ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾದಾಗಿನಿಂದ ಇದುವರೆಗೂ 2020ರ ಹ್ಯುಂಡೈ ಕ್ರೆಟಾ ಎಸ್‌ಯುವಿಗಾಗಿ 45,000ಕ್ಕೂ ಹೆಚ್ಚು ಬುಕ್ಕಿಂಗ್ ಗಳನ್ನು ಪಡೆಯಲಾಗಿದೆ ಎಂದು ಹ್ಯುಂಡೈ ಇಂಡಿಯಾ ಕಂಪನಿ ಹೇಳಿದೆ.

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಹ್ಯುಂಡೈ ಟಕ್ಸನ್‌ ಎಸ್‌ಯುವಿಯ ಫೇಸ್ ಲಿಫ್ಟ್ ಆವೃತ್ತಿಯನ್ನು ಡಿಜಿಟಲ್ ಮೂಲಕ ಬಿಡುಗಡೆಗೊಳಿಸುವ ಸಂದರ್ಭದಲ್ಲಿ ಹ್ಯುಂಡೈ ಕಂಪನಿ ಈ ಮಾಹಿತಿ ನೀಡಿದೆ. ಕರೋನಾ ವೈರಸ್ ಸಂಕಷ್ಟದ ಸಮಯದಲ್ಲೂ ಹ್ಯುಂಡೈ ಕ್ರೆಟಾದ 45,000ಕ್ಕೂ ಹೆಚ್ಚು ಯುನಿಟ್‌ಗಳನ್ನು ಬುಕ್ಕಿಂಗ್ ಮಾಡಲಾಗಿದೆ. ಕ್ರೆಟಾ ಎಸ್‌ಯುವಿಯು ದೇಶಾದ್ಯಂತ 4.85 ಲಕ್ಷ ಗ್ರಾಹಕರನ್ನು ಹೊಂದಿದೆ ಎಂದು ಹ್ಯುಂಡೈ ಹೇಳಿದೆ.

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಹ್ಯುಂಡೈ ಕಂಪನಿಯು ಕ್ರೆಟಾ ಎಸ್‌ಯುವಿಯನ್ನು ಆಟೋಮ್ಯಾಟಿಕ್, ಬ್ಲೂಲಿಂಕ್, ಏರ್ ಪ್ಯೂರಿಫೈಯರ್ ಹಾಗೂ ಸನ್ ರೂಫ್ ಮಾದರಿಗಳಲ್ಲಿ ಮಾರಾಟ ಮಾಡುತ್ತದೆ. ಹೆಚ್ಚಿನ ಸಂಖ್ಯೆಯ ಜನರು ಕ್ರೆಟಾದ ಡೀಸೆಲ್ ಮಾದರಿಯನ್ನು ಇಷ್ಟಪಡುತ್ತಾರೆ ಎಂದು ಕಂಪನಿ ತಿಳಿಸಿದೆ.

MOST READ:ಪೊಲೀಸರಿಗೆ ತಲೆ ನೋವು ತಂದಿಟ್ಟ ಸೀಜ್ ಆದ ವಾಹನಗಳು

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಇದುವರೆಗೂ ಒಟ್ಟಾರೆಯಾಗಿ ಮಾರಾಟವಾದ ಕ್ರೆಟಾ ಎಸ್‌ಯುವಿಯಲ್ಲಿ 56%ನಷ್ಟು ಕಾರುಗಳು ಡೀಸೆಲ್ ಮಾದರಿಯಾಗಿವೆ. ಲಾಕ್‌ಡೌನ್ ಸಡಿಲಿಕೆಯ ನಂತರ ಪ್ರತಿ 3 ನಿಮಿಷಗಳಿಗೊಂದರಂತೆ ಹ್ಯುಂಡೈ ಕ್ರೆಟಾವನ್ನು ಬುಕ್ಕಿಂಗ್ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿದೆ.

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಹೊಸ ಹ್ಯುಂಡೈ ಕ್ರೆಟಾ ಎಸ್‌ಯುವಿಯನ್ನು 1.5 ಲೀಟರಿನ ಪೆಟ್ರೋಲ್, 1.4 ಲೀಟರಿನ ಟರ್ಬೊ ಪೆಟ್ರೋಲ್ ಹಾಗೂ 1.5 ಲೀಟರಿನ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುತ್ತದೆ. ಹ್ಯುಂಡೈ ಕಂಪನಿಯು ಈ ಎಸ್‌ಯುವಿಯನ್ನು 5 ಟ್ರಿಮ್ ಹಾಗೂ 14 ಮಾದರಿಗಳಲ್ಲಿ ಮಾರಾಟ ಮಾಡುತ್ತದೆ.

MOST READ:ಒಂದೇ ದಿನದಲ್ಲಿ ಸಾವಿರಕ್ಕೂ ಹೆಚ್ಚು ಆಂಬ್ಯುಲೆನ್ಸ್ ಪಡೆದ ಜಗನ್ ಸರ್ಕಾರ

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಹೊಸ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.9.99 ಲಕ್ಷಗಳಾಗಿದೆ. ಎಲ್ಲಾ ಎಂಜಿನ್ ಗಳಲ್ಲಿಯೂ 6 ಸ್ಪೀಡಿನ ಮ್ಯಾನುವಲ್ ಗೇರ್ ಬಾಕ್ಸ್ ಅನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ.

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಇದರ ಜೊತೆಗೆ 6 ಸ್ಪೀಡಿನ ಆಟೋಮ್ಯಾಟಿಕ್ ಹಾಗೂ 7 ಸ್ಪೀಡಿನ ಡಿಸಿಟಿ ಗೇರ್ ಬಾಕ್ಸ್ ಆಯ್ಕೆಗಳನ್ನು ಸಹ ನೀಡಲಾಗುತ್ತದೆ. ಹೊಸ ಹ್ಯುಂಡೈ ಕ್ರೆಟಾ ಎಸ್‌ಯುವಿಯ ಇಂಟಿರಿಯರ್ ನಲ್ಲಿ ಮಲ್ಟಿಫಂಕ್ಷನ್ ಸ್ಟೀಯರಿಂಗ್ ವ್ಹೀಲ್ ಹಾಗೂ 10.25-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೇನ್‌ಮೆಂಟ್ ಸಿಸ್ಟಂಗಳನ್ನು ನೀಡಲಾಗಿದೆ.

MOSTREAD: ಕೆಟ್ಟು ನಿಂತ ವಾಹನಗಳನ್ನು ತಳ್ಳುವ ಜನಪ್ರಿಯ ವಿಧಾನವಿದು

ಬುಕ್ಕಿಂಗ್ ನಲ್ಲಿ ಹೊಸ ದಾಖಲೆ ಬರೆದ ಹ್ಯುಂಡೈ ಕ್ರೆಟಾ

ಇವುಗಳ ಜೊತೆಗೆ ಪನೊರಾಮಿಕ್ ಸನ್‌ರೂಫ್ ಹಾಗೂ ಹ್ಯುಂಡೈ ಕಂಪನಿಯ ಕನೆಕ್ಟೆಡ್ ಟೆಕ್ನಾಲಜಿಯ ಬ್ಲೂ ಲಿಂಕ್ ಸಹ ನೀಡಲಾಗಿದೆ. ಹೊಸ ಹ್ಯುಂಡೈ ಕ್ರೆಟಾ ಜೂನ್‌ ತಿಂಗಳಿನಲ್ಲಿ ದೇಶದಲ್ಲಿ ಹೆಚ್ಚು ಮಾರಾಟವಾದ ಕಾಂಪ್ಯಾಕ್ಟ್ ಎಸ್‌ಯುವಿಯಾಗಿದೆ.

Most Read Articles

Kannada
English summary
2020 Hyundai Creta crosses 45000 bookings. Read in Kannada.
Story first published: Tuesday, July 14, 2020, 19:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X