ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯು ತನ್ನ ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು. ಇದೀಗ ಮಹೀಂದ್ರಾ ಕಂಪನಿಯು ಮುಂದಿನ ತಲೆಮಾರಿನ ಥಾರ್, ಸ್ಕಾರ್ಪಿಯೋ ಮತ್ತು ಎಕ್ಸ್‌ಯುವಿ 500 ಎಸ್‍ಯುವಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇದೀಗ ಮಹೀಂದ್ರಾ ಕಂಪನಿಯು 2021ರ ಸ್ಕಾರ್ಪಿಯೋ ಎಸ್‍ಯುವಿಯನ್ನು ಸ್ಪಾಟ್ ಟೆಸ್ಟ್ ಮಾಡಲಾಗಿದೆ. ತಮಿಳುನಾಡಿನ ಊಟಿ ಬಳಿಯ ಗಿರಿ ಧಾಮ ಪ್ರದೇಶದಲ್ಲಿ ಮುಂದಿನ ತಲೆಮಾರಿನ ಸ್ಕಾರ್ಪಿಯೋವನ್ನು ಸಂಪೂರ್ಣವಾಗಿ ಮರೆಮಾಚಿ ಸ್ಪಾಟ್ ಟೆಸ್ಟ್ ನಡೆಸಲಾಗಿದೆ. ಸ್ಪಾಟ್ ಟೆಸ್ಟ್ ನಡೆಸುತ್ತಿರುವ ಚಿತ್ರಗಳು ಆನ್‌ಲೈನ್ ನಲ್ಲಿ ಬಹಿರಂಗವಾಗಿದೆ. ಈ ಹೂಸ ಸ್ಕಾರ್ಪಿಯೋ ಎಸ್‍ಯುವಿಯು ಹೆಚ್ಚು ನವೀಕರಿಸಿದ ಲ್ಯಾಡರ್-ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ. ಈ ಎಸ್‍ಯುವಿಯು ಕಟ್ಟುನಿಟ್ಟಾದ ಪಾದಚಾರಿ ಕ್ರ್ಯಾಶ್ ಟೆಸ್ಟ್ ಮಾನದಂಡಗಳನ್ನು ಪೂರೈಸಲು ಹೆಚ್ಚಿನ ಪ್ರಮುಖ್ಯತೆಯನ್ನು ನೀಡುತ್ತಿದ್ದಾರೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಹೊಸ ಸ್ಕಾರ್ಪಿಯೋ ಎಸ್‍ಯುವಿಯ ಮುಂಭಾಗದಲ್ಲಿ ಹೆಡ್ ಲ್ಯಾಂಪ್ ಪಕ್ಕ ಸುತ್ತುವರೆದಿರುವ ಸ್ಲೇಟೆಡ್ ಪ್ರಮುಖ ಗ್ರಿಲ್ ಅಂಶಗಳನ್ನು ಒಳಗೊಂಡಿದೆ. ಆದರೆ ಇದು ಕೇವಲ ಸ್ಪಾಟ್ ಟೆಸ್ಟ್ ನಲ್ಲಿ ಅಳವಡಿಸಿರಬಹುದು. ಉತ್ಪಾದನೆಯ ಹಂತದಲ್ಲಿ ಈ ಅಂಶಗಳನ್ನು ಒಳಗೊಂಡಿರುವುದರಿಲ್ಲ ಎಂದು ನಿರೀಕ್ಷಿಸುತ್ತೇವೆ.

MOST READ: ಅನಾವರಣವಾಗಲಿದೆ ಬಹುನಿರೀಕ್ಷಿತ ಟೊಯೊಟಾ ಫಾರ್ಚೂನರ್ ಫೇಸ್‌ಲಿಫ್ಟ್‌ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಈ ಸ್ಕಾರ್ಪಿಯೋ ಎಸ್‍ಯುವಿಯಲ್ಲಿ ಹೊಸ ಬಾಡಿ ಪ್ಯಾನೆಲ್‌ಗಳು ಮತ್ತು ಗಮನಾರ್ಹವಾದ ಹೊಸ ಅಕ್ಷರ ರೇಖೆಗಳು ಮತ್ತು ಎಕ್ಸ್‌ಯುವಿ300 ನಂತೆ ಹಿಂದಿನ ಡೋರಿನ ಮೇಲೆ ಒಂದು ಕಿಂಕ್ ಅನ್ನು ಹೊಂದಿರುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇನ್ನು ಈ ಎಸ್‍ಯುವಿಯ ಹಿಂಭಾದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್‌ಗೇಟ್, ಎಲ್ಲಾ ಹೊಸ ಲಂಬವಾಗಿ ಸ್ಥಾನದಲ್ಲಿರುವ ಟೈಲ್ ಲ್ಯಾಂಪ್‌ಗಳು ಮತ್ತು ಸೈಡ್ ಹಿಂಗ್ಡ್ ಬೂಟ್ ಓಪನರ್ ಅನ್ನು ಹೊಂದಿರುವಂತೆ ನಮಗೆ ಸ್ಪಾಟ್ ಟೆಸ್ಟ್ ಚಿತ್ರದಲ್ಲಿ ಕಾಣುತ್ತದೆ.

MOST READ: ಡೀಲರ್ ಬಳಿ ತಲುಪಿದ ಹೊಸ ಫೋಕ್ಸ್‌ವ್ಯಾಗನ್ ಟಿ-ರಾಕ್ ಎಸ್‍ಯುವಿ

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇನ್ನು ಈ ಎಸ್‍ಯುವಿಯ ಒಳಭಾಗದ ಕ್ಯಾಬಿನ್ ನಲ್ಲಿ ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಸಂಪರ್ಕದೊಂದಿಗೆ ನವೀಕರಿಸಿದ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಹೆಚ್ಚು ದುಬಾರಿ ಸೆಂಟರ್ ಕನ್ಸೋಲ್, ಮತ್ತು ಮರಾಜೋ ಎಸ್‍ಯುವಿಯಲ್ಲಿರುವಂತೆ ಹೊಸ ಕಂಟ್ರೋಲ್ ಗಳು ಮತ್ತು ಡಯಲ್‌ಗಳನ್ನು ಒಳಗೊಂಡಿರಬಹುದು ಎಂದು ನಿರೀಕ್ಷಿಸುತ್ತೇವೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಇತ್ತೀಚೆಗೆ ಬಿಡುಗಡೆಗೊಂಡ ಬಿಎಸ್-6 ಸ್ಕಾರ್ಪಿಯೋ ಎಸ್‍ಯುವಿಯು ಎಸ್5, ಎಸ್7, ಎಸ್9 ಮತ್ತು ಎಸ್11 ಎಂಬ ನಾಲ್ಕು ರೂಪಾಂತರಗಳಲ್ಲಿ ಬಿಡುಗಡೆಯಾಗಿದೆ.ಇದರಲ್ಲಿ ಎಸ್3 ರೂಪಾಂತರವು ಎಂಟ್ರಿ-ಲೆವೆಲ್ ಆದರೆ ಎಸ್11 ಟಾಪ್-ಎಂಡ್ ಎಡಬ್ಲ್ಯೂಡಿ ರೂಪಾಂತರವಾಗಿದೆ.

MOST READ: ಹೊಸ ನಿವಸ್ ಎಸ್‍ಯುವಿಯನ್ನು ಅನಾವರಣಗೊಳಿಸಿದ ಫೋಕ್ಸ್‌ವ್ಯಾಗನ್

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಬಿಎಸ್-6 ಸ್ಕಾರ್ಪಿಯೋ 2.2 ನಾಲ್ಕು ಸಿಲಿಂಡರ್ ಡೀಸೆಲ್ ಎಂಜಿನ್ ಅನ್ನು ಹೊಂದಿದೆ. ಈ ಎಂಜಿನ್ 140 ಬಿಹೆಚ್‍ಪಿ ಪವರ್ ಮತ್ತು 320 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಸ್ಪಾಟ್ ಟೆಸ್ಟ್​ನಲ್ಲಿ ಕಾಣಿಸಿಕೊಂಡ 2021ರ ಮಹೀಂದ್ರಾ ಸ್ಕಾರ್ಪಿಯೋ ಎಸ್‍ಯುವಿ

ಮಹೀಂದ್ರಾ ಕಂಪನಿಯ ಸರಣಿಯ ಕಾರು ಮಾರಾಟದಲ್ಲಿ ಸ್ಕಾರ್ಪಿಯೋ ಎಸ್‍‍ಯುವಿಯ ಕೊಡುಗೆಯು ದೊಡ್ಡದು. 2002ರಲ್ಲಿ ಮಹೀಂದ್ರಾ ಕಂಪನಿಯು ದೇಶಿಯ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಸ್ಕಾರ್ಪಿಯೋ ಬಿಡುಗಡೆಗೊಳಿಸಿದ ನಂತರ ಎರಡು ಬಾರಿ ನವೀಕರಣಗೊಳಿಸಲಾಗಿದೆ.

Most Read Articles

Kannada
English summary
Next-Gen (2021) Mahindra Scorpio Spotted Testing Again – Details. Read In Kannada.
Story first published: Monday, June 1, 2020, 13:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X