ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

73ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಸಂದರ್ಭದಲ್ಲೇ ನ್ಯೂ ಜನರೇಷನ್ ಥಾರ್ ಕಾರು ಮಾದರಿಯನ್ನು ಅನಾವರಣಗೊಳಿಸುತ್ತಿರುವ ಮಹೀಂದ್ರಾ ಕಂಪನಿಯು ಭಾರೀ ಸಿದ್ದತೆ ನಡೆಸಿದ್ದು, ಅನಾವರಣಗೊಂಡ ಕೆಲವೇ ದಿನಗಳಲ್ಲಿ ಹೊಸ ಥಾರ್ ಕಾರು ಖರೀದಿಗೆ ಲಭ್ಯವಾಗಲಿದೆ.

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಅಗಸ್ಟ್ 15ರಂದು ಉತ್ಪಾದನಾ ಆವೃತ್ತಿಯೊಂದಿಗೆ ಅನಾವರಣಗೊಳ್ಳಲಿರುವ ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರು ಮಾದರಿಯು ಈ ಬಾರಿ ಭಾರೀ ಬದಲಾವಣೆಯೊಂದಿಗೆ ಬಿಡುಗಡೆಗೊಳ್ಳುತ್ತಿದ್ದು, ಹೊಸ ಕಾರು ಈ ಬಾರಿಗೆ ವಿವಿಧ ಎಂಜಿನ್ ಆಯ್ಕೆಗಳೊಂದಿಗೆ ಪ್ರೀಮಿಯಂ ಫೀಚರ್ಸ್‌ಗಳ ಮೂಲಕ ಆಫ್-ರೋಡ್ ವಿಭಾಗದಲ್ಲಿ ಮತ್ತಷ್ಟು ಬೇಡಿಕೆ ಪಡೆದುಕೊಳ್ಳುವ ನೀರಿಕ್ಷೆಯಲ್ಲಿದೆ. ಹಾಗಾದ್ರೆ ನಾಳೆ ಅನಾವರಣಗೊಳ್ಳಲಿರುವ ಥಾರ್ ಹೊಸ ಆವೃತ್ತಿಯ ವಿಶೇಷತೆಗಳೇನು ಎನ್ನುವುದನ್ನು ಈ ಲೇಖನದಲ್ಲಿ ತಿಳಿಯೋಣ.

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಆಫ್-ರೋಡ್ ಕಾರು ಮಾರಾಟದಲ್ಲಿ ಮುಂಚೂಣಿಯಲ್ಲಿರುವ ಥಾರ್‌ನಲ್ಲಿ ಈ ಬಾರಿ ಡೀಸೆಲ್ ಎಂಜಿನ್ ಮಾತ್ರವಲ್ಲದೆ ಪೆಟ್ರೋಲ್ ಎಂಜಿನ್ ಸೇರಿದಂತೆ ಹಲವಾರು ಹೊಸ ಬದಲಾವಣೆಗಳನ್ನು ಪರಿಚಯಿಸಲಾಗಿದ್ದು, ಬಿಎಸ್-6 ಎಮಿಷನ್ ನಿಯಮ ಅನುಸಾರವಾಗಿ ಹೊಸ ಎಂಜಿನ್ ಅನ್ನು ಉನ್ನತೀಕರಿಸಲಾಗಿದೆ.

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಮಾಹಿತಿಗಳ ಪ್ರಕಾರ, ಹೊಸ ಥಾರ್ ನಲ್ಲಿ ಈ ಬಾರಿ ನವೀಕರಿಸಿದ 2.2-ಲೀಟರ್ ಟರ್ಬೋ ಡೀಸೆಲ್ ಎಂಜಿನ್ ಜೊತೆಗೆ ಹೊಸದಾಗಿ ಅಭಿವೃದ್ದಿಗೊಳಿಸಲಾದ 2.0-ಲೀಟರ್ ಟರ್ಬೋ ಪೆಟ್ರೋಲ್ ಎಂ-ಸ್ಟಾಲಿನ್ ಎಂಜಿನ್ ಆಯ್ಕೆಯನ್ನು ನೀಡಲಾಗಿದೆಯೆಂತೆ.

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಎರಡು ಎಂಜಿನ್ ಮಾದರಿಯಲ್ಲೂ 6-ಸ್ಪೀಡ್ ಮ್ಯಾನುವಲ್ ಮತ್ತು 5-ಸ್ಪೀಡ್ ಟಾರ್ಕ್ ಕನ್ವರ್ಟರ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಪಡೆದುಕೊಂಡಿರಲಿವೆ ಎನ್ನಲಾಗಿದ್ದು, ಡೀಸೆಲ್ ಎಂಜಿನ್ ಮಾದರಿಯು 140-ಬಿಎಚ್‌ಪಿ, 300-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಪೆಟ್ರೋಲ್ ಮಾದರಿಯು 180-ಬಿಎಚ್‌ಪಿ, 380-ಎನ್ಎಂ ಟಾರ್ಕ್ ಉತ್ಪಾದನೆ ಮಾಡುತ್ತದೆ.

MOST READ: ಪ್ರತಿ ಚಾರ್ಜ್‌ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್‌ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಜೊತೆಗೆ ಬಿಎಸ್-6 ವೈಶಿಷ್ಟ್ಯತೆಗಳಿಂದಾಗಿ ಮಹೀಂದ್ರಾ ಹೊಸ ಕಾರುಗಳಲ್ಲಿ ಈ ಬಾರಿ ಹಲವಾರು ಬದಲಾವಣೆಗಳಾಗಿದ್ದು, ಫ್ಯಾಕ್ಟರಿ ಫಿಟೆಡ್ ಹಾರ್ಡ್ ಟಾಪ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದೆ. ಆದರೆ ಆಫ್ ರೋಡ್ ಮಾದರಿಗಾಗಿ ಹಾರ್ಡ್ ಅಥವಾ ಸಾಫ್ಟ್ ಟಾಪ್ ಅನ್ನು ಆಯ್ಕೆಯಾಗಿ ನೀಡಲಾಗಿದೆ.

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಇದರೊಂದಿಗೆ ಹೊಸ ಕಾರಿನಲ್ಲಿ ಲೋ ರೆಷಿಯೋ ಡ್ಯುಯಲ್ ಗೇರ್ ನಾಬ್ ಜೊತೆಗೆ 18-ಇಂಚಿನ ಆಲ್ ಟೆರೆನ್ ವೀಲ್ಹ್, ದೊಡ್ಡ ಗಾತ್ರದ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್ ಸಿಸ್ಟಂ ಸೌಲಭ್ಯವನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿದ್ದು, ಆಫ್-ರೋಡ್ ಚಾಲನೆಯನ್ನು ಮತ್ತಷ್ಟು ಸುಲಭವಾಗಿಸಲಿವೆ.

MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಮಹೀಂದ್ರಾ ನ್ಯೂ ಜನರೇಷನ್ ಥಾರ್ ಕಾರಿನ ಎಂಜಿನ್ ಮಾಹಿತಿ ಬಹಿರಂಗ

ಇನ್ನು ಹೊಸ ಥಾರ್ ಕಾರಿನಲ್ಲಿ ಬ್ಯಾಕ್ಔಟ್ ಅಯಾಲ್ ವೀಲ್ಹ್, ಆಲ್ ವೀಲ್ಹ್ ಡಿಸ್ಕ್ ಬ್ರೇಕ್ ಸೇರಿದಂತೆ ಹಲವಾರು ಹೊಸ ಸುರಕ್ಷಾ ಸೌಲಭ್ಯಗಳನ್ನು ಸ್ಟ್ಯಾಂಡರ್ಡ್ ಆಗಿ ಪಡೆದುಕೊಂಡಿರಲಿದ್ದು, ಬೆಲೆಯು ಕೂಡಾ ಬಿಎಸ್-4 ಮಾದರಿಗಿಂತಲೂ ತುಸು ದುಬಾರಿಯಾಗಿರಲಿದೆ.

Most Read Articles

Kannada
English summary
2020 Mahindra Thar Engine & Transmission Specs Leaked. Read in Kannada.
Story first published: Friday, August 14, 2020, 18:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X