ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಸುರಕ್ಷೆತೆಗೆ ಹೆಚ್ಚಿನ ಒತ್ತು ನೀಡುವ ಗ್ರಾಹಕರು ಕಾರು ಖರೀದಿಸುವಾಗ ಎನ್‌ಸಿಎಪಿ ರೇಟಿಂಗ್‌ಗಳನ್ನು ಗಮನಿಸುತ್ತಾರೆ. ಈ ಎನ್‌ಸಿಎಪಿ ರೇಟಿಂಗ್‌ಗಳನ್ನು ನೋಡಿದರೆ ಕಾರು ಎಷ್ಟು ಸುರಕ್ಷಿತವಾಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇದರಿಂದ ಎನ್‌ಸಿಎಪಿ ರೇಟಿಂಗ್‌ಗಳು ಕಾರು ಮಾರಾಟದಲ್ಲಿಯು ಮಹತ್ವದ ಪಾತ್ರವನ್ನು ವಹಿಸುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಬ್ರಿಟನ್‌ ಮೂಲದ ಸಂಸ್ಥೆ ಗ್ಲೋಬಲ್‌ ನ್ಯೂ ಕಾರ್‌ ಅಸಸ್ಮೆಂಟ್‌ ಪ್ರೋಗ್ರಾಂ(ಎನ್‌ಸಿಎಪಿ) ನಡೆಸುವ ಕ್ರ್ಯಾಶ್‌ ಟೆಸ್ಟ್ಗೆ ಟೊಯೊಟಾ ಕಂಪನಿಯ ಯಾರಿಸ್ ಕಾರು ಒಳಗಾಗಿದೆ. 2020ರ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಒಳಗಾದ ಟೊಯೊಟಾ ಕಂಪನಿಯ ಮೊದಲ ಕಾರು ಯಾರಿಸ್ ಹ್ಯಾಚ್‌ಬ್ಯಾಕ್ ಆಗಿದೆ. 2020ರ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಒಳಗಾದ ಯಾರಿಸ್ ಟಾಪ್-ಕ್ಲಾಸ್ ರೇಟಿಂಗ್ ಅನ್ನು ಪಡೆದುಕೊಂಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಯಾರಿಸ್ ವಿನ್ಯಾಸವು 2020ರ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮವಾಗಿ ಪರ್ಫಾಮೆನ್ಸ್ ನೀಡಲು ಸಹಾಯ ಮಾಡಿದೆ ಎಂದು ಹೇಳಬಹುದು. ಟೊಯೊಟಾ ಯಾರಿಸ್ ಸೇಫ್ಟಿ ಸೆನ್ಸ್ ತಂತ್ರಜ್ಞಾನವನ್ನು ಸಹ ಹೊಂದಿದೆ.

MOST READ: ಗ್ಲೋಬಲ್ ಎನ್‌ಸಿಎಪಿಯ ಸುರಕ್ಷತಾ ಟೆಸ್ಟ್​ನಲ್ಲಿ ಅಗ್ರಸ್ಥಾನಗಳಿಸಿದ ಮಹೀಂದ್ರಾ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಒಟ್ಟಾರೆ ಸುರಕ್ಷತಾ ರೇಟಿಂಗ್‌ನಲ್ಲಿ ಯಾರಿಸ್ ಹ್ಯಾಚ್‌ಬ್ಯಾಕ್ 5-ಸ್ಟಾರ್ ಗಳಿಸಿದೆ. ಯುರೋ ಎನ್‌ಸಿಎಪಿ ಕಾರುಗಳನ್ನು 4 ವಿಭಿನ್ನ ವಿಭಾಗಗಳಲ್ಲಿ ರೇಟಿಂಗ್ ಮಾಡಲಾಗುತ್ತದೆ. ಎಲ್ಲಾ ವಿಭಾಗದಲೂ ಯಾರಿಸ್ ಉತ್ತಮವಾಗಿ ಪರ್ಫಾಮ್ ಮಾಡಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಇದರಲ್ಲಿ ಅಡಾಲ್ಟ್ ಅಕ್ಯೂಪೇಂಟ್‍‍ನ‍‍‍ಲ್ಲಿ ಶೇ.86%, ಚೈಲ್ಡ್ ಅಕ್ಯೂಪೇಂಟ್‍‍ನ‍‍‍ಲ್ಲಿ ಶೇ.81%, ದುರ್ಬಲ ರಸ್ತೆ ಬಳಕೆದಾರರ ವಿಭಾಗದಲ್ಲಿ 78% ಮತ್ತು ಸೆಫ್ಟ್ ಅಸಿಸ್ಟ್ ವಿಭಾಗದಲ್ಲಿ 85% ರೇಟಿಂಗ್ ಅನ್ನು ಪಡೆದುಕೊಂಡಿದೆ.

MOST READ: ಅನಾವರಣವಾಯ್ತು ಟೊಯೊಟಾ ಕೊರೊಲ್ಲಾ ಟೂರಿಂಗ್ ರಿಬ್ಯಾಡ್ಜ್ ಆವೃತ್ತಿ ಸುಜುಕಿ ಸ್ವೇಸ್

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಯುರೋ ಎನ್‌ಸಿಎಪಿಯ ಪ್ರಧಾನ ಕಾರ್ಯದರ್ಶಿ ಮೈಕೆಲ್ ವ್ಯಾನ್ ರೇಟಿಂಗ್ಜೆನ್ ಅವರು ಮಾತನಾಡಿ, ಟೊಯೊಟಾ ಯಾರಿಸ್ ಟಾಪ್ ರೇಟಿಂಗ್ ಪಡೆದುಕೊಂಡಿರುವುದಕ್ಕೆ ಅಭಿನಂದನೆ ಸಲ್ಲಿಸಿ, ಯಾರೀಸ್ ಕಾರು ಕ್ರ್ಯಾಶ್ ಟೆಸ್ಟ್‌ನಲ್ಲಿ ಉತ್ತಮವಾಗಿ ಪರ್ಫಾಮೆನ್ಸ್ ಮಾಡಿದೆ ಎಂದು ಹೇಳಿದರು.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಗಮನಿಸಿ, 2020ರ ಯುರೋ ಎನ್‌ಸಿಎಪಿ ಕ್ರ್ಯಾಶ್ ಟೆಸ್ಟ್ ನಲ್ಲಿ ಪರೀಕ್ಷಿಸಲ್ಪಟ್ಟ ಮಾದರಿಗೆ ಹೋಲಿಸಿದರೆ ಭಾರತದಲ್ಲಿ ಮಾರಾಟವಾದ ಯಾರಿಸ್ ವಿಭಿನ್ನ ಮಾದರಿಯಾಗಿದೆ. ಆದ್ದರಿಂದ ಈ ರೇಟಿಂಗ್ ಭಾರತದಲ್ಲಿ ಮಾರಾಟವಾಗುವ ಮಾದರಿಗೆ ಅನ್ವಯಿಸುವುದಿಲ್ಲ.

MOST READ: ಮಾರಾಟದಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ ಹೋಂಡಾ ಆಮೇಜ್ ಕಾರು

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಭಾರತೀಯ ಮಾರುಕಟ್ಟೆಗೆ ಸಂಬಂಧಿಸಿದಂತೆ, ಜಪಾನ್ ಮೂಲದ ಜನಪ್ರಿಯ ವಾಹನ ತಯಾರಕ ಕಂಪನಿಯಾದ ಟೊಯೊಟಾ ಹಬ್ಬದ ಸೀಸನ್‌ನಲ್ಲಿ ತನ್ನ ಕಾರುಗಳ ಮಾರಾಟವನ್ನು ಹೆಚ್ಚಿಸಲು ಸಜ್ಜಾಗುತ್ತಿದೆ. ಇದರಿಂದ ಟೊಯೊಟಾ ಕಂಪನಿಯು ಅನೇಕ ಸ್ಪೆಷಲ್ ಎಡಿಷನ್ ಅನ್ನು ಬಿಡುಗಡೆಗೊಳಿಸುವ ಸಾಧ್ಯತೆಗಳಿದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಇನ್ನು ಟೊಯೊಟಾ ಕಂಪನಿಯು ಶೀಘ್ರದಲ್ಲೇ ಭಾರತದಲ್ಲಿ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯನ್ನು ಭಾರತದಲ್ಲಿ ಶೀಘ್ರದಲ್ಲೇ ಬಿಡುಗಡೆಗೊಳಿಸಲಿದೆ ಎಂದು ವರದಿಗಳು ಪ್ರಕಟವಾಗಿದೆ. ಸ್ಟ್ಯಾಂಡರ್ಡ್ ಸಿ-ಸೆಗ್ಮೆಂಟ್ ಸೆಡಾನ್‍‍ಗೆ ಹೋಲಿಸಿದರೆ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಹೊರಭಾಗದಲ್ಲಿ ನವೀಕರಣಗಳನ್ನು ಹೊಂದಿರುತ್ತದೆ.

MOST READ: ಬಿಡುಗಡೆಯ ಸನಿಹದಲ್ಲಿ ಹೊಸ ಮಾರುತಿ ಸುಜುಕಿ ಸೆಲೆರಿಯೊ

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಇದು ಸ್ವಲ್ಪ ಪ್ರೀಮಿಯಂ ಆಗಿರುವುದರಿಂದ ಸಾಮಾನ್ಯ ಮಾದರಿಗಿಂತ ಬೆಲೆಯು ತುಸು ದುಬಾರಿಯಾಗಿರಬಹುದು. ಇನ್ನು ಹೊಸ ಯಾರಿಸ್ ಲಿಮಿಟೆಡ್ ಎಡಿಷನ್ ಬ್ಲ್ಯಾಕ್ ಮಾದರಿಯಲ್ಲಿ ಅದೇ 1.5-ಲೀಟರ್ ಡ್ಯುಯಲ್ ವಿವಿಟಿ-ಐ ನಾಲ್ಕು ಸಿಲಿಂಡರ್ ಇನ್ ಲೈನ್ ಡಿಒಹೆಚ್ಸಿ ಪೆಟ್ರೋಲ್ ಎಂಜಿನ್ ಅನ್ನು ಹೊಂದಿರುತ್ತದೆ.

ಕ್ರ್ಯಾಶ್ ಟೆಸ್ಟ್‌ನಲ್ಲಿ 5 ಸ್ಟಾರ್ ರೇಟಿಂಗ್ ಪಡೆದ ಟೊಯೊಟಾ ಯಾರಿಸ್ ಕಾರು

ಯಾರಿಸ್ ಮಾದರಿಯು ಭಾರತೀಯ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಮಾರುತಿ ಸುಜುಕಿ ಸಿಯಾಜ್, ಫೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ರ‍್ಯಾಪಿಡ್ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
Read more on ಟೊಯೊಟಾ toyota
English summary
2020 Toyota Yaris gets 5 Star Safety Rating in EURO Ncap Crash Test. Read In Kannada.
Story first published: Friday, September 18, 2020, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X