ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ವೊಲ್ವೊ ಕಂಪನಿಯು ಹೊಸ ಎಕ್ಸ್‌ಸಿ 40 ಟಿ 4 ಆರ್ ಪೆಟ್ರೋಲ್ ಎಂಜಿನ್ ಕಾರ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಕಾರಿನ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.39.9 ಲಕ್ಷಗಳಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಚಿಕ್ಕ ಸ್ಕ್ಯಾಂಡಿನೇವಿಯನ್ ಎಸ್‌ಯುವಿಯು ಈಗ ಬಿಎಸ್ 6 ಎಂಜಿನ್ ಅನ್ನು ಹೊಂದಿದೆ. ವೊಲ್ವೊ ಸರಣಿಯ ಕಾರುಗಳು ತಯಾರಾಗುವ ಕಾಂಪ್ಯಾಕ್ಟ್ ಮಾಡ್ಯುಲರ್ ಆರ್ಕಿಟೆಕ್ಚರ್ (ಸಿಎಂಎ) ಪ್ಲಾಟ್‌ಫಾರಂ ಮೇಲೆಯೇ ಈ ಕಾರ್ ಅನ್ನು ಸಹ ಅಭಿವೃದ್ಧಿಪಡಿಸಲಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಎಕ್ಸ್‌ಸಿ 40 ಕಾರಿನಲ್ಲಿ 2.0-ಲೀಟರ್‍‍ನ ನಾಲ್ಕು ಸಿಲಿಂಡರ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಈ ಎಂಜಿನ್ 187 ಬಿಹೆಚ್‌ಪಿ ಪವರ್ ಹಾಗೂ 300 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಗೇರ್ಟ್ರಾನಿಕ್ ಗೇರ್‌ಬಾಕ್ಸ್ ಅಳವಡಿಸಲಾಗಿದೆ. ಇದು ಮುಂದಿನ ವ್ಹೀಲ್‍‍ಗಳನ್ನು ಚಲಾಯಿಸುತ್ತದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಬಿಡುಗಡೆಯ ನಂತರ ಮಾತನಾಡಿದ ವೋಲ್ವೋ ಕಾರ್ಸ್ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಚಾರ್ಲ್ಸ್ ಫ್ರಂಪ್‍‍ರವರು ಎಕ್ಸ್‌ಸಿ 40 ಟಿ 4 ಆರ್ ಡಿಸೈನ್ ಎಂಟ್ರಿ ಲೆವೆಲ್ ಎಸ್‌ಯುವಿ ಸೆಗ್‍ಮೆಂಟಿನಲ್ಲಿ ನಾವು ಬಿಡುಗಡೆಗೊಳಿಸುತ್ತಿರುವ ಮೊದಲ ಪೆಟ್ರೋಲ್ ಎಂಜಿನ್ ವಾಹನವಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಎಕ್ಸ್‌ಸಿ 40 ಕಾರು, ಐಕೋಟಿಯಿಂದ 2019ರ ಪ್ರೀಮಿಯಂ ಕಾರ್ ಪ್ರಶಸ್ತಿ ಪಡೆದಿದೆ. ಎಕ್ಸ್‌ಸಿ 40 ಈ ಪ್ರಶಸ್ತಿಯನ್ನು ಪಡೆದ ಮೊದಲ ಐಷಾರಾಮಿ ಕಾರ್ ಆಗಿದೆ. ಎಕ್ಸ್‌ಸಿ 40 ಕಾರು, 2018ರ ವರ್ಷದ ಯುರೋಪಿಯನ್ ಕಾರ್ ಕೂಡ ಆಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಆರ್ ಡಿಸೈನ್‌ನೊಂದಿಗೆ ನಮ್ಮ ಆಕರ್ಷಕ ಬೆಲೆಯು ಸಹ ಗ್ರಾಹಕರನ್ನು ಹೆಚ್ಚಿನ ಪ್ರಮಾಣದಲ್ಲಿ ತನ್ನತ್ತ ಸೆಳೆಯಲಿದೆ. ಗ್ರಾಹಕರ ಆದ್ಯತೆಗಳಿಗೆ ತಕ್ಕಂತೆ ಈ ಎಂಟ್ರಿ ಲೆವೆಲ್ ಕಾರಿನಲ್ಲಿ ಹಲವಾರು ಫೀಚರ್‍‍ಗಳನ್ನು ಅಳವಡಿಸಿ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಎಕ್ಸ್‌ಸಿ 40 ಕಾರ್ ಅನ್ನು ಮೊದಲ ಬಾರಿಗೆ 2018ರಲ್ಲಿ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿತ್ತು. ಎಕ್ಸ್‌ಸಿ 40 ಐಷಾರಾಮಿ ಕಾಂಪ್ಯಾಕ್ಟ್ ಎಸ್‌ಯುವಿ ಸೆಗ್‍‍ಮೆಂಟಿನಲ್ಲಿರುವ ಹೊಸ ಮಾದರಿಯ ಕಾರ್ ಆಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಈ ಕಾರು ಡ್ಯುಯಲ್ ಟೋನ್ ಬಣ್ಣದಲ್ಲಿ ಸ್ಪೋರ್ಟಿಯಾಗಿ ಕಾಣುತ್ತದೆ. ಥಾರ್ ಹ್ಯಾಮರ್ ಹೆಡ್‌ಲ್ಯಾಂಪ್‌ನೊಂದಿಗಿರುವ ಪಿಯಾನೋ ಬ್ಲ್ಯಾಕ್ ಗ್ರಿಲ್‌ ಬೋಲ್ಡ್ ಲುಕ್ ಅನ್ನು ಹೆಚ್ಚಿಸುತ್ತದೆ. ಕ್ಯಾಬಿನ್‍‍ನಲ್ಲಿ ಸಾಫ್ಟ್ ಟಚ್ ಲೆದರ್‍ ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಡ್ಯಾಶ್‌ಬೋರ್ಡ್‌ನಲ್ಲಿ ಪಿಯಾನೋ ಬ್ಲಾಕ್ ಹಾಗೂ ಅಲ್ಯೂಮಿನಿಯಂ ಬಣ್ಣವನ್ನು ಹೊಂದಿದೆ. ಟಚ್‌ಸ್ಕ್ರೀನ್ ಸುತ್ತಲೂ ಅಲ್ಯೂಮಿನಿಯಂ ಬಣ್ಣವನ್ನು ನೀಡಲಾಗಿದೆ. ಎಕ್ಸ್‌ಸಿ 40 ಕಾರಿನಲ್ಲಿ ಐಷಾರಾಮಿ ಕಾರುಗಳಲ್ಲಿರುವಂತಹ ಎಲ್ಲಾ ಬೆಲ್‌ಗಳು ಹಾಗೂ ವಿಸಲ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಈ ಕಾರಿನಲ್ಲಿ ಸ್ಮಾರ್ಟ್‌ಫೋನ್ ಕನೆಕ್ಟಿವಿಟಿ ಫೀಚರ್‍‍ಗಳನ್ನು ಹೊಂದಿರುವ 12.3 ಇಂಚಿನ ವರ್ಟಿಕಲ್ ಆಗಿರುವ ಟಚ್‌ಸ್ಕ್ರೀನ್, ಡ್ಯಾಶ್ ಮೌಂಟೆಡ್ ವೂಫರ್, ಪನೋರಮಿಕ್ ಸನ್‌ರೂಫ್ ಹಾಗೂ ಸ್ಮಾರ್ಟ್ ಫೋನ್‌ಗಳಿಗಾಗಿ ವೈರ್‌ಲೆಸ್ ಚಾರ್ಜಿಂಗ್‍‍ಗಳಿವೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಇದರ ಜೊತೆಗೆ ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, 9 ಇಂಚಿನ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಹೊಂದಿರುವ ಹಾರ್ಮನ್ / ಕಾರ್ಡನ್ 14 ಸ್ಪೀಕರ್ 600 ಡಬ್ಲ್ಯೂ ಸರೌಂಡ್ ಸಿಸ್ಟಂಗಳಿವೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಎಂಐಡಿ ಟಚ್‌ಸ್ಕ್ರೀನ್, ಡಿಸ್ಟನ್ಸ್ ಅಲರ್ಟ್, ಫ್ರಂಟ್ ಹಾಗೂ ರೇರ್ ಪಾರ್ಕಿಂಗ್ ಅಸಿಸ್ಟ್, ಡೈಮಂಡ್ ಕಟ್ ಅಲಾಯ್ ವ್ಹೀಲ್ ಹಾಗೂ ಹ್ಯಾಂಡ್ಸ್ ಫ್ರೀಯಾಗಿ ಆಪರೇಟ್ ಮಾಡುವ ಟೇಲ್‌ಗೇಟ್‍‍ಗಳಿವೆ. ಇದರ ಜೊತೆಗೆ, ಎಕ್ಸ್‌ಸಿ 40 ಕಾರು ಈ ಸೆಗ್‍‍ಮೆಂಟಿನಲ್ಲಿಯೇ ಮೊದಲ ಬಾರಿಗೆ ರಾಡಾರ್ ಆಧಾರಿತ ಸುರಕ್ಷತೆಯನ್ನು ಹೊಂದಿದೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ಡ್ರೈವರ್ ಅಸಿಸ್ಟ್ ಸಿಸ್ಟಂ ಅಂದರೆ ನಗರ ಸುರಕ್ಷತೆಗಾಗಿ ಸ್ಟಿಯರಿಂಗ್ ಅಸಿಸ್ಟ್ ನೀಡಲಾಗಿದ್ದು, ಇದು 50 ಕಿ.ಮೀ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಹೊಸ ಎಕ್ಸ್‌ಸಿ 40 ಕಾರಿನಲ್ಲಿ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಮಿಟಿಗೇಷನ್, ಡ್ರೈವರ್ ಅಲರ್ಟ್, ರನ್ ಆಫ್ ರೋಡ್ ಪ್ರೊಟೆಕ್ಷನ್, ರೋಲ್ ಸ್ಟಾಬಿಲಿಟಿ ಕಂಟ್ರೋಲ್ ಹಾಗೂ ಏಳು ಏರ್‌ಬ್ಯಾಗ್‌ಗಳಿವೆ.

ಬಿಡುಗಡೆಯಾಯ್ತು ಬಿ‍ಎಸ್ 6 ಎಂಜಿನ್‍‍ನ ವೊಲ್ವೊ ಎಕ್ಸ್‌ಸಿ 40 ಕಾರು

ವೊಲ್ವೊ ಕಂಪನಿಯ ಹೊಸ ಎಕ್ಸ್‌ಸಿ 40 ಕಾರು ದೇಶಿಯ ಮಾರುಕಟ್ಟೆಯಲ್ಲಿ ಹೊಸ ತಲೆಮಾರಿನ ಮರ್ಸಿಡಿಸ್ ಬೆಂಝ್ ಜಿ‍ಎಲ್‍ಎ, ಬಿ‍ಎಂ‍‍ಡಬ್ಲ್ಯು ಎಕ್ಸ್ 1 ಹಾಗೂ ಆಡಿ ಕ್ಯೂ 3 ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on ವೊಲ್ವೊ volvo
English summary
Volvo XC40 T4 R Design BS6 launched in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X