2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಎಲೆಕ್ಟ್ರಿಕ್ ವಾಹನಗಳಿಗೆ ದಿನದಿಂದ ದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತದ ನಂಬರ್ 1 ದ್ವಿ ಚಕ್ರ ವಾಹನ ತಯಾರಕ ಕಂಪನಿಯಾದ ಹೀರೊ ಸಹ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ಧಿ ಪಡಿಸುತ್ತಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಕಂಪನಿಯು ಪ್ರಪಂಚದ ಮೊದಲ ಡ್ಯುಯಲ್ ಪವರ್ ಎಲೆಕ್ಟ್ರಿಕ್ ವಾಹನವನ್ನು ಅಭಿವೃದ್ಧಿಪಡಿಸಿದೆ. ಕಾನ್ಸೆಪ್ಟ್ ವಾಹನವೆಂದು ಪ್ರದರ್ಶಿಸಲಾದ ಈ ಎಲೆಕ್ಟ್ರಿಕ್ ವಾಹನವನ್ನು ಸ್ಕೂಟರ್ ಅಥವಾ ಆಟೋವಾಗಿ ಬಳಸಿಕೊಳ್ಳಬಹುದಾಗಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಇದು ಈ ಎಲೆಕ್ಟ್ರಿಕ್ ವಾಹನದಲ್ಲಿರುವ ಅತ್ಯುತ್ತಮ ಫೀಚರ್ ಆಗಿದೆ. ಹೀರೊ ಎಲೆಕ್ಟ್ರಿಕ್ ಈ ವಿಶೇಷ ವಾಹನವನ್ನು ರಾಜಸ್ತಾನದ ಜೈಪುರದಲ್ಲಿ ಅನಾವರಣಗೊಳಿಸಿದೆ. ಅಂದ ಹಾಗೆ ಹೀರೊ ಎಲೆಕ್ಟ್ರಿಕ್ ಕಂಪನಿಯ ಆರ್ ಅಂಡ್ ಡಿ ಕೇಂದ್ರವಿರುವುದು ಇದೇ ಸ್ಥಳದಲ್ಲಿ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಎಲೆಕ್ಟ್ರಿಕ್ ಕಂಪನಿಯು ಈ ಎರಡು ಮಾದರಿಯ ವಾಹನಕ್ಕೆ ಕ್ವಾರ್ಕ್ 1 ಎಂಬ ಹೆಸರನ್ನಿಟ್ಟಿದೆ. ಈ 2 ಇನ್ 1 ವಾಹನವನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಈಗ ಮಾರುಕಟ್ಟೆಯಲ್ಲಿರುವ ಇತರ ವಾಹನಗಳಿಗಿಂತ ವಿಭಿನ್ನವಾಗಿ ಈ ಕ್ವಾರ್ಕ್ 1 ವಾಹನವನ್ನು ಹೀರೋ ಎಲೆಕ್ಟ್ರಿಕ್ ಅಭಿವೃದ್ಧಿಪಡಿಸಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ವಾಹನಗಳ ಭಾರೀ ಸಂಖ್ಯೆಯು ದೊಡ್ಡ ಸಮಸ್ಯೆಯಾಗಿದೆ. ಜನಸಂಖ್ಯೆಗೆ ಸರಿಸಮನಾಗಿ ಇಲ್ಲಿರುವ ವಾಹನಗಳ ಸಂಖ್ಯೆಯು ಸಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕ್ವಾರ್ಕ್‍‍ನಂತಹ 2 ಇನ್ 1 ವಾಹನಗಳ ಬಿಡುಗಡೆಯೊಂದಿಗೆ ವಾಹನಗಳ ಸಂಖ್ಯೆಯು ಕಡಿಮೆಯಾಗುವ ಸಾಧ್ಯತೆಗಳಿವೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಹೀರೊ ಈ ಈಸಿ ಟು ರೆಂಟ್ ವಾಹನವನ್ನು ಅಭಿವೃದ್ಧಿಪಡಿಸಿದೆ. ತ್ರಿ ಚಕ್ರ ವಾಹನವನ್ನು ಎಲ್ 5 ಎಂದು ಹಾಗೂ ದ್ವಿ ಚಕ್ರ ವಾಹನವನ್ನು ಎಲ್ 2 ಎಂದು ಹೇಳಿದೆ. ಈ ಎಲ್ 5 ಹಾಗೂ ಎಲ್ 2ಗಳೆರಡೂ ಸೇರಿದರೆ ಕ್ವಾರ್ಕ್ 1 ವಾಹನವಾಗುತ್ತದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಈ ವಾಹನವನ್ನು ಭಾರತದ ಮೋಟಾರು ವಾಹನ ಕಾಯ್ದೆಯನ್ವಯ ತಯಾರಿಸಲಾಗಿದೆ. ಇದರಿಂದಾಗಿ ಸಂಬಂಧಪಟ್ಟವರಿಂದ ಶೀಘ್ರದಲ್ಲಿಯೇ ಅನುಮೋದನೆ ಪಡೆಯಲಿದೆ. ಹೀರೊದ ಈ ವಾಹನವು ಖಾಸಗಿ ವ್ಯಕ್ತಿಗಳನ್ನು ಮಾತ್ರವಲ್ಲದೇ ಟ್ಯಾಕ್ಸಿ ಡ್ರೈವರ್‍‍ಗಳನ್ನು ಸಹ ತನ್ನತ್ತ ಸೆಳೆಯುತ್ತಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಈ ರೀತಿಯ ವಾಹನವನ್ನು ಈ ಮೊದಲು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿಲ್ಲವೆಂಬುದನ್ನು ಗಮನಿಸಬೇಕು. ಈ ಕಾರಣಕ್ಕೆ ಈ ಹೊಸ ವಾಹನವು ಹೆಚ್ಚಿನ ಸಂಖ್ಯೆಯ ಜನರನ್ನು ತನ್ನತ್ತ ಸೆಳೆಯುತ್ತಿದೆ. ಈ ವಾಹನದ ಜೊತೆಗೆ ಹೀರೊ ಕಂಪನಿಯು ನಾಲ್ಕು ಇತರ ವಾಹನಗಳನ್ನು ಪರಿಚಯಿಸಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಕ್ವಾರ್ಕ್ 1 ವಾಹನವನ್ನು ಯಾವಾಗ ಬಿಡುಗಡೆಗೊಳಿಸಲಾಗುವುದು ಎಂಬ ಮಾಹಿತಿ ಬಹಿರಂಗವಾಗಿಲ್ಲ. ಇದರ ಜೊತೆಗೆ ಈ ವಾಹನವನ್ನು ಸ್ಕೂಟರ್‍‍ನಿಂದ ಆಟೋಗೆ ಹೇಗೆ ಬದಲಿಸುವುದು ಎನ್ನುವ ಪ್ರಶ್ನೆಯು ಹಲವರನ್ನು ಕಾಡುತ್ತಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಎಂಟ್ರಿ ಏರಿಯಾವನ್ನು ಆಟೋದಲ್ಲಿ ಅಳವಡಿಸಲಾಗಿದ್ದು, ಇದರಿಂದಾಗಿ ಸ್ಕೂಟರಿಗೆ ಬದಲಿಸಬಹುದು. ಆಟೋಗೆ ಬೇಕಾಗಿರುವ ಎಂಜಿನ್ ವಿಶಿಷ್ಟವಾದ ಬಣ್ಣವನ್ನು ಹೊಂದಿಲ್ಲ. ಬೇಕಾದಾಗ ಆಟೋದಂತೆ ಹಾಗೂ ಸ್ಕೂಟರ್‍‍ನಂತೆ ಬಳಸಿಕೊಳ್ಳಬಹುದು.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಈ ವಾಹನವನ್ನು ನಾಲ್ಕು ಚಕ್ರದ ವಾಹನವಾಗಿ ಬಳಸಲು ಸಾಧ್ಯವಿಲ್ಲ. ಜೊತೆಗೆ ಈ ವಾಹನದಲ್ಲಿರುವ ಹಿಂಭಾಗದ ವ್ಹೀಲ್ ಹಾಗೂ ಸ್ಕೂಟರ್‍‍ನಲ್ಲಿ ನೀಡಲಾಗುವ ಗ್ರೌಂಡ್ ಕ್ಲಿಯರೆನ್ಸ್ ನೀಡಲಾಗುವುದಿಲ್ಲ. ಹೀರೊ ಮೋಟೊ‍‍ಕಾರ್ಪ್‍‍ನ ಎಂ360 ಹಾಗೂ ಎ‍ಎಂ‍ಎಸ್‍ಇ‍‍ಪಿ ಟೆಕ್ನಾಲಜಿಯನ್ನು ಈ ವಾಹನದಲ್ಲಿ ಅಳವಡಿಸಲಾಗಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಇವುಗಳ ಜೊತೆಗೆ ಈ ವಾಹನದಲ್ಲಿ ಬ್ಯಾಟರಿ ಮಾನಿಟರಿಂಗ್, ಜಿ‍‍ಪಿಎಸ್, ಒ‍‍ಡಿ‍ಎ, ಡೈರೆಕ್ಟ್ ಕನೆಕ್ಟಿವಿಟಿ ಸೇರಿದಂತೆ ಹಲವಾರು ಟೆಕ್ನಾಲಜಿ ಹಾಗೂ ಫೀಚರ್‍‍ಗಳನ್ನು ಅಳವಡಿಸುವ ಸಾಧ್ಯತೆಗಳಿವೆ. ಹೀರೊ ಕಂಪನಿಯು ಕುದುರೆಗಾಡಿಯಂತೆ ಈ ವಾಹನವನ್ನು ಅಭಿವೃದ್ಧಿಪಡಿಸಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಹಿಂದಿನ ಕಾಲದಲ್ಲಿ ಸಂಚಾರಕ್ಕಾಗಿ ಕುದುರೆಗಾಡಿಗಳನ್ನು ಬಳಸಲಾಗುತ್ತಿತ್ತು. ಕುದುರೆಗಳು ಈ ಗಾಡಿಗಳನ್ನು ಎಳೆಯಲು ಬೇಕಾದ ಟ್ರಾಕ್ಷನ್ ಅನ್ನು ನೀಡುತ್ತಿದ್ದವು. ಇದರ ಆಧಾರದ ಮೇಲೆ ಹೀರೊ ಕಂಪನಿಯು ಈ ವಾಹನವನ್ನು ಅಭಿವೃದ್ಧಿಪಡಿಸಿದೆ.

2 ಇನ್ 1 ಎಲೆಕ್ಟ್ರಿಕ್ ಕಾನ್ಸೆಪ್ಟ್ ಅನಾವರಣಗೊಳಿಸಿದ ಹೀರೊ ಎಲೆಕ್ಟ್ರಿಕ್

ಈ ವಾಹನವು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಹೊಸ ಕ್ರಾಂತಿಯನ್ನುಂಟು ಮಾಡುವ ಸಾಧ್ಯತೆಗಳಿವೆ. ಈ ವಾಹನದ ಬೆಲೆ ಹಾಗೂ ಚಾರ್ಜ್ ಆದ ನಂತರ ಎಷ್ಟು ದೂರ ಚಲಿಸುತ್ತದೆ ಎಂಬ ಮಾಹಿತಿಯನ್ನು ಹೀರೊ ಕಂಪನಿಯು ಬಹಿರಂಗಪಡಿಸಿಲ್ಲ.

Most Read Articles

Kannada
English summary
Hero unveils 2 in 1 Quark 1 electric concept. Read in Kannada.
Story first published: Wednesday, February 19, 2020, 16:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X