Just In
- 18 min ago
ಭಾರತದ ನಂತರ ಜಪಾನ್ ಮಾರುಕಟ್ಟೆಯಲ್ಲೂ ಬಿಡುಗಡೆಯಾಗುತ್ತಿದೆ ಹೋಂಡಾ ಹೈನೆಸ್ ಸಿಬಿ 350
- 10 hrs ago
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- 12 hrs ago
ಸಿವಿ ವಾಹನ ಮಾದರಿಗಳಿಗಾಗಿ ಹೊಸ ಮಾದರಿಯ ಟೈರ್ ಬಿಡುಗಡೆ ಮಾಡಿದ ಬ್ರಿಡ್ಜ್ಸ್ಟೋನ್
- 12 hrs ago
ಭಾರತದಲ್ಲಿ ಸೋಲ್ಡ್ ಔಟ್ ಆದ ಮರ್ಸಿಡಿಸ್ ಇಕ್ಯೂಸಿ ಎಲೆಕ್ಟ್ರಿಕ್ ಎಸ್ಯುವಿ
Don't Miss!
- News
ಬೈಡನ್ ಪದಗ್ರಹಣಕ್ಕೆ ಸಕಲ ಸಿದ್ಧತೆ, ಮದುಮಗಳಂತೆ ಸಿಂಗಾರಗೊಳ್ಳುತ್ತಿದೆ ಸಂಸತ್
- Movies
ಸುದೀಪ್ ಜೊತೆ ಸಿನಿಮಾ: ರಕ್ಷಿತ್ ಶೆಟ್ಟಿ ಹೇಳಿದ್ದು ಹೀಗೆ
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಟೊಯೊಟಾ ಫಾರ್ಚೂನರ್ ಟಿಆರ್ಡಿ ಸ್ಪೆಷಲ್ ಎಡಿಷನ್ ಬಿಡುಗಡೆ
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ಸ್ ಕಂಪನಿಯು ತನ್ನ ಜನಪ್ರಿಯ ಎಸ್ಯುವಿ ಮಾದರಿಯಾದ ಫಾರ್ಚೂನರ್ ಕಾರಿನಲ್ಲಿ ಟಿಆರ್ಡಿ ಸ್ಪೆಷಲ್ ಎಡಿಷನ್ ಬಿಡುಗಡೆ ಮಾಡಿದ್ದು, ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರುವ ಹೊಸ ಆವೃತ್ತಿಯು ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹಲವು ವಿಶೇಷ ತಾಂತ್ರಿಕ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಫಾರ್ಚೂನರ್ ಟಿಆರ್ಡಿ ಎಸ್ಯುವಿ ಮಾದರಿಯು ಗ್ರಾಹಕರ ಬೇಡಿಕೆಯೆಂತೆ ಎರಡು ಪ್ರಮುಖ ವೆರಿಯೆಂಟ್ಗಳಲ್ಲಿ ಖರೀದಿಗೆ ಲಭ್ಯವಿದ್ದು, ಆರಂಭಿಕ ಮಾದರಿಯು ಪ್ಯಾನ್ ಇಂಡಿಯಾ ಎಕ್ಸ್ಶೋರೂಂ ಪ್ರಕಾರ ರೂ. 34.98 ಲಕ್ಷಕ್ಕೆ ಮತ್ತು ಟಾಪ್ ಎಂಡ್ ಮಾದರಿಯು ರೂ. 36.88 ಲಕ್ಷ ಬೆಲೆ ಪಡೆದುಕೊಂಡಿದೆ. ವಿಶೇಷ ಆವೃತ್ತಿಯು ಸೀಮಿತ ಅವಧಿಗೆ ಮಾತ್ರ ಖರೀದಿಗೆ ಲಭ್ಯವಿರಲಿದ್ದು, ಸ್ಟ್ಯಾಂಡರ್ಡ್ ಮಾದರಿಗಿಂತಲೂ ಹೊಸ ಟಿಆರ್ಡಿ ಆವೃತ್ತಿಯು ಸಾಕಷ್ಟು ದುಬಾರಿಯಾಗಿವೆ.

ಟಿಆರ್ಡಿ ವಿಶೇಷ ಆವೃತ್ತಿಯನ್ನು ಫಾರ್ಚೂನರ್ ಟಾಪ್ ಎಂಡ್ ಮಾದರಿಯಲ್ಲಿ ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಟಿಆರ್ಡಿ ಕೂಡಾ 4X2 ಮತ್ತು 4X4 ಡ್ರೈವ್ ಸಿಸ್ಟಂ ಆಯ್ಕೆಗಳನ್ನು ಪಡೆದುಕೊಂಡಿವೆ.

ಫಾರ್ಚೂನರ್ ಟಿಆರ್ಡಿ 4X2 ಮಾದರಿಯು ಆರಂಭಿಕ ಮಾದರಿಯಾಗಿದ್ದಲ್ಲಿ 4x4 ಆವೃತ್ತಿಯು ಹೈ ಎಂಡ್ ಮಾದರಿಯಾಗಿದ್ದು, ವಿಶೇಷ ಆವೃತ್ತಿಯಲ್ಲಿ ಮರುವಿನ್ಯಾಸಗೊಳಿಸಲಾದ ಬಲಿಷ್ಠ ಬಂಪರ್, ನವೀಕೃತ ಫ್ರಂಟ್ ಗ್ರಿಲ್, ಫ್ಲಚ್ಸ್ ಸ್ಕೀಡ್ ಪ್ಲೇಟ್ ಜೋಡಿಸಲಾಗಿದೆ.

ಹಾಗೆಯೇ ಸ್ಪೆಷಲ್ ಎಡಿಷನ್ಗೆ ಮತ್ತಷ್ಟು ಸ್ಪೋರ್ಟಿ ಲುಕ್ ಹೆಚ್ಚಿಸಲು ಡ್ಯುಯಲ್ ಸನ್ರೂಫ್, 18-ಇಂಚಿನ ಚೊರೊಕೊಲ್ ಬ್ಲ್ಯಾಕ್ ಅಲಾಯ್ ವೀಲ್ಹ್ ಮತ್ತು ಟಿಆರ್ಡಿ ಸ್ಪೆಷಲ್ ಎಡಿಷನ್ ಬ್ಲ್ಯಾಡ್ಜ್ ನೀಡಲಾಗಿದೆ. ಜೊತೆಗೆ ಕಾರಿನ ಒಳಭಾಗದಲ್ಲೂ ಹಲವು ವಿಶೇಷ ಸೌಲಭ್ಯಗಳನ್ನು ನೀಡಲಾಗಿದ್ದು, 360 ಡಿಗ್ರಿ ಪನೊರೊಮಿಕ್ ವ್ಯೂ ಮಾನಿಟರ್, ಆಟೋ ಫ್ಲೋಡ್ ಒಆರ್ವಿಎಂ, ಡ್ಯುಯಲ್ ಕಲರ್ ಥೀಮ್ ನೀಡಲಾಗಿದೆ.

ಇದರ ಹೊರತಾಗಿ ಸ್ಪೆಷಲ್ ಎಡಿಷನ್ನಲ್ಲಿ ಸ್ಟ್ಯಾಂಡರ್ಡ್ ಮಾದರಿಯಲ್ಲಿರುವಂತೆಯೇ ತಾಂತ್ರಿಕ ಸೌಲಭ್ಯಗಳನ್ನು ಮುಂದುವರಿಸಲಾಗಿದ್ದು, ಆಯ್ಕೆ ರೂಪದಲ್ಲಿರುವ ಹೆಡ್ಸ್ ಅಪ್ ಡಿಸ್ಪ್ಲೇ, ಟೈರ್ ಪ್ರೆಷರ್ ಮಾನಿಟರ್ ಸಿಸ್ಟಂ, ಪೆಡಲ್ ಲ್ಯಾಂಪ್ಸ್, ಹಿಂಬದಿಯ ಸವಾರರಿಗೆ ವೈರ್ಲೆಸ್ ಸ್ಮಾರ್ಟ್ಪೋನ್ ಚಾರ್ಜರ್, ಡಿಜಿಟಲ್ ವಿಡಿಯೋ ರೆಕಾರ್ಡರ್ ಮತ್ತು ಏರ್ ಪ್ಯೂರಿಫ್ಲೈ ಸೌಲಭ್ಯಗಳನ್ನು ಹೆಚ್ಚುವರಿ ಪ್ಯಾಕೇಜ್ ಅಡಿ ಖರೀದಿಸಬಹುದು.
MOST READ: ಪ್ರತಿ ಚಾರ್ಜ್ಗೆ 480 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಎಸ್ಯುವಿ ಬಿಡುಗಡೆ ಮಾಡಲಿದೆ ನಿಸ್ಸಾನ್

ಎಂಜಿನ್ ವೈಶಿಷ್ಟ್ಯತೆ
ಮೇಲ್ಭಾಗದ ಹೆಚ್ಚುವರಿ ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಟಿಆರ್ಡಿ ಆವೃತ್ತಿಯ ಎಂಜಿನ್ ಸೌಲಭ್ಯವು ಸ್ಟ್ಯಾಂಡರ್ಡ್ ಫಾರ್ಚೂನರ್ ಮಾದರಿಯಲ್ಲೇ ಇದ್ದು, ಹೊಸ ಕಾರು ಬಿಎಸ್-6 ಪ್ರೇರಣೆಯ 2.8-ಲೀಟರ್ ಡೀಸೆಲ್ ಯುನಿಟ್ ಪಡೆದುಕೊಂಡಿದೆ.

6-ಸ್ಪೀಡ್ ಆಟೋಮ್ಯಾಟಿಕ್ ಗೇರ್ಬಾಕ್ಸ್ ಹೊಂದಿರುವ ಹೊಸ ಎಂಜಿನ್ ಮಾದರಿಯು ಫೆಡಲ್ ಶಿಫ್ಟ್ ಮೂಲಕ 175-ಬಿಎಚ್ಪಿ ಮತ್ತು 420-ಎನ್ಎಂ ಟಾರ್ಕ್ ಉತ್ಪಾದನಾ ಗುಣಹೊಂದಿದ್ದು, ಆಫ್ ರೋಡ್ ಕೌಶಲ್ಯ ಪ್ರದರ್ಶನದಲ್ಲಿ ಮತ್ತಷ್ಟು ಬಲಿಷ್ಠ ವೈಶಿಷ್ಟ್ಯತೆ ಹೊಂದಿದೆ.
MOST READ: ವಾಹನ ಖರೀದಿಯನ್ನು ಸುಲಭವಾಗಿಸಲಿದೆ ಅಗಸ್ಟ್ 1ರಿಂದ ಜಾರಿಗೆ ಬಂದಿರುವ ಹೊಸ ವಿಮಾ ನೀತಿ..

ಇನ್ನು ಫಾರ್ಚೂನರ್ ಸ್ಟ್ಯಾಂಡರ್ಡ್ ಮಾದರಿಯು 2.7-ಲೀಟರ್ ಪೆಟ್ರೋಲ್ ಮತ್ತು 2.8-ಲೀಟರ್ ಡೀಸೆಲ್ ಎಂಜಿನ್ ಆಯ್ಕೆಯೊಂದಿಗೆ ಪ್ಯಾನ್ ಇಂಡಿಯಾ ಎಕ್ಸ್ಶೋರೂಂ ಪ್ರಕಾರ ರೂ. 28.66 ಲಕ್ಷ ಮತ್ತು ಟಾಪ್ ಎಂಡ್ ಮಾದರಿಯು ರೂ.34.43 ಲಕ್ಷ ಬೆಲೆ ಹೊಂದಿವೆ. ಸ್ಟ್ಯಾಂಡರ್ಡ್ ಮಾದರಿಗಿಂತ ಉನ್ನತ ಮಾದರಿಯಾಗಿರುವ ಟಿಆರ್ಡಿ ಆವೃತ್ತಿಯು ದುಬಾರಿ ಬೆಲೆ ಹೊಂದಿದ್ದು, ಫಾರ್ಚೂನರ್ ಕಾರಿನಲ್ಲಿ ಪೆಟ್ರೋಲ್ ಮಾದರಿ ಖರೀದಿಗೆ ಲಭ್ಯವಿದ್ದರೂ ಶೇ.98 ರಷ್ಟು ಗ್ರಾಹಕರು ಡೀಸೆಲ್ ಕಾರು ಮಾದರಿಗೆ ಒತ್ತು ನೀಡುತ್ತಿದ್ದಾರೆ.