ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಜರ್ಮನ್ ಮೂಲದ ಕಾರು ತಯಾರಕ ಕಂಪನಿಯಾದ ಬಿಎಂಡಬ್ಲ್ಯು ತನ್ನ 2021ರ ಎಂ5 ಕಾರನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅನಾವರಣಗೊಳಿಸಿದೆ. ಹೊಸ ಬಿಎಂಡಬ್ಲ್ಯು ಎಂ5 ಕಾರನ್ನು ಎರಡು ರೂಪಾಂತರಗಳಲ್ಲಿ ಅನಾವರಣಗೊಳಿಸಲಾಗಿದೆ.

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಹೊಸ ಬಿಎಂಡಬ್ಲ್ಯು ಎಂ5 ಸ್ಟ್ಯಾಂಡರ್ಡ್ ಮತ್ತು ಕಾಂಪಿಟೇಷನ್ ಎಂಬ ಎರಡು ರೂಪಾಂತರಗಳಲ್ಲಿ ಲಭ್ಯವಿರಲಿದೆ. ಈ ಎರಡು ರೂಪಾಂತರಗಳು ಗಮನಾರ್ಹವಾದ ನವೀಕರಣಗಳನ್ನು ಹೊಂದಿದೆ. ಈ ಹೊಸ ಎಂ5 ಕಾರು ನವೀಕರಿಸಿದ ವಿನ್ಯಾಸ, ಸುಧಾರಿತ ಕಾರ್ಯಕ್ಷಮತೆ, ಡೈನಾಮಿಕ್ಸ್ ಮತ್ತು ಇತರ ಅಂಶಗಳನ್ನು ಒಳಗೊಂಡಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾರು ಆಕರ್ಷಕ ಲುಕ್ ಅನ್ನು ಹೊಂದಿದೆ. ಇದು ಪರ್ಫಾಮೆನ್ಸ್ ಮಾದರಿಯಾಗಿದೆ.

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಹೊಸ ಬಿಎಂಡಬ್ಲ್ಯು ಎಂ5 ಫುಲ್-ಎಲ್ಇಡಿ ಅಡಾಪ್ಟಿವ್ ಲೇಸರ್ ಹೆಡ್‌ಲ್ಯಾಂಪ್, ಎಲ್‌ಇಡಿ ಟೈಲ್‌ಲೈಟ್‌ಗಳಲ್ಲಿನ 3 ಡಿ ಅಂಶಗಳು, ಬ್ಲ್ಯಾಕ್- ಔಟ್ ಕಿಡ್ನಿ ಗ್ರಿಲ್, ಮುಂಭಾಗ ಮತ್ತು ಹಿಂಭಾಗದಲ್ಲಿ ನವೀಕರಿಸಿದ ಬಂಪರ್,ಕ್ವಾಡ್ ಎಕ್ಸಾಸ್ಟ್ ಮತ್ತು 20 ಇಂಚಿನ ಅಲಾಯ್ ವ್ಹೀಲ್ ಅನ್ನು ಹೊಂದಿದೆ.

MOST READ: ಮರ್ಸಿಡಿಸ್ ಬೆಂಝ್ ಜಿಎಲ್ಇ ಎಸ್‍ಯುವಿಯ ಎರಡು ಹೊಸ ರೂಪಾಂತರಗಳು ಬಿಡುಗಡೆ

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಈ ಹೊಸ ಬಿಎಂಡಬ್ಲ್ಯು ಎಂ5 ಕಾರು ಬ್ರ್ಯಾಂಡ್‌ನ ರೇಂಜ್-ಟಾಪಿಂಗ್ ಜಿಟಿ ಎಂ8 ಮಾದರಿಯ ಹಲವರು ಅಂಶಗಳನ್ನು ಎರವಲು ಪಡೆದುಕೊಂಡಿದೆ. ಈ ಹೊಸ ಬಿಎಂಡಬ್ಲ್ಯು ಎಂ5 ಕಾರಿನ ಇಂಟಿರಿಯರ್ ನಲ್ಲಿ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಅಳವಡಿಸಿದೆ.

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಇದರೊಂದಿಗೆ ಹೊಸ 12.3-ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ ಅನ್ನು ಸಹ ಹೊಂದಿದೆ. ಹೊಸ ಬಿಎಂಡಬ್ಲ್ಯು ಎಂ5 ನಲ್ಲಿ ವಿವಿಧ ಸೆಟ್ಟಿಂಗ್‌ಗಳನ್ನು ಕಾನ್ಫಿಗರ್ ಮಾಡಲು ಕೆಲವು ಫೀಚರ್ ಗಳನ್ನು ಅಳವಡಿಸಿದೆ.

MOST READ: ಭರ್ಜರಿಯಾಗಿ ಮಾರಾಟವಾಯ್ತು ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಹೊಸ ಬಿಎಂಡಬ್ಲ್ಯು ಎಂ5 ಕಾರಿನಲ್ಲಿ ಕಂಫರ್ಟ್, ಸ್ಪೋರ್ಟ್, ಸ್ಪೋರ್ಟ್ ಪ್ಲಸ್ ಮತ್ತು ಟ್ರ್ಯಾಕ್ ಎಂಬ ನಾಲ್ಕು ಡ್ರೈವಿಂಗ್ ಮೋಡ್ ಗಳನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಎಂ5 ಕಾರಿನಲ್ಲಿ ಆಪಲ್ ಕಾರ್ಪ್ಲೇ ಜೊತೆ ಆಂಡ್ರಾಯ್ಡ್ ಆಟೋ ಮತ್ತು ಬಿಎಂಡಬ್ಲ್ಯು ಇತ್ತೀಚಿನ ಐಡ್ರೈವ್ ತಂತ್ರಜ್ಞಾನವನ್ನು ಒಳಗೊಂಡಿವೆ.

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಈ ಎಸ್‍ಯುವಿಯಲ್ಲಿ ಸುರಕ್ಷತೆಗಾಗಿ ಎಮರ್ಜನ್ಸಿ ಬ್ರೇಕಿಂಗ್, ಲೇನ್ ಎಕ್ಸಿಟ್ ಅಲರ್ಟ್, ಹೈ-ಬೀಮ್ ಅಸಿಸ್ಟ್ ಮತ್ತು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಅನ್ನು ಹೊಂದಿದೆ. ಹೊಸ ಬಿಎಂಡಬ್ಲ್ಯು ಎಂ5 ಕಾರಿನಲ್ಲಿ 4.4-ಲೀಟರ್ ಟ್ವಿನ್-ಟರ್ಬೋಚಾರ್ಜ್ಡ್ ವಿ8 ಎಂಜಿನ್ ಅನ್ನು ಅಳವಡಿಸಿದೆ.

MOST READ: 400 ಕಿ.ಮೀ ಮೈಲೇಜ್ ನೀಡಲಿದೆ ಈ ಐಷಾರಾಮಿ ಎಲೆಕ್ಟ್ರಿಕ್ ಕಾರು

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಸ್ಟ್ಯಾಂಡರ್ಡ್ ಎಂಜಿನ್ 600 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ, ಕಾಪಿಟೇಷನ್ ರೂಪಾಂತರವು 620 ಬಿಹೆಚ್‍ಪಿ ಪವರ್ ಮತ್ತು 750 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಅನಾವರಣವಾಯ್ತು ದುಬಾರಿ 2021ರ ಬಿಎಂಡಬ್ಲ್ಯು ಎಂ5 ಕಾರು

ಮುಂದಿನ ವರ್ಷ ಬಿಎಂಡಬ್ಲ್ಯು ಕಂಪನಿಯು ಈ ಹೊಸ ಹೊಸ ಎಂ5 ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಬಹುದು ಎಂದು ನಿರೀಕ್ಷಿಸುತೇವೆ. ಈ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಮರ್ಸಿಡಿಸ್-ಎಎಂಜಿ ಇ 63 ಮತ್ತು ಮುಂದಿನ ದಿನಗಳಲ್ಲಿ ಬಿಡುಗಡೆಯಾಗಲಿರುವ ಆಡಿ ಆರ್ಎಸ್7 ಮಾದರಿಗಳಿಗೆ ಪೈಪೋಟಿಯನ್ನು ನೀಡುತ್ತದೆ.

Most Read Articles

Kannada
English summary
New (2021) BMW M5 & M5 Competition Unveiled. Read In Kannada.
Story first published: Friday, June 19, 2020, 12:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X