Just In
Don't Miss!
- News
ಮೋದಿ ಟೀ ಮಾರುತ್ತಿದ್ದರು, ಆದರೆ ಬಿಜೆಪಿಗರಿಗೆ ಟೀ ಎಂದರೆ ಆಗೊಲ್ಲ: ಉದ್ಧವ್ ಠಾಕ್ರೆ
- Lifestyle
ಪಾರ್ಕಿನ್ಸನ್ಸ್ ಅಪಾಯವನ್ನು ಕಣ್ಣು ನೋಡಿ ಮೊದಲೇ ಅರಿಯಬಹುದು
- Technology
2020ಕ್ಕೆ ಆಪಲ್ನಿಂದ 5G ಐಫೋನ್ ಪಕ್ಕಾ ಅಂತೆ..!
- Movies
KPL ಫಿಕ್ಸಿಂಗ್ ಪ್ರಕರಣ: ನಟಿಯರಿಗೆ ಶಾಕ್ ನೀಡಿದ ಕಮಿಷನರ್ ಭಾಸ್ಕರ್ ರಾವ್
- Sports
ವೆಸ್ಟ್ ಇಂಡೀಸ್ ವಿರುದ್ಧ ಭಾರತ ಎಡವಿದ್ದೆಲ್ಲಿ?: ಸೋಲಿಗೆ ಪ್ರಮುಖ ಕಾರಣಗಳು!
- Finance
50 ಪೈಸೆ ಬಾಕಿ ಉಳಿದಿದೆ ಎಂದು ಬ್ಯಾಂಕ್ ನೋಟಿಸ್; ಕಟ್ಟಲು ಹೋದರೆ ಕಿರಿಕ್
- Education
ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ನೇಮಕಾತಿ: ಡಿ.31ರೊಳಗೆ ಅರ್ಜಿ ಹಾಕಿ
- Travel
ಹಳ್ಳಿಗಾಡಿನ ಸೊಗಡನ್ನು ಅನುಭವಿಸಲು ಬೆಂಗಳೂರಿನ ಸುತ್ತಮುತ್ತ ಇರುವ ಈ ಸುಂದರ ಗ್ರಾಮಗಳಿಗೆ ಹೋಗಿ ಬನ್ನಿ
ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ನಲ್ಲಿ ಕಂಡು ಬಂದ ಫೋಕ್ಸ್ವ್ಯಾಗನ್ ಟಿ ರಾಕ್
ಫೋಕ್ಸ್ವ್ಯಾಗನ್ ಇಂಡಿಯಾ ತನ್ನ ಹೊಸ ಟಿ-ರಾಕ್ ಎಸ್ಯುವಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯನ್ನು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ಹೊಸ ಎಸ್ಯುವಿಯು ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯನ್ನು ಭಾರತದಲ್ಲಿ ಇದೇ ಮೊದಲ ಬಾರಿಗೆ ಸ್ಪಾಟ್ ಟೆಸ್ಟ್ ಮಾಡಲಾಗಿದೆ. ಆಟೊಕಾರ್ ಇಂಡಿಯಾ ಈ ಎಸ್ಯುವಿಯ ಸ್ಪಾಟ್ ಟೆಸ್ಟ್ ಚಿತ್ರಗಳನ್ನು ಬಿಡುಗಡೆಗೊಳಿಸಿದೆ.

ಈ ಚಿತ್ರಗಳಲ್ಲಿ ಹೊಸ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯನ್ನು ಮಹಾರಾಷ್ಟ್ರದ ಪುಣೆಯ ಹೊರವಲಯದಲ್ಲಿ ಸಂಪೂರ್ಣವಾಗಿ ಮರೆಮಾಡಿ, ಸ್ಪಾಟ್ ಟೆಸ್ಟ್ ಮಾಡುತ್ತಿರುವುದನ್ನು ಕಾಣಬಹುದು. ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಟಿ-ರಾಕ್ ಫೋಕ್ಸ್ವ್ಯಾಗನ್ ಟಿಗುವಾನ್ಗಿಂತ ಕೆಳಗಿನ ಸರಣಿಯಲ್ಲಿರಲಿದೆ ಹಾಗೂ ಮಧ್ಯಮ ಗಾತ್ರದ ಎಸ್ಯುವಿ ಸೆಗ್ಮೆಂಟಿನಲ್ಲಿ ಸ್ಪರ್ಧಿಸಲಿದೆ.

ಫೋಕ್ಸ್ವ್ಯಾಗನ್ ಟಿ-ರಾಕ್ನ ಬಿಡುಗಡೆಯು ಜರ್ಮನ್ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸುತ್ತಿರುವ ಹಲವಾರು ಎಸ್ಯುವಿಗಳ ಬಿಡುಗಡೆಯ ಭಾಗವಾಗಿದೆ. ಫೋಕ್ಸ್ವ್ಯಾಗನ್ ಕಂಪನಿಯು 2020ರಿಂದ ಭಾರತದಲ್ಲಿ ಟಿ-ರಾಕ್ನಿಂದ ಆರಂಭಿಸಿ ಹಲವು ಹೊಸ ವಾಹನಗಳನ್ನು ಬಿಡುಗಡೆಗೊಳಿಸಲಿದೆ.

ವಿನ್ಯಾಸದ ಬಗ್ಗೆ ಹೇಳುವುದಾದರೆ, ಫೋಕ್ಸ್ವ್ಯಾಗನ್ ಟಿ-ರಾಕ್ ಸ್ಪೋರ್ಟಿ ಲುಕ್ ಅನ್ನು ಹೊಂದಿದೆ. ಈ ಎಸ್ಯುವಿಯನ್ನು ಕಂಪನಿಯ ಇತ್ತೀಚಿನ ಡಿಸೈನ್ ಲ್ಯಾಂಗ್ವೇಜ್ಗೆ ಅನುಗುಣವಾಗಿ ಹೊಸ ಫ್ರಂಟ್ ಗ್ರಿಲ್ನೊಂದಿಗೆ ತಯಾರಿಸಲಾಗಿದೆ.

ಇದು ತೆಳುವಾದ ಹೆಡ್ಲ್ಯಾಂಪ್ಗಳನ್ನು ಹೊಂದಿದ್ದು, ಎಲ್ಇಡಿ ಡಿಆರ್ಎಲ್ಗಳು ಹಾಗೂ ಕಾರ್ನರಿಂಗ್ ಲ್ಯಾಂಪ್ಗಳನ್ನು ಬಂಪರ್ನಲ್ಲಿ ಮತ್ತಷ್ಟು ಕೆಳಕ್ಕೆ ಅಳವಡಿಸಲಾಗಿದೆ. ಮುಂಭಾಗದಲ್ಲಿರುವ ಬಂಪರ್ನ ಸೆಂಟರ್ನಲ್ಲಿ ದೊಡ್ಡ ಗಾಳಿಯ ಇನ್ಟೇಕ್ ಅನ್ನು ನೀಡಲಾಗಿದೆ.

ಬಂಪರ್ನ ಕೆಳಗಿನ ಭಾಗದಲ್ಲಿ ಸಿಲ್ವರ್ ಸ್ಕಿಡ್ ಪ್ಲೇಟ್ಗಳನ್ನು ನೀಡಲಾಗಿದೆ. ಈ ಎಸ್ಯುವಿಯ ಮುಂಭಾಗದಲ್ಲಿ ಎಲ್ಇಡಿ ಡಿಆರ್ಎಲ್ಗಳು ಇಂಡಿಕೇಟರ್ಗಳಂತೆ ಕಾರ್ಯನಿರ್ವಹಿಸುತ್ತವೆ. ಫೋಕ್ಸ್ವ್ಯಾಗನ್ ಟಿ-ರಾಕ್ನ ಸೈಡ್ ಹಾಗೂ ಹಿಂಭಾಗದಲ್ಲಿ ಶಾರ್ಪ್ ಆದ ಕ್ರೀಸ್ಗಳು ಹಾಗೂ ದೊಡ್ಡ ವ್ಹೀಲ್ ಆರ್ಕ್ಗಳಿವೆ.
MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿಎಲ್ ಕಳೆದುಕೊಂಡ ಡ್ರೈವರ್..!

ಎಸ್ಯುವಿಯ ಉದ್ದಕ್ಕೂ ಚಲಿಸುವ ಶಾರ್ಪ್ ಆದ ಶೋಲ್ಡರ್ ಲೈನ್ಗಳಿವೆ. ಟಿ-ರಾಕ್ ಎಸ್ಯುವಿಯನ್ನು ಡ್ಯುಯಲ್ ಟೋನ್ ಬಣ್ಣದಲ್ಲಿ ಮಾರಾಟ ಮಾಡಲಾಗುವುದು. ಇವುಗಳಲ್ಲಿ ಕಪ್ಪು ರೂಫ್, ಒಆರ್ವಿಎಂ ಹಾಗೂ ಎ ಪಿಲ್ಲರ್ಗಳು ಸೇರಿವೆ.
MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಹಿಂಭಾಗದ ಪ್ರೊಫೈಲ್ ಸ್ಪೋರ್ಟಿ ಥೀಮ್ನೊಂದಿಗೆ ಮುಂದುವರಿಯುತ್ತದೆ. ಇದರ ಜೊತೆಗೆ ನಯವಾಗಿರುವ ಎಲ್ಇಡಿ ಟೇಲ್ಲೈಟ್ಗಳಿವೆ. ಹಿಂಭಾಗದ ಬಂಪರ್ನ ಎರಡೂ ತುದಿಯಲ್ಲಿ ರಿಫ್ಲೆಕ್ಟರ್ಗಳಿವೆ. ಮಧ್ಯ ಭಾಗದಲ್ಲಿ ಸಿಲ್ವರ್ ಸ್ಕಫ್ ಪ್ಲೇಟ್ಗಳಿವೆ.
MOST READ: ಬೈಕುಗಳಲ್ಲಿ ಡೀಸೆಲ್ ಎಂಜಿನ್ ಏಕೆ ಬಳಸಲ್ಲ ಗೊತ್ತಾ?

ಆರಂಭದಲ್ಲಿ, ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯಲ್ಲಿ 1.5 ಲೀಟರ್ ಟರ್ಬೋಚಾರ್ಜ್ಡ್ ಟಿಎಸ್ಐ ಪೆಟ್ರೋಲ್ ಎಂಜಿನ್ ಅಳವಡಿಸಲಾಗುತ್ತದೆ. 150 ಬಿಹೆಚ್ಪಿ ಪವರ್ ಉತ್ಪಾದಿಸುವ ಈ ಎಂಜಿನ್ನಲ್ಲಿ 7 ಸ್ಪೀಡಿನ ಡಿಎಸ್ಜಿ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್ ಯುನಿಟ್ ಅಳವಡಿಸಲಾಗುತ್ತದೆ.

ಭಾರತಕ್ಕೆಂದು ತಯಾರಿಸಲಾಗಿರುವ ಈ ಮಾದರಿಯು ಫೋಕ್ಸ್ವ್ಯಾಗನ್ನ 4 ಮೋಷನ್ ಆಲ್-ವೀಲ್-ಡ್ರೈವ್ ಸಿಸ್ಟಂನ ಆಯ್ಕೆಯಿಲ್ಲದೆ ಟಿ-ರಾಕ್ನ ಮುಂಭಾಗದ ವ್ಹೀಲ್ಗಳಿಗೆ ಪವರ್ ನೀಡುವ ಎಂಜಿನ್ ಅನ್ನು ಹೊಂದಿದೆ.

ಆದರೆ, ಜರ್ಮನ್ ಮೂಲದ ಫೋಕ್ಸ್ವ್ಯಾಗನ್ ಕಂಪನಿಯು ಸ್ಥಳೀಯವಾಗಿ ತಯಾರಿಸಲಾಗುವ ಟಿ-ರಾಕ್ನ ಆವೃತ್ತಿಯನ್ನು ಭಾರತದಲ್ಲಿ ನಂತರದ ದಿನಗಳಲ್ಲಿ ಬಿಡುಗಡೆಗೊಳಿಸಲಿದೆ. 1.0 ಲೀಟರಿನ ಟಿಎಸ್ಐ ಎಂಜಿನ್ ಅನ್ನು ಹೊಂದಿರುವ ಈ ಎಸ್ಯುವಿಯನ್ನು ದೇಶಿಯ ಮಾರುಕಟ್ಟೆಗಾಗಿಯೇ ಅಭಿವೃದ್ಧಿಪಡಿಸಲಾಗಿದೆ.

ಫೋಕ್ಸ್ವ್ಯಾಗನ್ ಟಿ-ರಾಕ್ ಅನ್ನು ಆರಂಭದಲ್ಲಿ ಭಾರತದಲ್ಲಿ ಸಿಬಿಯು (ಕಂಪ್ಲಿಟ್ಲಿ ಬಿಲ್ಟ್ ಯುನಿಟ್) ಆಗಿ ಆಮದು ಮಾಡಿಕೊಳ್ಳಲಾಗುವುದು. ಆದ್ದರಿಂದ, ಟಿ-ರಾಕ್ ಆರಂಭದಿಂದಲೇ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗಲಿದೆ ಎಂದು ಫೋಕ್ಸ್ವ್ಯಾಗನ್ ನಿರೀಕ್ಷಿಸುತ್ತಿಲ್ಲ. ಫೋಕ್ಸ್ವ್ಯಾಗನ್ನ ಮಾಡ್ಯುಲರ್ ಎಂಕ್ಯೂಬಿ ಪ್ಲಾಟ್ಫಾರಂನ ಭಾಗವಾಗಿರುವ ಈ ಎಸ್ಯುವಿ ಟಿಗುವಾನ್ ಹಾಗೂ ಇತರ ಸ್ಕೋಡಾ ಮಾದರಿಗಳಿಗೆ ಆಧಾರವಾಗಿದೆ.

ಡ್ರೈವ್ಸ್ಪಾರ್ಕ್ ಅಭಿಪ್ರಾಯ
ಫೋಕ್ಸ್ವ್ಯಾಗನ್ ಟಿ-ರಾಕ್, ದೇಶಿಯ ಮಾರುಕಟ್ಟೆಗಾಗಿ ಕಂಪನಿಯು ಯೋಜಿಸಿರುವ ಹಲವು ವಾಹನಗಳ ಬಿಡುಗಡೆಗಳ ಸಾಲಿನಲ್ಲಿ ಮೊದಲನೆಯದು. ಇದು ಫೋಕ್ಸ್ವ್ಯಾಗನ್ನ ಹೊಸ ಇಂಡಿಯಾ 2.0 ಯೋಜನೆಯ ಭಾಗವಾಗಿದ್ದು, ಸ್ಕೋಡಾ ಈ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತದೆ.

ಬಿಡುಗಡೆಯಾದ ನಂತರ ಫೋಕ್ಸ್ವ್ಯಾಗನ್ ಟಿ-ರಾಕ್ ಎಸ್ಯುವಿಯ ಬೆಲೆಯು ಎಕ್ಸ್ ಶೋರೂಂ ದರದಂತೆ ರೂ.18 ಲಕ್ಷಗಳಾಗಲಿದೆ. ಬಿಡುಗಡೆಯಾದ ನಂತರ ದೇಶಿಯ ಮಾರುಕಟ್ಟೆಯಲ್ಲಿ ಕಿಯಾ ಸೆಲ್ಟೋಸ್, ಜೀಪ್ ಕಂಪಾಸ್, ಮಹೀಂದ್ರಾ ಎಕ್ಸ್ಯುವಿ 500 ಹಾಗೂ ಹೊಸ 2020ರ ಹ್ಯುಂಡೈ ಕ್ರೆಟಾ ಕಾರುಗಳಿಗೆ ಪೈಪೋಟಿ ನೀಡುತ್ತದೆ.
Source: Autocarindia