ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಏಪ್ರಿಲ್ 1ರಿಂದ ಬಿಎಸ್-6 ಎಮಿಷನ್ ನಿಯಮವು ಜಾರಿಗೆ ಬರುತ್ತಿದ್ದು, ನಿಸ್ಸಾನ್ ಇಂಡಿಯಾ ಕಾರು ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಕಿಕ್ಸ್ ಎಸ್‌ಯುವಿ ಬಿಎಸ್-4 ಆವೃತ್ತಿಯ ಮೇಲೆ ಭರ್ಜರಿ ಡಿಸ್ಕೌಂಟ್ ಘೋಷಣೆ ಮಾಡಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

2019ರ ಜನವರಿ ಕೊನೆಯ ವಾರದಲ್ಲಿ ಬಿಡುಗಡೆಗೊಂಡಿದ್ದ ನಿಸ್ಸಾನ್ ಕಿಕ್ಸ್ ಕಾರು ಹಲವು ವಿಶೇಷತೆಗಳೊಂದಿಗೆ ಗ್ರಾಹಕರ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಶೀಘ್ರದಲ್ಲೇ ಬಿಎಸ್-6 ಎಂಜಿನ್‌ನೊಂದಿಗೆ ಬಿಡುಗಡೆಯಾಗಲು ಸಜ್ಜುಗೊಳ್ಳುತ್ತಿದೆ. ಈ ಹಿನ್ನಲೆ ಪ್ರಸ್ತುತ ಮಾರುಕಟ್ಟೆಯಲ್ಲಿರುವ ಬಿಎಸ್-4 ಆವೃತ್ತಿಯ ಮೇಲೆ ವಿವಿಧ ಆಫರ್‌ಗಳನ್ನು ಘೋಷಣೆ ಮಾಡಿರುವ ನಿಸ್ಸಾನ್ ಕಂಪನಿಯು ರೂ. 2.50 ಲಕ್ಷ ಮೌಲ್ಯದ ವಿವಿಧ ಆಫರ್‍‌ಗಳನ್ನು ಘೋಷಣೆ ಮಾಡಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕಿಕ್ಸ್ ಖರೀದಿಸುವ ಗ್ರಾಹಕರಿಗೆ ರೂ.2.50 ಲಕ್ಷ ಮೌಲ್ಯದ ಕ್ಯಾಶ್ ಬ್ಯಾಕ್, ಎಕ್ಸ್‌ಚೆಂಜ್ ಬೋನಸ್, ಕಾರ್ಪೊರೇಟ್ ಡಿಸ್ಕೌಂಟ್, ಮೂರು ವರ್ಷಗಳ ವಿಸ್ತರಿತ ಉಚಿತ ವಾರಂಟಿ ಆಫರ್‌ಗಳನ್ನು ನೀಡುತ್ತಿದ್ದು, ಈ ತಿಂಗಳ ಅಂತ್ಯವರೆಗೂ ಆಫರ್ ಪಡೆಯಬಹುದಾಗಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಜೊತೆಗೆ ಕಾರು ಖರೀದಿ ಮಾಡಿದ ಮೊದಲ ಮೂರು ವರ್ಷಗಳ ಅವಧಿಗೆ ವಾರ್ಷಿಕವಾಗಿ ರೂ.6.99 ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೂಡಾ ಲಭ್ಯವಿರಲಿದ್ದು, ಈ ಮೂಲಕ ಹೊಸ ಕಾರು ಖರೀದಿಯನ್ನು ಇದು ಮತ್ತಷ್ಟು ಸುಲಭವಾಗಿಸಲಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಇನ್ನು ನಿಸ್ಸಾನ್ ಕಿಕ್ಸ್ ಕಾರು ಮಾದರಿಯು ಎಕ್ಸ್ಇ, ಎಕ್ಸ್ಎಲ್, ಎಕ್ಸ್‌ವಿ, ಮತ್ತು ಎಕ್ಸ್‌ವಿ ಪ್ರೀ ಎಂಬ ಐದು ವೆರಿಯೆಂಟ್‌ಗಳಲ್ಲಿ ಖರೀದಿಗೆ ಲಭ್ಯವಿದ್ದು, ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ.9.55 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ.13.69 ಲಕ್ಷ ಬೆಲೆ ಹೊಂದಿದೆ. ಕಿಕ್ಸ್ ಕಾರು ಮಾದರಿಯಲ್ಲಿ 1.5-ಲೀಟರ್ ಹೆಚ್4ಕೆ ಪೆಟ್ರೋಲ್ ಎಂಜಿನ್ ಹಾಗೂ 1.5-ಲೀಟರ್ ಕೆ9ಕೆ ಡಿಸೇಲ್ ಎಂಜಿನ್ ಆಯ್ಕೆಯನ್ನು ಹೊಂದಿದ್ದು, ಪೆಟ್ರೋಲ್ ಮಾದರಿಯಲ್ಲಿ 5-ಸ್ಪೀಡ್ ಮ್ಯಾನುವಲ್ ಮತ್ತು ಡಿಸೇಲ್ ಮಾದರಿಯಲ್ಲಿ 6-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕಂಪ್ಯಾಕ್ಟ್ ಎಸ್‍ಯುವಿ ಕಾರುಗಳಲ್ಲಿ ವಿಶೇಷವೆನ್ನಿಸುವ ಹಾಗೆ ಈ ಕಾರು ಹಲವಾರು ವೈಶಿಷ್ಟ್ಯತೆಗಳೊಂದಿಗೆ ಸೆಗ್ಮೆಂಟ್ ಫಸ್ಟ್ ಫೀಚರ್ಸ್‌ಗಳನ್ನು ಅನ್ನು ಪಡೆದುಕೊಂಡಿದ್ದು, ಈ ಕಾರಿನ ಪೆಟ್ರೋಲ್ ಮಾದರಿಗಳು ಒಂದು ಲೀಟರ್‍‍ಗೆ 14.23 ಕಿ.ಮೀ ಮೈಲೇಜ್ ನೀಡಿದ್ದಲ್ಲಿ ಡೀಸೆಲ್ ಎಂಜಿನ್ ಕಾರು ಪ್ರತಿ ಲೀಟರ್‍‍ಗೆ 20.45 ಕಿ.ಮೀ ಮೈಲೇಜ್ ನೀಡಬಲ್ಲದು.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ನಿಸ್ಸಾನ್ ಕಿಕ್ಸ್ ಎಸ್‍ಯುವಿ ಕಾರು ಪರ್ಲ್ ವೈಟ್, ಬ್ಲೇಡ್ ಸಿಲ್ವರ್, ಬ್ರಾಂಝ್ ಗ್ರೇ, ಫೈರ್ ರೆಡ್, ಆ್ಯಂಬರ್ ಆರೆಂಜ್, ಡೀಪ್ ಬ್ಲೂ ಪರ್ಲ್, ನೈಟ್ ಶೇಡ್, ಫೈರ್ ರೆಡ್ ಮತ್ತು ಆನಿಕ್ಸ್ ಬ್ಲಾಕ್, ಬ್ರಾಂಝ್ ಗ್ರೇ ಮತ್ತು ಆಂಬರ್ ಆರೆಂಜ್, ಪರ್ಲ್ ವೈಟ್ ಮತ್ತು ಆನಿಕ್ಸ್ ಬ್ಲಾಕ್, ಹಾಗು ಪರ್ಲ್ ಬೈಟ್ ಮತ್ತು ಆ್ಯಂಬರ್ ಆರೆಂಜ್ ಸೇರಿ ಒಟ್ಟು 11 ವಿವಿಧ ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

GRAPHENE ಡಿಸೈನ್ ತಂತ್ರಜ್ಞಾನದೊಂದಿಗೆ ಸಿದ್ದವಾಗಿರುವ ಹೊರ ವಿನ್ಯಾಸಗಳು ಕಿಕ್ಸ್‌ಗೆ ಪ್ರೀಮಿಯಂ ವೈಶಿಷ್ಟ್ಯತೆಯು ಮೆರಗು ತಂದಿದ್ದು, ವಿ ಮೊಷನ್ ಗ್ರಿಲ್, ಎಲ್‌ಇಡಿ ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಕೆಳಭಾಗದಲ್ಲಿ ಅಳವಡಿಸಲಾಗಿರುವ ಫಾಗ್ ಲ್ಯಾಂಪ್, ಸಿಲ್ವರ್ ಸ್ಕೀಡ್ ಪ್ಲೇಟ್ ಮತ್ತು ಬಲಿಷ್ಠವಾಗಿರುವ ಫ್ರಂಟ್ ಪ್ರೋಫೈಲ್ ನೀಡಲಾಗಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಕಿಕ್ಸ್ ಕಾರುಗಳಿಗೆ ಮತ್ತಷ್ಟು ಮೆರಗು ತರುವ ಉದ್ದೇಶದಿಂದ ಕಾರಿನ ಎಡ್ಜ್‌ಗಳಲ್ಲಿ ಶಾರ್ಪ್ ಡಿಸೈನ್ ಬಳಕೆ ಮಾಡಲಾಗಿದ್ದು, ರೂಫ್ ರೈಲ್ಸ್ ಹಾಗೂ ಕಾರಿನ ಎರಡು ಬದಿಗಳಲ್ಲೂ ನೀಡಲಾಗಿರುವ ಕ್ರೋಮ್ ಸೌಲಭ್ಯವು ಕಾರಿನ ಸೈಡ್ ಪ್ರೋಫೈಲ್‌ಗೆ ಲುಕ್ ನೀಡಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಹಾಗೆಯೇ ಕಾರಿನಲ್ಲಿ 17-ಇಂಚಿನ 5 ಸ್ಪೋಕ್ ಅಲಾಯ್ ಚಕ್ರಗಳ ಜೋಡಣೆ, 210 ಎಂಎಂ ನಷ್ಟು ಗ್ರೌಂಡ್ ಕ್ಲಿಯೆರೆನ್ಸ್, ಬೂಮೆರ್ಗ್ ಟೈಲ್ ಲ್ಯಾಂಪ್ಸ್, ಗಮನ ಸೆಳೆಯುವ ರಿಯರ್ ಬಂಪರ್ ಸೇರಿದಂತೆ ಹಲವು ಸುಧಾರಿತ ಸೌಲಭ್ಯಗಳು ಕಿಕ್ಸ್ ಕಾರಿನಲ್ಲಿವೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ವಿನೂತನ ಕಾರಿನಲ್ಲಿ 8-ಇಂಚಿನ ಟಚ್‌ಸ್ಕ್ರೀನ್ ಇನ್ಫೋ‌ಟೈನ್‌ಮೆಂಟ್ ಹಾಗೂ ಕಾರಿನ ಸುತ್ತ ನೋಡಬಹುದಾದ 360 ಡಿಗ್ರಿ ವಿವ್ಯೂ ಮಾನಿಟರ್ ವ್ಯವಸ್ಥೆಯಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಮಾರಾಟವಾಗುತ್ತಿರುವ ಇತರೆ ಸಬ್ ಕಂಪ್ಯಾಕ್ಟ್ ಎಸ್‌ಯುವಿ ಮಾದರಿಗಳಲ್ಲೇ ಈ ಕಾರು ವಿಶೇಷ ಎನ್ನಿಸಲಿದೆ.

ಬಿಎಸ್-4 ನಿಸ್ಸಾನ್ ಕಿಕ್ಸ್ ಕಾರು ಖರೀದಿಯ ಮೇಲೆ ಭರ್ಜರಿ ಡಿಸ್ಕೌಂಟ್

ಇದರೊಂದಿಗೆ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, ವೆಹಿಕಲ್ ಡೈನಾಮಿಕ್ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸಿಸ್ಟ್, ನಾಲ್ಕು ಏರ್‌ಬ್ಯಾಗ್, ಎಬಿಎಸ್, ಇಕೋ ಮೂಡ್ ಮತ್ತು ಕ್ರೂಸ್ ಕಂಟ್ರೋಲ್ ಸೌಲಭ್ಯವಿದ್ದು, ಇದೇ ತಿಂಗಳಾಂತ್ಯಕ್ಕೆ ಹೊಸ ಬಿಎಸ್-6 ಎಂಜಿನ್ ಪ್ರೇರಿತ ಕಿಕ್ಸ್ ಮಾದರಿಯು ಮತ್ತಷ್ಟು ಹೊಸ ಬದಲಾವಣೆಯೊಂದಿಗೆ ರಸ್ತೆಗಳಿಯಲಿದೆ.

Most Read Articles

Kannada
English summary
Up To Rs 2.5 Lakh Discounts Offered On BS4 Nissan Kicks This Month. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X