ಶಾಂಘೈ ಆಟೋ ಮೇಳದಲ್ಲಿ ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಪೊಲೊ ಪ್ಲಸ್

ವಿಶ್ವದ ಪ್ರಮುಖ ಮಾರುಕಟ್ಟೆಗಳಲ್ಲಿ ತನ್ನ ಕಾರು ಮಾರಾಟ ಜಾಲವನ್ನು ಹೊಂದಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ತನ್ನ ಬಹುನೀರಿಕ್ಷಿತ ಪೊಲೊ ಪ್ಲಸ್ ಕಾರು ಮಾದರಿಯನ್ನು ಶಾಂಘೈ ಆಟೋ ಮೇಳ ಪ್ರದರ್ಶನ ಮಾಡಿದ್ದು, ಪ್ರೀಮಿಯಂ ಸೌಲಭ್ಯಗಳ ಜೊತೆ ಸ್ಪೋರ್ಟಿ ಲುಕ್‌‍ನೊಂದಿಗೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಶಾಂಘೈ ಆಟೋ ಮೇಳದಲ್ಲಿ ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಪೊಲೊ ಪ್ಲಸ್

ಸದ್ಯ ಚೀನಿ ಮಾರುಕಟ್ಟೆಯಲ್ಲಿ ತನ್ನ ಕಾರು ಉತ್ಪನ್ನಗಳ ಮಾರಾಟ ಯೋಜನೆಯಲ್ಲಿ ಮಹತ್ವದ ಬದಲಾವಣೆ ತರುತ್ತಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಎಸ್ಎಐಸಿ ಸಂಸ್ಥೆಯೊಂದಿಗೆ ಜೊತೆಗೂಡಿ ಪೊಲೊ ಪ್ಲಸ್ ಆವೃತ್ತಿಯನ್ನು ಅನಾವರಣಗೊಳಿಸಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಾಮಾನ್ಯ ಪೊಲೊ ಮಾದರಿಗಿಂತಲೂ ಹೊಸ ಕಾರು ವಿಭಿನ್ನವಾದ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಪೊಲೊ ಪ್ಲಸ್ ಮಾದರಿಯಲ್ಲಿ ಈ ಬಾರಿ ಡ್ಯುಯಲ್ ಟೋನ್ ಯೆಲ್ಲೊ ಮತ್ತು ಬ್ಲ್ಯಾಕ್ ಬಣ್ಣವನ್ನು ಪಡೆದುಕೊಂಡಿದ್ದು, ಸ್ಪೋರ್ಟಿ ಲುಕ್ ಹೊಂದಿರುವ 16-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್ಹ್, ಎಲ್ಇಡಿ ಟೈಲ್ ಲ್ಯಾಂಪ್, ಹೊಸ ಮಾದರಿಯ ರಿಯರ್ ಸ್ಪಾಯ್ಲರ್, ಫ್ಲಕ್ಸ್ ಡ್ಯುಯಲ್-ಪೈಪ್ ಎಕ್ಸಾಸ್ಟ್ ವೈಶಿಷ್ಟ್ಯತೆ ಹೊಂದಿದೆ.

ಶಾಂಘೈ ಆಟೋ ಮೇಳದಲ್ಲಿ ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಪೊಲೊ ಪ್ಲಸ್

ಜೊತೆಗೆ ಡ್ಯುಯಲ್ ಟೋನ್ ಮಾದರಿಯ ಒಳಾಂಗಣ ವಿನ್ಯಾಸವನ್ನು ಹೊಂದಿರುವ ಪೊಲೊ ಪ್ಲಸ್ ಕಾರಿನಲ್ಲಿ ಹಲವಾರು ವಿಶ್ವದರ್ಜೆ ತಾಂತ್ರಿಕ ಸೌಲಭ್ಯಗಳನ್ನು ನೀಡಲಾಗಿದ್ದು, ಸೆಂಟರ್ ಕನ್ಸೊಲ್ ಮತ್ತು ಡೋರ್, ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ರಿಯರ್ ಕ್ಯಾಮೆರಾ, ಸನ್‌ರೂಫ್ ಬಳಕೆ ಮಾಡಲಾಗಿದೆ.

ಆದ್ರೆ ಹೊಸ ಪೊಲೊ ಪ್ಲಸ್ ಕಾರು ಈ ಬಾರಿ ಆ್ಯಪಲ್ ಕಾರ್ ಪ್ಲೇ, ಆಂಡ್ರಾಯಿಡ್ ಆಟೋ, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂನಂತಹ ಕೆಲವು ಸೌಲಭ್ಯಗಳನ್ನು ಕಳೆದುಕೊಳ್ಳಲಿದ್ದು, ಪ್ರತಿಸ್ಪರ್ಧಿ ಕಾರುಗಳೊಂದಿಗೆ ಬೆಲೆ ಅಂತರವನ್ನು ಕಾಯ್ದುಕೊಳ್ಳಲು ಕೆಲವು ಸೌಲಭ್ಯಗಳನ್ನು ಕೈಬಿಡಲಾಗಿದೆ.

ಶಾಂಘೈ ಆಟೋ ಮೇಳದಲ್ಲಿ ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಪೊಲೊ ಪ್ಲಸ್

ಇನ್ನು ಹೊಸ ಕಾರಿನಲ್ಲಿ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಎಬಿಎಸ್, ಇಬಿಡಿ, ಇಎಸ್‌ಪಿ ಮತ್ತು ಮಲ್ಟಿ ಏರ್‌ಬ್ಯಾಗ್ ಸೌಲಭ್ಯವನ್ನು ಹೊಂದಿದ್ದು, ಎಂಜಿನ್‌ನಲ್ಲಿ ಯಾವುದೇ ಬದಲಾವಣೆ ತರದೇ ಈ ಹಿಂದಿನಂತೆಯೇ ಮುಂದುವರಿಸಲಾಗಿದೆ.

MOST READ: ಟಾಪ್ ಸ್ಪೀಡ್ ಶೋಕಿ- ಯುಟ್ಯೂಬ್‌ನಲ್ಲಿ ಲೈವ್ ಮಾಡಿ ಜೈಲು ಸೇರಿದ ಫೋರ್ಡ್ ಮಸ್ಟಾಂಗ್ ಮಾಲೀಕ..!

ಎಂಜಿನ್ ಸಾಮರ್ಥ್ಯ

ಚೀನಿ ಮಾರುಕಟ್ಟೆಯಲ್ಲಿ 1.5-ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿರುವ ಪೊಲೊ ಪ್ಲಸ್ ಕಾರುಗಳು ಈ ಹಿಂದಿನಂತೆಯೇ ಎಂಜಿನ್ ಪರ್ಫಾಮೆನ್ಸ್ ಹೊಂದಿದ್ದು, 5-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿಯೇ ಹೊಂದಿರಲಿದೆ.

ಶಾಂಘೈ ಆಟೋ ಮೇಳದಲ್ಲಿ ಅನಾವರಣಗೊಂಡ ಫೋಕ್ಸ್‌ವ್ಯಾಗನ್ ಪೊಲೊ ಪ್ಲಸ್

ಭಾರತದಲ್ಲೂ ಬಿಡುಗಡೆಯಾಗುತ್ತಾ?

ದೇಶಿಯ ಮಾರುಕಟ್ಟೆಯಲ್ಲಿ ಸದ್ಯ ಕಾರು ಮಾರಾಟದಲ್ಲಿ ತೀವ್ರ ಪೈಪೋಟಿ ಎದುರಿಸುತ್ತಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಮಾರುತಿ ಸುಜುಕಿ ಬಲೆನೊ ಮತ್ತು ಹ್ಯುಂಡೈ ಕ್ರೆಟಾ ಕಾರುಗಳಿಗೆ ಪ್ರತಿಸ್ಪರ್ಧಿಯಾಗಿ ಹೊಸ ಪೊಲೊ ಪ್ಲಸ್ ಕಾರನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ.

ಆದ್ರೆ ಹೊಸ ಪೊಲೊ ಪ್ಲಸ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುವ ಯಾವುದೇ ಮಾಹಿತಿ ನೀಡದ ಫೋಕ್ಸ್‌ವ್ಯಾಗನ್ ಸಂಸ್ಥೆಯು ಇದೇ ವರ್ಷ ಚೀನಿ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ ನಂತರವಷ್ಟೇ ಭಾರತಕ್ಕೆ ಪ್ರವೇಶಿಸುವ ಕುರಿತು ಮಾಹಿತಿ ಲಭ್ಯವಾಗಲಿದೆ.

Source: Gaadiwaadi

Most Read Articles

Kannada
English summary
Volkswagen Polo Plus Revealed In China. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X