ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

2019 ಮೇ ಅವಧಿಯಲ್ಲಿ ಬಿಡುಗಡೆಗೊಂಡಿದ್ದ ಹ್ಯುಂಡೈ ಕಂಪನಿಯ ಹೊಸ ವೆನ್ಯೂ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯು ಬಿಡುಗಡೆಯಾದ ಕೆಲವೇ ತಿಂಗಳ ಅವಧಿಯಲ್ಲಿ 1 ಲಕ್ಷಕ್ಕೂ ಅಧಿಕ ಕಾರು ಮಾರಾಟ ದಾಖಲೆ ಕಂಡಿದ್ದು, ಟಾಪ್ ಎಂಡ್ ಮಾದರಿಯಾದ 1.0-ಲೀಟರ್ ಟರ್ಬೋ ಎಂಜಿನ್ ಮಾದರಿಗೆ ಅತಿ ಹೆಚ್ಚು ಗ್ರಾಹಕರು ಬೇಡಿಕೆ ಸಲ್ಲಿಸಿದ್ದಾರೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಹ್ಯುಂಡೈ ಕಂಪನಿಯು ಪರ್ಫಾಮೆನ್ಸ್ ಪ್ರಿಯರಿಗಾಗಿಯೇ ವೆನ್ಯೂ ಮಾದರಿಯಲ್ಲಿ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಿದ್ದು, ಇದು ಸಾಮಾನ್ಯ ಮಾದರಿಯ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ಗಿಂತಲೂ ಹೆಚ್ಚಿನ ಪರ್ಫಾಮೆನ್ಸ್ ಮತ್ತು ತಾಂತ್ರಿಕವಾಗಿ ಬಲಿಷ್ಠ ಕಾರು ಮಾದರಿಯಾಗಿದೆ. ಹೀಗಾಗಿ ಸಾಕಷ್ಟು ಗ್ರಾಹಕರು ಬೆಲೆ ದುಬಾರಿಯಾಗಿದ್ದರೂ ಸಹ ಟಾಪ್ ಎಂಡ್ ಮಾದರಿಯ ಖರೀದಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಹ್ಯುಂಡೈ ಕಂಪನಿಗೂ ಇದು ಭಾರೀ ಪ್ರಮಾಣದ ಲಾಭ ತಂದುಕೊಟ್ಟಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ವೆನ್ಯೂ ಕಾರು ಸದ್ಯ ಹ್ಯುಂಡೈ ನಿರ್ಮಾಣದ ಇತರೆ ಕಾರುಗಳಿಂತಲೂ ಅತಿ ವಿನೂತನ ತಂತ್ರಜ್ಞಾನ ಸೌಲಭ್ಯಗಳನ್ನು ಹೊತ್ತು ಬಂದಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಒಟ್ಟು 5 ವೆರಿಯೆಂಟ್‌ಗಳಲ್ಲಿ ಲಭ್ಯವಿರುವ ಹೊಸ ಕಾರು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 6.70 ಲಕ್ಷದಿಂದ ಟಾಪ್ ಎಂಡ್ ಆವೃತ್ತಿಯು ರೂ.11.50 ಲಕ್ಷ ಬೆಲೆ ಪಡೆದುಕೊಂಡಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ವೆನ್ಯೂ ಕಾರಿನಲ್ಲಿ ಎರಡು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆದುಕೊಂಡಿದ್ದರೆ ಡಿಸೇಲ್ ಎಂಜಿನ್‌ನಲ್ಲಿ ಒಂದು ಆಯ್ಕೆಯನ್ನು ನೀಡಲಾಗಿದ್ದು, ಇ, ಎಸ್, ಎಸ್ಎಕ್ಸ್, ಎಸ್ಎಕ್ಸ್(0) ಮತ್ತು ಎಸ್ಎಕ್ಸ್ ಪ್ಲಸ್ ವೆರಿಯೆಂಟ್‌ಗಳಲ್ಲಿ ಹೊಸ ವೆನ್ಯೂ ಕಾರು ಖರೀದಿಗೆ ಲಭ್ಯವಿದೆ.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಮೊದಲ ಬಾರಿಗೆ ಬಿಡುಗಡೆಯಾದ ಸಂದರ್ಭದಲ್ಲಿ ಬಿಎಸ್-4 ಎಂಜಿನ್ ಹೊಂದಿದ್ದ ವೆನ್ಯೂ ಕಾರು ಇದೀಗ ಹೊಸ ಎಮಿಷನ್ ನಿಯಮದಂತೆ ಬಿಎಸ್-6 ಎಂಜಿನ್ ಆಯ್ಕೆ ಹೊಂದಿದ್ದು, 1.2-ಲೀಟರ್ ಕಪ್ಪಾ ಪೆಟ್ರೋಲ್, 1.5-ಲೀಟರ್ ಡೀಸೆಲ್ ಎಂಜಿನ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಮಾದರಿಯನ್ನು ಜೋಡಣೆ ಮಾಡಲಾಗಿದೆ.

MOST READ: ಲಾಕ್‌ಡೌನ್‌ನಿಂದ ತತ್ತರಿಸಿರುವ ಆಟೋ ಕಂಪನಿಗಳಿಗೆ ಇದೀಗ ಮತ್ತೊಂದು ಸಂಕಷ್ಟ

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಬಿಎಸ್-4 ಎಂಜಿನ್ ಆಯ್ಕೆಯಲ್ಲಿ 1.2-ಲೀಟರ್ ಪೆಟ್ರೋಲ್, 1.4-ಲೀಟರ್ ಡೀಸೆಲ್ ಮತ್ತು 1.0-ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್ ಆಯ್ಕೆ ಹೊಂದಿದ್ದ ವೆನ್ಯೂ ಕಾರಿನಲ್ಲಿ ಬಿಎಸ್-6 ಎಮಿಷನ್ ಕಡ್ಡಾಯ ನಂತರ 1.4-ಲೀಟರ್ ಡೀಸೆಲ್ ಎಂಜಿನ್ ಸ್ಥಗಿತಗೊಳಿಸಿ ಹೊಸದಾಗಿ ಅಭಿವೃದ್ದಿಪಡಿಸಲಾಗಿದ್ದ 1.5-ಲೀಟರ್ ಡೀಸೆಲ್ ಎಂಜಿನ್ ಆಯ್ಕೆ ನೀಡಲಾಯ್ತು.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಈ ಮೂಲಕ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಯಲ್ಲೇ ಪವರ್‌ಪುಲ್ ಎಂಜಿನ್ ಆಯ್ಕೆ ಹೊಂದಿರುವ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಯು ಅತಿ ಹೆಚ್ಚು ಬೇಡಿಕೆಯ ವೆರಿಯೆಂಟ್ ಆಗಿ ಹೊರಹೊಮ್ಮಿದ್ದು, 6-ಸ್ಪೀಡ್ ಮ್ಯಾನುವಲ್ ಮತ್ತು 7-ಸ್ಪೀಡ್ ಡ್ಯುಯಲ್ ಕ್ಲಚ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 118-ಬಿಎಚ್‌ಪಿ ಮತ್ತು 172-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

MOST READ: ಸ್ಕ್ರ್ಯಾಪಿಂಗ್ ನೀತಿ ಜಾರಿಗೆ ಅಂತಿಮ ಸಿದ್ದತೆ- ಆಟೋ ಉದ್ಯಮದಲ್ಲಿ ಹೊಸ ಸಂಚಲನ..

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಇನ್ನುಳಿದ 1.2-ಲೀಟರ್ ಕಪ್ಪಾ ಪೆಟ್ರೋಲ್ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 82-ಬಿಎಚ್‌ಪಿ, 115-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ, 1.5-ಲೀಟರ್ ಡೀಸೆಲ್ ಮಾದರಿಯು 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಆಯ್ಕೆಯೊಂದಿಗೆ 99-ಬಿಎಚ್‌ಪಿ, 240-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು.

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಇನ್ನುಳಿದಂತೆ ತಾಂತ್ರಿಕವಾಗಿ ಅತ್ಯುತ್ತಮ ಕಾರು ಮಾದರಿಯಾಗಿ ಹೊರಹೊಮ್ಮಿರುವ ವೆನ್ಯೂ ಕಾರು 33 ಫೀಚರ್ಸ್‌ಗಳನ್ನು ಹೊಂದಿರುವ ಬ್ಯೂ ಲಿಂಕ್ ಕನೆಕ್ಟಿವಿಟಿ ಸೌಲಭ್ಯವನ್ನು ಸಹ ಹೊಂದಿದ್ದು, ಹೊಸ ಕಾರಿಗೆ ಗರಿಷ್ಠ ಭದ್ರತೆಯನ್ನು ದೊರೆಯಲಿದೆ.

MOST READ: ಕಾರು ಖರೀದಿ ಮಾಡುವ ಕರೋನಾ ವಾರಿಯರ್ಸ್‌ಗೆ ಭರ್ಜರಿ ಆಫರ್ ನೀಡಿದ ಟಾಟಾ

ಹ್ಯುಂಡೈ ವೆನ್ಯೂ ಕಾರಿನಲ್ಲಿ 1.0-ಲೀಟರ್ ಟರ್ಬೋ ಮಾದರಿಗೆ ಭರ್ಜರಿ ಬೇಡಿಕೆ

ಹೊಸ ಕಾರಿನಲ್ಲಿ ಪ್ರೀಮಿಯಂ ಸೌಲಭ್ಯಗಳ ಜೊತೆಗೆ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ಕ್ರೂಸ್ ಕಂಟ್ರೋಲ್, ಫ್ರಂಟ್ ವೀಲ್ಹ್ ಡಿಸ್ಕ್ ಬ್ರೇಕ್, ಆರು ಏರ್‌ಬ್ಯಾಗ್, ಹಿಲ್ ಅಸಿಸ್ಟ್ ಕಂಟ್ರೋಲ್, ಬ್ರೇಕ್ ಅಸಿಸ್ಟ್ ಕಂಟ್ರೋಲ್, ಎಬಿಎಸ್, ಇಬಿಡಿ, ಇಎಸ್‌ಸಿ, ವಿಎಸ್ಎಂ, ಸ್ಪೀಡ್ ಸೆನ್ಸಾರಿಂಗ್ ಆಟೋ ಡೋರ್ ಲಾಕ್, ISOFIX ಸೀಟ್, ಹೊಂದಿರುವ ವೆನ್ಯೂ ಕಾರು ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲೇ ವಿಶೇಷ ಎನ್ನಿಸಲಿದೆ.

Most Read Articles

Kannada
English summary
1.0 Turbo GDI Proves Most Popular Hyundai Venue Engine Option. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X