ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಸುಧಾರಿತ ತಂತ್ರಜ್ಞಾನದತ್ತ ಹೊಸ ದಾಪುಗಾಲು ಇಡುತ್ತಿರುವ ಜಾಗತಿಕ ಆಟೋ ಉದ್ಯಮವು ಪ್ರಯಾಣಿಕರ ಸುರಕ್ಷತೆಗಾಗಿ ಹೊಸ ಹೊಸ ಸೌಲಭ್ಯಗಳನ್ನು ಪರಿಚಯಿಸುತ್ತಿದ್ದು, ಇದೀಗ ಮೊದಲ ಬಾರಿಗೆ ಕಾರುಗಳ ಹೊರಭಾಗದಲ್ಲೂ ಏರ್‌ಬ್ಯಾಗ್ ಅಳವಡಿಕೆ ಕುರಿತಂತೆ ತಹರೇವಾರಿ ಪ್ರಯತ್ನಗಳು ನಡೆಯುತ್ತಿವೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಜರ್ಮನಿಯ ಜನಪ್ರಿಯ ಆಟೋ ಬಿಡಿಭಾಗಗಳ ಉತ್ಪಾದನಾ ಸಂಸ್ಥೆಯಾದ ಜೆಡ್ಎಫ್ ಈ ಬಗ್ಗೆ ಹೊಸ ಪ್ರಯತ್ನಕ್ಕೆ ಕೈ ಹಾಕಿರುವುದಲ್ಲದೇ ಕಾನ್ಸೆಪ್ಟ್ ಮಾದರಿಗಳನ್ನು ನಿರ್ಮಾಣ ಮಾಡಿ ಪರೀಕ್ಷಾರ್ಥ ಕಾರ್ಯಗಳನ್ನು ನಡೆಸುತ್ತಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕಾರುಗಳಲ್ಲಿ ಏರ್‌ಬ್ಯಾಗ್‌ಗಿಂತಲೂ ಹೊರ ಭಾಗದ ಏರ್‌ಬ್ಯಾಗ್ ಸೌಲಭ್ಯವು ಶೇ.40ರಷ್ಟು ಹೆಚ್ಚು ಪ್ರಯಾಣಿಕರ ಸುರಕ್ಷತೆ ಜೊತೆಗೆ ವಾಹನಗಳಿಗೂ ಯಾವುದೇ ರೀತಿ ಹಾನಿಯಾಗದಂತೆ ತಡೆಯಬಲ್ಲ ಗುಣವೈಶಿಷ್ಟ್ಯತೆ ಹೊಂದಿದೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಕಾರಿನ ಬಂಪರ್, ಸೈಡ್ ವಿಂಗ್ ಮತ್ತು ಹಿಂಭಾಗದ ಬಂಪರ್‌ಗಳಲ್ಲಿ ಅಳವಡಿಸಲಾಗುವ ಏರ್‌ಬ್ಯಾಗ್‌ಗಳು ಅಪಘಾತಕ್ಕೂ ಮುನ್ನ ಕೆಲವೇ ಸೆಕೆಂಡುಗಳಲ್ಲಿ ತೆರೆದುಕೊಳ್ಳುವ ಮೂಲಕ ಆಗಬಹುದಾದ ಅಪಘಾತದ ಭೀರಕತೆಯನ್ನು ತಗ್ಗಿಸಬಲ್ಲದು.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಜೆಡ್ಎಫ್ ಸಂಸ್ಥೆಯ ಹೇಳಿಕೆಯ ಪ್ರಕಾರ, ಕಾರಿನ ಹೊರ ಭಾಗದ ಏರ್‌ಬ್ಯಾಗ್ ಸಂಪೂರ್ಣವಾಗಿ ಸಾಫ್ಟ್‌ವೇರ್ ಮೂಲಕವೇ ನಿಯಂತ್ರಣ ಮಾಡಲಾಗುತ್ತೆ ಎಂದು ಹೇಳಿಕೊಂಡಿದ್ದು, ಆಟೋ ಸೆನ್ಸಾರ್ ಮೂಲಕ ಅಪಘಾತಗಳ ಸಾಧ್ಯತೆಯ ಮೇಲೆ ಏರ್‌ಬ್ಯಾಗ್‌ಗಳು ತೆರೆದುಕೊಳ್ಳಲಿವೆಯೆಂತೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಅಂದರೆ, ಒಂದು ಅಪಘಾತ ಸಂಭವಿಸುವುದಕ್ಕೂ ಮುನ್ನ ಹೊರಭಾಗದ ಏರ್‌ಬ್ಯಾಗ್ ಹೊಂದಿರುವ ಕಾರು ಮಾದರಿಯು ಮತ್ತೊಂದು ವಾಹನಕ್ಕೆ ಡಿಕ್ಕಿ ಹೊಡೆಯುವುದಕ್ಕೂ ಮುನ್ನ ಅಥವಾ ಬೇರೊಂದು ವಾಹನವು ಹೊರಭಾಗದ ಏರ್‌ಬ್ಯಾಗ್ ಹೊಂದಿರುವ ವಾಹನಕ್ಕೆ ಡಿಕ್ಕಿ ಹೊಡೆಯಲು ಬಂದಾಗ ತಕ್ಷಣವೇ ಏರ್‌ಬ್ಯಾಗ್ ಸೆನ್ಸಾರ್‌ಗಳು ಕಂಟ್ರೋಲ್ ರೂಂಗೆ ಮಾಹಿತಿ ರವಾನೆ ಮಾಡುತ್ತವೆ. ಈ ವೇಳೆ ಅಪಘಾತದ ತೀವ್ರತೆಯನ್ನು ಅರಿವು ಸಂಜ್ಞೆಗಳು ಏರ್‌ಬ್ಯಾಗ್ ತೆರೆದುಕೊಳ್ಳಬೇಕೋ ಅಥವಾ ಬೇಡವೋ ಎಂಬುವುದನ್ನು ತತಕ್ಷಣವೇ ನಿರ್ಧರಿಸುತ್ತೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಒಂದು ವೇಳೆ ಎರಡು ವಾಹನಗಳ ಮಧ್ಯೆ ಅಪಘಾತವು ಖಚಿತತೆಯಾದಲ್ಲಿ ಕೇವಲ 150 ಮಿಲಿ ಸೆಂಕೆಂಡುಗಳಲ್ಲಿ ತೆರೆದುಕೊಳ್ಳುವ ಹೊರ ಏರ್‌ಬ್ಯಾಗ್ ಸೌಲಭ್ಯವು ಶೇ.60 ರಷ್ಟು ಹಾನಿಯ ತೀವ್ರತೆ ತಗ್ಗಿಸುತ್ತೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಮತ್ತೊಂದು ಪ್ರಮುಖ ವಿಚಾರ ಅಂದ್ರೆ, ಅಪಘಾತವಾದಾಗ ಏರ್‌ಬ್ಯಾಗ್‌ಗಳನ್ನು ತೆರೆದುಕೊಳ್ಳುವುದು ಹೊರತುಪಡಿಸಿ ಎರಡು ವಾಹನಗಳು ಇನ್ನೇನು ಅಪಘಾತವಾಗಬೇಕು ಎನ್ನುವಷ್ಟರಲ್ಲಿ ಚಾಲಕರ ಸಮಯ ಪ್ರಜ್ಞೆಯಿಂದ ನಿಯಂತ್ರಣಕ್ಕೆ ಬಂದಲ್ಲಿ ಏರ್‌ಬ್ಯಾಗ್ ಯಾವುದೇ ಕಾರಣಕ್ಕೂ ತೆರೆದುಕೊಳ್ಳುವುದಿಲ್ಲ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಯಾಕೆಂದ್ರೆ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವ ಏರ್‌ಬ್ಯಾಗ್ ಸೆನ್ಸಾರ್‌ಗಳು ಕಾರಿನ ವೇಗ ಮತ್ತು ವಿರುದ್ದ ದಿಕ್ಕಿನಿಂದ ಬರುವ ವಾಹನದ ವೇಗವನ್ನು ಆಧರಿಸಿ ಅಪಘಾತದ ತೀವ್ರತೆಯನ್ನು ಲೆಕ್ಕಹಾಕಿ ಏರ್‌ಬ್ಯಾಗ್‌ಗಳು ತೆರೆಯಲು ಸಹಾಯ ಮಾಡುತ್ತದೆ.

ಹೀಗಾಗಿ ಇದು ಅವಶ್ಯಕತೆ ಇದ್ದಾಗ ಮಾತ್ರವೇ ತೆರೆದುಕೊಳ್ಳುವ ಮೂಲಕ ಪ್ರಯಾಣಿಕರನ್ನು ಮತ್ತು ವಾಹನವನ್ನು ಅಪಘಾತದ ತೀವ್ರತೆಯಿಂದ ಬಚಾವ್ ಮಾಡಬಲ್ಲದು. ಹೀಗಾಗಿ ಇದು ಮುಂಬರುವ ದಿನಗಳಲ್ಲಿ ಆಟೋ ಉದ್ಯಮ ಹೊಸ ಸಂಚಲನಕ್ಕೆ ಕಾರಣವಾಗಲಿದೆ ಎನ್ನುವುದು ಜೆಡ್ಎಫ್ ಸಂಸ್ಥೆಯ ಲೆಕ್ಕಾಚಾರ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಇದೇ ಕಾರಣಕ್ಕೆ ಜಗತ್ತಿನ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳನ್ನು ಆಹ್ವಾನಿಸಿದ್ದ ಜೆಡ್ಎಫ್ ಸಂಸ್ಥೆಯು ಹೊಸ ಏರ್‌ಬ್ಯಾಗ್ ಸೌಲಭ್ಯದ ಕುರಿತು ಮಾಹಿತಿ ಹಂಚಿಕೊಂಡಿದ್ದಲ್ಲದೇ ಏರ್‌ಬ್ಯಾಗ್ ಜೋಡಣೆ ಕುರಿತಾಗಿ ಮತ್ತಷ್ಟು ಹೊಸ ಸಲಹೆಗಳನ್ನು ಪಡೆದುಕೊಂಡಿದೆ.

ಆಟೋ ಉದ್ಯಮದಲ್ಲಿ ಹೊಸ ಅವಿಷ್ಕಾರ- ಕಾರಿನ ಹೊರಭಾಗದಲ್ಲೂ ಏರ್‌ಬ್ಯಾಗ್ ಸೌಲಭ್ಯ..!

ಹೀಗಾಗಿ ಕಾರು ಉತ್ಪಾದನಾ ಸಂಸ್ಥೆಗಳ ಸಲಹೆ ಮೇರೆಗೆ ಮುಂಬರುವ ದಿನಗಳಲ್ಲಿ ಹೊರಭಾಗದ ಏರ್‌ಬ್ಯಾಗ್ ಕಾನ್ಸೆಪ್ಟ್ ಯೋಜನೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ತರಲಿರುವ ಜೆಡ್ಎಫ್ ಸಂಸ್ಥೆಯು ಪ್ರಯಾಣಿಕ ಸುರಕ್ಷತೆಯಲ್ಲಿ ಹೊಸ ಅಧ್ಯಾಯಕ್ಕೆ ನಾಂದಿಹಾಡಿದೆ.

Most Read Articles

Kannada
English summary
ZF has revealed the world's first pre-crash external side airbag system for cars. Read in Kannada.
Story first published: Saturday, June 8, 2019, 16:54 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more