲಿ ನಮ್ಮ ಬ್ರಾಂಡ್‍ನ ಬೆಳವಣಿಗೆಗೆ ಸಹಾಯ ಮಾಡಿ ಈ ಮೈಲಿಗಲ್ಲನ್ನುಸಾಧಿಸಲು ನೆರವಾದ ನಮ್ಮ ಎಲ್ಲಾ ಸಿಬ್ಬಂದಿಗಳಿಗೆ, ಗ್ರಾಹಕರಿಗೆ ಮತ್ತು ಸ್ಟ್ರಾಂಗ್ ನೆಟ್ ವರ್ಕ್ ಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಸಾಧನೆಯೊಂದಿಗೆ ನಾವು ಮತ್ತಷ್ಟು ಮೈಲಿಗಲ್ಲನ್ನು ಸಾಧಿಸಲು ಮತ್ತು ದೃಢವಾದ ಪ್ರಾಡಕ್ಟ್ ಪೋರ್ಟ್ ಫೊಲಿಯೊ ನೀಡಲು ಮತ್ತು ನಮ್ಮ ಗ್ರಾಹಕರ ಅನುಭವನ್ನು ಮುಂಬರುವ ದಿನಗಳಲ್ಲಿ ಮತ್ತಷ್ಟು ಸುಧಾರಿಸಲು ಅನುಕೂಲವಾಗಲಿದೆ ಎಂದು ಹೇಳಿದರು.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ದೇಶಿಯ ಮಾರುಕಟ್ಟೆಗೆಂದು ಫೋಕ್ಸ್​ ವ್ಯಾಗನ್ ಪುಣೆ ಘಟಕವನ್ನು 2009ರಲ್ಲಿ ಪ್ರಾರಂಭಿಸಲಾಯಿತು. ಈ ಘಟಕದಿಂದ ಮೊದಲಿಗೆ ಸ್ಕೋಡಾ ಫ್ಯಾಬಿಯಾ ಕಾರನ್ನು ಬಿಡುಗಡೆಗೊಳಿಸಲಾಯಿತು. ನಂತರ ಫೋಕ್ಸ್​ ವ್ಯಾಗನ್ ಪೋಲೊ, ಫೋಕ್ಸ್​ ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರಾಪಿಡ್ ಗಳನ್ನು ಬಿಡುಗಡೆಗೊಳಿಸಲಾಯಿತು.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಫೋಕ್ಸ್​ ವ್ಯಾಗನ್ ಭಾರತದಲ್ಲಿ ಉತ್ಪಾದನೆಗೊಂಡ ಕಾರುಗಳನ್ನು ವಿದೇಶಕ್ಕೆ ರಫ್ತು ಮಾಡುತ್ತದೆ. ಅವುಗಳಲ್ಲಿ ಸೌಥ್ ಆಫ್ರಿಕಾ ಮತ್ತು ಮೆಕ್ಸಿಕೊಗಳೂ ಸೇರಿವೆ. ಫೋಕ್ಸ್​ ವ್ಯಾಗನ್ ಪುಣೆ ಘಟಕದಲ್ಲಿ 4,00,000 ಕ್ಕೂ ಹೆಚ್ಚು ಕಾರುಗಳನ್ನು ಉತ್ಪಾದಿಸಲಾಗುತ್ತಿದ್ದು, ಅವುಗಳನ್ನು ನಾಲ್ಕು ಖಂಡಗಳಲ್ಲಿರುವ 50 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡಲಾಗುತ್ತಿದೆ.

MOST READ: ಅನಾವರಣಗೊಂಡ ಪೋರ್ಷೆ 911 ಸ್ಪೀಡ್‍ಸ್ಟರ್ ಉತ್ಪಾದನಾ ಆವೃತ್ತಿ

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಫೋಕ್ಸ್​ ವ್ಯಾಗನ್ ಈಗ ಇಂಡಿಯಾ 2.0 ಪ್ರಾಜೆಕ್ಟನ್ನು ಶುರು ಮಾಡಲು ಚಿಂತಿಸುತ್ತಿದೆ. ಜರ್ಮನ್ ಬ್ರಾಂಡ್ ಕಂಪನಿಯು ಸುಮಾರು ರೂ.8,000 ಕೋಟಿಗಳನ್ನು ಈ ಯೋಜನೆಗಾಗಿ ವಿನಿಯೋಜಿಸುತ್ತಿದೆ. ಇಂಡಿಯಾ 2.0 ಯೋಜನೆಯಲ್ಲಿ ಕಾರುಗಳನ್ನು ದೇಶಿಯ ಮಾರುಕಟ್ಟೆಗಾಗಿ ಸ್ಥಳೀಯವಾಗಿ ಅಭಿವೃದ್ಧಿ ಪಡಿಸಲಾಗುವುದು ಮತ್ತು ಈ ಯೋಜನೆಯು ಮಾಡಿಫೈ ಮಾಡಲಾದ ಎಂಕ್ಯೂಬಿ ಎ0 ಪ್ಲಾಟ್ ಫಾರ್ಮ್ ನ ಮೇಲೆ ಅವಲಂಬಿತವಾಗಿದೆ.

ಭಾರತದಲ್ಲಿ ಹೊಸ ಮೈಲಿಗಲ್ಲು ಸೃಷ್ಟಿಸಿದ ಫೋಕ್ಸ್​ ವ್ಯಾಗನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಫೋಕ್ಸ್​ ವ್ಯಾಗನ್ ದೇಶಿಯ ಮಾರುಕಟ್ಟೆಯಲ್ಲಿ ಸುಮಾರು 10 ವರ್ಷಗಳಿಂದ ಕಾರುಗಳನ್ನು ತಯಾರಿಸುತ್ತಿದೆ. ಜರ್ಮನ್ ಕಾರು ತಯಾರಕ ಕಂಪನಿಯು ಬಹುತೇಕ ಎಲ್ಲಾ ಮಾದರಿಯ ಕಾರುಗಳನ್ನು ಮಾರಾಟ ಮಾಡುತ್ತದೆ. ಸದ್ಯಕ್ಕೆ ಪೋಲೊ, ಪೋಲೊ ಜಿಟಿ, ಆಮೀಯೋ, ವೆಂಟೊ, ಪಸಾಟ್ ಮತ್ತು ಟಿಗ್ಯೂನ್ ಕಾರುಗಳನ್ನು ಮಾರಾಟ ಮಾಡುತ್ತಿದೆ.

Most Read Articles

Kannada
English summary
Volkswagen Announces A New Production Milestone — VW Rolls Out Its One Millionth Car In India - Read in Kannada
Story first published: Saturday, April 20, 2019, 11:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X