ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಭಾರತದಲ್ಲಿ ಉದ್ಯಮವನ್ನು ಆರಂಭಿಸಲು ಅತ್ಯುತ್ತಮ ರಾಜ್ಯಗಳು ಯಾವುವು ಎಂಬ ಪಟ್ಟಿಯನ್ನು ಕೇಂದ್ರ ಸರ್ಕಾರವು ಬಿಡುಗಡೆಗೊಳಿಸಿದೆ. 2019ರ ಈ ಪಟ್ಟಿಯಲ್ಲಿ ಆಂಧ್ರಪ್ರದೇಶ ಮೊದಲ ಸ್ಥಾನದಲ್ಲಿದೆ. 2018ರಲ್ಲಿಯೂ ಆಂಧ್ರಪ್ರದೇಶ ಅಗ್ರಸ್ಥಾನದಲ್ಲಿತ್ತು.

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಉದ್ಯಮವನ್ನು ಆರಂಭಿಸಲು ಸೂಕ್ತವಾದ ರಾಜ್ಯಗಳ ಪಟ್ಟಿಯಲ್ಲಿ ಉತ್ತರ ಪ್ರದೇಶವು ಎರಡನೇ ಸ್ಥಾನದಲ್ಲಿದೆ. 2018ರಲ್ಲಿ ಬಿಡುಗಡೆಯಾದ ಪಟ್ಟಿಯಲ್ಲಿ ಉತ್ತರ ಪ್ರದೇಶವು 12ನೇ ಸ್ಥಾನದಲ್ಲಿತ್ತು ಎಂಬುದು ಗಮನಾರ್ಹ. ಇದೇ ವೇಳೆ ದೇಶದಲ್ಲಿ ಹೆಚ್ಚು ಮಾರಾಟವಾದ ತ್ರಿಚಕ್ರ ವಾಹನಗಳ ಪಟ್ಟಿಯನ್ನು ಸಹ ಬಿಡುಗಡೆಗೊಳಿಸಲಾಗಿದೆ.

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಈ ಪಟ್ಟಿಯಲ್ಲಿಯೂ ಉತ್ತರ ಪ್ರದೇಶವು ಎರಡನೇ ಸ್ಥಾನದಲ್ಲಿದೆ. ಬಿಹಾರ ಮೊದಲ ಸ್ಥಾನದಲ್ಲಿದ್ದರೆ, ಮಹಾರಾಷ್ಟ್ರ ಮೂರನೇ ಸ್ಥಾನದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಭಾರತದ ಆಟೋ ಮೊಬೈಲ್ ಉದ್ಯಮವು ಮಾರಾಟದಲ್ಲಿನ ಕುಸಿತದಿಂದಾಗಿ ಸಂಕಷ್ಟವನ್ನು ಎದುರಿಸುತ್ತಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಲಾಕ್ ಡೌನ್ ಅವಧಿಯಲ್ಲಿ ಒಂದೇ ಒಂದು ಯುನಿಟ್ ವಾಹನವನ್ನು ಸಹ ಮಾರಾಟ ಮಾಡಿರಲಿಲ್ಲ ಎಂಬುದು ಗಮನಾರ್ಹ. ಆಟೋಮೊಬೈಲ್ ಕಂಪನಿಗಳು ನಿಧಾನವಾಗಿ ಚೇತರಿಸಿಕೊಳ್ಳುತ್ತಿವೆ.

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಫಾಡಾ ಬಿಡುಗಡೆಗೊಳಿಸಿರುವ ಆಗಸ್ಟ್ ತಿಂಗಳ ಮಾರಾಟದ ಮಾಹಿತಿಯ ಪ್ರಕಾರ, ತ್ರಿಚಕ್ರ ವಾಹನಗಳ ಮಾರಾಟವು 69.5%ನಷ್ಟು ಕುಸಿದಿದೆ. ಕಾರುಗಳ ಮಾರಾಟವು 7.12%ನಷ್ಟು ಹಾಗೂ ಬೈಕ್ ಮಾರಾಟವು 28.7%ನಷ್ಟು ಕುಸಿದಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ರಾಜ್ಯವಾರು ವಾಹನ ಮಾರಾಟ ವಿವರಗಳು:

ತ್ರಿಪುರ, ಮಿಜೋರಾಂ ಮತ್ತು ಹಿಮಾಚಲ ರಾಜ್ಯಗಳು ರಾಜ್ಯವಾರು ಮಾರಾಟದಲ್ಲಿ ಹೆಚ್ಚು ಬೆಳವಣಿಗೆಯನ್ನು ಸಾಧಿಸಿವೆ. ಮಿಜೋರಾಂ ರಾಜ್ಯವು 2019ರ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 223.8%ನಷ್ಟು ಬೆಳವಣಿಗೆಯನ್ನು ಸಾಧಿಸಿದೆ. 2019ರ ಆಗಸ್ಟ್ ತಿಂಗಳಿನಲ್ಲಿ ಕೇವಲ 26 ಯುನಿಟ್ ಆಟೋಗಳು ಮಾರಾಟವಾಗಿದ್ದವು. ಈ ವರ್ಷದ ಆಗಸ್ಟ್‌ ತಿಂಗಳಿನಲ್ಲಿ 84 ಯುನಿಟ್ ಗಳನ್ನು ಮಾರಾಟ ಮಾಡಲಾಗಿದೆ.

ಸ್ಥಾನ ರಾಜ್ಯ ಆಗಸ್ಟ್ -20 ಆಗಸ್ಟ್-19 ಬೆಳವಣಿಗೆ (%)
1 ಬಿಹಾರ 3,312 5,222 -36.58
2 ಉತ್ತರ ಪ್ರದೇಶ 2,954 8,981 -67.11
3 ಮಹಾರಾಷ್ಟ್ರ 1,513 7,680 -80.30
4 ಅಸ್ಸಾಂ 1,125 2,383 -52.79
5 ದೆಹಲಿ 1,042 2,641 -60.55
6 ಕರ್ನಾಟಕ 934 4,331 -78.43
7 ಪಶ್ಚಿಮ ಬಂಗಾಳ 913 1,559 -41.44
8 ಕೇರಳ 777 2,272 -65.80
9 ತಮಿಳು ನಾಡು 609 3,380 -81.98
10 ಜಾರ್ಖಂಡ್ 603 1,784 -66.20
11 ಒಡಿಶಾ 585 1,888 -69.01
12 ಗುಜರಾತ್ 552 6,077 -90.92
13 ತ್ರಿಪುರ 465 400 16.25
14 ಹರಿಯಾಣ 418 2,200 -81.00
15 ರಾಜಸ್ತಾನ 408 1,808 -77.43
16 ಉತ್ತರಖಂಡ 165 700 -76.43
17 ಜಮ್ಮು ಮತ್ತು ಕಾಶ್ಮೀರ 101 105 -3.81
18 ಮಿಜೋರಾಂ 84 26 223.08
19 ಛತ್ತೀಸ್ ಗಢ 81 535 -84.86
20 ಪಂಜಾಬ್ 75 762 -90.16
21 ಚಂಡೀಗಢ 61 134 -54.48
22 ಹಿಮಾಚಲ ಪ್ರದೇಶ 38 23 65.22
23 ಮೇಘಾಲಯ 26 69 -62.32
24 ಅರುಣಾಚಲ ಪ್ರದೇಶ 4 93 -95.70
25 ಗೋವಾ 4 5 -20.00
26 ಪುದುಚೇರಿ 4 8 -50.00
27 ನಾಗಾಲ್ಯಾಂಡ್ 3 102 -97.06
28 ಡಿಯು ಡಮನ್ 1 5 -80.00
29 ಮಣಿಪುರ 0 120 -100.00
30 ಲಡಾಖ್ 0 0 0
31 ಸಿಕ್ಕಿಂ 0 0 0
ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಹಿಮಾಚಲ ಪ್ರದೇಶ 65.22% ಹಾಗೂ ತ್ರಿಪುರ 16.25%ನಷ್ಟು ಬೆಳವಣಿಗೆಯನ್ನು ದಾಖಲಿಸಿವೆ. ಮಣಿಪುರವು ಮಾರಾಟದಲ್ಲಿ ಹೆಚ್ಚಿನ ಪ್ರಮಾಣದ ಕುಸಿತವನ್ನು ದಾಖಲಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮಣಿಪುರದಲ್ಲಿ 100%ನಷ್ಟು ಕುಸಿತ ಉಂಟಾಗಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

2019ರ ಜುಲೈ ತಿಂಗಳಿನಲ್ಲಿ ಮಣಿಪುರದಲ್ಲಿ 120ಯುನಿಟ್ ಆಟೋಗಳನ್ನು ಮಾರಾಟ ಮಾಡಲಾಗಿತ್ತು. ಈ ವರ್ಷದ ಆಗಸ್ಟ್ ವೇಳೆಗೆ ಈ ಪ್ರಮಾಣವು ಶೂನ್ಯಕ್ಕೆ ಕುಸಿದಿದೆ. ಮಣಿಪುರದಂತೆ, ಲಡಾಖ್ ಮತ್ತು ಸಿಕ್ಕಿಂನಲ್ಲಿಯೂ ಶೂನ್ಯ ಮಾರಾಟ ಪ್ರಮಾಣ ದಾಖಲಾಗಿದೆ.

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ವಿಶೇಷವೆಂದರೆ ಕಳೆದ ವರ್ಷದ ಆಗಸ್ಟ್‌ ತಿಂಗಳಿನಲ್ಲಿಯೂ ಈ ರಾಜ್ಯಗಳ ಮಾರಾಟ ಪ್ರಮಾಣವು ಶೂನ್ಯವಾಗಿತ್ತು. ಈ ವರ್ಷ ದೇಶಾದ್ಯಂತ 16,857 ಯುನಿಟ್ ಆಟೋಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷ ಆಗಸ್ಟ್‌ ತಿಂಗಳಿನಲ್ಲಿ 38,436 ಯುನಿಟ್‌ ಆಟೋಗಳನ್ನು ಮಾರಾಟ ಮಾಡಲಾಗಿತ್ತು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

ಕರ್ನಾಟಕವು ಈ ಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಕರ್ನಾಟಕದಲ್ಲಿ ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ 934 ಆಟೋಗಳನ್ನು ಮಾರಾಟ ಮಾಡಲಾಗಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ 4,331 ಆಟೋಗಳನ್ನು ಮಾರಾಟ ಮಾಡಲಾಗಿತ್ತು. ಈ ಮೂಲಕ ಕರ್ನಾಟಕವು ಆಟೋ ಮಾರಾಟದಲ್ಲಿ 78.43%ನಷ್ಟು ಕುಸಿತವನ್ನು ದಾಖಲಿಸಿದೆ.

ಆಟೋ ಮಾರಾಟದಲ್ಲಿ ಆರನೇ ಸ್ಥಾನಕ್ಕೆ ಕುಸಿದ ಕರ್ನಾಟಕ

9ನೇ ಸ್ಥಾನದಲ್ಲಿರುವ ತಮಿಳುನಾಡಿನಲ್ಲಿ ಕಳೆದ ವರ್ಷದ ಆಗಸ್ಟ್‌ನಲ್ಲಿ 3,380 ಯುನಿಟ್ ಆಟೋಗಳು ಮಾರಾಟವಾಗಿದ್ದವು. ಈ ವರ್ಷದ ಆಗಸ್ಟ್‌ನಲ್ಲಿ ಈ ಪ್ರಮಾಣವು 609 ಯುನಿಟ್‌ಗಳಿಗೆ ಕುಸಿದಿದೆ. ಈ ಮೂಲಕ ಮಾರಾಟದಲ್ಲಿ 81.98%ನಷ್ಟು ಕುಸಿತವಾಗಿದೆ.

Most Read Articles

Kannada
English summary
2020 August state wise three wheeler sales report Karnataka moves to 6th place. Read in Kannada.
Story first published: Wednesday, September 16, 2020, 19:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X