ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ಸ್ವೀಡಿಷ್ ವಾಹನ ತಯಾರಕ ಕಂಪನಿಯಾದ ವೊಲ್ವೊ ತನ್ನ ಎಕ್ಸ್‌ಸಿ40 ಮಾದರಿಯನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ವೊಲ್ವೊ ಎಕ್ಸ್‌ಸಿ40 ಪೆಟ್ರೋಲ್ ಮಾದರಿಯನ್ನು ಮುಂದಿನ ತಿಂಗಳಲ್ಲಿ ಬಿಡುಗಡೆಗೊಳಿಸಲಿದೆ. ಬಿಡುಗಡೆಯ ಮೊದಲು ಕಂಪನಿಯು ಬುಕ್ಕಿಂಗ್ ಅನ್ನು ಪ್ರಾರಂಭಿಸಲು ಚಿಂತಿಸುತ್ತಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಎಕ್ಸ್‌ಸಿ40 ಸಣ್ಣ ಗಾತ್ರದ ಎಸ್‍‍ಯುವಿಯಾಗಿದೆ. ಎಕ್ಸ್‌ಸಿ40 ಎಸ್‍‍ಯುವಿಯು ಡಿ4 2.0 ಲೀಟರ್ ಡೀಸೆಲ್ ಎಂಜಿನ್ 190 ಬಿ‍‍ಹೆಚ್‍‍ಪಿ ಪವರ್ ಮತ್ತು 400 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಡೀಸೆಲ್ ಮಾದರಿಯನ್ನು ಸದ್ಯಕ್ಕೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಮತ್ತು ನವೀಕರಿಸಿದ ಬಿಎಸ್-6 ಮಾದರಿಗಳನ್ನು 2020ರ ನಂತರದ ಹಂತದಲ್ಲಿ ಮಾರಾಟ ಮಾಡಲಾಗುತ್ತದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ಶೀಘ್ರದಲ್ಲೇ ಬಿಡುಗಡೆಯಾಗಲಿರುವ ಎಕ್ಸ್‌ಸಿ40 ಪೆಟ್ರೋಲ್ ಮಾದರಿಯನ್ನು ಟಿ 4 ಟ್ರಿಮ್‌ನಲ್ಲಿ ಲಭ್ಯವಾಗಲಿದೆ. ಎಕ್ಸ್‌ಸಿ 40 ಎಸ್‍‍ಯುವಿ 2.0 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ 190 ಬಿ‍‍ಹೆಚ್‍‍ಪಿ ಪವರ್ ಮತ್ತು 300 ಎನ್‍ಎಂ ಟಾರ್ಕ್ ಅನ್ನು ಉತಾದಿಸುತ್ತದೆ. ಎಂಜಿನ್‍‍ನೊಂದಿಗೆ 8 ಸ್ಪೀಡ್ ಗೇರ್‍‍ಬಾಕ್ಸ್ ಅನ್ನು ಅಳವಡಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಎಕ್ಸ್‌ಸಿ 40 ಪೆಟ್ರೋಲ್ ರೂಪಾಂತರವು ಅಲ್ ವ್ಹೀಲ್ ಡ್ರೈವ್ ಪ್ಯಾಕೇಜ್ ಅನ್ನು ಹೊಂದಿರುವುದಿಲ್ಲ ಎಂಬ ವದಂತಿಗಳಿವೆ. ಇದರೊಂದಿಗೆ ಎಸ್‍‍ಯು‍ವಿ ಬಿಎಸ್-6 ಎಂಜಿನ್‍‍ಗಳನ್ನು ಹೊಂದಿರಬಹುದು ಮತ್ತು ಬಿಎಸ್-6 ಮಾಲಿನ್ಯ ಗಡುವಿನ ಮುಂಚಿತವಾಗಿ ಬಿಎಸ್-6 ಎಂಜಿನ್ ಆಗಿ ನವೀಕರಿಸಲಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ಈ ಎಸ್‍‍ಯು‍ವಿ ಪೆಡಲ್ ಶಿಫ್ಟರ್‌, ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಆಟೋಮ್ಯಾಟಿಕ್ ಪಾರ್ಕಿಂಗ್, ಹಿಟಡ್ ಸೀಟ್‍‍ಗಳು, ವೈರ್‍‍ಲೆಸ್ ಫೋನ್ ಚಾರ್ಜಿಂಗ್ ಮತ್ತು ಹ್ಯಾಂಡ್ಸ್ ಫ್ರೀ ಬೂಟ್ ಓಪನಿಂಗ್ ಫಂಕ್ಷನ್ ಅನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ.

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಕಂಪನಿಯು ಈ ವರ್ಷದ ಆರಂಭದಲ್ಲಿ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕನ್ಸೋಲ್ ಅನ್ನು ಬಿಡುಗಡೆಗೊಳಿಸಿತ್ತು. ಐಷಾರಾಮಿ ಮಾದರಿಯಾದ ಎಕ್ಸ್‌ಸಿ90 ಮಾದರಿಯ ಸೀಮಿತ 15 ಯುನಿಟ್‍‍ಗಳನ್ನು ಮಾತ್ರ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್ ಸ್ಟಾಂಡರ್ಡ್ ಎಸ್‍‍ಯುವಿಯಲ್ಲಿರುವಂತಹ ಟಿ 8 ಪೆಟ್ರೋಲ್ ಹೈಬ್ರಿಡ್ ಎಂಜಿನ್ ಹೊಂದಿದೆ. ಈ 2.0 ಲೀಟರಿನ ಟರ್ಬೋಚಾರ್ಜ್ಡ್ ಹಾಗೂ ಸೂಪರ್ ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಅನ್ನು, ಎಲೆಕ್ಟ್ರಿಕ್ ಮೋಟರಿಗೆ ಜೋಡಿಸಲಾಗಿದೆ. ಈ ಎರಡೂ ಎಂಜಿನ್‍‍ಗಳು ಜೊತೆಗೂಡಿ 401 ಬಿ‍‍ಹೆಚ್‍‍ಪಿ ಪವರ್ ಹಾಗೂ 640 ಎನ್‍ಎಂ ಟಾರ್ಕ್ ಉತ್ಪಾದಿಸುತ್ತವೆ. ಈ ಎಂಜಿನ್‍‍ನಲ್ಲಿ 8 ಸ್ಪೀಡಿನ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಸ್ಟ್ಯಾಂಡರ್ಡ್ ಆಗಿ ಅಳವಡಿಸಲಾಗಿದೆ. ಈ ಗೇರ್‍‍ಬಾಕ್ಸ್ ಎಲ್ಲಾ ನಾಲ್ಕು ವ್ಹೀಲ್‍‍ಗಳಿಗೆ ಎಡಬ್ಲ್ಯೂಡಿ ಸಿಸ್ಟಂ ಮೂಲಕ ಪವರ್ ನೀಡುತ್ತದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಎಕ್ಸ್‌ಸಿ 90 ಎಕ್ಸಲೆನ್ಸ್ ಲೌಂಜ್ ಕಂಸೋಲ್‍‍ನಲ್ಲಿ 20 ಸ್ಪೀಕರ್, 1400 ವ್ಯಾಟ್ ಬೋವರ್ಸ್ ಹಾಗೂ ವಿಲ್ಕೆನ್ಸ್ ಸರೌಂಡ್ ಸೌಂಡ್ ಸಿಸ್ಟಂ, ನಪ್ಪಾ ಲೆದರ್ ವ್ರಾಪ್ಡ್ ಸೀಟುಗಳು, ಒಪನ್ ಪೋರ್ ವುಡ್‍‍ಗಳಿದ್ದು ಕ್ಯಾಬಿನ್‌ಗೆ ಐಷಾರಾಮಿತನವನ್ನು ನೀಡುತ್ತವೆ. ಹೊಸ ಯುನಿಟ್ ರೈಸಿಂಗ್ ಲೆಗ್ ರೆಸ್ಟ್, ಸ್ಟೋರೇಜ್ ಕಂಪಾರ್ಟ್‍‍ಮೆಂಟ್ ಹಾಗೂ ಪಾಪ್ ಅಪ್ ಟಚ್‌ಸ್ಕ್ರೀನ್ ಡಿಸ್‍‍ಪ್ಲೇ‍ಗಳನ್ನು ಹೊಂದಿದೆ. ಹೊಸ ಎಸ್‍‍ಯುವಿಯಲ್ಲಿ ಕ್ರಿಸ್ಟಲ್ ಗ್ಲಾಸ್, ಇನ್ ಕಾರ್ ರೆಫ್ರಿಜರೇಟರ್ ಹಾಗೂ ಷಾಂಪೇನ್ ಫ್ಲೂಟ್ ಹೋಲ್ಡರ್‍‍ನಂತಹ ಐಷಾರಾಮಿ ಫೀಚರ್‍‍ಗಳಿವೆ.

MOST READ: ಸದ್ದಿಲ್ಲದೇ ಕಾರುಗಳನ್ನು ರಿಕಾಲ್ ಮಾಡುತ್ತಿದೆ ಮಾರುತಿ

ಶೀಘ್ರದಲ್ಲೇ ಬಿಡುಗಡೆಯಾಗಲಿದೆ ವೊಲ್ವೊ ಎಕ್ಸ್‌ಸಿ40

ವೊಲ್ವೊ ಎಕ್ಸ್‌ಸಿ40 ಎಸ್‍‍ಯು‍ವಿಯು ಭಾರತೀಯ ಎಕ್ಸ್ ಶೋರೂಂ ಪ್ರಕಾರ ರೂ.34 ಲಕ್ಷದಿಂದ ರೂ.39 ಲಕ್ಷದವರೆಗೆ ಬೆಲೆಯನ್ನು ಹೊಂದಿರಬಹುದು ಎಂದು ನಿರೀಕ್ಷಿಸಲಾಗಿದೆ. ವೊಲ್ವೊ ಎಕ್ಸ್‌ಸಿ40 ಎಸ್‍‍ಯು‍ವಿಯು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಬಿಎಂಡಬ್ಲ್ಯು ಎಕ್ಸ್1, ಮರ್ಸಿಡಿಸ್ ಬೆಂಝ್ ಜಿಎಲ್ಎ, ಆಡಿ ಕ್ಯೂ3 ಮತ್ತು ಮಿನಿ ಕಂಟ್ರಿಮ್ಯಾನ್ ಮಾದರಿಗಳಿಗೆ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on ವೊಲ್ವೊ volvo
English summary
Volvo XC40 Petrol Model Launching Next Month: Details And Expected Price - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X